AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿವೆ ಸುಲಭ ಸಲಹೆಗಳು

Long Distance Relationship: ಯಾವುದೇ ಸಂಬಂಧದಲ್ಲಿ ಸಂವಹನವು ಪ್ರಮುಖವಾಗಿದೆ. ಅದರಲ್ಲೂ ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್ (Long distance relationship) ನಲ್ಲಿ ಸಂಬಂಧವನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿ ಸಂವಹನವು ತುಂಬಾ ಮುಖ್ಯವಾಗಿದೆ. ಏಕೆಂದರೆ ಇಂತಹ ಸಂಬಂಧದಲ್ಲಿ ಸಂಗಾತಿಗಳಿಬ್ಬರು ತಿಂಗಳಾನುಗಟ್ಟಲೆ ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಾಗುವುದಿಲ್ಲ, ಅವರವರ ಕೆಲಸ ಕಾರ್ಯಗಳಲ್ಲಿ ಹೆಚ್ಚು ನಿರತರಾಗಿರುತ್ತಾರೆ. ಹೀಗೆ ಸಮಯದ ಅಭಾವದಿಂದಾಗಿ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಿದ್ದರೆ ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿವೆ ಸುಲಭ ಸಲಹೆಗಳು
Husband and Wife
ಮಾಲಾಶ್ರೀ ಅಂಚನ್​
| Updated By: Digi Tech Desk|

Updated on: Aug 02, 2023 | 7:47 PM

Share

ಉದ್ಯೋಗ ಮತ್ತು ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಕಾರಣದಿಂದಾಗಿ ಹೆಚ್ಚಿನವರು ದೂರದ ಊರಿಗೆ ಅಥವಾ ಹೊರ ದೇಶಗಳಿಗೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಅವರು ಸಹಜವಾಗಿಯೇ ತಮ್ಮ ಸಂಗಾತಿಯಿಂದ ದೂರವಿರಬೇಕಾಗುತ್ತದೆ. ಈ ಸಮಯದಲ್ಲಿ ಪ್ರತಿನಿತ್ಯ ಭೇಟಿಯಾಗುವ ಮೂಲಕ ಅವರು ಸಂಗಾತಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ, ಗುಣಮಟ್ಟದ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಸಂಗಾತಿಗಳಿಬ್ಬರ ಈ ದೂರವು ಅವರ ಪ್ರೀತಿಗೆ ಒಂದು ಪರೀಕ್ಷೆ ಅಂತಾನೇ ಹೇಳಬಹುದು. ಅನೇಕ ಬಾರಿ ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್ (Long distance relationship) ನಲ್ಲಿ ಅನುಮಾನ, ಸಂಗಾತಿಗೆ ಗುಣಮಟ್ಟದ ಸಮಯ ಕೊಡಲು ಸಾಧ್ಯವಾಗದೇ ಇರುವುದು ಇವೆಲ್ಲವೂ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಮತ್ತು ಸಂಬಂಧವನ್ನು ಉಳಿಸಿಕೊಳ್ಳಲು ಕಷ್ಟಕರವಾಗಬಹುದು. ಹೀಗಿರುವಾಗ ಸಂಬಂಧವನ್ನು ಬಲವಾಗಿರಿಸಲು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ

ಸಂಬಂಧವನ್ನು ಬಲಪಡಿಸುವ ಮಾರ್ಗಗಳು:

ಬಲವಾದ ಸಂವಹನ ಕೌಶಲ್ಯ: ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್ ನಲ್ಲಿ ನಿಮ್ಮಿಬ್ಬರ ನಡುವಿನ ಅಂತರವನ್ನು ಕಡಿಮೆ ಮಾಡಲು ಪರಿಣಾಮಕಾರಿ ಸಂವಹನವು ಅತೀ ಅವಶ್ಯಕವಾಗಿದೆ. ಇಂತಹ ಸಂದರ್ಭದಲ್ಲಿ ನೀವು ಮುಖತಃ ಭೇಟಿಯಾಗಲೂ ಖಂಡಿತವಾಗಿಯೂ ಸಾಧ್ಯವಾಗುವುದಿಲ್ಲ. ಆದರೆ ಫೋನ್ ಕರೆ, ವೀಡಿಯೋ ಕಾಲ್ ಮತ್ತು ಮೆಸೇಜ್ ಗಳ ಮೂಲಕ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುತ್ತಾ, ಗುಣಮಟ್ಟದ ಸಮಯವನ್ನು ಕಳೆಯಿರಿ. ಪರಿಣಾಮಕಾರಿ ಸಂವಹನವು ನೀವು ದೂರ ದೂರ ಇದ್ದಿರಾ ಎಂಬ ಭಾವನೆಯನ್ನು ಮೂಡಿಸುವುದಿಲ್ಲ.

ಸಂಗಾತಿಯನ್ನು ಅನುಮಾನಿಸುವುದನ್ನು ತಪ್ಪಿಸಿ: ಈ ರೀತಿಯ ಸಂಬಂಧದಲ್ಲಿ ಜನರು ಸಾಮಾನ್ಯವಾಗಿ ಯಾವುದೋ ಒಂದು ಕಾರಣಕ್ಕಾಗಿ ತಮ್ಮ ಸಂಗಾತಿಯನ್ನು ಅನುಮಾನಿಸಲು ಪ್ರಾರಂಭಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಅಭದತ್ರೆಯ ಭಾವನೆ ಸಂಬಂಧಕ್ಕೆ ದೊಡ್ಡ ಮುಳುವಾಗಬಹುದು. ಅದಕ್ಕಾಗಿಯೇ ಸಂಗಾತಿಯ ಮೇಲೆ ಸಂಪೂರ್ಣವಾಗಿ ನಂಬಿಕೆ ಇರಿಸಿ ಮತ್ತು ಎಲ್ಲದರಲ್ಲೂ ಅವರನ್ನು ಅನುಮಾದ ಭಾವನೆಯಿಂದ ನೋಡುವುದನ್ನು ಬಿಟ್ಟುಬಿಡಿ.

ಇದನ್ನೂ ಓದಿ: ನಕಾರಾತ್ಮಕ ಆಲೋಚನೆಗಳಿಂದ ಹೊರಬನ್ನಿ, ನಿಮ್ಮ ಮೇಲೆ ನಂಬಿಕೆ ಇರಲಿ

ಬಂಧವನ್ನು ಬಲಪಡಿಸಲು ಸೃಜನಾತ್ಮಕ ಮಾರ್ಗಗಳು: ದೈಹಿಕವಾಗಿ ನೀವಿಬ್ಬರೂ ದೂರವಿದ್ದರೂ, ಕೆಲವೊಂದು ಸೃಜನಾತ್ಮಕ ಮಾರ್ಗಗಳ ಮೂಲಕ ನಿಮ್ಮ ಬಂಧವನ್ನು ಬಲಪಡಿಸಬಹುದು. ಜೊತೆಯಾಗಿ ಆನ್ ಲೈನ್ ಆಟಗಳನ್ನು ಆಡುವುದು, ಆಶ್ಚರ್ಯಕರ ಉಡುಗೊರೆಗಳನ್ನು ಕಳುಹಿಸುವುದು ಮತ್ತು ಪ್ರೇಮ ಪತ್ರಗಳನ್ನು ಕಳುಹಿಸುವ ಮೂಲಕ ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಬಹುದು.

ಇದನ್ನೂ ಓದಿ: ಬೆಳಗ್ಗೆ ನಿದ್ದೆಯಿಂದ ಎದ್ದ ತಕ್ಷಣ ನೀವು ಮೊಬೈಲ್​​ ಫೋನ್​​ ನೋಡುತ್ತಿರುವಿರಾ? ಆದರೆ ಜಾಗರೂಕರಾಗಿರಿ

ಸುಳ್ಳು ಹೇಳುವುದನ್ನು ತಪ್ಪಿಸಿ: ಸಂಬಂಧದಲ್ಲಿ ಅನೇಕ ಬಾರಿ ಜನರು ಅನಗತ್ಯವಾಗಿ ತಮ್ಮ ಸಂಗಾತಿಗೆ ಸುಳ್ಳು ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸುಳ್ಳು ಕೆಲವೊಮ್ಮೆ ನಿಮ್ಮ ಸಂಗಾತಿ ಗಮನಕ್ಕೂ ಬರಬಹುದು. ಈ ಕಾರಣದಿಂದಾಗಿ ಸಂಗಾತಿಯು ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಅದಕ್ಕಾಗಿಯೇ ಸಂಗಾತಿಯೊಂದಿಗೆ ಯಾವುದೇ ಮುಚ್ಚುಮರೆಯಿಲ್ಲದೆ ಯಾವಾಗಲೂ ಸತ್ಯವನ್ನು ಮಾತನಾಡಿ.

ಸಂಗಾತಿಗಾಗಿ ಸಮಯ ಮೀಸಲಿಡಿ: ಕೆಲವರಿಗೆ ತಮ್ಮ ಕೆಲಸದ ಬ್ಯುಸಿ ಶೆಡ್ಯೂಲ್ ನಿಂದಾಗಿ ಸಂಗಾತಿಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ಸಂಬಂಧದಲ್ಲಿ ಇನ್ನಷ್ಟು ಅಂತರ ಮೂಡಬಹುದು. ಅಂತಹ ಪರಿಸ್ಥಿತಿಯಲ್ಲಿ ಸಂಗಾತಿಗಾಗಿ ಪ್ರತಿದಿನ ಸ್ವಲ್ಪ ಸಮಯವನ್ನು ಮೀಸಲಿಡಿ. ನೀವು ನಿಮ್ಮ ಸಂಗಾತಿಗಾಗಿ ಮೀಸಲಿಡುವ ಒಂದಿಷ್ಟು ಸಮಯವು ಕೂಡ ನಿಮ್ಮ ಸಂಬಂಧವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ