ನಕಾರಾತ್ಮಕ ಆಲೋಚನೆಗಳಿಂದ ಹೊರಬನ್ನಿ, ನಿಮ್ಮ ಮೇಲೆ ನಂಬಿಕೆ ಇರಲಿ
ಯಾವುದೇ ವಿಚಾರವಾಗಿರಲಿ ಅದು ನಿಮ್ಮಿಂದ ಸಾಧ್ಯವೇ ಎಂಬ ಬಗ್ಗೆ ನೂರಾರು ಬಾರಿ ಆಲೋಚನೆ ಮಾಡುತ್ತೀರಿ, ಆ ಯೋಚನೆ ಉತ್ತಮವೇ ಆದರೆ ಅಷ್ಟೆಲ್ಲಾ ಆಲೋಚಿಸಿ ಅದರಿಂದ ಹಿಂದೆ ಸರಿಯುವುದಿದೆಯಲ್ಲಾ ಅದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲ.
ಯಾವುದೇ ವಿಚಾರವಾಗಿರಲಿ ಅದು ನಿಮ್ಮಿಂದ ಸಾಧ್ಯವೇ ಎಂಬ ಬಗ್ಗೆ ನೂರಾರು ಬಾರಿ ಆಲೋಚನೆ ಮಾಡುತ್ತೀರಿ, ಆ ಯೋಚನೆ ಉತ್ತಮವೇ ಆದರೆ ಅಷ್ಟೆಲ್ಲಾ ಆಲೋಚಿಸಿ ಅದರಿಂದ ಹಿಂದೆ ಸರಿಯುವುದಿದೆಯಲ್ಲಾ ಅದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲ. ಏನೇ ಇರಲಿ ಮೊದಲು ನೀವು ಸಾಧಿಸಬಹುದು ಎಂಬ ಛಲ ನಿಮ್ಮಲ್ಲಿರಲಿ, ಒಂದೊಮ್ಮೆ ಪ್ರಯತ್ನ ಪಟ್ಟೂ ಯಶಸ್ಸು ಸಿಗದಿದ್ದರೆ, ನಿಮ್ಮ ಪ್ರಯತ್ನಕ್ಕೆ ಖುಷಿ ಪಡಿ. ಮೊದಲು ನಕಾರಾತ್ಮಕ ಆಲೋಚನೆಯನ್ನು ಮನಸ್ಸಿನಿಂದ ಹೊರ ಹಾಕಿ, ಎಲ್ಲವೂ ನಿಮ್ಮಿಂದ ಸಾಧ್ಯ ಎನ್ನುವ ಮನೋಭಾವ ಬೆಳೆಸಿಕೊಳ್ಳಿ.
ಯಾರಾದರೂ ನಿಮ್ಮ ವಿರುದ್ಧ ಮಾತನಾಡಿದಾಗ ಮುಖದಲ್ಲಿ ನಗು ಇರಲಿ ಯಾರಾದರೂ ನಿಮ್ಮ ವಿರುದ್ಧ ಮಾತನಾಡಿದಾಗ ಮುಖವನ್ನು ಕೆಳಗೆ ಹಾಕಿ ಅಳುಮುಂಜಿ ಮುಖಮಾಡಿಕೊಂಡು ನಿಲ್ಲಬೇಡಿ ಅಥವಾ ಅದೇ ವಿಚಾರವನ್ನು ಪದೇ ಪದೇ ಯೋಚಿಸುತ್ತಾ ಕೊರಗಬೇಡಿ, ಏನೇ ಹೇಳಿದರೂ ನಗು ಮುಖವಿರಲಿ, ಆಗ ನಿಮ್ಮ ವಿರುದ್ಧ ಮಾತನಾಡಿದವರೂ ತಲೆ ತಗ್ಗಿಸುತ್ತಾರೆ.
ಮತ್ತಷ್ಟು ಓದಿ: Yoga Tips: ಯೋಗದ ನಂತರ ಈ ತಪ್ಪುಗಳನ್ನು ತಪ್ಪಿತಪ್ಪಿಯೂ ಮಾಡಬೇಡಿ
ಆಗುವುದಿಲ್ಲ ಎಂದು ಹೇಳುವುದನ್ನು ಕಲಿಯಿರಿ ಎಲ್ಲರೂ ಹೇಳುವುದನ್ನು ಕೇಳಬೇಕೆಂದೇನಿಲ್ಲ, ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿಕೊಳ್ಳಬೇಡಿ, ನಿಮಗಿಷ್ಟವಿಲ್ಲದ್ದನ್ನು ಆಗುವುದಿಲ್ಲ ಎಂದು ನೇರವಾಗಿ ಹೇಳಿಬಿಡಿ.
ನಕಾರಾತ್ಮಕ ಚರ್ಚೆಯನ್ನು ತಪ್ಪಿಸಿ ಯಾವುದೋ ವಿಚಾರ ನಿಮ್ಮ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವಂಥದ್ದಿದ್ದರೆ ಆ ಚರ್ಚೆಯನ್ನು ತಪ್ಪಿಸಿ.
ನಿಮ್ಮ ಬಗ್ಗೆ ಪ್ರೀತಿ ಇರಲಿ ನೀವು ಹಾಗೂ ನೀವು ಮಾಡುವ ಕೆಲಸದ ಬಗ್ಗೆ ಪ್ರೀತಿ ಇರಲಿ, ನಿಮ್ಮ ಖುಷಿಯಾಗಿ ಕೆಲಸವನ್ನು ಆಯ್ಕೆ ಮಾಡಿ, ಯಾವ ವಿಚಾರಗಳು ಅಥವಾ ಕೆಸಲಗಳನ್ನು ನಿಮಗೆ ದುಃಖವನ್ನುಂಟು ಮಾಡುತ್ತದೆ ಎಂದೆನಿಸಿದಾಗ ಅದರಿಂದ ಹೊರಬಂದುಬಿಡಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ