ನಿಮ್ಮ ಮೊದಲ ಸಂಬಳವನ್ನು ಸ್ಮರಣೀಯವಾಗಿರಿಸಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ಮೊದಲ ಸಂಬಳ ಎಲ್ಲರಿಗೂ ವಿಶೇಷ. ಹಾಗಾಗಿ ಸಮರ್ಥ ಯೋಜನೆಯನ್ನು ಮಾಡುವ ಮೂಲಕ ನೀವು ಅದನ್ನು ಶಾಶ್ವತವಾಗಿ ಸ್ಮರಣೀಯಗೊಳಿಸಬಹುದು. ನಿಮ್ಮ ಮೊದಲ ಸಂಬಳದಿಂದಲೇ ನಿಮ್ಮ ಭವಿಷ್ಯಕ್ಕಾಗಿ ನೀವು ಉಳಿತಾಯವನ್ನು ಪ್ರಾರಂಭಿಸಬೇಕು. ಇದರಿಂದ ನೀವು ಯಾವಾಗಲೂ ಆರ್ಥಿಕವಾಗಿ ಸದೃಢರಾಗಿರುತ್ತೀರಿ.

ನಿಮ್ಮ ಮೊದಲ ಸಂಬಳವನ್ನು ಸ್ಮರಣೀಯವಾಗಿರಿಸಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
Indian Currency
Follow us
ಮಾಲಾಶ್ರೀ ಅಂಚನ್​
| Updated By: Digi Tech Desk

Updated on: Aug 02, 2023 | 4:11 PM

ನಮ್ಮ ಜೀವನದಲ್ಲಿ ನಾವು ಮೊದಲ ಬಾರಿಗೆ ಪಡೆಯುವ ಪ್ರತಿಯೊಂದು ವಸ್ತುವು ತುಂಬಾ ವಿಶೇಷವಾಗಿರುತ್ತದೆ. ಮೊದಲ ಮೊಬೈಲ್, ಮೊದಲ ಪರ್ಸ್, ಮೊದಲ ಸೈಕಲ್ ಹೀಗೆ ನಾವು ಮೊದಲ ಬಾರಿಗೆ ಪಡೆಯುವ ಪ್ರತಿಯೊಂದು ವಿಷಯವು ವಿಶೇಷವಾಗಿರುವುದರ ಜೊತೆಗೆ ಜೀವನಪರ್ಯಂತ ಅದು ಸ್ಮರಣೀಯವಾಗಿರುತ್ತದೆ. ಅದೇ ರೀತಿ ನಾವು ಪಡೆಯುವ ಮೊದಲ ಸಂಭಾವನೆ ಕೂಡ ಬಹಳ ವಿಶೇಷ. ನೀವು ನಿಮ್ಮ ಮೊದಲ ಸಂಪಾದನೆಯನ್ನು ತುಂಬಾ ವಿಶೇಷವಾಗಿಸಬಹುದು, ಇದನ್ನು ನೀವು ಜೀವಿತಾವಧಿಯವರೆಗೂ ನೆನಪಿನಲ್ಲಿಟ್ಟುಕೊಳ್ಳಬಹುದು. ಹಾಗಿದ್ದರೆ ಮೊದಲ ಸಂಪಾದನೆಯನ್ನು ಸ್ಮರಣೀಯವಾಗಿರಿಸಲು ನಾವು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

ಮೊದಲ ಸಂಬಳವನ್ನು ಸ್ಮರಣೀಯವಾಗಿರಿಸಲು ಅದನ್ನು ಈ ರೀತಿಯಾಗಿ ವಿನಿಯೋಗಿಸಿ:

ಉಳಿತಾಯ ಮತ್ತು ಉಡುಗೊರೆ:

ನಿಮ್ಮ ಮೊದಲ ಸಂಬಳ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾದ ತಕ್ಷಣ ನೀವು ಮಾಡಬೇಕಾಗಿರುವುದು ಇಷ್ಟೇ. ಅದನ್ನು ಮೊದಲು ಎರಡು ಭಾಗಗಳಾಗಿ ವಿಂಗಡಿಸಿ. ಮೊದಲ ಭಾಗವನ್ನು ನಿಮ್ಮ ವೆಚ್ಚಕ್ಕಾಗಿ ಇರಿಸಿ ಮತ್ತು ಎರಡನೇ ಭಾಗವನ್ನು ಉಳಿತಾಯ ವಿಭಾಗದಲ್ಲಿ ಇರಿಸಿ. ಇದು ನಿಮ್ಮ ಮೊದಲನೇ ಸಂಬಳವಾಗಿರುವುದರಿಂದ ನಿಮ್ಮ ಗೆಲುವಿಗೆ ಸದಾ ಬೆನ್ನೆಲುಬಾಗಿರುವ ಪೋಷಕರಿಗೆ ನಿಮ್ಮ ವೆಚ್ಚದ ಭಾಗದಿಂದ ಒಂದೊಳ್ಳೆ ಉಡುಗೊರೆಯನ್ನು ನೀಡಿ. ಇನ್ನೊಂದು ಭಾಗವನ್ನು ನಿಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಿ.

ಹೂಡಿಕೆ ಪ್ರಾರಂಭಿಸಿ:

ನೀವು ಮೊದಲ ಸಂಬಳದಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು. ನೀವು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಯಾವುದೇ ಅಪಾಯವನ್ನು ತಂದುಕೊಳ್ಳಲು ಬಯಸದಿದ್ದರೆ, ನೀವು ಫಿಕ್ಸೆಡ್ ಡೆಪಾಸಿಟ್ (FD) ನಲ್ಲಿ ಹಣವನ್ನು ಠೇವಣಿ ಮಾಡಬಹುದು.

ಇದನ್ನೂ ಓದಿ: ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ? ಇದರಲ್ಲಿ ಪೋಷಕರ ಪಾತ್ರವೇನು?

ಯಾವಾಗಲೂ ಹೂಡಿಕೆಯ ಅಭ್ಯಾಸವನ್ನು ರೂಢಿಸಿಕೊಳ್ಳಿ. ಮತ್ತು ಪ್ರತಿ ತಿಂಗಳು ಸಂಬಳ ಕ್ರೆಡಿಟ್ ಆದ ತಕ್ಷಣ ಅದನ್ನು ಹೂಡಿಕೆ ಭಾಗಕ್ಕೆ ಜಮಾ ಮಾಡಿ. ಈ ರೀತಿಯಲ್ಲಿ ಹೂಡಿಕೆಗಳನ್ನು ಪ್ರಾರಂಭಿಸುವುದು ದೀರ್ಘಾವಧಿಯಲ್ಲಿ ನಿಮಗೆ ತುಂಬಾ ಉಪಯೋಗವಾಗಲಿದೆ.

ಆರೋಗ್ಯ ವಿಮೆ:

ನಿಮ್ಮ ಮೊದಲ ಸಂಬಳದಲ್ಲಿ ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳುವುದನ್ನು ಮರೆಯದಿರಿ. ಏಕೆಂದರೆ ಕೆಲವೊಮ್ಮೆ ಗಂಭೀರ ಕಾಯಿಲೆಗಳು ನಮ್ಮ ಎಲ್ಲಾ ಉಳಿತಾಯವನ್ನು ಅಳಿಸಿ ಹಾಕುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಚಿಕಿತ್ಸೆಯು ತುಂಬಾ ದುಬಾರಿಯಾಗಿಗೆ. ನೀವು ಸಹ ಸಾಲದ ಸುಳಿಯಲ್ಲಿ ಸಿಲುಕಬಹುದು. ಅದಕ್ಕಾಗಿಯೇ ನಿಮ್ಮ ಮೊದಲ ಸಂಬಳದಿಂದ ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳಲು ಮರೆಯದಿರಿ. ಏಕೆಂದರೆ ನೀವು ಅನಾರೋಗ್ಯಕ್ಕೆ ಒಳಗಾದಾಗಲೆಲ್ಲಾ ನಿಮ್ಮ ಉಳಿತಾಯದ ಭಾಗವನ್ನು ಚಿಕಿತ್ಸೆಗಾಗಿ ಖರ್ಚು ಮಾಡಬೇಕಾಗಿಲ್ಲ. ಆಗ ನಿಮಗೆ ನಿಮ್ಮ ಆರೋಗ್ಯ ವಿಮೆಯು ಸಹಾಯಕ್ಕೆ ಬರುತ್ತದೆ.

ನಿವೃತ್ತಿ ಯೋಜನೆ:

ನಿಮ್ಮ ಮೊದಲ ಸಂಬಳದೊಂದಿಗೆ ನೀವು ಮಾಡಬೇಕಾದ ಇನ್ನೊಂದು ವಿಷಯವೆಂದರೆ ನಿವೃತ್ತಿ ಯೋಜನೆ. ಹೌದು ನಿಮ್ಮ ಭವಿಷ್ಯವು ಆರ್ಥಿಕವಾಗಿ ಸುಭದ್ರವಾಗಿರಬೇಕೆಂದು ನೀವು ಬಯಸಿದರೆ ಮತ್ತು ನೀವು ಆರ್ಥಿಕವಾಗಿ ಯಾರನ್ನೂ ಅವಲಂಬಿಸಲು ಇಷ್ಟಪಡದಿದ್ದರೆ, ಇದಕ್ಕಾಗಿ ನೀವು ಸರ್ಕಾರಿ ಪಿಂಚಣಿ ಯೋಜನೆ NPS ಅಥವಾ PPF ನ್ನು ಆಯ್ಕೆ ಮಾಡಬಹುದು. ಹೀಗೆ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ವೃದಾಪ್ಯದಲ್ಲಿ ಹಣಕ್ಕಾಗಿ ನೀವು ಯಾರನ್ನೂ ಅವಲಂಬಿಸಬೇಕಾಗಿಲ್ಲ. ಈ ರೀತಿಯಾಗಿ ನಿವೃತ್ತಿಯ ನಂತರ ನಿಮ್ಮ ಉಳಿತಾಯದ ಮೊತ್ತವನ್ನು ನೀವು ಪಡೆದಾಗ, ನೀವು ಖಂಡಿತವಾಗಿಯೂ ಮೊದಲ ಸಂಬಳವನ್ನು ನೆನಪಿಸಿಕೊಳ್ಳುತ್ತೀರಿ. ಮತ್ತು ನಿಮ್ಮ ಮೊದಲ ಸಂಬಳ ಶಾಶ್ವತವಾಗಿ ಸ್ಮರಣೀಯವಾಗಿ ಉಳಿಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ