Benefits of Saying NO: “ಇಲ್ಲ” ಎಂದು ಹೇಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಏಕೆ ಮುಖ್ಯ ಗೊತ್ತಾ?

ಕೆಲಸದ ವಿಚಾರವೇ ಆಗಿರಲಿ ಅಥವಾ ವೈಯಕ್ತಿಕ ವಿಚಾರದಲ್ಲಿಯೇ ಆಗಿರಲಿ ಒಂದಷ್ಟು ಜನ ಯಾರು ಏನೇ ಕೆಲಸ ಹೇಳಿದ್ರೂ, ಏನೇ ಸಹಾಯ ಕೇಳಿದರೂ ಎಲ್ಲದಕ್ಕೂ ಎಸ್‌ ಎಸ್‌ ಅಂತಾನೇ ಹೇಳ್ತಾರೆ. ಆದ್ರೆ ಎಲ್ಲ ಸಂದರ್ಭದಲ್ಲೂ ಹೀಗೆ ಎಸ್‌ ಅನ್ನೋದನ್ನು ಹೇಳುವುದು ಸರಿಯಲ್ಲ. ಕೆಲವು ಸಂದರ್ಭಗಳಲ್ಲಿ ʼಇಲ್ಲʼ ಎನ್ನುವುದನ್ನು ಹೇಳಬೇಕು. ಹೀಗೆ “ಇಲ್ಲ” ಎಂದು ಹೇಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಏಕೆ ಮುಖ್ಯ ಎಂಬುದನ್ನು ನೋಡಿ.

Benefits of Saying NO: “ಇಲ್ಲ” ಎಂದು ಹೇಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಏಕೆ ಮುಖ್ಯ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 10, 2025 | 5:10 PM

ಇತರರು ಬೇಜಾರು ಮಾಡಿಕೊಳ್ಳುತ್ತಾರೋ ಅಥವಾ ಅವರು ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೋ ಎಂಬ ಕಾರಣಕ್ಕೆ ಹೆಚ್ಚಿನವರು ಯಾರು ಏನೇ ಹೆಲ್ಪ್‌ ಕೇಳಿದ್ರೂ ಅಥವಾ ಕೆಲಸ ಮಾಡಿ ಕೊಡಿ ಎಂದು ಹೇಳಿದ್ರೂ ಅದಕ್ಕೆ ಎಸ್‌ ಎಸ್‌ ಎಂದು ತಲೆ ಅಲ್ಲಾಡಿಸುತ್ತಾರೆ. ಈ ರೀತಿ ಎಲ್ಲದಕ್ಕೂ ಎಸ್‌ ಎಂದು ಹೇಳಿದಾಗ ಜನ ನಿಮ್ಮನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ಈ ಅಭ್ಯಾಸದಿಂದ ಇಲ್ಲದ ಸಮಸ್ಯೆಗಳನ್ನು ನೀವೆ ಮೈ ಮೇಲೆ ಎಳೆದುಕೊಂಡಂತೆ ಆಗುತ್ತದೆ.  ಹಾಗಾಗಿ ಕೆಲಸದ ಸ್ಥಳದಲ್ಲಾಗಿರಬಹುದು ಅಥವಾ ವೈಯಕ್ತಿಕ ಜೀವನದಲ್ಲಾಗಿರಬಹುದು, ಒಂದಷ್ಟು ಸಂದರ್ಭಗಳಲ್ಲಿ ಯಾರು ಏನೇ ಹೇಳಿದರೂ ಅದಕ್ಕೆ ಇಲ್ಲ (Saying NO) ಎಂದು ಹೇಳಬೇಕು. ಹೀಗೆ “ಇಲ್ಲ” ಎಂದು ಹೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಏಕೆ ಅಷ್ಟು  ಮುಖ್ಯ ಎಂಬುದನ್ನು ನೋಡಿ.

ಇಲ್ಲ ಎಂದು ಹೇಳುವುದು ಎಷ್ಟು ಮುಖ್ಯ ಗೊತ್ತಾ?

ಇಲ್ಲ ಎಂದು ಹೇಳುವ ಅಭ್ಯಾಸವನ್ನು ನೀವು ಬೆಳೆಸಿಕೊಳ್ಳುವುದರಿಂದ ನಿಮ್ಮ ಆತ್ಮವಿಶ್ವಾಸ, ಸ್ವಾಭಿಮಾನ ಹೆಚ್ಚಾಗುವುದರ ಜೊತೆಗೆ ಇತರರು ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುವುದನ್ನು ತಪ್ಪಿಸಬಹುದು. ಅದಕ್ಕಾಗಿ “ಇಲ್ಲ” ಎಂದು ಹೇಳುವುದು ಬಹಳ ಮುಖ್ಯ.

ನಿಮ್ಮ ಮೌಲ್ಯವನ್ನು ಹೆಚ್ಚಿಸುತ್ತದೆ: ಎಲ್ಲದಕ್ಕೂ ಹೌದು, ಎಸ್‌ ಎಂದು ಹೇಳುವುದು ಒಳ್ಳೆಯ ಅಭ್ಯಾಸವಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವೊಂದು ಸಂದರ್ಭಗಳಲ್ಲಿ ಇಲ್ಲ ಎಂದು ಹೇಳುವುದನ್ನು ಕೂಡಾ ನೀವು ಕಲಿಯಬೇಕು. ಇದು ನಿಮ್ಮ ಮೌಲ್ಯ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ
ವರದಕ್ಷಿಣೆ ಅಪರಾಧವಾಗಿದ್ದರೆ, ಜೀವನಾಂಶ ಕೇಳುವುದು ಕಾನೂನುಬದ್ಧವಾಗಿದೆಯೇ?
ಯುವ ಜನತೆ ಕಲಿಯಲೇಬೇಕಾದ ಪ್ರಮುಖ ಜೀವನ ಪಾಠಗಳಿವು
ಹಣಕಾಸಿನ ಈ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
ನೋಡಿ… ಈ ತಪ್ಪುಗಳೇ ಸಂಬಂಧ ಹಾಳಾಗಲು ಮುಖ್ಯ ಕಾರಣ

ಒತ್ತಡದಿಂದ ದೂರವಿರಬಹುದು: ನಿಮ್ಮ ಕೆಲಸವೇ ಸಾಕಷ್ಟಿರುತ್ತದೆ. ಅದರ ನಡುವೆ ಯಾರೋ ಬಂದು ನನಗೆ ಈ ಕೆಲಸ ಮಾಡಿ ಕೊಡೋದಕ್ಕಾಗುತ್ತಾ ಎಂದು ನಿಮ್ಮನ್ನು ಕೇಳಿದಾಗ ನೀವು ಹೌದು ಎಂದು ಒಪ್ಪಿಕೊಂಡರೆ ನಿಮ್ಮ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ಯಾರೇ ಕೇಳಿದ್ರೂ ಆಗಲ್ಲ, ಇಲ್ಲ ಎಂದು ಹೇಳಿ. ಇದರಿಂದ ನಿಮ್ಮ ಕೆಲಸದ ಒತ್ತಡವೂ ದೂರವಾಗುತ್ತದೆ.

ಇದನ್ನೂ ಓದಿ: ನಿಮ್ಮ ಹಣಕಾಸಿನ ಈ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

ಆತ್ಮವಿಶ್ವಾಸ: ಎಲ್ಲದಕ್ಕೂ ಆಗುತ್ತೆ, ಎಸ್‌ ಅನ್ನೋದಲ್ಲ. ಕೆಲವು ಸಂದರ್ಭಗಳಲ್ಲಿ ಇಲ್ಲ ಎಂದು ಹೇಳಲು ಕಲಿಯಿರಿ. ಹೀಗೆ ನಿಮ್ಮ ಸ್ವಂತ ನಿರ್ಧಾರಗಳನ್ನು ಹೇಳಿದಾಗ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ.

ಆರೋಗ್ಯಕರ ಗಡಿ: ಇಲ್ಲ ಎಂದು ಸ್ಪಷ್ಟವಾಗಿ ಹೇಳುವುದರಿಂದ ಇತರರು ನಿಮ್ಮ ಮಿತಿಗಳನ್ನು ಗೌರವಿಸಲು ಸಹಾಯ ಮಾಡುತ್ತದೆ. ನೀವು ನಿಮಗಾಗಿ ಬದುಕಲು ಅವಕಾಶವನ್ನು ನೀಡುತ್ತದೆ. ಮತ್ತು ಮುಖ್ಯವಾಗಿ ಇದರಿಂದ ಇತರರು ನಿಮ್ಮನ್ನು ಅವರ ಸ್ವಾರ್ಥಕ್ಕೆ ಬಳಸಿಕೊಳ್ಳುವುದನ್ನು ತಪ್ಪಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ