AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನೇಹಿತರ ದಿನವನ್ನು ಸ್ಮರಣೀಯವಾಗಿರಿಸಲು, ಗೆಳೆಯರೊಟ್ಟಿಗೆ ಪ್ರವಾಸ ಮಾಡಬಹುದಾದ ವಿಶೇಷ ಸ್ಥಳಗಳು

Friendship Day 2023: ಪ್ರತಿವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು (Friendship day) ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 6 ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತಿದೆ. ಸ್ನೇಹವು ನಮ್ಮ ಜೀವನದ ಅತ್ಯಂತ ವಿಶೇಷವಾದ ಸಂಬಂಧ. ಈ ಸಂಬಂಧದ ಆಚರಣೆಯನ್ನು ಸ್ಮರಣೀಯವಾಗಿರಿಸಲು ಈ ಬಾರಿಯ ಸ್ನೇಹಿತರ ದಿನದಂದು ನಿಮ್ಮ ಸ್ನೇಹಿತರ ಜೊತೆಗೆ ಪ್ರವಾಸ ಕೈಗೊಳ್ಳಬಹುದು. ಹಾಗಿದ್ದರೆ ಸ್ನೇಹಿತರ ಜೊತೆಗೆ ಪ್ರವಾಸ ಹೋಗಲು ಸೂಕ್ತವಾದ ಸ್ಥಳಗಳು ಯಾವುವು ಎಂಬುದನ್ನು ನೋಡೋಣ.

ಸ್ನೇಹಿತರ ದಿನವನ್ನು ಸ್ಮರಣೀಯವಾಗಿರಿಸಲು, ಗೆಳೆಯರೊಟ್ಟಿಗೆ ಪ್ರವಾಸ ಮಾಡಬಹುದಾದ ವಿಶೇಷ ಸ್ಥಳಗಳು
Friendship Day
ಮಾಲಾಶ್ರೀ ಅಂಚನ್​
| Updated By: Digi Tech Desk|

Updated on: Aug 03, 2023 | 9:54 AM

Share

ಸ್ನೇಹಿತರ ದಿನ (Friendship day) ಇನ್ನೇನು ಹತ್ತಿರದಲ್ಲಿದೆ. ಈ ಬಾರಿಯ ಸ್ನೇಹಿತರ ದಿನದಂದು ಕೆಫೆ ಮತ್ತು ರೆಸ್ಟೋರೆಂಟ್ ಗಳಿಗೆ ಹೋಗಿ ಪಾರ್ಟಿ ಮಾಡುವ ಬದಲು, ಸ್ನೇಹಿತರ ಜೊತೆಗೂಡಿ ಪ್ರವಾಸ ಹೋಗಲು ಏಕೆ ಯೋಚಿಸಬಾರದು? ಫ್ರೆಂಡ್ ಶೀಪ್ ಡೇ ಯನ್ನು ಸ್ಮರಣೀಯವಾಗಿರಿಸಲು ಪ್ರವಾಸಕ್ಕಿಂತ ಉತ್ತಮವಾದ ಯೋಜನೆ ಇನ್ನೊಂದಿಲ್ಲ. ಸ್ನೇಹಿತರ ದಿನವನ್ನು ಆಗಸ್ಟ್ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಅಲ್ಲದೆ ಇದು ವಾರಾಂತ್ಯ ಆಗಿರುವುದರಿಂದ ನೀವು ಧಾರಳವಾಗಿ ನಿಮ್ಮ ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳಬಹುದು. ಸ್ನೇಹಿತರೊಂದಿಗೆ ಪ್ರವಾಸ ಹೋಗುವ ಮೂಲಕ ಸ್ನೇಹಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬಹುದು. ನೀವು ಕೂಡಾ ಈ ಬಾರಿಯ ಸ್ನೇಹಿತರ ದಿನವನ್ನು ಸ್ಮರಣೀವಾಗಿರಿಸಲು ಬಯಸಿದರೆ, ಕೆಲವು ಅದ್ಭುತ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಿ.

ಸ್ನೇಹಿತರೊಂದಿಗೆ ಪ್ರವಾಸ ಹೋಗಲು ಸೂಕ್ತವಾದ ಸ್ಥಳಗಳು

ಗೋವಾ: ಸ್ನೇಹಿತರೆಲ್ಲಾ ಜೊತೆಗೂಡಿ ಪ್ರವಾಸ ಹೋಗುವ ಬಗ್ಗೆ ಯೋಜನೆ ಮಾಡಿದಾಗ ಥಟ್ಟನೆ ನೆನಪಿಗೆ ಬರುವ ಸ್ಥಳವೇ ಗೋವಾ. ಗೋವಾದ ಬೆರಗುಗೊಳಿಸುವ ಕಡಲತೀರಗಳಲ್ಲಿ ನಿಮ್ಮ ಸ್ನೇಹಿತರೊಂದಿಗೆ ನೀವು ಸ್ಮರಣೀಯ ಪ್ರವಾಸವನ್ನು ಕೈಗೊಳ್ಳಬಹುದು. ಹಲವಾರು ಜಲಕ್ರೀಡೆ ಚಟುವಟಿಕೆಗಳನ್ನು ನೀವು ಆನಂದಿಸಬಹುದು ಮತ್ತು ನಿಮ್ಮ ಸ್ನೇಹಿತರ ಜೊತೆ ಮೋಜುಭರಿತ ಸಮಯವನ್ನು ಕಳೆಯಬಹುದು. ವಿಶ್ರಾಂತಿ ಪಡೆಯಲು ಮತ್ತು ಜೀವನನ್ನು ಆನಂದಿಸಲು ಬಯಸುವ ಸ್ನೇಹ ವರ್ಗಕ್ಕೆ ಗೋವಾ ಒಂದು ಜನಪ್ರಿಯ ತಾಣವಾಗಿದೆ ಮತ್ತು ನಿಮ್ಮ ಸ್ನೇಹಿತರೊಂದಿಗೆ ಮರೆಯಲಾಗದ ನೆನಪುಗಳನ್ನು ಸೃಷ್ಟಿಸಲು ಇದು ಪರಿಪೂರ್ಣ ಸ್ಥಳವಾಗಿದೆ.

ಚಿರಾಪುಂಜಿ: ಮೇಘಾಲಯದ ಚಿರಾಪುಂಜಿ ಅದ್ಭುತ ಪ್ರಾಕೃತಿಕ ಸೌಂದರ್ಯ ತಾಣವಾಗಿದೆ. ಈಗ ಮಳೆಗಾಲವಾಗಿರುವುದರಿಂದ ಈ ಸಮಯದಲ್ಲಿ ನಿಮ್ಮ ಸ್ನೇಹಿತರ ಜೊತೆಗೆ ಭೇಟಿ ನೀಡಲು ಇದು ಪರಿಪೂರ್ಣವಾದ ಸ್ಥಳವಾಗಿದೆ. ಹಚ್ಚ ಹಸಿರಿನ ಭೂ ದೃಶ್ಯಗಳು, ಜಲಪಾತಗಳು ಮುಂತಾದ ತಾಣಗಳು ನಿಮಗೆ ಅದ್ಭುತ ಅನುಭವವನ್ನು ನೀಡುತದೆ. ಪ್ರಕೃತಿ ಪ್ರೇಮಿಗಳು ತಮ್ಮ ಸ್ನೇಹಿತರೊಂದಿಗೆ ಸ್ಮರಣೀಯ ಪ್ರವಾಸದ ಅನುಭವಕ್ಕಾಗಿ ಈ ಸ್ಥಳಕ್ಕೆ ಭೇಟಿ ನೀಡಬಹುದು. ಇಲ್ಲಿ ನೀವು ಟ್ರೆಕ್ಕಿಂಗ್, ಬೋಟಿಂಗ್ ಗಳಂತಹ ಸಾಹಸಮಯ ಕ್ರೀಡೆಗಳ ಜೊತೆಗೆ ರುಚಿಕರವಾದ ತಿನಿಸುಗಳನ್ನು ಕೂಡ ಸವಿಯಬಹುದು.

ಇದನ್ನೂ ಓದಿ: ಕಬಿನಿ ಹಿನ್ನೀರಿನಲ್ಲಿ ಜೂನಿಯರ್ ಭೋಗೇಶ್ವರನದ್ದೇ ಹವಾ, ಇವನ ದಂತಕ್ಕೆ ಪ್ರವಾಸಿಗರು ಫಿದಾ

ಲೇಹ್ ಲಡಾಕ್: ನೀವು ಮತ್ತು ನಿಮ್ಮ ಸ್ನೇಹಿತರು ಸಾಹಸಮಯ ಪ್ರವಾಸಕ್ಕೆ ಸಿದ್ಧರಾಗಿದ್ದರೆ, ಲಡಾಖ್ ನಿಮಗಾಗಿ ಉತ್ತಮ ಸ್ಥಳವಾಗಿದೆ. ಹಿಮದಿಂದ ಆವೃತ್ತವಾಗಿರುವ ಶಿಖರಗಳು ಮತ್ತು ಪ್ಯಾಂಗೊಂಗ್ ಮತ್ತು ತ್ಸೋ ಮೊರಿರಿಯಂತಹ ಪ್ರಾಚೀನ ಸರೋವರಗಳೊಂದಿಗೆ ಅಲ್ಲಿನ ಮೋಡಿಮಾಡುವ ಭೂದೃಶ್ಯಗಳು ನಿಮಗೆ ಮತ್ತು ನಿಮ್ಮ ಸ್ನೇಹಿತರಿಗೆ ಮರೆಯಲಾರದ ಅದ್ಭುತ ಅನುಭವವನ್ನು ನೀಡುತ್ತದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ: ನೀವು ಹಲವು ಸಮಯದಿಂದ ನಿಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಬೇಕು ಎಂದು ಯೋಜನೆ ರೂಪಿಸಿದ್ದರೆ, ನಿಮಗೆ ಭೇಟಿ ನೀಡಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸೂಕ್ತವಾದ ಸ್ಥಳವಾಗಿದೆ. ಇಲ್ಲಿನ ಸಮುದ್ರ ತೀರಗಳು, ಜಲಕ್ರೀಡೆಗಳು ನಿಮ್ಮನ್ನು ಹೆಚ್ಚು ಆಕರ್ಷಿಸುತ್ತವೆ. ಹಾಗೂ ಇಲ್ಲಿ ಸ್ನೇಹಿತರ ಜೊತೆಗೆ ಒಂದೊಳ್ಳೆ ಸ್ಮರಣೀಯ ಸಮಯವನ್ನು ಕಳೆಯಬಹುದು.

ಚಿಕ್ಕಮಗಳೂರು: ಕಾಫಿ ನಾಡು ಎಂದೇ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಸ್ನೇಹಿತರ ಜೊತೆ ಪ್ರವಾಸ ತೆರಳಲು ಅದ್ಭುತವಾದ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ನೀವು ಕ್ಯಾಂಪ್ ಫೈರ್, ಟ್ರೆಕ್ಕಿಂಗ್ ಜೊತೆಗೆ ಪ್ರಕೃತಿಯ ಅಗಾಧವಾದ ಸೌಂದರ್ಯರಾಶಿಯನ್ನು ಸವಿಯಬಹುದು. ಈ ಬಾರಿಯ ಸ್ನೇಹಿತರ ದಿನದಂದು ಪ್ರವಾಸ ಹೋಗುವ ಯೋಜನೆ ಮಾಡಿದ್ದರೆ, ಖಂಡಿತವಾಗಿ ಈ ಸ್ಥಳಕ್ಕೆ ನೀವು ಭೇಟಿ ನೀಡಲೇಬೇಕು.

ಮನಾಲಿ: ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಿಮ್ಮ ಗೆಳೆಯರೊಂದಿಗೆ ಹಿಮದಿಂದ ಆವೃತವಾದ ಪರ್ವತಗಳ ಸೌಂದರ್ಯವನ್ನು ಆನಂದಿಸಿ. ಮನಾಲಿ ಭಾರತದ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ಗಿರಿಧಾಮಗಳು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ನೈಸರ್ಗಿಕ ಸೌಂದರ್ಯ ಮತ್ತು ಸಾಹಸಿ ಚಟುವಟಿಕೆಗಳಿಗೆ ಪರಿಪೂರ್ಣವಾದ ಸ್ಥಳವಾಗಿದೆ.

ಕೇರಳ: ಸ್ನೇಹಿತ ಜೊತೆಗೆ ಒಂದೊಳ್ಳೆ ಶಾಂತಯುತವಾದ ಪ್ರವಾಸ ಅನುಭವವನ್ನು ಪಡೆಯಬೇಕೆಂದಿದ್ದರೆ, ಕೇರಳವು ಉತ್ತಮ ಸ್ಥಳವಾಗಿದೆ. ಇಲ್ಲಿನ ಅನೇಕ ಪ್ರಾಕೃತಿಕ ತಾಣಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ. ಅಲ್ಲದೆ ಈಗ ಮಳೆಗಾಲವಾಗಿರುವುದರಿಂದ ಇಲ್ಲಿನ ಪ್ರಾಕೃತಿಕ ಸೌಂದರ್ಯವು ಸ್ವರ್ಗದಂತಿರುತ್ತದೆ. ಅಲೆಪ್ಪಿಯ ಹಿನ್ನೀರು, ಮುನ್ನಾರ್ ನ ಸುಂದರವಾದ ಗಿರಿಧಾಮ, ವಯನಾಡ್ ನ ಸೌಂದರ್ಯ ಮತ್ತು ಕೋವಲಂ ನ ಸುಂದರ ಕಡಲ ತೀರಗಳಿಗೆ ಪ್ರವಾಸ ಹೋಗುವ ಮೂಲಕ ಈ ಬಾರಿಯ ಸ್ನೇಹಿತರ ದಿನವನ್ನು ವಿಶೇಷವಾಗಿ ಆಚರಸಬಹುದು.

ಜೀವನಶೈಲಿಯ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ