AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hair Care : ಕೂದಲು ಸೊಂಪಾಗಿ ಬೆಳೆಯಬೇಕಾ? ಹಾಗಾದ್ರೆ ಈ ಆಹಾರ ನಿತ್ಯ ಸೇವಿಸಿ

ಇತ್ತೀಚೆಗಿನ ದಿನಗಳಲ್ಲಿ ಒತ್ತಡದ ಜೀವನಶೈಲಿ, ಅನಾರೋಗ್ಯಕರ ಆಹಾರ ಕ್ರಮ, ರಾಸಾಯನಿಕಯುಕ್ತ ಶ್ಯಾಂಪೂಗಳ ಬಳಕೆಯಿಂದಾಗಿ ಕೂದಲು ಉದುರುವ ಸಮಸ್ಯೆಯು ಸರ್ವೇ ಸಾಮಾನ್ಯವಾಗಿದೆ. ಕೂದಲಿನ ಬೆಳವಣಿಗೆಗೆ ಎಣ್ಣೆ, ಶಾಂಪೂ, ಕಂಡೀಶನರ್ ಹಚ್ಚುವುದರೊಂದಿಗೆ ಸೇವಿಸುವ ಆಹಾರವು ಅಷ್ಟೇ ಮುಖ್ಯವಾಗುತ್ತದೆ. ಕೂದಲು ಸೊಂಪಾಗಿ ಬೆಳೆಯಬೇಕಂದ್ರೆ ಈ ಕೆಲವು ಆಹಾರಗಳನ್ನು ಸೇವಿಸುವುದು ಅತ್ಯಗತ್ಯ. ಹಾಗಾದ್ರೆ ಕೂದಲ ಆರೋಗ್ಯ ಹಾಗೂ ದಟ್ಟವಾಗಿ ಬೆಳೆಯಲು ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು ಎನ್ನುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Hair Care : ಕೂದಲು ಸೊಂಪಾಗಿ ಬೆಳೆಯಬೇಕಾ? ಹಾಗಾದ್ರೆ ಈ ಆಹಾರ ನಿತ್ಯ ಸೇವಿಸಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 13, 2024 | 3:51 PM

Share

ಏನೇ ಮಾಡಿದ್ರು ಕೂದಲು ಉದುರುವುದು ಮಾತ್ರ ನಿಲ್ಲುತ್ತಿಲ್ಲ ಎಂದು ಎಷ್ಟೋ ಜನರು ಹೇಳುವುದನ್ನು ಕೇಳುತ್ತಿರಬಹುದು. ಹೀಗಾಗಿ ಹೆಚ್ಚಿನವರು ಇರೋ ನಾಲ್ಕು ಕೂದಲನ್ನು ಉಳಿಸಿಕೊಳ್ಳಲು ಹಣ ಖರ್ಚು ಮಾಡಿ ದುಬಾರಿ ಬೆಲೆಯ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಆ ಕ್ಷಣಕ್ಕೆ ಮಾತ್ರ ಪರಿಹಾರ ಸಿಗಬಹುದು. ಆದರೆ, ಕೂದಲು ಚೆನ್ನಾಗಿ ಬೆಳೆಯಬೇಕೆಂದರೆ ಸೇವಿಸುವ ಆಹಾರದ ಕಡೆಗೆ ಹೆಚ್ಚು ಗಮನ ಕೊಡಬೇಕು. ಹೀಗಾಗಿ ಕೂದಲಿನ ಪೋಷಣೆಗೆ ಹಾಗೂ ಸೊಂಪಾದ ಕೂದಲು ನಿಮ್ಮದಾಗಬೇಕಂದ್ರೆ ಈ ಆಹಾರವನ್ನು ಸೇವಿಸುವುದನ್ನು ಮರೆಯದಿರಿ.

  • ಪಾಲಕ್ ಸೊಪ್ಪು : ಪಾಲಕ್ ಸೊಪ್ಪಿನಲ್ಲಿ ಕಬ್ಬಿಣ, ವಿಟಮಿನ್ ಎ, ಸಿ ಮತ್ತು ಫೋಲೇಟ್ ಸಮೃದ್ಧವಾಗಿದೆ. ಕಬ್ಬಿಣವು ಕೂದಲಿನ ಕಿರುಚೀಲಗಳಿಗೆ ಆಮ್ಲಜನಕವನ್ನು ತಲುಪಿಸಲು ಸಹಾಯ ಮಾಡಿ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
  • ಮೊಟ್ಟೆ : ಮೊಟ್ಟೆಗಳಲ್ಲಿ ಪ್ರೋಟೀನ್, ಬಯೋಟಿನ್ ಮತ್ತು ಅಗತ್ಯವಾದ ಅಮೈನೋ ಆಮ್ಲಗಳು ಹೇರಳವಾಗಿದೆ. ಇದರಲ್ಲಿರುವ ಪ್ರೋಟೀನ್ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ ಕೂದಲು ಉದ್ದ ಹಾಗೂ ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.
  • ಮೀನು : ಸಾಲ್ಮನ್ ಮೀನಿನಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು, ಪ್ರೋಟೀನ್, ವಿಟಮಿನ್ ಡಿ ಮತ್ತು ಆಂಟಿ-ಆಕ್ಸಿಡೆಂಟ್ ಗಳು ಹೇರಳವಾಗಿದೆ. ಇದರಲ್ಲಿಯು ಒಮೆಗಾ -3 ಕೊಬ್ಬಿನಾಮ್ಲಗಳು ಕೂದಲು ಕಿರುಚೀಲಗಳನ್ನು ಪೋಷಿಸಲು ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದ ಕೂದಲು ಸೊಂಪಾಗಿ ದಟ್ಟವಾಗಿ ಬೆಳೆಯುತ್ತದೆ.
  • ದ್ವಿದಳ ಧಾನ್ಯಗಳು: ಕಡಲೆ, ತೊಗರಿ, ಬೀನ್ಸ್‌ ಸೇರಿದಂತೆ ಇನ್ನಿತ್ತರ ದ್ವಿದಳ ಧಾನ್ಯಗಳು ಸತು, ಪ್ರೋಟೀನ್ ಮತ್ತು ಫೈಬರ್‌ ನಿಂದ ಸಮೃದ್ಧವಾಗಿದೆ. ಇವುಗಳ ಸೇವನೆಯಿಂದ ಕೂದಲು ದಟ್ಟವಾಗಿ ಬೆಳೆಯುವುದಲ್ಲದೆ ಆರೋಗ್ಯಕರ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ದ್ವಿದಳ ಧಾನ್ಯಗಳನ್ನು ಸೂಪ್‌ಗಳು, ಸಲಾಡ್‌ಗಳಳು, ಸೈಡ್ ಡಿಶ್ ಆಗಿ ಸೇವಿಸಬಹುದು.
  • ನಟ್ಸ್‌ಗಳು : ನಟ್ಸ್‌ಗಳ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ , ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಬಾದಾಮಿ ಅಥವಾ ಸೂರ್ಯಕಾಂತಿ ಬೀಜಗಳಲ್ಲಿ ಬಯೋಟಿನ್ ಮತ್ತು ಇತರ ಬಿ ವಿಟಮಿನ್‌ಗಳನ್ನು ಹೊಂದಿದ್ದು, ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
  • ಸಿಹಿ ಗೆಣಸು : ಸಿಹಿ ಗೆಣಸಿನಲ್ಲಿ ಕೂದಲಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳಾದ ವಿಟಮಿನ್ ಬಿ, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಸತುವಿದೆ. ಈ ಸಿಹಿ ಗೆಣಸು ಕೂದಲಿನಲ್ಲಿರುವ ಪೋಷಕಾಂಶಗಳ ಕೊರತೆಯನ್ನು ನೀಗಿಸಿ ಕೂದಲು ಸೊಂಪಾಗಿ ಬೆಳೆಯುವಂತೆ ನೋಡಿಕೊಳ್ಳುತ್ತದೆ
  • ಕ್ಯಾರೆಟ್ : ಕ್ಯಾರೆಟ್‌ ವಿಟಮಿನ್, ಫೈಬರ್, ಪೊಟ್ಯಾಸಿಯಮ್, ಕಬ್ಬಿಣ, ಸತು, ರಂಜಕ, ಬೀಟಾ-ಕ್ಯಾರೋಟಿನ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಕ್ಯಾರೆಟ್‌ನಲ್ಲಿರುವ ವಿಟಮಿನ್ ಎ ನೆತ್ತಿಯನ್ನು ಆರೋಗ್ಯಕರವಾಗಿಸಿ, ಕೂದಲು ಉದುರುವುದನ್ನು ತಡೆಯುತ್ತದೆ. ಇದರಲ್ಲಿರುವ ಜೀವಸತ್ವಗಳು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಬಯೋಟಿನ್ ಹಾಗೂ ವಿಟಮಿನ್ ಎ, ಕೆರಾಟಿನ್ ಬೆಳವಣಿಗೆಯನ್ನು ಉತ್ತೇಜಿಸಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ