Haldi Decoration Ideas : ಅರಶಿನ ಶಾಸ್ತ್ರಕ್ಕೆ ಕಡಿಮೆ ವೆಚ್ಚದಲ್ಲಿ ಮನೆಯನ್ನು ಸಾಂಪ್ರದಾಯಿಕವಾಗಿ ಅಲಂಕರಿಸಿಕೊಳ್ಳುವುದು ಹೇಗೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 18, 2024 | 4:10 PM

ಮದುವೆ ಎನ್ನುವುದು ಒಂದು ದಿನದ ಸಂಭ್ರಮವಾಗಿರುವುದಿಲ್ಲ. ಒಂದು ವಾರಗಳ ಮದುವೆಯ ಸಡಗರ ಖುಷಿಯಿರುತ್ತದೆ. ಮದುವೆಗೆ ಕೆಲವು ದಿನ ಗಳು ಬಾಕಿಯಿರುವಾಗಲೇ ಶಾಸ್ತ್ರ ಸಂಪ್ರದಾಯಗಳು ಜೋರಾಗಿಯೇ ನಡೆಯುತ್ತಿರುತ್ತದೆ. ಭಾರತೀಯ ಮದುವೆಯಲ್ಲಿ ಅರಶಿನ ಶಾಸ್ತ್ರದ ರಂಗೇ ಬೇರೆ. ಈ ಶಾಸ್ತ್ರಕ್ಕಾಗಿ ಮನೆಯನ್ನು ಸುಂದರವಾಗಿ ಅಲಂಕಾರ ಮಾಡಿಕೊಂಡು ಹಳದಿ ಶಾಸ್ತ್ರವನ್ನು ಮತ್ತಷ್ಟು ಅದ್ದೂರಿ ಯಾಗಿ ಮಾಡಬೇಕು ಎನ್ನುವವರು ಈ ಟಿಪ್ಸ್ ಪಾಲಿಸಿ.

Haldi Decoration Ideas : ಅರಶಿನ ಶಾಸ್ತ್ರಕ್ಕೆ ಕಡಿಮೆ ವೆಚ್ಚದಲ್ಲಿ ಮನೆಯನ್ನು ಸಾಂಪ್ರದಾಯಿಕವಾಗಿ ಅಲಂಕರಿಸಿಕೊಳ್ಳುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಮದುವೆಯೇ ಎಂದರೆ ಸಂಭ್ರಮ. ಹೆಣ್ಣು ಗಂಡಿನ ಜೀವನದ ತಿರುವಿನ ಘಟ್ಟ. ಎಲ್ಲರೂ ಕೂಡ ತಮ್ಮ ಮದುವೆಯ ಬಗ್ಗೆ ನೂರಾರು ಕನಸುಗಳನ್ನು ಕಂಡಿರುತ್ತಾರೆ. ಇತ್ತ ಮದುವೆಯ ದಿನಕ್ಕೂ ಮುನ್ನ ಅನೇಕ ಶಾಸ್ತ್ರ ಸಂಪ್ರದಾಯಗಳನ್ನು ನಡೆಯುತ್ತಿರುತ್ತದೆ. ಆದರೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಆ ಸಂಪ್ರದಾಯದಲ್ಲಿ ಸ್ವಲ್ಪ ಬದಲಾವಣೆಯಿದ್ದರೂ ಮದುವೆಯ ಸಂಭ್ರಮವು ಬಲು ಜೋರಾಗಿಯೇ ಇರುತ್ತದೆ. ಇದೀಗ ಮದುವೆಯಲ್ಲಿ ಆಡಂಬರ ಎನ್ನುವುದು ಸಾಮಾನ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರು ಮದುವೆಯ ಅಲಂಕಾರಕ್ಕೆ ಹೆಚ್ಚು ಗಮನ ಹರಿಸುತ್ತಾರೆ. ಮನೆಯಲ್ಲಿ ಸರಳವಾಗಿ ಅರಶಿನ ಶಾಸ್ತ್ರವನ್ನು ಮಾಡಬೇಕೆಂದುಕೊಂಡವರು ಕಡಿಮೆ ಬಜೆಟ್ ನಲ್ಲಿ ಹಳದಿ ಶಾಸ್ತ್ರಕ್ಕೆ ಬೇಕಾದ ಅಲಂಕಾರವನ್ನು ಮಾಡಿಕೊಳ್ಳಬಹುದು.

  1. ಸರಳ ಮಾರಿ ಗೋಲ್ಡ್ ಹೂವಿನಿಂದ ಅಲಂಕಾರ: ಅರಶಿನ ಶಾಸ್ತ್ರಕ್ಕೆ ಮೆರಗು ನೀಡುವುದೇ ಈ ಮಾರಿಗೋಲ್ಡ್ ಹೂವುಗಳು. ಈ ಹೂವುಗಳು ಸಾಂಪ್ರದಾಯಿಕ ಸ್ಪರ್ಶವನ್ನು ನೀಡುತ್ತವೆ. ಈ ಹಿನ್ನಲೆಯಲ್ಲಿ ಮಾರಿಗೋಲ್ಡ್ ಹೂವಿನ ಮಾಲೆಗಳು ಹಾಗೂ ಹಳದಿ ಬಣ್ಣದ ಶಾಲೂ ಹಾಗೂ ದುಪ್ಪಟ್ಟಗಳನ್ನು ಬಳಸಿದರೆ ಹಳದಿ ಶಾಸ್ತ್ರಕ್ಕೆ ಸರಳ ಹಾಗೂ ಆಕರ್ಷಕವಾದ ಮಂಟಪವನ್ನು ತಯಾರು ಮಾಡಬಹುದು.
  2. ಬಾಳೆ ಎಲೆಯಿಂದ ಅಲಂಕಾರ : ಬಾಳೆ ಎಲೆಯ ಅಲಂಕಾರವು ಬಜೆಟ್ ಫ್ರೆಂಡ್ಲಿ ಅಲಂಕಾರಗಳ ಸಾಲಿಗೆ ಸೇರಿದೆ. ಮನೆಯ ಸುತ್ತ ಮುತ್ತಲಿನಲ್ಲಿ ಸಿಗುವ ಈ ಬಾಳೆಎಲೆಗಳು ಹಾಗೂ ಮಾರಿಗೋಲ್ಡ್ ಹೂವಿನಿಂದ ಅಲಂಕಾರ ಮಾಡಿದರೆ ಸಿಂಪಲ್ ಲುಕ್ ನೊಂದಿಗೆ ಅರಶಿನ ಶಾಸ್ತ್ರಕ್ಕೆ ಕಳೆಯು ಬಂದಂತಾಗುತ್ತದೆ. ಈ ಮಾರಿಗೋಲ್ಡ್ ಹೂವಿನೊಂದಿಗೆ ಮಲ್ಲಿಗೆ ಹೂವನ್ನು ಸೇರಿಸಿಕೊಳ್ಳಬಹುದು.
  3. ಅಲಂಕಾರಕ್ಕೆ ಚಿತ್ತಾರವಿರುವ ಮಣ್ಣಿನ ಮಡಕೆಗಳನ್ನು ಬಳಸಿ : ಹಿನ್ನಲೆಯಲ್ಲಿ ಹಳದಿ ಬಣ್ಣದ ಪರದೆಗಳನ್ನು ಹಾಗೂ ಮಾರಿ ಗೋಲ್ಡ್ ಹೂವುಗಳನ್ನು ನೇತು ಹಾಕಿಕೊಳ್ಳಿ. ಅದರ ಮುಂದೆ ಮಣ್ಣಿನ ಮಡಕೆಯನ್ನು ಇಟ್ಟು ಅದರ ಒಳಗಿನಿಂದ ಮಾರಿ ಗೋಲ್ಡ್ ಹೂವಿನ ಮಾಲೆಯನ್ನು ಹಾಕಿ ಹೊರಗೆ ನೇತಾಡುವಂತೆ ಮಾಡಿದರೆ ಹಳದಿ ಶಾಸ್ತ್ರಕ್ಕೆ ಸರಳವಾಗಿ ಅಲಂಕಾರವು ಆದಂತೆ ಆಗುತ್ತದೆ.
  4. ತೂಗು ಉಯ್ಯಾಲೆಯ ಥೀಮ್ ಇರಲಿ : ಸರಳವಾಗಿ ಅರಶಿನ ಶಾಸ್ತ್ರವನ್ನು ಮಾಡುತ್ತಿದ್ದರೆ ತೂಗು ಉಯ್ಯಾಲೆಯ ಕಾನ್ಸೆಪ್ಟ್ ಬಳಸಿ. ವಧು ಅಥವಾ ವರನನ್ನು ಈ ಉಯ್ಯಾಲೆಯಲ್ಲಿ ಕೂರಿಸಿ ಶಾಸ್ತ್ರವನ್ನು ಮಾಡಬಹುದು. ಹೀಗಾಗಿ ಹಚ್ಚ ಹರಿಸಿನ ಪರಿಸರದ ನಡುವೆ ಉಯ್ಯಾಲೆಯನ್ನು ನೇತು ಹಾಕಿ. ಇದಕ್ಕೆ ಮಾರಿಗೋಲ್ಡ್ ಹೂವಿನಿಂದ ಅಲಂಕರಿಸಿದರೆ ಕಡಿಮೆ ಖರ್ಚಿನಲ್ಲಿ ಹಳದಿ ಶಾಸ್ತ್ರದ ಸಂಭ್ರಮವನ್ನು ಹೆಚ್ಚಿಸಬಹುದು.
  5. ಸೆಣಬಿನ ಬುಟ್ಟಿಯನ್ನು ಬಳಸಿ ಅಲಂಕಾರ ಮಾಡಿ : ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಸೆಣಬಿನ ಬುಟ್ಟಿಗಳನ್ನು ಹಳದಿ ಅಲಂಕಾರಕ್ಕಾಗಿ ಬಳಸಬಹುದು. ಹಿನ್ನೆಲೆಯಲ್ಲಿ ಮಾರಿಗೋಲ್ಡ್ ಹೂವಿನ ಮಾಲೆಗಳನ್ನು ನೇತು ಹಾಕಿಕೊಳ್ಳಿ. ಮಾರುಕಟ್ಟೆಯಲ್ಲಿರುವ ಸಿಗುವ ಈ ಸೆಣಬಿನ ಬುಟ್ಟಿಗಳಿಗೆ ಹಳದಿ ಬಣ್ಣವನ್ನು ಅಚ್ಚಿ, ಅದೇ ಬಣ್ಣದ ಹೂಗಳಿಂದ ಬುಟ್ಟಿಗಳನ್ನು ಅಲಂಕರಿಸಿಕೊಳ್ಳಬಹುದು. ಅದರೊಂದಿಗೆ ಈ ಬುಟ್ಟಿಯೊಳಗೆ ಈ ಹಳದಿ ಬಣ್ಣದ ಹೂವಿನ ದಳಗಳನ್ನು ತುಂಬಿಸಿ ವ್ಯವಸ್ಥಿತವಾಗಿ ಜೋಡಿಸಿಕೊಳ್ಳಿ. ವೇದಿಕೆಯೂ ಮತ್ತಷ್ಟು ಆಕರ್ಷಕವಾಗಿ ಕಾಣಲು ಎರಡು ಮೂಲೆಗಳಲ್ಲಿ ಹೂದಾನಿಗಳನ್ನು ಇರಿಸಿದರೆ ಅರಶಿನ ಶಾಸ್ತ್ರಕ್ಕೆ ವೇದಿಕೆಯು ರೆಡಿಯಾಗುತ್ತದೆ.
  6. ವರ್ಣರಂಜಿತ ವಾತಾವರಣವನ್ನು ಸೃಷ್ಟಿಸಲು ಹಳದಿ ಮತ್ತು ಕಿತ್ತಳೆ ಬಣ್ಣದ ದುಪಟ್ಟಾಗಳು, ಸೀರೆಗಳು ಅಥವಾ ಪರದೆಗಳಂತಹ ರೋಮಾಂಚಕ ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡರೆ ಉತ್ತಮ.
  7. ಶುಭ ಸಂಕೇತಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಲು ಪ್ರಕಾಶಮಾನವಾಗಿರುವ ಬಣ್ಣಗಳು, ಹೂವಿನ ದಳಗಳನ್ನು ಬಳಸಿ. ಅದಲ್ಲದೇ ಪ್ರವೇಶದ್ವಾರದಲ್ಲಿ ಅರಶಿನವನ್ನು ಬಳಸಿ ಸಾಂಪ್ರದಾಯಿಕ ರಂಗೋಲಿಯ ಚಿತ್ತಾರವನ್ನು ಮಾಡಿ. ಹಿತ್ತಾಳೆ ಹಾಗೂ ಚಿತ್ತಾರವಿರುವ ಮಣ್ಣಿನ ಮಡಕೆಗಳನ್ನು ಇಡುವುದು ಕೂಡ ಹಳದಿ ಸಮಾರಂಭವನ್ನು ಮತ್ತಷ್ಟು ಕಲರ್ ಫುಲ್ ಆಗಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:06 pm, Mon, 18 March 24