
ಹಿಂದೂ ಧರ್ಮದ ಪವಿತ್ರ ಗ್ರಂಥವಾದ ಭಗವದ್ಗೀತೆಯು (Bhagavad Gita) ಕೇವಲ ಧಾರ್ಮಿಕ ಗ್ರಂಥ. ಈ ಗೀತೆಯಲ್ಲಿ ಪರಮಾತ್ಮ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಬೋಧನೆಗಳು ಕೇವಲ ಯುದ್ಧ ಭೂಮಿಗೆ ಸೀಮಿತವಾಗಿಲ್ಲ. ಇದು ನಮ್ಮ ಬದುಕಿಗೂ ದಾರಿ ದೀಪವಾಗಿದೆ. ಹೌದು ಭಗವದ್ಗೀತೆಯು ಜೀವನದಲ್ಲಿ ಧರ್ಮ, ಕರ್ಮ ಮತ್ತು ಪ್ರೀತಿಯ ಪಾಠವನ್ನು ಕಲಿಸುತ್ತದೆ. ಅಷ್ಟೇ ಅಲ್ಲದೆ ಯಶಸ್ಸಿನ ಹಾದಿಯಲ್ಲಿರುವವರಿಗೆ ಭಗವದ್ಗೀತೆ ಅಮೂಲ್ಯವಾದ ಮಾರ್ಗದರ್ಶಿಯಾಗಿದೆ. ಈ ತತ್ವಗಳು ನಿಮ್ಮನ್ನು ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಮಾರ್ಗದರ್ಶನ ಮಾಡುವುದಲ್ಲದೆ, ಆಂತರಿಕ ಶಾಂತಿ ಮತ್ತು ಅದಮ್ಯ ಧೈರ್ಯವನ್ನು ಸಹ ನೀಡುತ್ತವೆ. ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಎದುರಿಸಿ ಯಶಸ್ಸನ್ನು ಸಾಧಿಸಬೇಕು ಎಂಬ ಹಂಬಲ ನಿಮಗೂ ಇದ್ದರೇ, ತಪ್ಪದೇ ಭಗವದ್ಗೀತೆಯ ಈ ತತ್ವಗಳನ್ನು ಪಾಲಿಸಿ.
ಭಗವದ್ಗೀತೆಯ ಪ್ರಕಾರ, ಒಬ್ಬ ವ್ಯಕ್ತಿಯು ಕೋಪದಲ್ಲಿ ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾನೆ ಮತ್ತು ಕೋಪದ ಭರದಲ್ಲಿ ತಪ್ಪು ಕೆಲಸಗಳನ್ನು ಸಹ ಮಾಡುತ್ತಾನೆ. ಕೋಪದ ಪ್ರಭಾವದಿಂದ, ವ್ಯಕ್ತಿಯ ಮನಸ್ಸು ಚಂಚಲವಾಗುತ್ತದೆ ಮತ್ತು ಅವನು ತರ್ಕವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ಕೋಪದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಒಟ್ಟಾರೆಯಾಗಿ ಕೋಪವು ಸಂಬಂಧವನ್ನು ಹಾಳು ಮಾಡುವುದು ಮಾತ್ರವಲ್ಲ ವ್ಯಕ್ತಿಯ ಯಶಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಮೊದಲು ಕೋಪವನ್ನು ನಿಯಂತ್ರಿಸಲು ಕಲಿಯಿರಿ, ಪ್ರತಿಯೊಂದು ಸಂದರ್ಭದಲ್ಲೂ ಶಾಂತವಾಗಿರಿ.
ಮನಸ್ಸನ್ನು ಬಹಳ ಚಂಚಲವೆಂದು ಪರಿಗಣಿಸಲಾಗುತ್ತದೆ. ಹಲವು ಬಾರಿ ನಮ್ಮ ಮನಸ್ಸೇ ನಮ್ಮ ದುಃಖಗಳಿಗೆ ಕಾರಣವಾಗುತ್ತದೆ. ತನ್ನ ಮನಸ್ಸನ್ನು ನಿಯಂತ್ರಿಸುವ ವ್ಯಕ್ತಿಯು ಮನಸ್ಸಿನಲ್ಲಿ ಉದ್ಭವಿಸುವ ಅನಗತ್ಯ ಚಿಂತೆಗಳು ಮತ್ತು ಆಸೆಗಳಿಂದ ದೂರವಿರುತ್ತಾನೆ. ಇದು ಒಬ್ಬ ವ್ಯಕ್ತಿಯು ತನ್ನ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಶಿಸ್ತಿನ ಮೂಲಕ ನಿಮ್ಮ ಮನಸ್ಸನ್ನು ನಿಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳಿ. ಒತ್ತಡ, ನಕಾರಾತ್ಮಕ ಆಲೋಚನೆಗಳು ಮತ್ತು ಅನಗತ್ಯ ಗೊಂದಲಗಳನ್ನು ತಪ್ಪಿಸಿ, ಮನಸ್ಥಿತಿಯನ್ನು ಉತ್ತಮವಾಗಿರಿಸಿಕೊಳ್ಳಿ. ಇದನ್ನು ಸಾಧಿಸಲು, ಪ್ರತಿದಿನ ಸ್ವಲ್ಪ ಸಮಯವನ್ನು ಧ್ಯಾನ, ಯೋಗ ಮತ್ತು ಆತ್ಮಾವಲೋಕನಕ್ಕೆ ಮೀಸಲಿಡಿ. ಇವುಗಳ ನಿಯಮಿತ ಅಭ್ಯಾಸವು ಏಕಾಗ್ರತೆ, ತಾಳ್ಮೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸುತ್ತದೆ.
ನಾವು ಯಾವುದೇ ಕೆಲಸವನ್ನು ಮಾಡಲು ಪ್ರಾರಂಭಿಸುವ ಮೊದಲು ಫಲಿತಾಂಶಗಳ ಬಗ್ಗೆ ಚಿಂತಿಸುತ್ತೇವೆ. ಈ ಕಾರಣದಿಂದಾಗಿ, ನಾವು ಕೈಯಲ್ಲಿರುವ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ನಾವು ಮುಂದಾಗುವ ಫಲಿತಾಂಶಗಳ ಬದಲು ಕೆಲಸದ ಮೇಲೆಯೇ ಹೆಚ್ಚು ಗಮನಹರಿಸಬೇಕು. ಕೆಲಸದ ಮೇಲೆ ಹೆಚ್ಚು ಗಮನಹರಿಸುವುದರಿಂದ ಮಾತ್ರ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಆದ್ದರಿಂದ, ಫಲಿತಾಂಶಗಳ ಬಗ್ಗೆ ಚಿಂತಿಸದೆ, ನಿಮ್ಮ ಕೆಲಸದ ಮೇಲೆ ಶ್ರದ್ಧೆಯಿಂದ ಗಮನಹರಿಸುವುದು ಬಹಳ ಮುಖ್ಯ.
ಇದನ್ನೂ ಓದಿ: ಫಿಟ್ ಆಗಿರಲು ಬಯಸಿದರೆ ಈ 3 ಅಭ್ಯಾಸಗಳನ್ನು ಬಿಟ್ಟುಬಿಡಿ; ಮಿಲೇನಿಯಲ್ಸ್, ಜೆನ್ ಝೀಗಳಿಗೆ ಧೋನಿ ಫಿಟ್ನೆಸ್ ಸಲಹೆ
ಆದುವುದೆಲ್ಲಾ ಒಳ್ಳೆಯದಕ್ಕೆ, ಆಗುವುದೆಲ್ಲ ಒಳ್ಳೆಯದಕ್ಕೆ, ಆಗಲಿರುವುದು ಸಹ ಒಳ್ಳೆಯದೇ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಬೋಧಿಸಿದ್ದಾರೆ. ಹಾಗಾಗಿ ಏನೇ ವೈಫಲ್ಯಗಳಾದರೂ, ಬದಲಾವಣೆಗಳು ಸಂಭವಿಸಿದರೂ ಅದಕ್ಕೆ ಭಯ ಪಡಬೇಡಿ. ಬದಲಾವಣೆಯು ಜಗದ ನಿಯಮ ಎಂದು ಅರ್ಥಮಾಡಿಕೊಳ್ಳಬೇಕು ಮತ್ತು ನಿಮ್ಮ ಯಶಸ್ಸು ನೀವು ಯಾವುದೇ ರೀತಿಯ ಬದಲಾವಣೆಗೆ ಹೇಗೆ ಸಿದ್ಧರಾಗುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಸಂದರ್ಭಗಳಿಗೆ ನೀವು ಮುಂಚಿತವಾಗಿ ನಿಮ್ಮನ್ನು ಸಿದ್ಧಪಡಿಸಿಕೊಂಡಿದ್ದರೆ, ಯಶಸ್ಸನ್ನು ಸಾಧಿಸುವುದನ್ನು ಯಾವುದೂ ತಡೆಯಲು ಸಾಧ್ಯವಿಲ್ಲ.
ನಮ್ಮಲ್ಲಿರುವ ಭಯವು ನಮ್ಮನ್ನು ಎಂದಿಗೂ ಯಶಸ್ಸು ಸಾಧಿಸಲು ಬಿಡುವುದಿಲ್ಲ ನೀವು ಅಂದುಕೊಂಡಿದ್ದನ್ನು ಸಾಧಿಸಲು ಬಯಸಿದರೆ, ನೀವು ಮೊದಲು ನಿಮ್ಮ ಭಯವನ್ನು ಜಯಿಸುವುದು ಅತ್ಯಗತ್ಯ. ಭಯ ಮತ್ತು ಆತಂಕವೇ ವ್ಯಕ್ತಿಯ ಬಹುದೊಡ್ಡ ಶತ್ರುವಾಗಿದ್ದು, ಅದನ್ನು ಜಯಿಸದಿದ್ದರೆ, ಭಯವನ್ನು ಬಿಡದಿದ್ದರೆ ನೀವು ಎಂದಿಗೂ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ