ನಿಮ್ಮ ಮನೆಯನ್ನು ಯಾವಾಗಲೂ ಸುವಾಸನೆಯಿಂದಿರಿಸಲು ಈ 6 ಸಲಹೆಗಳನ್ನು ಪಾಲಿಸಿ
ಮನೆಯು ಉತ್ತಮ ವಾಸನೆಯನ್ನು ಹೊಂದಿದ್ದರೆ, ಅಲ್ಲಿ ನೀವು ಹೆಚ್ಚು ಆರಾಮದಾಯಕವಾಗಿ ಇರುತ್ತೀರಿ. ನಿಮ್ಮ ಮನೆಯು ಯಾವಾಗಲೂ ಉತ್ತಮ ವಾಸನೆಯನ್ನು ಹೊಂದಲು ನಿಮಗಾಗಿ ಕೆಲವೊಂದಿಷ್ಟು ಸಲಹೆಗಳು ಇಲ್ಲಿವೆ.
ನೀವು ನಿಮ್ಮ ನೆಂಟರ ಅಥವಾ ಸ್ನೇಹಿತರ ಮನೆಗೆ ಭೇಟಿ ನೀಡಿದಾಗ, ತಕ್ಷಣ ಗಮನಿಸುವ ಒಂದು ವಿಷಯವೆಂದರೆ ಅದು ಸುವಾಸನೆ. ಮನೆಯು ಉತ್ತಮ ವಾಸನೆಯನ್ನು ಹೊಂದಿದ್ದರೆ, ಅಲ್ಲಿ ನೀವು ಹೆಚ್ಚು ಆರಾಮದಾಯಕವಾಗಿ ಇರುತ್ತೀರಿ. ಆದ್ದರಿಂದ ನಿಮ್ಮ ಮನೆಯು ಯಾವಾಗಲೂ ಉತ್ತಮ ವಾಸನೆಯನ್ನು ಹೊಂದಲು ನಿಮಗಾಗಿ ಕೆಲವೊಂದಿಷ್ಟು ಸಲಹೆಗಳು ಇಲ್ಲಿವೆ.
1. ಅಡಿಗೆ ಸೋಡಾ:
ನೀವು ಸಹಜವಾಗಿ, ಕೃತಕ ಸುಗಂಧ ದ್ರವ್ಯವನ್ನು ಬಳಸಬಹುದು. ಕೆಲವೊಂದು ಸಲ ಇವುಗಳು ಕೆಟ್ಟ ವಾಸನೆಯೊಂದಿಗೆ ಸೇರಿಕೊಂಡು ವಾಸನೆ ಹೆಚ್ಚಾಗುತ್ತದೆ. ಆದರೆ ಅಡಿಗೆ ಸೋಡಾ ದುರ್ವಾಸನೆಯನ್ನು ಹೀರಿಕೊಳ್ಳುತ್ತದೆ. ಉದಾಹರಣೆಗೆ, ನಿಮ್ಮ ರೆಫ್ರಿಜರೇಟರ್ನಲ್ಲಿ ಅಡಿಗೆ ಸೋಡಾದ ಕಂಟೇನರ್ ಇಡುವುದರಿಂದ ಇತರ ಆಹಾರಗಳ ವಾಸನೆಯನ್ನು ಇದು ತೊಡೆದುಹಾಕುತ್ತದೆ. ಆದ್ದರಿಂದ ಕೆಟ್ಟ ವಾಸನೆಯು ತ್ವರಿತವಾಗಿ ನಿವಾರಿಸಲು ಮನೆಯ ಮೂಲೆ ಮೂಲೆಗಳಲ್ಲಿ ಅಡುಗೆ ಸೋಡಾ ಇರಿಸಿ. ಇದು ಹೆಚ್ಚು ಪರಿಣಾಮಕಾರಿಯ ಜೊತೆಗೆ ಅಗ್ಗವಾಗಿದೆ.
2. ಸ್ವಚ್ಛತೆ:
ರಗ್ಗುಗಳು, ಅಲಂಕಾರಿಕ ದಿಂಬುಗಳು, ಹಾಸಿಗೆ ಮತ್ತು ಪರದೆಗಳನ್ನು ತೊಳೆದು ಸ್ವಚ್ಛತೆಯಿಂದ ಇರಿಸಿ. ನಿಮ್ಮ ಅಲಂಕಾರಿಕ ದಿಂಬುಗಳು ಮತ್ತು ಪರದೆಗಳನ್ನು, ರಗ್ ಅಥವಾ ಕಾರ್ಪೆಟ್ ತಿಂಗಳಿಗೊಮ್ಮೆಯಾದರೂ ತೊಳೆಯುವುದನ್ನು ಖಚಿತಪಡಿಸಿಕೊಳ್ಳಿ. ರಗ್ಗು ಮೇಲೆ ಸ್ವಲ್ಪ ಅಡಿಗೆ ಸೋಡಾವನ್ನು ಚಿಮುಕಿಸಿ ಕೆಲವು ಗಂಟೆಗಳ ಕಾಲ ಹಾಗೆಯೇ ಬಿಡಿ. ಇದು ವಾಸನೆಯನ್ನು ಹೀರಿಕೊಳ್ಳುತ್ತದೆ.
3. ಕಿಟಕಿಗಳನ್ನು ತೆರೆದಿಡಿ:
ನಿಮ್ಮ ಮನೆಗೆ ಉತ್ತಮ ವಾಸನೆಯನ್ನು ನೀಡಲು ಸುಲಭವಾದ ಮಾರ್ಗವೆಂದರೆ ಕೆಲವೊಂದಿಷ್ಟು ಕಾಲ ಮನೆಯ ಎಲ್ಲಾ ಕಿಟಕಿಗಳನ್ನು ತೆರೆದಿಟ್ಟುಕೊಳ್ಳಿ. ಇದು ತಕ್ಷಣವೇ ಇಡೀ ಕೋಣೆಯನ್ನು ಸ್ವಚ್ಛವಾಗಿ ಹಾಗೂ ನೈಸರ್ಗಿಕ ಗಾಳಿ ಮನೆಯೊಳಗಡೆ ಬರುವಂತೆ ಮಾಡುತ್ತದೆ.
4. ಪರಿಮಳಯುಕ್ತ ಸ್ಯಾಚೆಟ್:
ನಿಮ್ಮ ಮನೆಯನ್ನು ಸುವಾಸನೆಯಿಂದಿರಿಸಲು ಮಾರುಕಟ್ಟೆಯಲ್ಲಿ ಈಗ ಸಾಕಷ್ಟು ಪರಿಮಳಯುಕ್ತ ಸ್ಯಾಚೆಟ್ ಗಳು ಲಭ್ಯವಿದೆ. ಇವುಗಳನ್ನು ಖರೀದಿಸಿ ನಿಮ್ಮ ಮನೆಯ ಮೂಲೆ ಮೂಲೆಗಳಲ್ಲಿ ಇರಿಸಿ. ಇದು ನಿಮ್ಮ ಮನೆಯಿಂದ ದುರ್ವಾಸನೆಯನ್ನು ದೂರ ಮಾಡಲು ಸಹಾಯಕವಾಗಿದೆ.
5. ಪರಿಮಳಯುಕ್ತ ಡಿಫ್ಯೂಸರ್:
ಮನೆಗೆ ತಾಜಾ ಮತ್ತು ಉತ್ತಮವಾದ ಪರಿಮಳವನ್ನು ನೀಡಲು ತೈಲಗಳ ಪರಿಮಳಯುಕ್ತ ಡಿಫ್ಯೂಸರ್ ಸಾಕಷ್ಟು ಲಭ್ಯವಿದೆ. ರೋಸ್ಮರಿ, ನಿಂಬೆ, ಪುದೀನ ಮತ್ತು ದಾಲ್ಚಿನ್ನಿ ಕಿತ್ತಳೆ ಮುಂತಾದ ಎಣ್ಣೆಗಳೊಂದಿಗೆ ಸಾರಭೂತ ತೈಲ ಡಿಫ್ಯೂಸರ್ ಬಳಸಿ. ಇದು ನಿಮ್ಮ ಮನೆಗೆ ತಿಂಗಳುಗಳ ವರೆಗೆ ಸುವಾಸನೆಯನ್ನು ನೀಡುತ್ತದೆ.
ಇದನ್ನು ಓದಿ: ನೀವು ಥಂಬ್ಸ್ ಅಪ್ ಮಾಡುವಾಗ ನಿಮ್ಮ ಹೆಬ್ಬೆರಳು ಯಾವ ರೀತಿಯಾಗಿದೆ ಎಂದು ತಿಳಿದುಕೊಳ್ಳಿ
6. ಪರಿಮಳಯುಕ್ತ ಮೇಣದಬತ್ತಿಗಳು:
ಪರಿಮಳಯುಕ್ತ ಮೇಣದಬತ್ತಿಗಳು, ಅಗರಬತ್ತಿ, ಗಂಧದ ಕಡ್ಡಿ, ಊದುಬತ್ತಿ ಇವುಗಳನ್ನು ಮನೆಯಲ್ಲಿ ಉರಿಸಿ. ಇದು ನಿಮ್ಮ ಮನೆಗೆ ಒಂದು ಒಳ್ಳೆಯ ಸುವಾಸನೆಯನ್ನು ನೀಡಲು ಸಹಾಯಕವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:25 pm, Sun, 27 November 22