ಕೆಲಸದ ವೇಳೆಯಲ್ಲಿ ಮನಸ್ಸು ವಿಚಲಿತವಾಗುತ್ತಿದೆಯೇ, ಈ ಕೆಲವು ಸಲಹೆಗಳು ನಿಮಗಾಗಿ
ಧಾವಂತದ ಬದುಕು, 9 ಗಂಟೆಗಳ ಕಚೇರಿ ಕೆಲಸ ಮುಗಿದ ನಂತರ ಸಾಮಾಜಿಕ ಜಾಲತಣಗಳಲ್ಲಿ ಏನನ್ನೋ ನೋಡುವುದು, ರಾತ್ರಿ ತಡವಾಗಿ ಮಲಗುವುದು, ಎಷ್ಟೊತ್ತಿಗೋ ನಿದ್ರೆ ಮಾಡುವುದು ಇದೇ ಜನರ ದಿನಚರಿಯಾಗಿಬಿಟ್ಟಿದೆ.
ಧಾವಂತದ ಬದುಕು, 9 ಗಂಟೆಗಳ ಕಚೇರಿ ಕೆಲಸ ಮುಗಿದ ನಂತರ ಸಾಮಾಜಿಕ ಜಾಲತಣಗಳಲ್ಲಿ ಏನನ್ನೋ ನೋಡುವುದು, ರಾತ್ರಿ ತಡವಾಗಿ ಮಲಗುವುದು, ಎಷ್ಟೊತ್ತಿಗೋ ನಿದ್ರೆ ಮಾಡುವುದು ಇದೇ ಜನರ ದಿನಚರಿಯಾಗಿಬಿಟ್ಟಿದೆ. ಇದೆಲ್ಲದರ ನಡುವೆ ಯಾವುದೇ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸುವುದು ಕಷ್ಟವಾಗುತ್ತಿದೆ, ಯಾವಾಗಲೂ ಗಮನವು ಬೇರೆಡೆಯೇ ಇರುತ್ತದೆ. ಕಚೇರಿ ಕೆಲಸ ಮಾಡುವಾಗಲೂ ಮೊಬೈಲ್ ನೋಡುವುದು, ಓದುವಾಗಲೂ ಮೊಬೈಲ್ ನೋಡುವುದು, ಯಾರೊಂದಿಗಾದರೂ ಮಾತನಾಡುತ್ತಿರುವಾಗಲೂ ತಡಿ ಮೆಸೇಜ್ ಏನೋ ಬಂದಿದೆ ಎಂದು ಮೊಬೈಲ್ ಇಣುಕುವುದು.
ನಾಳೆ ಏನು ಮಾಡಬೇಕೆಂಬುದನ್ನು ಇಂದೇ ಯೋಚಿಸಿ ನಿಮ್ಮ ದಿನ ಹೇಗಿರಬೇಕು ಎಂಬುದನ್ನು ನೀವು ಮೊದಲೇ ಆಲೋಚಿಸಬೇಕು, ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಗಮನವಿರಲಿ, ಒಂದು ಕೆಲಸ ನಿಧಾನವಾಗುತ್ತಿದ್ದರೆ ಎರಡನೇ ಕಾರ್ಯಕ್ಕೆ ಅಣಿಯಾಗಿ.
ಧ್ಯಾನ ಧ್ಯಾನವು ನಿಮಗೆ ಒಂದು ವಿಷಯದ ಮೇಲೆ ನಿಮ್ಮನ್ನು ನೋವು ಕೇಂದ್ರೀಕರಿಸಲು ನೆರವಾಗುತ್ತದೆ. ನಿಮ್ಮ ಮನಸ್ಸಿನಲ್ಲಿ ಓಡುತ್ತಿರುವ ಆಲೋಚನೆಗಳಿಗೂ ಕಡಿವಾಣ ಹಾಕುತ್ತದೆ, ದಿನಕ್ಕೆ ಮೂರರಿಂದ ಐದು ನಿಮಿಷಗಳ ಕಾಲ ಒಂದೇ ಸ್ಥಳದಲ್ಲಿ ಶಾಂತವಾಗಿ ಕುಳಿತುಕೊಳ್ಳಲು ಪ್ರಯತ್ನಿಸಿ.
ಮತ್ತಷ್ಟು ಓದಿ: ನಕಾರಾತ್ಮಕ ಆಲೋಚನೆಗಳಿಂದ ಹೊರಬನ್ನಿ, ನಿಮ್ಮ ಮೇಲೆ ನಂಬಿಕೆ ಇರಲಿ
ಸಾಕಷ್ಟು ನಿದ್ರೆ ಮಾಡಿ 7-9 ಗಂಟೆಗಳ ಕಾಲ ನಿದ್ರೆ ಮಾಡುವುದು ಉತ್ತಮ, ಬಹಳಷ್ಟು ಮಂದಿ ತಡರಾತ್ರಿವರೆಗೆ ಎಚ್ಚರಗೊಂಡಿರುತ್ತಾರೆ, ಬೆಳಗ್ಗೆ ಬೇಗ ಏಳುತ್ತಾರೆ ಆಗ ಕಚೇರಿಯಲ್ಲೂ ಆಲಸ್ಯವಿರುತ್ತದೆ. ಸರಿಯಾದ ನಿದ್ರೆ, ಕೆಲಸದ ನಡುವೆ ಸ್ವಲ್ಪ ವಿಶ್ರಾಂತಿ ಪಡೆಯುವುದು ಉತ್ತಮ
ನಿಮ್ಮ ಚಟುವಟಿಕೆಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ತನ್ನಿ ದಿನವಿಡೀ ಮೊಬೈಲ್ ನೋಡುತ್ತಿದ್ದರೆ ಅದು ತುಂಬಾ ಅಪಾಯಕಾರಿ, ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ, ಜಾಗಿಂಗ್ ಮತ್ತು ವಾಕಿಂಗ್ ಮಾಡಿ, ನೆಚ್ಚಿನ ಕ್ರೀಡೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸಿ.
ಒಂದೇ ಸಮಯಕ್ಕೆ ಬಹು ಕಾರ್ಯ ಮಾಡುವುದನ್ನು ತಪ್ಪಿಸಿ ನೀವು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುತ್ತಿದ್ದರೆ ಅದನ್ನು ತಪ್ಪಿಸಿ, ಅದು ನಿಮಗೆ ಮುಖ್ಯವಾದುದ್ದನ್ನು ಕೇಂದ್ರೀಕರಿಸಲು ಕಷ್ಟವಾಗಬಹುದು.
ಕೆಲಸದ ನಡುವೆ ಬಿಡುವು ಪಡೆದುಕೊಳ್ಳಿ ಗೊಂದಲವನ್ನು ಬಿಟ್ಟು ನಿಮ್ಮ ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಕೆಲಸದ ನಡುವೆ ವಿರಾಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.
ನೀವು ಕಾರ್ಯಗಳ ನಡುವೆ ವಿರಾಮವನ್ನು ತೆಗೆದುಕೊಳ್ಳದಿದ್ದರೆ, ನೀವು ಹೆಚ್ಚು ದಣಿದಿರುವಿರಿ, ಇದರಿಂದಾಗಿ ನೀವು ಯಾವುದೇ ಒಂದು ಕಾರ್ಯದಲ್ಲಿ ದೀರ್ಘಕಾಲ ಗಮನಹರಿಸಲಾಗುವುದಿಲ್ಲ. ವಿರಾಮವಿಲ್ಲದೆ ದೀರ್ಘ ಗಂಟೆಗಳ ಕೆಲಸವು ಗಮನವನ್ನು ಕಡಿಮೆ ಮಾಡುತ್ತದೆ, ಏಕಾಗ್ರತೆಯನ್ನು ಮಿತಿಗೊಳಿಸುತ್ತದೆ ಮತ್ತು ಆಯಾಸಕ್ಕೆ ಕಾರಣವಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ