Kitchen Tips: ಒಲೆಯಲ್ಲಿಟ್ಟ ಹಾಲು ಉಕ್ಕಿ ಚೆಲ್ಲದಂತೆ ತಡೆಯಲು ಈ ಸರಳ ಸಲಹೆಯನ್ನು ಪಾಲಿಸಿ

ಹೆಚ್ಚಿನ ಸಂದರ್ಭಗಳಲ್ಲಿ ಒಲೆಯ ಮೇಲಿಟ್ಟ ಹಾಲು ಕಣ್ಣು ಮುಚ್ಚಿ ತೆರೆಯುವುದರೊಳಗೆ ಚೆಲ್ಲಿ ಹೋಗಿರುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯನ್ನು ಎಲ್ಲರೂ ಕೂಡ ಅನುಭವಿಸುತ್ತಾರೆ. ಇದರಿಂದ ಹಾಲು ವೇಸ್ಟ್‌ ಆಗೋದು ಮಾತ್ರವಲ್ಲ, ಗ್ಯಾಸ್ಟ್‌ ಸ್ಟೌವ್‌ ಕೂಡ ಹಾಳಾಗುತ್ತೆ, ಕ್ಲೀನಿಂಗ್‌ ಕೆಲಸವೂ ಹೆಚ್ಚುತ್ತೆ. ಹೀಗಿರುವಾಗ ಒಲೆಯ ಮೇಲಿಟ್ಟ ಹಾಲು ಉಕ್ಕಿ ಚೆಲ್ಲದಂತೆ ನೋಡಿಕೊಳ್ಳಲು ಈ ಕೆಲವೊಂದಿಷ್ಟು ಸರಳ ಸಲಹೆಗಳನ್ನು ಪಾಲಿಸಿ.

Kitchen Tips: ಒಲೆಯಲ್ಲಿಟ್ಟ ಹಾಲು ಉಕ್ಕಿ ಚೆಲ್ಲದಂತೆ ತಡೆಯಲು ಈ ಸರಳ ಸಲಹೆಯನ್ನು ಪಾಲಿಸಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 23, 2026 | 7:28 PM

ಮುಖ್ಯಾಂಶಗಳು

  • ಕೆಲವು ಸಿಂಪಲ್‌ ಟ್ರಿಕ್ಸ್‌ಗಳನ್ನು ಅನುಸರಿಸುವ ಮೂಲಕ ಹಾಲು ಉಕ್ಕಿ ಚೆಲ್ಲುವುದನ್ನು ತಡೆಯಬಹುದು
  • ಹಾಲು ಚೆಲ್ಲಬಾರದೆಂದರೆ ಪಾತ್ರೆಯ ಬದಿಗಳಿಗೆ ತುಪ್ಪ ಅಥವಾ ಬೆಣ್ಣೆಯನ್ನು ಹಚ್ಚಿ
  • ಹಾಲನ್ನು ಹೆಚ್ಚಿನ ಉರಿಯಲ್ಲಿ ಕುದಿಸಬೇಡಿ

ಅನೇಕರಿಗೆ ಅಡುಗೆ ಮಾಡುವುದಕ್ಕಿಂತ ಹೆಚ್ಚು ಹಾಲು (milk) ಕುದಿಸುವುದೇ ಬಹು ದೊಡ್ಡ ಟಾಸ್ಕ್‌ ಆಗಿರುತ್ತದೆ. ಹೌದು ಹೆಚ್ಚಿನ ಸಂದರ್ಭಗಳಲ್ಲಿ ಕಣ್ಣು ಮಿಟುಕಿಸುವುದರೊಳಗೆ ಒಲೆಯ ಮೇಲಿಟ್ಟ ಹಾಲು ಉಕ್ಕಿ ಚೆಲ್ಲಿ ಬಿಡುತ್ತದೆ. ಇದರಿಂದ ಹಾಲು ವ್ಯರ್ಥವಾಗುವದಲ್ಲದೆ ಕ್ಲೀನಿಂಗ್‌ ಕೆಲಸ ಕೂಡ ಹೆಚ್ಚಾಗುತ್ತದೆ. ಚೆಲ್ಲಿದ ಹಾಲನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಗ್ಯಾಸ್‌ ಸ್ಟೌವ್‌ಗೂ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಕೆಲವೊಂದು ಸಿಂಪಲ್‌ ಟ್ರಿಕ್ಸ್‌ಗಳನ್ನು ಅನುಸರಿಸಿಕೊಂಡು ಹೋದರೆ ಹಾಲು ಉಕ್ಕಿ ಚೆಲ್ಲುವುದನ್ನು ನಿಲ್ಲಿಸಬಹುದು. ಈ ಸಿಂಪಲ್‌ ಟ್ರಿಕ್ಸ್‌ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಲೆಯ ಮೇಲಿಟ್ಟ ಹಾಲು ಉಕ್ಕಿ ಚೆಲ್ಲಬಾರದೆಂದರೆ ಈ ಸಿಂಪಲ್‌ ಟ್ರಿಕ್ಸ್‌ ಪಾಲಿಸಿ:

ಪಾತ್ರೆಯ ಬದಿಗಳಿಗೆ ತುಪ್ಪ ಅಥವಾ ಬೆಣ್ಣೆಯನ್ನು ಹಚ್ಚಿ: ನೀವು ಹಾಲನ್ನು ಕುದಿಸುವಂತಹ ಪಾತ್ರೆಯ ಅಂಚುಗಳಿಗೆ ಲಘುವಾಗಿ ಬೆಣ್ಣೆ ಅಥವಾ ತುಪ್ಪನ್ನು ಲೇಪಿಸಿ. ಹೀಗೆ ಮಾಡುವುದರಿಂದ ಹಾಲು ಕುದಿಯಲು ಪ್ರಾರಂಭಿಸಿ ನೊರೆ ಏರಿದಾಗ, ಅದು ತುಪ್ಪವನ್ನು ಸ್ಪರ್ಶಿಸುತ್ತದೆ. ಇದರಿಂದ ಹಾಲು ಉಕ್ಕಿ ಕೆಳಗೆ ಚೆಲ್ಲುವುದಿಲ್ಲ. ಈ ಸರಳ ಕ್ರಮವು ಹಾಲು ಒಲೆಯ ಮೇಲೆ ಉಕ್ಕಿ ಹರಿಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಚಮಚವನ್ನು ಪಾತ್ರೆಯ ಮೇಲೆ ಅಡ್ಡಲಾಗಿ ಇರಿಸಿ:  ಹಾಲು ಕುದಿಸುವಾಗ, ಚಮಚವನ್ನು ಪಾತ್ರೆಯ ಮೇಲೆ ಅಡ್ಡಲಾಗಿ ಇಡುವುದರಿಂದಲೂ ಹಾಲು ಉಕ್ಕಿ ಚೆಲ್ಲುವುದನ್ನು ತಡೆಯಬಹುದು. ಹಾಲು ಕುದಿಯುತ್ತಿದ್ದಂತೆ ರೂಪುಗೊಳ್ಳುವ ನೊರೆ ಚಮಚಕ್ಕೆ ತಾಗುವುದರಿಂದ, ಹಾಲು ತಕ್ಷಣವೇ ಚೆಲ್ಲುವ ಸಾಧ್ಯತೆ ಕಡಿಮೆಯಾಗುತ್ತದೆ.

ಹಾಲನ್ನು ಹೆಚ್ಚಿನ ಉರಿಯಲ್ಲಿ ಕುದಿಸಬೇಡಿ: ಹಾಲು ಕಾಯಿಸುವಾಗ ಗ್ಯಾಸ್‌ ಒಲೆಯ ಉರಿಯನ್ನು ಹೆಚ್ಚಿಟ್ಟರೆ, ಈ ಶಾಖವು ಹಾಲು ವೇಗವಾಗಿ ಕುದಿಯಲು ಕಾರಣವಾಗುತ್ತದೆ. ಇದು ನೊರೆಯ ರಚನೆಯನ್ನು ವೇಗಗೊಳಿಸುತ್ತದೆ. ಹಾಗಾಗಿ ಯಾವಾಗಲೂ ಹಾಲನ್ನು ಕಡಿಮೆ ಉರಿಯಲ್ಲಿ ಕುದಿಸಿ. ಇದು ಹಾಲು ಇದ್ದಕ್ಕಿದ್ದಂತೆ ಉಕ್ಕಿ ಚೆಲ್ಲುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಫ್ರಿಜ್‌ನಲ್ಲಿಟ್ಟರೂ ಹಸಿ ಮೆಣಸಿನಕಾಯಿ ಬೇಗ ಹಾಳಾಗುತ್ತಿದೆಯೇ? ಸುಲಭ ಟ್ರಿಕ್ ಅನುಸರಿಸಿ

ಅಗಲವಾದ ಬಾಯಿಯ ಪಾತ್ರೆಯನ್ನು ಬಳಸಿ: ಅಗಲ ಬಾಯಿಯನ್ನು ಹೊಂದಿರುವ ಪಾತ್ರೆಯಲ್ಲಿಯೇ ಹಾಲನ್ನು ಕುದಿಸುವುದು ಸೂಕ್ತ.  ಅಗಲವಾದ ಬಾಯಿಯ ಹಾಗೂ ದೊಡ್ಡ ಪಾತ್ರೆಯು ಹೆಚ್ಚಿನ ಸ್ಥಳವನ್ನು ಹೊಂದಿದ್ದು, ಇದು ಹಾಲು ಕುದಿಯುವ ಸಮಯದಲ್ಲಿ ಇದು ಹಾಲಿನ ನೊರೆ ವಿಸ್ತರಿಸಲು ಹೆಚ್ಚಿನ ಅವಕಾಶವನ್ನು ನೀಡುತ್ತದೆ. ಇದು ಹಾಲು ಪಾತ್ರೆಯಿಂದ ತಕ್ಷಣವೇ ಚೆಲ್ಲಿ ಹೋಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಹಾಲು ಕುದಿಸುವಾಗ ಪಾತ್ರೆಯನ್ನು ಮುಚ್ಚಬೇಡಿ: ಅನೇಕ ಜನರು ಪಾತ್ರೆಯನ್ನು ಮುಚ್ಚುತ್ತಾರೆ. ಹೀಗೆ ಮಾಡುವುದರಿಂದ ಇದು ಶಾಖವನ್ನು ಒಳಗೆಯೇ ಹಿಡಿದಿಟ್ಟುಕೊಳ್ಳುತ್ತದೆ ಮತ್ತು ತ್ವರಿತವಾಗಿ ನೊರೆ ರೂಪುಗೊಳ್ಳಲು ಅನುವುಮಾಡಿಕೊಡುತ್ತದೆ. ಇದರಿಂದ ಹಾಲು ತಕ್ಷಣವೇ ಉಕ್ಕಿ ಚೆಲ್ಲಿ ಹೋಗುತ್ತದೆ. ಆದ್ದರಿಂದ ಪಾತ್ರೆಯನ್ನು ಸಂಪೂರ್ಣವಾಗಿ ಮುಚ್ಚುವ ಬದಲು ಪಾತ್ರೆಗೆ ಅಡ್ಡಲಾಗಿ ಚಮಚವನ್ನಿಟ್ಟು ಹಾಲು ಕಾಯಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾ

Follow Us