Flaxseeds:ಅಗಸೆ ಬೀಜದಿಂದ ತೂಕ ಇಳಿಕೆ ಸೇರಿ ಏನೆಲ್ಲಾ ಪ್ರಯೋಜನವಿದೆ ಗೊತ್ತೇ?

| Updated By: ನಯನಾ ರಾಜೀವ್

Updated on: May 29, 2022 | 11:11 AM

Flax Seed:ಅಗಸೆ ಬೀಜ(Flax Seed)ವು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವ ಅಗಸೆ ಬೀಜ ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಕಾರಿಯಾಗುತ್ತದೆ.

Flaxseeds:ಅಗಸೆ ಬೀಜದಿಂದ ತೂಕ ಇಳಿಕೆ ಸೇರಿ ಏನೆಲ್ಲಾ ಪ್ರಯೋಜನವಿದೆ ಗೊತ್ತೇ?
Flax Seeds
Follow us on

ಅಗಸೆ ಬೀಜ(Flaxseed)ವು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವ ಅಗಸೆ ಬೀಜ ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಕಾರಿಯಾಗುತ್ತದೆ.

ಎಲ್ಲಾ ಪೋಷಕಾಂಶಗಳು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಅನೇಕ ಪ್ರಯೋಜನಗಳನ್ನು ಇದು ಹೊಂದಿರುವುದಂತೂ ನಿಜ. ಆದರೆ ಅಗಸೆ ಬೀಜಗಳನ್ನು ಕೆಲವರು ಸೇವಿಸಬಾರದು ಎಂದು ಹೇಳುತ್ತಾರೆ.

ಪುಡಿ ಮಾಡಿದ ಅಗಸೆಬೀಜದ ಒಂದು ಚಮಚ 7 ಗ್ರಾಂ ಇರುತ್ತದೆ. ಇದರಲ್ಲಿ 1.28 ಗ್ರಾಂ ಪ್ರೋಟೀನ್, 2.95 ಗ್ರಾಂ ಕೊಬ್ಬು, 2.02 ಗ್ರಾಂ ಕಾರ್ಬೋಹೈಡ್ರೇಟ್, 1.91 ಗ್ರಾಂ ಫೈಬರ್, 17.8 ಮಿಗ್ರಾಂ ಕ್ಯಾಲ್ಸಿಯಂ, 27.4 ಮಿಗ್ರಾಂ ಮೆಗ್ನೀಷಿಯಮ್, 44.9 ಮಿಗ್ರಾಂ ರಂಜಕ, 56.9 ಮಿಗ್ರಾಂ ಪೊಟ್ಯಾಸಿಯಮ್, 6.09 ಮೈಕ್ರೊಗ್ರಾಂ ಫೋಲೇಟ್ ಮತ್ತು 45.6 ಮೈಕ್ರೊಗ್ರಾಂ ಲುಟೀನ್ ಮತ್ತು ಗ್ಯಾಕ್ಸಾಂಟಿನ್ ಹ್ಯಾಪನ್ಸ್ ಇದೆ, ಇದು ಆರೋಗ್ಯಕರ ದೇಹಕ್ಕೆ ಬಹಳ ಮುಖ್ಯ.

ಅಗಸೆ ಬೀಜಗಳು ಕೆಲವು ಔಷಧಗಳೊಂದಿಗೆ ಪ್ರತಿಕೂಲ ರೀತಿಯಲ್ಲಿ ಪ್ರತಿಕ್ರಿಯಿಸಬಹುದು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಅಗಸೆ ಬೀಜಗಳು ದೇಹದಲ್ಲಿ ಔಷಧಿಗಳನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತವೆ.ಇದು ಔಷಧದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ವಿಭಿನ್ನ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ.

ಅಗಸೆ ಬೀಜದ ಪ್ರಯೋಜನಗಳೇನು?

ಜೀರ್ಣಕ್ರಿಯೆಗೆ ಸಹಕಾರಿ
ಅಗಸೆ ಬೀಜವು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿಯಾಗಿದೆ. ಒಮೆಗಾ -3 ಕೊಬ್ಬಿನಾಮ್ಲಗಳು, ಪ್ರೋಟೀನ್ಸ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಇದರಲ್ಲಿವೆ. ಅಗಸೆ ಬೀಜಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ತೂಕ ನಿರ್ವಹಣೆ
ಸ್ಥೂಲಕಾಯ ಹೊಂದಿರುವವರಿಗೆ ಅಗಸೆ ಬೀಜ ರಾಮಬಾಣ. ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಇದು ಪ್ರಯೋಜನಕಾರಿ. ಪ್ರತಿದಿನ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಶೇ. 6 ರಿಂದ ಶೇ.11 ರಷ್ಟು ಕಡಿಮೆ ಮಾಡಬಹುದು.

ಮಲಬದ್ಧತೆ
ಅಗಸೆ ಬೀಜದಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.

ಉರಿಯೂತದ ಕಾಯಿಲೆ, ಹೃದಯ ಕಾಯಿಲೆ, ಹಾರ್ಮೋನುಗಳ ಅಸಮತೋಲನ, ಹೊಟ್ಟೆ ಉಬ್ಬರ ಮತ್ತು ಎಡಿಮಾವನ್ನು ಕಡಿಮೆ ಮಾಡುತ್ತದೆ. ಆಗಸೆ ಬೀಜಗಳು ಟೈಪ್ 2 ಡಯಾಬಿಟಿಸ್, ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಲ್ಲದು.ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಲ್ಲ, ಕೆಲವು ಅಧ್ಯಯನಗಳ ಮಾಹಿತಿಯನ್ನೊಳಗೊಂಡಿದೆ.

ಅಕಾಲಿಕ ವೃದ್ಧಾಪ್ಯ ನಿಯಂತ್ರಣ
ಅಗಸೆಬೀಜದಲ್ಲಿ ಆಂಟಿ-ಆಕ್ಸಿಡೆಂಟ್ಸ್ ಮತ್ತು ಫೈಟೊಕೆಮಿಕಲ್ಸ್ ಗುಣ ಲಕ್ಷಣಗಳಿವೆ, ಇದು ಹೆಚ್ಚುತ್ತಿರುವ ವಯಸ್ಸಿನಲ್ಲಿ ಮುಖದ ಚರ್ಮವನ್ನು ಯುವ್ವನಯುಕ್ತವಾಗಿರಿಸುತ್ತದೆ. ಸುಕ್ಕುಗಳು ಸಮಸ್ಯೆ ದೂರವಾಗಿಸಿ ಮತ್ತು ಚರ್ಮವು ಹೊಳೆಯುವಂತೆ ಮಾಡುತ್ತದೆ.

ಅಗಸೆ ಬೀಜ ಯಾರು ಸೇವಿಸಬಾರದು?
​ಈಸ್ಟ್ರೊಜೆನ್ ಮಟ್ಟವನ್ನು ಬದಲಾಯಿಸುವ ಔಷಧಿಗಳು
ಮಲಬದ್ಧತೆಗಾಗಿ ಔಷಧ ಸೇವಿಸುವವರು
ರಕ್ತದೊತ್ತಡವನ್ನು ಕಡಿಮೆ ಮಾಡುವ ಔಷಧಿಗಳು
ರಕ್ತ ತೆಳುವಾಗುವುದು
ಆಸ್ಪಿರಿನ್ ಔಷಧವನ್ನು ತೆಗೆದುಕೊಳ್ಳುವವರು
ನ್ಯಾಪ್ರೋಕ್ಸೆನ್ ನಂತಹ ಉರಿಯುತದ ಔಷಧಗಳು
ಇನ್ಸುಲಿನ್
ಗ್ಲೈಬುರೈಡ್

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ