ಮಳೆಯಿಂದಾಗಿ ಒಳ ಉಡುಪು ಸರಿಯಾಗಿ ಒಣಗುತ್ತಿಲ್ವಾ; ಈ ಟಿಪ್ಸ್‌ ಫಾಲೋ ಮಾಡಿ

ಮಳೆಗಾಲದಲ್ಲಿ‌ ಮೋಡ, ಎಡಬಿಡದೆ ಸುರಿಯುವ ಮಳೆಯಿಂದಾಗಿ ಸೂರ್ಯನ ಬೆಳಕು ಸರಿಯಾಗಿ ಬೀಳುವುದಿಲ್ಲ, ಇದರಿಂದಾಗಿ ಒಗೆದ ಬಟ್ಟೆಗಳು ಒಣಗಲು ಸಿಕ್ಕಾಪಟ್ಟೆ ಸಮಯ ತೆಗೆದುಕೊಳ್ಳುತ್ತದೆ. ಅದರಲ್ಲೂ ಹೆಚ್ಚಿನವರಿಗೆ ಈ ಮಳೆಗಾಲದಲ್ಲಿ ಒಳ ಉಡುಪುಗಳನ್ನು ಒಣಗಿಸುವುದೇ ಒಂದು ಟಾಸ್ಕ್‌ ಆಗಿಬಿಟ್ಟಿದೆ. ಅಂಡರ್‌ವೇರ್‌ ಒಣಗುತ್ತಿಲ್ಲ ಎಂದು ನಿಮಗೂ ತಲೆಬಿಸಿ ಆಗಿದ್ಯಾ? ಹಾಗಿದ್ರೆ ಈ ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡುವ ಮೂಲಕ ಸೂರ್ಯನ ಬೆಳಕಿಲ್ಲದೆಯೂ ಬಟ್ಟೆ ಒಣಗಿಸಿ.

ಮಳೆಯಿಂದಾಗಿ ಒಳ ಉಡುಪು ಸರಿಯಾಗಿ ಒಣಗುತ್ತಿಲ್ವಾ; ಈ ಟಿಪ್ಸ್‌ ಫಾಲೋ ಮಾಡಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 28, 2025 | 5:27 PM

ಈಗಾಗ್ಲೇ ಮಳೆಯ ಆರ್ಭಟ ಆರಂಭವಾಗಿಬಿಟ್ಟಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲಸಕಾರ್ಯಗಳಿಗೆ ಅಡ್ಡಿಯಾಗುವುದರ ಜೊತೆಗೆ ಈ ಮಳೆಗಾಲದಲ್ಲಿ ಒಗೆದ ಬಟ್ಟೆಗಳು ಕೂಡಾ ಸರಿಯಾಗಿ ಒಣಗುವುದಿಲ್ಲ. ಬಿಸಿಲು ಅಷ್ಟಾಗಿ ಬೀಳದ ಕಾರಣ ಈ ಋತುವಿನಲ್ಲಿ ಬಟ್ಟೆ ಒಣಗಿಸುವುದೇ (drying clothes in rainy season very challenging) ಒಂದು ದೊಡ್ಡ ಕಷ್ಟದ ಕೆಲಸವಾಗಿದೆ.  ಹೌದು ಸೂರ್ಯನ ಬೆಳಕಿನ ಕೊರತೆಯಿಂದಾಗಿ, ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ ಈ ಸಮಯದಲ್ಲಿ ಬಟ್ಟೆ ಒಣಗಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ ಮತ್ತು ಸರಿಯಾಗಿ ಬಟ್ಟೆ ಒಣಗುವುದಿಲ್ಲ. ಅದರಲ್ಲೂ ಹೆಚ್ಚಿನವರಿಗೆ ಬೇರೆ ಬಟ್ಟೆಗಳಿಗಿಂತ ಒಳ ಉಡುಪು (Innerwear) ಒಣಗುತ್ತಿಲ್ಲ ಅನ್ನೋ ಚಿಂತೆನೇ ಹೆಚ್ಚು. ಅಯ್ಯೋ ಈ ಮಳೆಗಾಲದಲ್ಲಿ ಒಳಉಡುಪು ಸರಿಯಾಗಿ ಒಣಗುತ್ತಿಲ್ವೇ ಅಂತ ನೀವು ಕೂಡಾ ತಲೆಬಿಸಿ ಮಾಡಿಕೊಂಡಿದ್ದೀರಾ? ಹಾಗಿದ್ರೆ ಈ ಸಿಂಪಲ್‌ ಟ್ರಿಕ್ಸ್‌ಗಳನ್ನು ಪಾಲಿಸುವ ಮೂಲಕ ಸೂರ್ಯನ ಬೆಳಕಿಲ್ಲದೆಯೂ ನಿಮ್ಮ ಒಳಉಡುಪುಗಳನ್ನು ಒಣಗಿಸಿ.

ಮಳೆಗಾಲದಲ್ಲಿ ಒಳಉಡುಪುಗಳನ್ನು ಒಣಗಿಸಲು ಸಿಂಪಲ್‌ ಟ್ರಿಕ್ಸ್:‌

ಒದ್ದೆ ಒಳಉಡುಪುಗಳನ್ನು ಧರಿಸುವುದರಿಂದ ತುರಿಕೆ, ಕಡಿತ, ಸೋಂಕುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಒಳಉಡುಪುಗಳನ್ನು ಸರಿಯಾಗಿ ಒಣಗಿಸಿ ಧರಿಸುವುದು ಅತೀ ಅವಶ್ಯಕ.

ವಾಷಿಂಗ್‌ ಮೆಷಿನ್‌ ಡ್ರೈಯರ್‌ ಬಳಸಿ: ಮಳೆಗಾಲದಲ್ಲಿ ಒಳ ಉಡುಪು ಅಥವಾ ಇತರೆ ಬಟ್ಟೆ ಸರಿಯಾಗಿ ಒಣಗುವುದಿಲ್ಲ ಎಂದಾದರೆ, ನೀವು ಒಗೆದ ಬಟ್ಟೆಯನ್ನು ವಾಷಿಂಗ್‌ ಮೆಷಿನ್‌ ಡ್ರೈಯರ್‌ನಲ್ಲಿ ಆ ಬಟ್ಟೆಯನ್ನು ಎರಡು ಬಾರಿ ಡ್ರೈ ಮಾಡಿ. ಹೀಗೆ ಮಾಡುವುದರಿಂದ ಬಟ್ಟೆಗಳಲ್ಲಿ ನೀರಿನಾಂಶ ಉಳಿಯುವುದಿಲ್ಲ ಮತ್ತು ಬಟ್ಟೆ ಬೇಗ ಒಣಗುತ್ತದೆ.

ಇದನ್ನೂ ಓದಿ
ಮದುವೆಯ ಬಳಿಕ ಒಡಹುಟ್ಟಿದವರ ನಡುವಿನ ಅಂತರ ಹೆಚ್ಚಾಗಲು ಕಾರಣವೇನು?
ಪಾರಿವಾಳದ ಗರಿಯನ್ನು ಮನೆಯಲ್ಲಿಟ್ಟರೆ ಏನಾಗುತ್ತೆ ಗೊತ್ತಾ?
ಹೀಗೆ ಮಾಡಿದರೆ ಕೋಪವೆಲ್ಲ ಕ್ಷಣದಲ್ಲಿ ಮಾಯವಾಗುತ್ತೆ ನೋಡಿ
ಪುರುಷರು ಬಿಗಿಯಾದ ಬೆಲ್ಟ್ ಧರಿಸುವುದರಿಂದ ಬಂಜೆತನ ಕಾಡುವುದು ಖಂಡಿತ

ಫ್ಯಾನ್ ಅಡಿಯಲ್ಲಿ ಒಣಗಿಸಿ: ಒಗೆದ ಒಳ ಉಡುಪನ್ನು ಫ್ಯಾನ್‌ ಅಡಿಯಲ್ಲಿ ಇಟ್ಟು ಒಣಗಿಸಬಹುದು. ಒಗೆದ ನಂತರ ಬಟ್ಟೆಯಲ್ಲಿರುವ ನೀರಿನಾಂಶ ಹೋಗುವವರೆಗೆ ಬಟ್ಟೆಯನ್ನು ಚೆನ್ನಾಗಿ ಹಿಂಡಿ, ನಂತರ ಅದನ್ನು ಸೀಲಿಂಗ್‌ ಫ್ಯಾನ್‌ ಅಥವಾ ಟೆಬಲ್‌ ಫ್ಯಾನ್‌ ಅಡಿಯಲ್ಲಿ ಒಣಗಲು ಬಿಡಿ. ಇದರ ಸಹಾಯದಿಂದ ಒಳಉಡುಪು ಬೇಗ ಒಣಗುತ್ತದೆ.

ಹೇರ್ ಡ್ರೈಯರ್ ಬಳಸಿ:ನೀವು ಈ ಮಳೆಗಾಲದಲ್ಲಿ ಹೇರ್‌ ಡ್ರೈಯರ್‌ ಸಹಾಯದಿಂದಲೂ ಒಳ ಉಡುಪನ್ನು ಒಣಗಿಸಬಹುದು. ಹೌದು ಏನೇ ಮಾಡಿದ್ರೂ ಒಗೆದ ಒಳುಡುಪು ಒಣಗುತ್ತಿಲ್ಲ ಎನ್ನುವವರು ಹೇರ್‌ ಡ್ರೈಯರ್‌ ಸಹಾಯ ಪಡೆಯಬಹುದು. ಇದರ ಬಿಸಿ ಗಾಳಿಯ ಸಹಾಯದಿಂದ ಬಟ್ಟೆಗಳು ಬೇಗನೆ ಒಣಗುತ್ತವೆ.

ಇದನ್ನೂ ಓದಿ: ಮಹಿಳೆಯರೇ ನಿಮ್ಮ ಒಳ ಉಡುಪುಗಳ ಮಧ್ಯದಲ್ಲಿ ಈ ಪಾಕೆಟ್ ಯಾಕಿರುತ್ತದೆ? ಇಂತಹ ಒಳ ಉಡುಪು ಖರೀದಿಸಿ

ಇಸ್ತ್ರಿ ಮಾಡಿ ಒಣಗಿಸಿ: ಮಳೆಗಾಲದಲ್ಲಿ ಒಳ ಉಡುಪುಗಳನ್ನು ಒಣಗಿಸಲು ಇನ್ನೊಂದು ಅತ್ಯಂತ ಸುಲಭದ ಹಾಗೂ ಪರಿಣಾಮಕಾರಿ ಮಾರ್ಗವೆಂದರೆ ಇಸ್ತ್ರಿ ಮಾಡುವುದು. ಒಳ ಉಡುಪನ್ನು ಒಗೆದು, ಅದನ್ನು ಚೆನ್ನಾಗಿ ಹಿಂಡಿ, ಹಗ್ಗದ ಮೇಲೆ ನೇತು ಹಾಕಿ ನೀರಿನ ಅಂಶ ಹೋಗಲು ಬಿಟ್ಟು ಬಿಡಿ. ನಂತರ ಅದಕ್ಕೆ ಇಸ್ತ್ರಿ ಮಾಡಿದ್ರೆ ನಿಮಿಷಗಳಲ್ಲಿ ಬಟ್ಟೆ ಸಂಪೂರ್ಣವಾಗಿ ಒಣಗಿ ಬಿಡುತ್ತದೆ.

ಮೈಕ್ರೋವೇವ್ ಓವನ್ ಬಳಸಿ: ಒಳಉಡುಪು, ಸಾಕ್ಸ್‌, ಕರವಸ್ತ್ರಗಳಂತಹ ಸಣ್ಣ ಬಟ್ಟೆಗಳನ್ನು ನೀವು ಮೈಕ್ರೋವೇವ್‌ ಸಹಾಯದಿಂದಲೂ ಒಣಗಿಸಬಹುದು. ಹೌದು ಮಳೆಗಾಲದಲ್ಲಿ ಒಳಉಡುಪು ಒಣಗೋದೇ ಇಲ್ಲ ಅಂತಾದ್ರೆ ನೀವು ಮೈಕ್ರೋವೇವ್‌ನಲ್ಲಿ ಒಣಗಿಸಿ. ಇದಕ್ಕಾಗಿ ಮೊದಲಿಗೆ ಒಗೆದ ಬಟ್ಟೆಯಿಂದ ಸಂಪೂರ್ಣವಾಗಿ ನೀರನ್ನು ಹಿಂಡಿ ಮತ್ತು ಅದನ್ನು ಬೇಕಿಂಗ್ ಶೀಟ್ ಮೇಲೆ ಇರಿಸಿ ಅದನ್ನು ಸ್ವಲ್ಪ ಹೊತ್ತು ಮೈಕ್ರೋವೇವ್‌ ಓವನ್‌ನಲ್ಲಿ ಬಿಸಿ ಮಾಡಿ.  ನೆನಪಿನಲ್ಲಿಡಿ, ಹೆಚ್ಚು ಹೊತ್ತು ಇದನ್ನು ಮೈಕ್ರೋವೇವ್‌ನಲ್ಲಿ ಇಡಲು ಹೋಗಬೇಡಿ. ಇಲ್ಲದಿದ್ದರೆ ಬಟ್ಟೆಗಳು ಹಾಳಾಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ