Festival Season Recipes : ಹಬ್ಬಕ್ಕೆ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಆರೋಗ್ಯಕರ ರೆಸಿಪಿಗಳಿವು

ಹಬ್ಬಗಳು ಸಾಲಾಗಿ ಬಂತೆಂದರೆ ಹೆಣ್ಣು ಮಕ್ಕಳಿಗೆ ಮನೆಯ ಅಲಂಕಾರದ ಜೊತೆಗೆ ಏನು ಅಡುಗೆ ಮಾಡುವುದು ಎನ್ನುವುದೇ ಯೋಚನೆ. ಈ ಸಮಯದಲ್ಲಿ ವಿವಿಧ ಸಿಹಿ ತಿನಿಸುಗಳನ್ನು ಮಾಡಲು ಮನೆಯಲ್ಲಿ ತಯಾರಿಯಂತೂ ನಡೆಯುತ್ತಿರುತ್ತದೆ. ಆದರೆ ಹಬ್ಬದ ಸಮಯದಲ್ಲಿ ಈ ಆರೋಗ್ಯಕರ ರೆಸಿಪಿಗಳಾದ ಬೇಸನ್ ಲಡ್ಡು, ರಾಗಿ ಖೀರ್ ಹಾಗೂ ನವಣೆ ತಂಬಿಟ್ಟನ್ನು ಟ್ರೈ ಮಾಡಬಹುದು. ಹಾಗಾದ್ರೆ ಈ ರೆಸಿಪಿಗಳನ್ನು ಮಾಡುವ ವಿಧಾನದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Festival Season Recipes : ಹಬ್ಬಕ್ಕೆ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಆರೋಗ್ಯಕರ ರೆಸಿಪಿಗಳಿವು
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 10, 2024 | 5:45 PM

ಹಬ್ಬವೆಂದ ಮೇಲೆ ಮನೆ ಮಂದಿಯೆಲ್ಲಾ ಸೇರಿ ಹಬ್ಬದಡುಗೆಯನ್ನು ಮಾಡುತ್ತಾರೆ. ಬಹುತೇಕ ಹಬ್ಬಗಳಲ್ಲಿ ದೇವರಿಗೆ ಪ್ರಸಾದ ರೂಪದಲ್ಲಿ ವಿವಿಧ ಖಾದ್ಯಗಳನ್ನು ನೈವೇದ್ಯವಾಗಿ ಇಡಲಾಗುತ್ತದೆ. ಆದರೆ ಈ ಸಮಯದಲ್ಲಿ ದಿಢೀರನೆ ಆರೋಗ್ಯಕರವಾದ ಈ ರೆಸಿಪಿಯನ್ನು ಟ್ರೈ ಮಾಡಬಹುದು. ಅದರಲ್ಲಿ ಈ ಬೇಸನ್ ಲಡ್ಡು, ರಾಗಿ ಖೀರ್ ಹಾಗೂ ನವಣೆ ತಂಬಿಟ್ಟನ್ನು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಈ ರೆಸಿಪಿಯು ಎಷ್ಟು ಸುಲಭವೋ ತಿನ್ನಲು ಅಷ್ಟೇ ರುಚಿಕರವಾಗಿರುತ್ತದೆ.

ಬೇಸನ್‌ ಲಡ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು:

* ಎರಡು ಕಪ್ ಕಡ್ಲೆಹಿಟ್ಟು

* ಮುಕ್ಕಾಲು ಕಪ್ ಸಕ್ಕರೆ ಪುಡಿ

* ತುಪ್ಪ

* ಏಲಕ್ಕಿ ಪುಡಿ

* ಪಿಸ್ತಾ ಹಾಗೂ ಗೋಡಂಬಿ

ಬೇಸನ್‌ ಲಡ್ದು ಮಾಡುವ ವಿಧಾನ:

* ಮೊದಲಿಗೆ ಈ ಕಡ್ಲೆಹಿಟ್ಟನ್ನು ಜರಡಿ ಮಾಡಿಕೊಳ್ಳಿ. ಆ ಬಳಿಕ ಬಾಣಲೆಗೆ ಸ್ವಲ್ಪ ತುಪ್ಪ ಸೇರಿಸಿ ಈ ಕಡ್ಲೆಹಿಟ್ಟು ಸೇರಿಸಿ ಕಡಿಮೆ ಉರಿಯಲ್ಲಿ 15 ನಿಮಿಷಗಳ ಕಾಲ ಚೆನ್ನಾಗಿ ಹುರಿದು ಕೊಳ್ಳಿ.

* ಆದರೆ ಎರಡು ಮೂರು ನಿಮಿಷಕ್ಕೊಮ್ಮೆ ತುಪ್ಪ ಸೇರಿಸುತ್ತಾ ಕಡ್ಲೆಹಿಟ್ಟು ಹಸಿ ವಾಸನೆ ಹೋಗುವವರೇ ಫ್ರೈ ಮಾಡಿಕೊಳ್ಳಿ.

* ಈ ಮಿಶ್ರಣವನ್ನು ತಣ್ಣಗಾಗಲು ಬಿಟ್ಟು, ನಂತರದಲ್ಲಿ ಏಲಕ್ಕಿ ಪುಡಿ, ಸಕ್ಕರೆ ಪುಡಿ ಸೇರಿಸಿ ಕಲಸಿಕೊಳ್ಳಿ.

* ತದನಂತರದಲ್ಲಿ ಕೈಗೆ ತುಪ್ಪ ಸವರಿಕೊಂಡು ಉಂಡೆಗಳನ್ನು ಕಟ್ಟಿ. ಇದರ ಮೇಲೆ ಪಿಸ್ತಾ ಹಾಗೂ ಗೋಡಂಬಿಯಿಂದ ಅಲಂಕರಿಸಿದರೆ ರುಚಿಕರವಾದ ಬೇಸನ್ ಲಡ್ಡು ಸವಿಯಲು ಸಿದ್ಧ.

ರಾಖಿ ಖೀರ್ ಮಾಡಲು ಬೇಕಾಗುವ ಸಾಮಗ್ರಿಗಳು:

* ತುಪ್ಪ

* ಏಲಕ್ಕಿ

* ಅರ್ಧ ಕಪ್ ರಾಗಿ ಹಿಟ್ಟು

* ನೀರು

* ಒಂದು ಕಪ್ ಹಾಲು,

* ಬೆಲ್ಲ

* ಗೋಡಂಬಿ, ಪಿಸ್ತಾ, ಬಾದಾಮಿ

* ರುಚಿಗೆ ತಕ್ಕಷ್ಟು ಉಪ್ಪು

ರಾಗಿ ಖೀರ್ ರೆಸಿಪಿ ಮಾಡುವ ವಿಧಾನ:

* ಮೊದಲಿಗೆ ಒಂದು ಬಾಣಲೆಗೆ ನೀರು ಬೆರೆಸಿದ ಹಾಲು ಹಾಕಿ ಅದಕ್ಕೆ ರಾಗಿ ಹಿಟ್ಟು ಗಂಟಾಗದಂತೆ ಕಲಸಿಕೊಳ್ಳಿ.

* ಈ ಮಿಶ್ರಣಕ್ಕೆ ಬೆಲ್ಲ ಹಾಗೂ ದಪ್ಪ ಹಾಲು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕುದಿಸಿಕೊಳ್ಳಿ.

* ಈಗಾಗಲೇ ಕತ್ತರಿಸಿಟ್ಟ ಗೋಡಂಬಿ, ಪಿಸ್ತಾ, ಬಾದಾಮಿ, ಏಲಕ್ಕಿ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿಕೊಂಡರೆ ರಾಖಿ ಖೀರ್ ಸವಿಯಲು ಸಿದ್ಧ.

ನವಣೆ ತಂಬಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿಗಳು:

* ಒಂದು ಕಪ್ ನವಣೆ

* ಒಂದು ಚಮಚ ಅಕ್ಕಿ

* ಒಂದು ಚಮಚ ಕಡಲೆಬೇಳೆ

* ನೀರು

* ಬೆಲ್ಲ

* ಏಲಕ್ಕಿ

* ತುಪ್ಪ

ಇದನ್ನೂ ಓದಿ: ತುಳುವರಿಗೆ ಸಂತಸದ ಸುದ್ದಿ, ಯೂನಿಕೋಡ್​​ಗೆ ತುಳುಲಿಪಿ ಸೇರ್ಪಡೆ

ನವಣೆ ತಂಬಿಟ್ಟು ಮಾಡುವ ವಿಧಾನ:

* ನವಣೆ, ಅಕ್ಕಿ ಮತ್ತು ಕಡಲೇ ಬೇಳೆ ಈ ಮೂರನ್ನು ಒಟ್ಟಿಗೆ ಹುರಿದು, ಮಿಕ್ಸರ್ ಗೆ ಹಾಕಿ ಪುಡಿಮಾಡಿಕೊಳ್ಳಿ.

* ಸ್ಟವ್ ಮೇಲೆ ನೀರು ಕುದಿಯುತ್ತಿದ್ದಂತೆ ಬೆಲ್ಲ ಸೇರಿಸಿಕೊಳ್ಳಿ. ಬೆಲ್ಲ ಕರಗುವ ಮೊದಲು ಮಾಡಿಟ್ಟ ಪುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ

* ಈ ಮಿಶ್ರಣವು ಗಟ್ಟಿಯಾಗುತ್ತಿದ್ದಂತೆ ಸ್ಟವ್ ಆಫ್ ಮಾಡಿ ತಣ್ಣಗಾಗಲು ಬಿಡಿ. * ಆ ಬಳಿಕ ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಿದರೆ ಈ ಸಿಹಿ ತಿನಿಸು ಸವಿಯಲು ಸಿದ್ಧವಾದಂತೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Tue, 10 September 24

ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ