ಚಳಿಗಾಲ(Winter) ದಲ್ಲಿ ಆಹಾರದ ಕಡುಬಯಕೆಗಳು(Cravings) ಸಹಜವಾಗಿರುತ್ತದೆ. ಒಮ್ಮೆ ಆ ಅಭ್ಯಾಸವನ್ನು ಪ್ರಾರಂಭಿಸಿದರೆ, ಅವುಗಳನ್ನು ನಿಲ್ಲಿಸಲು ಸಾಕಷ್ಟು ಕಷ್ಟವಾಗಬಹುದು. ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವಾಗ ಮುಖ್ಯವಾಗಿ ನೀವು ಸರಿಯಾದ ಆಹಾರಕ್ರಮ ಮತ್ತು ವ್ಯಾಯಮದ ದಿನಚರಿಯನ್ನು ಅನುಸರಿಸುವ ಅಗತ್ಯವಿದೆ. ಇದರರ್ಥ ನೀವು ಅತಿಯಾದ ಆಹಾರದ ಕಡು ಬಯಕೆಗಳನ್ನು ತಪ್ಪಿಸಬೇಕು. ನಿಮ್ಮಲ್ಲಿ ಹೆಚ್ಚಿನವರಿಗೆ ಇದು ನಿಜವಾಗಿಯೂ ಕಷ್ಟಕರವಾಗುತ್ತದೆ. ನೀವು ಆಹಾರದ ಕಡು ಬಯಕೆಗಳ ವಿರುದ್ಧ ಹೋರಾಡಲು ಕೆಲವು ವಿಧಾನಗಳು ಇಲ್ಲಿವೆ.
ಬಾಯಾರಿಕೆ, ಹಸಿವು ಅಥವಾ ಆಹಾರದ ಪ್ರಚೋದನೆಗಳು ಆಗಾಗ್ಗೆ ಗೊಂದಲಕ್ಕೊಳಗಾಗುತ್ತವೆ. ಒಂದು ನಿರ್ದಿಷ್ಟ ಖಾದ್ಯದ ಅನಿರೀಕ್ಷಿತ ಅಗತ್ಯವನ್ನು ನೀವು ಅನುಭವಿಸಿದರೆ ಒಂದು ದೊಡ್ಡ ಲೋಟ ನೀರು ಕುಡಿಯಲು ಪ್ರಯತ್ನಿಸಿ. ಇದಲ್ಲದೆ ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಊಟಕ್ಕಿಂತ ಮುಂಚೆ ನೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ಮತ್ತು ಇದು ಮಧ್ಯವಯಸ್ಕ ಮತ್ತು ವಯಸ್ಸಾದ ವ್ಯಕ್ತಿಗಳಲ್ಲಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ನಿಮಗೆ ಕಡು ಬಯಕೆ ಉಂಟಾದಾಗ ನಿಮ್ಮನ್ನು ವಿಚಲಿತಗೊಳಿಸಿ, ನೀವು ಗಮನವನ್ನು ಬೇರೆ ಕಡೆ ಹಾಯಿಸಬೇಕು. ಉದಾಹರಣೆಗೆ ಸ್ನಾನ ಮಾಡಿ ಅಥವಾ ಚುರುಕಾದ ನಡಿಗೆಯನ್ನು ಮಾಡಿ. ದೃಷ್ಟಿಕೋನ ಮತ್ತು ಸುತ್ತಮುತ್ತಲಿನ ಬದಲಾವಣೆಯು ಕಡುಬಯಕೆಯನ್ನು ಕೊನೆಗೊಳಿಸಬಹುದು. ಹೆಚ್ಚುವರಿಯಾಗಿ ಚೂಯಿಂಗ್‌ಗಮ್ ಆಸೆಗಳನ್ನು ಮತ್ತು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವಾರು ಸಂಶೋಧನೆಗಳು ಬಹಿರಂಗಪಡಿಸಿವೆ.
ಇದನ್ನೂ ಓದಿ: ಈ ಮೂರು ಸಿಂಪಲ್ ಟಿಪ್ಸ್ ನಿಮ್ಮ ತಲೆ ಹೊಟ್ಟು ಸಮಸ್ಯೆಯನ್ನು ಹೋಗಲಾಡಿಸುತ್ತದೆ
ಒತ್ತಡವು ಆಹಾರದ ಬಯಕೆಯನ್ನು ಉಂಟುಮಾಡುತ್ತದೆ. ಮತ್ತು ಇದು ಆಹಾರ ಪದ್ದತಿಯ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ. ಒತ್ತಡವನ್ನು ಅನುಭವಿಸುತ್ತಿರುವ ಮಹಿಳೆಯರು ಗಮನಾರ್ಹವಾಗಿ ಹೆಚ್ಚಿನ ಕ್ಯಾಲೋರಿಗಳನ್ನು ಸೇವಿಸುತ್ತಾರೆ. ಮತ್ತು ಇವರು ಉಳಿದವರಿಗಿಂತ ಹೆಚ್ಚಿನ ಕಡುಬಯಕೆಯನ್ನು ಹೊಂದಿರುತ್ತಾರೆ. ಒತ್ತಡವು ನಿಮ್ಮ ರಕ್ತದ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುವ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ. ಧ್ಯಾನವನ್ನು ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು.
ಹಗಲಿನಲ್ಲಿ ಬದಲಾಗುವ ಹಾರ್ಮೋನುಗಳು ನಿಮ್ಮ ಹಸಿವಿನ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ನಿದ್ರೆಯ ಕೊರತೆಯು ಒಬ್ಬರ ಆಹಾರದ ಕಡುಬಯಕೆಯನ್ನು ನಿಯಂತ್ರಿಸುವಲ್ಲಿ ತೊಂದರೆ ಉಂಟುಮಾಡಬಹುದು. ಅಧ್ಯಯನಗಳ ಪ್ರಕಾರ, ಸಾಕಷ್ಟು ನಿದ್ರೆ ಪಡೆಯದವರಿಗೆ ಸ್ಥೂಲಕಾಯತೆಯ ಅಪಾಯವು ಶೇಕಡಾ 55ರ ವರೆಗೆ ಇರುತ್ತದೆ. ಈ ಕಾರಣದಿಂದಾಗಿ, ಸಾಕಷ್ಟು ಪ್ರಮಾಣದ ನಿದ್ರೆಯನ್ನು ಪಡೆಯುವುದು ಕಡುಬಯಕೆಗಳನ್ನು ನಿವಾರಿಸಲು ಅತ್ಯಂತ ಪರಿಣಾಮಕಾರಿ ತಂತ್ರಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ತಪ್ಪಿಯೂ ಇಂತಹ ಆಹಾರ ಸೇವಿಸಬೇಡಿ, ಈ ಆಹಾರದಿಂದ ನಿಮ್ಮ ಆಯುಷ್ಯ ಕಡಿಮೆಯಾಗುತ್ತೆ
ಕೆಲವು ಕಡುಬಯಕೆಗಳು ಹಸಿವು ಅಥವಾ ಅಗತ್ಯ ಪೋಷಕಾಂಶಗಳ ಕೊರತೆಯಿಂದ ಉಂಟಾಗಬಹುದು. ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿದರೆ ನಿಮಗೆ ತಿಂದ ಬಳಿಕ ಹಸಿವಿನ ಭಾವನೆಯನ್ನು ಉಂಟು ಮಾಡುವುದಿಲ್ಲ. ಹಣ್ಣುಗಳು, ಬೀಜಗಳು, ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸಿ.
ಅನೇಕ ಕಡುಬಯಕೆಗಳು ಮಾನಸಿಕ ಅಥವಾ ಪರಿಸರ ಪ್ರಚೋದಕಗಳನ್ನು ಹೊಂದಿದ್ದರೂ, ಕೆಲವು ಆಂತರಿಕ ಪ್ರಕ್ರಿಯೆಗಳ ನೇರ ಫಲಿತಾಂಶವಾಗಿದೆ. ಉದಾಹರಣೆಗೆ, ಖುತುಬಂಧದ ಸಮಯದಲ್ಲಿ ಕೆಲವು ಜನರ ದೇಹವು ಸಕ್ಕರೆಯನ್ನು ಹೀರಿಕೊಳ್ಳುವಲ್ಲಿ ಹೆಚ್ಚಿನ ತೊಂದರೆಯನ್ನು ಉಂಟುಮಾಡಿದಾಗ, ಸಕ್ಕರೆಯ ಕಡು ಬಯಕೆಗಳು ಆಗಾಗ್ಗೆ ಹೆಚ್ಚುತ್ತವೆ. ನೀವು ನಿಜವಾಗಿಯೂ ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುತ್ತಿದ್ದರೆ ಮತ್ತು ಪ್ರೋಟೀನ್ ತುಂಬಿರುವ ಆಹಾರವನ್ನು ತಿನ್ನಲು ಕಡುಬಯಕೆ ಹೊಂದಿದ್ದೀರಾ ಎಂದು ಆದರೆ, ನೀವು ಪ್ರೋಟೀನ್ ಅಪೌಷ್ಟಿಕತೆಯನ್ನು ಹೊಂದಿರುವಿರಿ ಎಂದು ಅದು ಸೂಚಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:37 pm, Sat, 21 January 23