Kannada News Lifestyle Follow these tips before applying mustard oil on your face Lifestyle News in Kannada
Skin Care Tips : ತ್ವಚೆಯ ಹೊಳಪು ಹೆಚ್ಚಾಗಲು ಸಾಸಿವೆ ಎಣ್ಣೆ ಹೀಗೆ ಬಳಸಿ, ಆದ್ರೆ ಈ ಟಿಪ್ಸ್ ಪಾಲಿಸಿ
ಹೆಣ್ಣು ಮಕ್ಕಳಿಗೆ ತ್ವಚೆಯ ವಿಪರೀತ ಕಾಳಜಿ. ತ್ವಚೆಯಲ್ಲಿ ಸಣ್ಣ ಪುಟ್ಟ ಬದಲಾವಣೆಯಾದರೂ ಸಾಕು, ಚಿಂತಿಸುತ್ತ ಕೂರುತ್ತಾರೆ. ಸೌಂದರ್ಯ ವರ್ಧಕಗಳ ಖರೀದಿಯತ್ತ ಗಮನ ಹರಿಸುತ್ತಾರೆ. ಆದರೆ ತ್ವಚೆಗೆ ಸಾಸಿವೆ ಎಣ್ಣೆಯನ್ನು ಹಚ್ಚುವ ಮುನ್ನ ಈ ಕೆಲವು ಸಲಹೆಗಳನ್ನು ಪಾಲಿಸಿದರೆ ಅಡ್ಡಪರಿಣಾಮಗಳಿಂದ ಮುಖವನ್ನು ರಕ್ಷಿಸಿಕೊಳ್ಳಬಹುದು
Follow us on
ಸೌಂದರ್ಯಎಂದ ಕೂಡಲೇ ಮೊದಲು ನೆನಪಾಗುವುದೇ ಹೆಣ್ಣು ಮಕ್ಕಳು. ಹೀಗಾಗಿ ತ್ವಚೆಗೆ ನಾನಾ ರೀತಿಯ ಉತ್ಪನ್ನಗಳನ್ನು ಬಳಸಿ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾರೆ. ಕೆಲವರು ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡಲು ಸಾಸಿವೆ ಎಣ್ಣೆಯನ್ನು ಬಳಸುತ್ತಿರಬಹುದು. ಈ ಎಣ್ಣೆ ಬಳಸುತ್ತಿದ್ದರೆ ಕೆಲವು ವಿಚಾರಗಳ ಬಗ್ಗೆ ಗಮನವಹಿಸದಿದ್ದರೆ ಚರ್ಮದ ಸಮಸ್ಯೆಗಳು ಹೆಚ್ಚಾಗಬಹುದು.
ಸಾಸಿವೆ ಎಣ್ಣೆ ತ್ವಚೆಗೆ ಹೀಗೂ ಬಳಸಬಹುದು
ಒಂದು ಚಮಚ ಸಾಸಿವೆ ಎಣ್ಣೆಗೆ ಒಂದು ಚಮಚ ತೆಂಗಿನ ಎಣ್ಣೆ ಸೇರಿಸಿ ರಾತ್ರಿ ಮಲಗುವ ಮುನ್ನ ಹತ್ತರಿಂದ ಹದಿನೈದು ನಿಮಿಷ ಮಸಾಜ್ ಮಾಡಿ, ತಣ್ಣನೆಯ ನೀರಿನಲ್ಲಿ ಮುಖ ತೊಳೆದರೆ ತ್ವಚೆಯ ಹೊಳಪು ಹೆಚ್ಚಾಗುತ್ತದೆ.
ಒಂದು ಚಮಚ ಸಾಸಿವೆ ಎಣ್ಣೆಯಿಂದ ಮುಖಕ್ಕೆ ಹಚ್ಚಿ, ನಿಧಾನವಾಗಿ ಮಸಾಜ್ ಮಾಡುವುದರಿಂದ ಕಪ್ಪಾದ ಜಾಗವಿದ್ದರೆ ಅಥವಾ ಮೊಡವೆ ಕಲೆಯೂ ನಿವಾರಣೆಯಾಗುತ್ತದೆ.
ಒಂದು ಚಮಚ ಸಾಸಿವೆ ಎಣ್ಣೆಗೆ ಅರಶಿನ ಪುಡಿ, ಕೇಸರಿ, ಶ್ರೀಗಂಧ, ಕಡಲೆಹಿಟ್ಟು ಬೆರೆಸಿ, ವಾರಕ್ಕೆರಡು ಬಾರಿ ಹಚ್ಚಿ ಮಸಾಜ್ ಮಾಡುವುದರಿಂದ ಸತ್ತ ಜೀವಕೋಶಗಳನ್ನು ತೊಡೆದುಹಾಕಲು ಸಹಕಾರಿಯಾಗಿದೆ.
ಸಾಸಿವೆ ಎಣ್ಣೆಗೆ ಲಿಂಬೆರಸ ಹಾಗೂ ಮೊಸರು ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ, ಇದರಲ್ಲಿರುವ ಬ್ಯಾಕ್ಟಿರಿಯಾ ವಿರೋಧಿ ಗುಣವು ಮೊಡವೆಗಳು ಮೂಡದಂತೆ ತಡೆಯುತ್ತದೆ.
ಸಾಸಿವೆ ಎಣ್ಣೆಯನ್ನು ತ್ವಚೆಗೆ ಅನ್ವಯಿಸುವ ಮುನ್ನ ಈ ಟಿಪ್ಸ್ ಪಾಲಿಸಿ
ಸಾಸಿವೆ ಎಣ್ಣೆಯನ್ನು ಬಳಸುವ ಮೊದಲು, ಚರ್ಮದ ಮೇಲೆ ಪ್ಯಾಚ್ ಟೆಸ್ಟ್ ಮಾಡುವುದನ್ನುಡುವುದನ್ನು ಮರೆಯದಿರಿ.
ಸಾಸಿವೆ ಎಣ್ಣೆಯನ್ನು ನೇರವಾಗಿ ತ್ವಚೆಗೆ ಅನ್ವಯಿಸುವ ಸಾಹಸಕ್ಕೆ ಕೈ ಹಾಕಬೇಡಿ. ಮೊದಲು ಈ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಬಿಸಿ ಮಾಡಿದ ಎಣ್ಣೆಯನ್ನು ಬಳಸುವುದರಿಂದ ಇದರಲ್ಲಿರುವ ಸತ್ವವು ಚರ್ಮಕ್ಕೆ ಸುಲಭವಾಗಿ ಹೀರಲ್ಪಡುತ್ತವೆ.
ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ ಸಾಸಿವೆ ಎಣ್ಣೆಯನ್ನು ಬಳಸಬೇಡಿ. ಇದರ ಬಳಕೆಯು ಚರ್ಮವನ್ನು ಹೆಚ್ಚು ಎಣ್ಣೆಯುಕ್ತವಾಗಿಸಿ, ಮೊಡವೆ ಸಮಸ್ಯೆ ಕಾಣಿಸಿಕೊಳ್ಳಬಹುದು.