
ಕಾಫಿ (coffee) ಪುಡಿ ಕಾಫಿ ಮಾಡುವುದಕ್ಕೆ ಮಾತ್ರವಲ್ಲ ನಮ್ಮ ಚರ್ಮದ ಆರೋಗ್ಯಕ್ಕೂ ಒಳ್ಳೆಯದು ಎಂಬುದು ನಿಮಗೆ ತಿಳಿದಿದೆಯೇ? ಯಾವುದೇ ಋತುವಾಗಲಿ ಚರ್ಮದ ಅಂದ ಹೆಚ್ಚಿಸಿಕೊಳ್ಳಲು ಕಾಫಿ ಪುಡಿಯನ್ನು ಬಳಸಬಹುದು. ಇದು ನಿಮ್ಮ ತ್ವಚೆಗೆ ಗ್ಲೋ ನೀಡುತ್ತದೆ. ಮಾತ್ರವಲ್ಲ ಈ ಕಾಫಿ ಪುಡಿಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಇರುವುದಿಲ್ಲ. ಜೊತೆಗೆ ನೀವು ಪಾರ್ಲರ್‌ಗಳಿಗೆ ಹೋಗಿ ಹಣ ಖರ್ಚು ಮಾಡುವ ಅವಶ್ಯಕತೆಯೂ ಬರಲ್ಲ. ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ಕುಳಿತು ಮುಖದ ಅಂದ ಹೆಚ್ಚಿಸಿಕೊಳ್ಳಬಹುದು. ಕಾಫಿ ಪುಡಿಯಿಂದ ಈ ಫೇಸ್ ಪ್ಯಾಕ್ (coffee face pack) ಗಳನ್ನು ತಯಾರಿಸುವುದು ತುಂಬಾ ಸರಳ. ಹಾಗಾದರೆ ನಿಮ್ಮ ಮುಖದ ಮೇಲೆ ತ್ವರಿತವಾಗಿ ಹೊಳಪು ಬರಬೇಕಾದರೆ ಈ ಸ್ಟೋರಿಯಲ್ಲಿ ತಿಳಿಸಿರುವಂತಹ ಫೇಸ್ ಪ್ಯಾಕ್ ಗಳನ್ನು ನೀವು ಕೂಡ ಟ್ರೈ ಮಾಡಿ ನೋಡಿ.
ಕಾಫಿ ಪುಡಿಯಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು. ಮನೆಯಲ್ಲಿಯೇ ಕುಳಿತು ಕಾಫಿ ಪುಡಿಯಿಂದ ಫೇಸ್ ಪ್ಯಾಕ್ ತಯಾರಿಸಿಕೊಳ್ಳಬಹುದು. ಇದು ತುಂಬಾ ಸರಳವಾಗಿದ್ದು ನಿಮ್ಮ ಮುಖಕ್ಕೆ ತಕ್ಷಣದ ಹೊಳಪನ್ನು ನೀಡುತ್ತದೆ. ಒಂದೇ ದಿನದಲ್ಲಿ ಗ್ಲೋ ಆಗಿ ಕಾಣಬೇಕು ಅಂದ್ರೆ ನೀವು ಇವುಗಳನ್ನು ಟ್ರೈ ಮಾಡಲೇಬೇಕು. ಹಾಗಾದರೆ ಈ ಫೇಸ್ ಪ್ಯಾಕ್ ಗಳನ್ನು ಹೇಗೆ ತಯಾರು ಮಾಡಬೇಕು? ಕಾಫಿ ಪುಡಿ ಬಿಟ್ಟು ಬೇರೆ ಯಾವ ವಸ್ತುಗಳನ್ನು ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಇದನ್ನೂ ಓದಿ: ಐಬ್ರೋ ಶೇಪ್ ಮಾಡುವ ಮುನ್ನ ಹುಷಾರು; ಸೌಂದರ್ಯ ಹೆಚ್ಚಿಸಲು ಹೋಗಿ ಅಪಾಯ ತಂದುಕೊಳ್ಳಬೇಡಿ
ಮೊದಲು, ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಮೊಸರು, ಸ್ವಲ್ಪ ಅರಿಶಿನ ಮತ್ತು ಒಂದು ಟೀ ಚಮಚ ಕಾಫಿ ಪುಡಿಯನ್ನು ಸೇರಿಸಿ, ನಂತರ ಎಲ್ಲವೂ ಸರಿಯಾಗಿ ಹೊಂದಿಕೊಳ್ಳುವ ವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ತಯಾರಾದ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ ಸುಮಾರು ಅರ್ಧ ಗಂಟೆಗಳ ಕಾಲ ಬಿಡಿ. ನಂತರ, ನಿಮ್ಮ ಮುಖವನ್ನು ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಿ ಬಳಿಕ ಮುಖವನ್ನು ಚೆನ್ನಾಗಿ ಒರೆಸಿಕೊಂಡು ಮಾಯಿಶ್ಚರೈಸರ್ ಹಚ್ಚಿ.
ಜೇನುತುಪ್ಪವನ್ನು ಕಾಫಿ ಪುಡಿಯೊಂದಿಗೆ ಬೆರೆಸಿ ಹಚ್ಚಿ. ಇದರಿಂದ ಮುಖ ಮೃದು ಮತ್ತು ಹೈಡ್ರೇಟ್ ಆಗಿ ಕಾಣುತ್ತದೆ. ಇದನ್ನು ತಯಾರಿಸಲು ಒಂದು ಬಟ್ಟಲಿನಲ್ಲಿ ಸ್ವಲ್ಪ ಜೇನುತುಪ್ಪ ಮತ್ತು ಸ್ವಲ್ಪ ಕಾಫಿ ಪುಡಿಯನ್ನು ತೆಗೆದುಕೊಂಡು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ. ಇದರಿಂದ ಮುಖ ಕಾಂತಿಯುತವಾಗುತ್ತದೆ.
ನಿಂಬೆ ರಸವನ್ನು ಕಾಫಿ ಪುಡಿಯೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಮಾಡಿ ಬಳಸಬಹುದು. ಇದು ಮುಖದಲ್ಲಿರುವ ಎಣ್ಣೆ ಮತ್ತು ಕೊಳೆಯನ್ನು ತೆಗೆದು ಹಾಕುತ್ತದೆ ಮತ್ತು ಮುಖಕ್ಕೆ ಒಳ್ಳೆಯ ಹೊಳಪನ್ನು ನೀಡುತ್ತದೆ. ಇದನ್ನು ತಯಾರಿಸಲು ಒಂದು ಬಟ್ಟಲಿನಲ್ಲಿ ನಿಂಬೆ ರಸ ಮತ್ತು ಕಾಫಿ ಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ