AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರಿನ ಬಾಟಲಿಯಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ಸರಳ ಸಲಹೆ ಪಾಲಿಸಿ

ನೀರಿನ ಬಾಟಲಿಯನ್ನು ಆಗಾಗ್ಗೆ ಸ್ವಚ್ಛಗೊಳಿಸದಿದ್ದರೆ, ಬ್ಯಾಕ್ಟೀರಿಯಾಗಳು ಸಂಗ್ರಹವಾಗಿ ವಾಸನೆ ಬರಲು ಆರಂಭಿಸುತ್ತವೆ. ಕೆಲವೊಮ್ಮೆ ಎಷ್ಟೇ ಸ್ವಚ್ಛಗೊಳಿಸಿದರೂ ಸಹ ಕೆಟ್ಟ ವಾಸನೆ ಹೋಗೋದೇ ಇಲ್ಲ. ನೀವು ಸಹ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹಾಗಿದ್ರೆ ಈ ಕೆಲವೊಂದು ಸಿಂಪಲ್‌ ಸಲಹೆಗಳನ್ನು ಪಾಲಿಸುವ ಮೂಲಕ ನೀರಿನ ಬಾಟಲಿಯ ಕೊಳೆ, ಕೆಟ್ಟ ವಾಸನೆ ಎರಡನ್ನೂ ಸುಲಭವಾಗಿ ಹೋಗಲಾಡಿಸಿ.

ನೀರಿನ ಬಾಟಲಿಯಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ಸರಳ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: Feb 14, 2026 | 3:24 PM

Share

ಬಹುತೇಕ ಎಲ್ಲರೂ ಎಲ್ಲಿಗೇ ಹೋದರೂ ನೀರಿನ ಬಾಟಲಿಯನ್ನು (water bottle) ಜೊತೆಗೆ ಕೊಂಡೊಯ್ಯುತ್ತಾರೆ, ಮನೆಯಲ್ಲೂ ಬಾಟಲಿಯಲ್ಲಿ ತುಂಬಿಸಿದ ನೀರನ್ನೇ ಕುಡಿಯುತ್ತಾರೆ. ಆದ್ರೆ ಅದರ ಸ್ವಚ್ಛತೆಯ ಬಗ್ಗೆ ಹೆಚ್ಚಿನವರು ಕಾಳಜಿಯನ್ನು ವಹಿಸುವುದೇ ಇಲ್ಲ. ಬಾಟಲಿಯನ್ನು ಆಗಾಗ್ಗೆ ಸ್ವಚ್ಛಗೊಳಿಸದಿದ್ದರೆ ಬ್ಯಾಕ್ಟೀರಿಯಾಗಳು ಶೇಖರಣೆಗೊಂಡು ದುರ್ವಾಸನೆ ಬರಲು ಆರಂಭಿಸುತ್ತದೆ. ಇಂತಹ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯದ ಮೇಲೂ ಋಣಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ ನೀರಿನ ಬಾಟಲಿಯನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಮುಖ್ಯ. ಹೀಗಿರುವಾಗ ಈ ಕೆಲವೊಂದು ಸರಳ ಸಲಹೆಗಳನ್ನು ಪಾಲಿಸುವ ಮೂಲಕ ನೀರಿನ ಬಾಟಲಿಯಿಂದ ಬರುವ ದುರ್ವಾಸನೆ ಮತ್ತು ಪಾಚಿ, ಕೊಳೆ ಎರಡನ್ನೂ ಬಲು ಸುಲಭವಾಗಿ ಹೋಗಲಾಡಿಸಬಹುದು.

ನೀರಿನ ಬಾಟಲಿಯನ್ನು ಸ್ವಚ್ಛಗೊಳಿಸಲು ಈ ಸಲಹೆ ಅನುಸರಿಸಿ:

ಉಪ್ಪು ಮತ್ತು ನಿಂಬೆರಸ: ಉಪ್ಪು ಮತ್ತು ನಿಂಬೆರಸ ಮಿಶ್ರಣವು ನೀರಿನ ಬಾಟಲಿಯಿಂದ ಕೊಳೆಯನ್ನು ತೆಗೆದುಹಾಕುವಲ್ಲಿ ಮಾತ್ರವಲ್ಲದೆ, ಬಾಟಲಿಯ ದುರ್ವಾಸನೆಯನ್ನೂ  ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ.  ಇದಕ್ಕಾಗಿ ಮೊದಲು ಬಾಟಲಿಗೆ ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ. ಬಳಿಕ ಸ್ವಲ್ಪ ನೀರನ್ನೂ ಸೇರಿಸಿ, ಬ್ರಷ್‌ನಿಂದ ಬಾಟಲಿಯನ್ನು ಚೆನ್ನಾಗಿ ಸ್ಕ್ರಬ್ ಮಾಡಿ, ಮತ್ತು ಸ್ವಲ್ಪ ಸಮಯದ ನಂತರ ಅದನ್ನು ತೊಳೆಯಿರಿ. ಇದು ಕೊಳೆ, ವಾಸನೆ ಎರಡನ್ನೂ ಹೋಗಲಾಡಿಸುತ್ತದೆ.

ವಿನೆಗರ್ ಮತ್ತು ಅಡಿಗೆ ಸೋಡಾ: ನೀರಿನ ಬಾಟಲಿಯಲ್ಲಿ ಅಂಟಿರುವ ಕಲೆಯನ್ನು ಹೋಗಲಾಡಿಸಲು ಮೊದಲಿಗೆ ಬಾಟಲಿಗೆ ಒಂದು ಚಮಚ ವಿನೆಗರ್ ಮತ್ತು ಒಂದು ಚಮಚ ಅಡಿಗೆ ಸೋಡಾ ಮತ್ತು ಸ್ವಲ್ಪ ನೀರು ಸೇರಿಸಿ ಮುಚ್ಚಿ. ಬಾಟಲಿಯನ್ನು ಚೆನ್ನಾಗಿ ಅಲ್ಲಾಡಿಸಬೇಕು. ಸುಮಾರು 10 ರಿಂದ 15 ನಿಮಿಷಗಳ ನಂತರ, ನೀವು ನೀರಿನ ಬಾಟಲಿಯನ್ನು ತೊಳೆದು ಸ್ವಚ್ಛಗೊಳಿಸಿ. ಈ ಶುಚಿಗೊಳಿಸುವ ತಂತ್ರದಿಂದ ನೀರಿನ ಬಾಟಲಿಯ ಕೊಳೆ, ವಾಸನೆ ಎರಡನ್ನೂ ತೊಡೆದುಹಾಕಬಹುದು.

ಅಡಿಗೆ ಸೋಡಾ ಮತ್ತು ಉಪ್ಪು: ಒಂದು ಲೋಟ ಬೆಚ್ಚಗಿನ ನೀರಿಗೆ ಅಡಿಗೆ ಸೋಡಾ ಮತ್ತು ಸ್ವಲ್ಪ ಉಪ್ಪು ಸೇರಿಸಿ. ಆ ನೀರನ್ನು ಬಾಟಲಿಗೆ ತುಂಬಿಸಿ, ನಂತರ, ಬ್ರಷ್ ಅಥವಾ ಸ್ಕ್ರಬ್ಬರ್‌ನಿಂದ ಒಳಭಾಗವನ್ನು ಸ್ಕ್ರಬ್ ಮಾಡಿ ಮತ್ತು ಶುದ್ಧ ನೀರಿನಿಂದ ತೊಳೆಯಿರಿ. ಈ ವಿಧಾನವು ಬಾಟಲಿಯಿಂದ ಯಾವುದೇ ಕೊಳಕು ಮತ್ತು ವಾಸನೆಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ.

ಇದನ್ನೂ ಓದಿ: ಬಾಯಿಯ ದುರ್ವಾಸನೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಮನೆಮದ್ದುಗಳು ಪರಿಣಾಮಕಾರಿ

ಗ್ರೀನ್‌ ಟೀ ಬ್ಯಾಗ್:‌ ಟೀ ಬ್ಯಾಗ್‌ಗಳು ಸಹ  ಬಾಟಲಿಯ ವಾಸನೆಯನ್ನು ತೊಡೆದುಹಾಕಲು ತುಂಬಾ ಉಪಯುಕ್ತವಾಗಿವೆ. ಇದಕ್ಕಾಗಿ ಬಾಟಲಿಗೆ ನೀರನ್ನು ಹಾಕಿ ಅದರಲ್ಲಿ ಟೀ ಬ್ಯಾಗ್‌ ಇಟ್ಟು ರಾತ್ರಿಯಿಡಿ ಹಾಗೆಯೇ ಬಿಡಿ,  ಮರುದಿನ ಬೆಳಿಗ್ಗೆ ಆ ಬಾಟಲಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿದರೆ ವಾಸನೆ ಮಾಯವಾಗುತ್ತದೆ. ಈ ವಿಧಾನಗಳ ಜೊತೆಗೆ, ಪ್ರತಿ ಕೆಲವು ದಿನಗಳಿಗೊಮ್ಮೆ ಬಾಟಲಿಯನ್ನು ಸ್ವಚ್ಛಗೊಳಿಸುತ್ತಾ ಇರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಥಿಗಳ ಕೈಯಲ್ಲಿ ಗಾರೆ ಕೆಲಸ ಮಾಡಿಸಿದ ಶಿಕ್ಷಕರು, ವ್ಯಾಪಕ ಆಕ್ರೋಶ
ವಿದ್ಯಾರ್ಥಿಗಳ ಕೈಯಲ್ಲಿ ಗಾರೆ ಕೆಲಸ ಮಾಡಿಸಿದ ಶಿಕ್ಷಕರು, ವ್ಯಾಪಕ ಆಕ್ರೋಶ
ಎಣ್ಣೆ ಪಾರ್ಟಿ ಜತೆಗೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್
ಎಣ್ಣೆ ಪಾರ್ಟಿ ಜತೆಗೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್
‘ದೊಡ್ಮನೆ ಹಬ್ಬ’ದಲ್ಲಿ ಗಾನ ಬಜಾನ ತಂಡದ ಟ್ರೋಲ್ ಸಾಂಗ್
‘ದೊಡ್ಮನೆ ಹಬ್ಬ’ದಲ್ಲಿ ಗಾನ ಬಜಾನ ತಂಡದ ಟ್ರೋಲ್ ಸಾಂಗ್
ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್
ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್
ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ
ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ
ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ತುಲಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ತುಲಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮೈಸೂರು ಅರಮನೆ ತ್ರಿನೇಶ್ವರನಿಗೆ 11 ಕೆಜಿಯ ಚಿನ್ನದ ಮುಖವಾಡ! ಏನಿದರ ವಿಶೇಷ?
ಮೈಸೂರು ಅರಮನೆ ತ್ರಿನೇಶ್ವರನಿಗೆ 11 ಕೆಜಿಯ ಚಿನ್ನದ ಮುಖವಾಡ! ಏನಿದರ ವಿಶೇಷ?