
ಈ ಮಳೆಗೆ ಶೂ (dry shoes) ಹಾಕುವುದೇ ಒಂದು ದೊಡ್ಡ ತಲೆನೋವು, ಆದರೆ ಆಫೀಸ್, ಸ್ಕೂಲ್ಗೆ ಹೋಗುವಾಗ ಶೂ ಹಾಕಲೇಬೇಕು, ಬೇರೆ ದಾರಿಯೇ ಇಲ್ಲ. ಮಳೆಗೆ ಶೂ ಹಾಕಿಕೊಂಡು ಹೋದ್ರೆ, ಅದು ತಕ್ಷಣಕ್ಕೆ ಒಣಗುವುದಿಲ್ಲ. ಜತೆಗೆ ಕೆಟ್ಟ ವಾಸನೆಯನ್ನು ಸಹ ಬರಲು ಪ್ರಾರಂಭಿಸುತ್ತವೆ. ಆದರೆ ಇದಕ್ಕೆ ಒಂದು ಸುಲಭ ಪರಿಹಾರವನ್ನು ಫ್ಯಾಷನ್ ಸಲಹೆಗಾರ ಶಶಾಂಕ್ ಅಲ್ಶಿ ಅವರು ತನ್ನ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನೀವು ನಿಮ್ಮ ಬೂಟುಗಳನ್ನು ಬೇಗನೆ ಒಣಗಿಸುವುದು ಮಾತ್ರವಲ್ಲದೆ, ವಾಸನೆಯನ್ನು ಸಂಪೂರ್ಣವಾಗಿ ತೊಡೆದುಹಾಕಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ಹೇಳಿದ್ದಾರೆ ನೋಡಿ.
ಶೂ ಒಳಗಿನಿಂದ ಇನ್ಸೋಲ್ ಅನ್ನು ತಕ್ಷಣ ತೆಗೆದುಹಾಕಿ. ಇನ್ಸೋಲ್ ಕೊಳಕಾಗಿದ್ದರೆ, ಅದನ್ನು ಉಗುರು ಬೆಚ್ಚಗಿನ ನೀರು ಮತ್ತು ಸೋಪಿನಿಂದ ನಿಧಾನವಾಗಿ ಸ್ವಚ್ಛಗೊಳಿಸಿ ಮತ್ತು ಪ್ರತ್ಯೇಕವಾಗಿ ಒಣಗಲು ಬಿಡಿ. ಹೀಗೆ ಮಾಡುವುದರಿಂದ ಶೂಗಳು ಬೇಗನೆ ಒಣಗುತ್ತವೆ ಮತ್ತು ತೇವಾಂಶ ಕಡಿಮೆಯಾಗುತ್ತದೆ.
ಹಳೆಯ ವೃತ್ತಪತ್ರಿಕೆಗಳನ್ನು ಹರಿದು, ಅವುಗಳನ್ನು ಉಂಡೆಯಾಗಿ ಮಾಡಿ, ನಂತರ ನಿಮ್ಮ ಬೂಟುಗಳ ಒಳಗೆ ತುಂಬಿಸಿ. ವೃತ್ತಪತ್ರಿಕೆಗಳು ನೀರನ್ನು ಬೇಗನೆ ಹೀರಿಕೊಳ್ಳುತ್ತವೆ ಮತ್ತು ಬೂಟುಗಳನ್ನು ಒಳಗಿನಿಂದ ಒಣಗಿಸಲು ಸಹಾಯ ಮಾಡುತ್ತದೆ.
ಶೂಗಳು ತುಂಬಾ ಒದ್ದೆಯಾಗಿದ್ದರೆ, ನೀವು ವೃತ್ತಪತ್ರಿಕೆಯನ್ನು 2 ರಿಂದ 3 ಬಾರಿ ಬದಲಾಯಿಸಬಹುದು. ತಾಜಾ ವೃತ್ತಪತ್ರಿಕೆ ಮತ್ತೆ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ವೇಗವಾಗಿ ಒಣಗಳು ಸಹಾಯ ಮಾಡುತ್ತದೆ.
ಶೂಗಳು ಕೆಟ್ಟ ವಾಸನೆ ಬರುತ್ತಿದ್ದರೆ, ಸ್ವಲ್ಪ ಕಾಫಿ ಪುಡಿಯನ್ನು ಟಿಶ್ಯೂ ಕಾಗದದಲ್ಲಿ ಹಾಕಿ ನಿಮ್ಮ ಶೂಗಳ ಒಳಗೆ ಇರಿಸಿ. ಕಾಫಿಯ ವಾಸನೆಯು ಕೆಟ್ಟ ವಾಸನೆಯನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ಶೂಗಳು ತಾಜಾವಾಗಿರುತ್ತವೆ.
ಇದನ್ನೂ ಓದಿ: ಬೆಕ್ಕು, ಇಲಿ; ಈ ಚಿತ್ರದಲ್ಲಿ ನೀವು ಗಮನಿಸುವ ಮೊದಲ ಅಂಶ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಹೇಳಬಲ್ಲದು
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ