
ಹಣ್ಣುಗಳು (Fruits) ಆರೋಗ್ಯಕರ ಆಹಾರದ ಪ್ರಮುಖ ಭಾಗ. ನಾರಿನಂಶ, ಜೀವಸತ್ವಗಳು, ಖನಿಜಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಹಣ್ಣುಗಳಲ್ಲಿ ದೊರೆಯುತ್ತವೆ. ಹೀಗಾಗಿ ವಿವಿಧ ಹಣ್ಣುಗಳನ್ನು ಕತ್ತರಿಸಿ ಒಂದೇ ಬೌಲ್‌ನಲ್ಲಿ ಹಾಕಿಕೊಂಡು ತಿನ್ನುವ ಅಭ್ಯಾಸ ಹಲವರಿಗಿದೆ. ಆದರೆ ಯಾವ ಹಣ್ಣುಗಳನ್ನು ಯಾವುದರೊಂದಿಗೆ ಬೆರೆಸಬೇಕು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಮಾಹಿತಿಗಳು ಹರಿದಾಡುತ್ತಿವೆ. ಕೆಲವು ಹಣ್ಣುಗಳನ್ನು ಒಟ್ಟಿಗೆ ತಿಂದರೆ ವಿಷವಾಗುತ್ತದೆ ಅಥವಾ ಜೀರ್ಣಕ್ರಿಯೆಗೆ ಹಾನಿಯಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯವಿಲ್ಲ. ಬದಲಿಗೆ, ಎಷ್ಟು ಪ್ರಮಾಣದಲ್ಲಿ ತಿನ್ನುತ್ತೇವೆ ಮತ್ತು ನಮ್ಮ ದೇಹಕ್ಕೆ ಅದು ಹೇಗೆ ಹೊಂದಿಕೊಳ್ಳುತ್ತದೆ ಎಂಬುದು ಹೆಚ್ಚು ಮುಖ್ಯ.
ಬಾಳೆಹಣ್ಣು ಹಾಗೂ ಮಾವು ಎರಡೂ ನೈಸರ್ಗಿಕ ಸಕ್ಕರೆ ಮತ್ತು ಕಾರ್ಬೊಹೈಡ್ರೇಟ್‌ಗಳನ್ನು ಹೊಂದಿರುವ ಹಣ್ಣುಗಳು. ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಟ್ಟಿಗೆ ತಿಂದರೆ ಒಟ್ಟಾರೆ ಕ್ಯಾಲೊರಿ ಮತ್ತು ಸಕ್ಕರೆ ಸೇವನೆ ಹೆಚ್ಚಾಗಬಹುದು. ಹಾಗಾಗಿ ಪ್ರಮಾಣ ನಿಯಂತ್ರಿಸುವುದು ಮುಖ್ಯ.
ಬಾಳೆಹಣ್ಣು ಹಾಗೂ ದ್ರಾಕ್ಷಿ ಎರಡೂ ಸಿಹಿಯಾದ ಹಣ್ಣುಗಳು. ಇವುಗಳನ್ನು ಮಿಕ್ಸ್ ಮಾಡಿ ದೊಡ್ಡ ಪ್ರಮಾಣದಲ್ಲಿ ಸೇವಿಸುವ ಬದಲು, ಮಿತವಾಗಿ ತಿನ್ನುವುದು ಉತ್ತಮ. ವಿಶೇಷವಾಗಿ ಸಕ್ಕರೆ ಸೇವನೆಯನ್ನು ನಿಯಂತ್ರಿಸಬೇಕಾದವರು ಪ್ರಮಾಣದ ಬಗ್ಗೆ ಹೆಚ್ಚಿನ ಗಮನ ನೀಡಬೇಕು.
ಮಾವು ಮತ್ತು ದ್ರಾಕ್ಷಿ ಎರಡೂ ನೈಸರ್ಗಿಕವಾಗಿ ಸಿಹಿಯಾಗಿರುವ ಹಣ್ಣುಗಳು. ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಟ್ಟಿಗೆ ಸೇವಿಸಿದರೆ ಕಾರ್ಬೊಹೈಡ್ರೇಟ್ ಸೇವನೆ ಹೆಚ್ಚಾಗಬಹುದು. ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಸೇವಿಸಿ, ಬೇರೆ ಬೇರೆ ಹಣ್ಣುಗಳನ್ನೂ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ವಿಧಾನವಾಗಿದೆ.
Garden Tips: ಗಿಡ ಚೆನ್ನಾಗಿ ಬೆಳೆದರೂ ಹೂ ಬಿಡುತ್ತಿಲ್ಲವೇ? ಈ ಕಾರಣಗಳಿರಬಹುದು
ಕಿತ್ತಳೆ, ನಿಂಬೆ ಮುಂತಾದ ಸಿಟ್ರಸ್ ಹಣ್ಣುಗಳು ಹಾಗೂ ಅನಾನಸ್ ಆಮ್ಲೀಯವಾಗಿರುತ್ತವೆ. ಇವುಗಳನ್ನು ಒಟ್ಟಿಗೆ ತಿಂದರೆ ವಿಷಕಾರಿ ವಸ್ತು ಸೃಷ್ಟಿಯಾಗುತ್ತದೆ ಎಂಬುದು ತಪ್ಪು. ಆದರೆ ಆ್ಯಸಿಡಿಟಿ ಅಥವಾ ಎದೆಯುರಿಗೆ ಸೂಕ್ಷ್ಮವಾಗಿರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅಸ್ವಸ್ಥತೆ ಉಂಟಾಗಬಹುದು.
ಒಣಹಣ್ಣುಗಳಲ್ಲಿ ನೀರಿನಂಶ ಕಡಿಮೆಯಿರುವುದರಿಂದ ಸಕ್ಕರೆ ಮತ್ತು ಕ್ಯಾಲೊರಿ ಹೆಚ್ಚು ಸಾಂದ್ರವಾಗಿರುತ್ತವೆ. ಹೀಗಾಗಿ ತಾಜಾ ಹಣ್ಣಿನ ಜತೆಗೆ ಒಣಹಣ್ಣು ತಿನ್ನುವಾಗಲೂ ಪ್ರಮಾಣದ ಬಗ್ಗೆ ಗಮನ ಇರಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ