AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Quick and Easy Recipes: ಓಟ್ಸ್ ಮತ್ತು ಅಗಸೆ ಬೀಜದ ರುಚಿಕರ ಲಡ್ಡು ರೆಸಿಪಿ ಇಲ್ಲಿದೆ

ಈ ಸಿಹಿ ಪಾಕವಿಧಾನವನ್ನು ಹುರಿದ ಓಟ್ಸ್, ಪೀನಟ್​​ ಬಟರ್, ಅಗಸೆ ಬೀಜಗಳು, ತೆಂಗಿನ ತುರಿ ಮತ್ತು ಡಾರ್ಕ್ ಚಾಕೊಲೇಟ್ ಬಳಸಿ ತಯಾರಿಸಲಾಗುತ್ತದೆ. ಇದನ್ನು ಮಕ್ಕಳಂತೂ ಖಂಡಿತಾ  ಇಷ್ಟಪಡುತ್ತಾರೆ.

Quick and Easy Recipes: ಓಟ್ಸ್ ಮತ್ತು ಅಗಸೆ ಬೀಜದ ರುಚಿಕರ ಲಡ್ಡು ರೆಸಿಪಿ ಇಲ್ಲಿದೆ
ಸಾಂದರ್ಭಿಕ ಚಿತ್ರImage Credit source: Youtube
ಅಕ್ಷತಾ ವರ್ಕಾಡಿ
|

Updated on:Jan 29, 2023 | 5:59 PM

Share

ಅಗಸೆ ಬೀಜದಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿವೆ. ಇದು ನಿಮ್ಮ ಚರ್ಮದ ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಜೊತೆಗೆ ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸಮದ್ಧವಾಗಿದೆ. ಆದ್ದರಿಂದ ಆರೋಗ್ಯಕರವಾದ ಈ ಪಾಕ ವಿಧಾನವನ್ನು ಪ್ರಯತ್ನಿಸಿ. ಈ ಸಿಹಿ ಪಾಕವಿಧಾನವನ್ನು ಹುರಿದ ಓಟ್ಸ್, ಪೀನಟ್​​ ಬಟರ್, ಅಗಸೆ ಬೀಜಗಳು, ತೆಂಗಿನ ತುರಿ ಮತ್ತು ಡಾರ್ಕ್ ಚಾಕೊಲೇಟ್ ಬಳಸಿ ತಯಾರಿಸಲಾಗುತ್ತದೆ. ಇದನ್ನು ಮಕ್ಕಳಂತೂ ಖಂಡಿತಾ  ಇಷ್ಟಪಡುತ್ತಾರೆ. ನೀವು ಸಾಮಾನ್ಯ ಸಿಹಿತಿಂಡಿಗಳಿಂದ ಬೇಸರಗೊಂಡಿದ್ದರೆ, ಮುಂದಿನ ಹಬ್ಬಕ್ಕೆ ಈ ಹೊಸ ರೆಸಿಪಿಯನ್ನು ಪ್ರಯತ್ನಿಸಿ. ಇದರಲ್ಲಿ ಫೈಬರ್ ಮತ್ತು ಪ್ರೊಟೀನ್‌ನಗಳು ಹೇರಳವಾಗಿದ್ದು, ಇದು ಆರೋಗ್ಯಕರ ಜೀವನಶೈಲಿಗೆ ಉತ್ತಮ ಆಯ್ಕೆಯಾಗಿದೆ.

ಓಟ್ಸ್ ಮತ್ತು ಅಗಸೆ ಬೀಜದ ಲಡ್ಡು ರೆಸಿಪಿ :

ಬೇಕಾಗುವ ಸಾಮಾಗ್ರಿಗಳು:

2 ಕಪ್ ಓಟ್ಸ್ 1 ಕಪ್ ಅಗಸೆ ಬೀಜಗಳು 1/2 ಕಪ್ ಜೇನುತುಪ್ಪ 3 ಚಮಚ ವೆನಿಲ್ಲಾ ಎಸೆನ್ಸ್ 12 ಚಮಚ ಡಾರ್ಕ್ ಚಾಕೊಲೇಟ್ ಚಿಪ್ಸ್ 1 ಕಪ್ ತೆಂಗಿನ ತುರಿ 1 ಕಪ್ ಪೀನಟ್​​ ಬಟರ್

ಇದನ್ನೂ ಓದಿ: ರುಚಿಯಾದ ಸ್ಟೀಮ್ಡ್ ಕಾರ್ನ್ ಬಾಲ್ ತಯಾರಿಸಿ

ಓಟ್ಸ್ ಮತ್ತು ಅಗಸೆ ಬೀಜದ ಲಡ್ಡು ಮಾಡುವ ವಿಧಾನ:

ಹಂತ 1: ಪ್ಯಾನ್ ತೆಗೆದುಕೊಂಡು ಅದಕ್ಕೆ ಓಟ್ಸ್ ಹಾಕಿ ಮಧ್ಯಮ ಉರಿಯಲ್ಲಿ ಡ್ರೈ ರೋಸ್ಟ್ ಮಾಡಿ. ನಂತರ ಓಟ್ಸ್ ತೆಗೆದು ಅಗಸೆ ಬೀಜಗಳನ್ನು ಹುರಿಯಿರಿ. ನಂತರ, ಮಧ್ಯಮ ಗಾತ್ರದ ಬೌಲ್ ತೆಗೆದುಕೊಂಡು ಅದರಲ್ಲಿ ವೆನಿಲ್ಲಾ ಎಸೆನ್ಸ್, ಪೀನಟ್​​ ಬಟರ್ ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಬಟ್ಟಲಿನಲ್ಲಿ ತೆಂಗಿನ ಕಾಯಿ ತುರಿ, ಅಗಸೆ ಬೀಜಗಳು ಮತ್ತು ಡಾರ್ಕ್ ಚಾಕೊಲೇಟ್ ಚಿಪ್ಸ್ ಸೇರಿಸಿ. ಈಗ ಓಟ್ಸ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ಹಂತ 2: ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಮತ್ತು ಈ ಮಿಶ್ರಣವನ್ನು 25 ನಿಮಿಷಗಳ ರೆಫ್ರಿಜರೇಟರ್ನಲ್ಲಿ ಇರಿಸಿ. ನಂತರ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ. ಈಗ ಆರೋಗ್ಯಕರ ಓಟ್ಸ್ ಮತ್ತು ಅಗಸೆ ಬೀಜದ ಲಡ್ಡು ಸಿದ್ದವಾಗಿದೆ. ನೀವು ರುಚಿಯನ್ನು ಇನ್ನಷ್ಟು ಹೆಚ್ಚಿಸಲು ಬಯಸಿದರೆ ಒಣದ್ರಾಕ್ಷಿ, ಗೋಡಂಬಿಗಳನ್ನು ಸೇರಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 5:58 pm, Sun, 29 January 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?