Hanuman Jayanthi 2024 Wishes : ಜೈ..ಜೈ ಹನುಮಾನ್, ಭಜರಂಗಿ ನಿಮ್ಮ ಜೀವನದಲ್ಲಿ ಅಚಲ ಚೈತನ್ಯ ತುಂಬಲಿ
ಶ್ರೀರಾಮನ ಪರಮ ಭಕ್ತನಾಗಿರುವ ಆಂಜನೇಯ ಜನ್ಮೋತ್ಸವವು ದೇಶಾದ್ಯಂತ ಹಿಂದೂಗಳು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್ 23 ರಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಈ ದಿನದಂದು ನಿಮ್ಮ ನೆಂಟರಿಸ್ಟರಿಗೆ, ಆಪ್ತರಿಗೆ ಹಾಗೂ ಸ್ನೇಹಿತರಿಗೆ ಈ ರೀತಿ ಸಂದೇಶಗಳನ್ನು ಕಳುಹಿಸಿ ಶುಭಾಶಯಗಳನ್ನು ಕೋರಬಹುದು.
ಹಿಂದೂ ಧರ್ಮದಲ್ಲಿ ಹನುಮ ಜಯಂತಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಪೂರ್ಣಿಮಾ ತಿಥಿಯ ಶುಕ್ಲ ಪಕ್ಷದ ಚೈತ್ರ ಮಾಸದಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಆಂಜನೇಯನ ದೇವಾಲಯಗಳಿಗೆ ವಿಶೇಷವಾದ ಪೂಜೆಯಿರುತ್ತದೆ. ಅದಲ್ಲದೇ, ಭಜನೆ, ಉಪವಾಸ, ವೃತ್ತ ಮಾಡುವ ಮೂಲಕ ರಾಮ ಭಕ್ತನ ಕೃಪೆಗೆ ಪಾತ್ರರಾಗುತ್ತಾರೆ.
ಹನುಮ ಜಯಂತಿಗೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು:
- ಹನುಮಾನ್ ಜಯಂತಿಯ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿ ತುಂಬಲಿ ಎಂದು ನಾನು ಬಯಸುತ್ತೇನೆ.
- ಜೈ..ಜೈ ಹನುಮಾನ್, ಎಲ್ಲರಿಗೂ ಹನುಮಾನ್ ಜಯಂತಿಯ ಶುಭಾಶಯಗಳು ಆ ಭಗವಂತ ನಿಮಗೆ, ನಿಮ್ಮ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ ನೀಡಿ ಸಂರಕ್ಷಿಸಲಿ.
- ಹನುಮಂತನ ಚೈತನ್ಯವು ನಿಮ್ಮ ಹೃದಯದಲ್ಲಿ ಅಚಲವಾದ ನಂಬಿಕೆ ಮತ್ತು ಅಚಲವಾದ ಚೈತನ್ಯವನ್ನು ತುಂಬಲಿ. ಹನುಮ ಜಯಂತಿಯ ಶುಭಾಶಯಗಳು!
- ಭಗವಾನ್ ಹನುಮಂತನ ಅಪರಿಮಿತ ಶಕ್ತಿಯು ನಿಮ್ಮ ಜೀವನದಲ್ಲಿ ನೀವು ಏನನ್ನಾದರೂ ಸಾಧಿಸಲು ಪ್ರೇರೇಪಿಸಲಿ. ಹನುಮ ಜಯಂತಿಯ ಶುಭಾಶಯಗಳು!
- ಭಗವಾನ್ ಹನುಮಂತನ ಅಚಲವಾದ ನಂಬಿಕೆಯು, ಯಶಸ್ಸಿನ ದಾರಿಯಲ್ಲಿ ನಿಮ್ಮನ್ನು ಮುನ್ನಡೆಸಲಿ. ಹನುಮ ಜಯಂತಿಯ ಶುಭಾಶಯಗಳು!
- ಹನುಮ ಜಯಂತಿಯಂದು ನಿಮ್ಮ ಕನಸು ನನಸಾಗಲಿ ಮತ್ತು ನಿಮ್ಮ ಕುಟುಂಬವು ಸುರಕ್ಷಿತವಾಗಿ ಮತ್ತು ಸಂತೋಷವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
- ರಾಮನ ಭಂಟ ಹನುಮಂತನು ಸದಾ ನಿಮಗೂ ನಿಮ್ಮ ಕುಟುಂಬಕ್ಕೂ ಒಳಿತನ್ನೇ ಕರುಣಿಸುವಂತಾಗಲಿ. ಹನುಮನ ಕೃಪೆಯು ಸದಾ ನಿಮ್ಮ ಮೇಲಿರಲಿ ನಿಮಗೂ, ನಿಮ್ಮ ಕುಟುಂಬಕ್ಕೂ ಹನುಮಾನ್ ಜಯಂತಿಯ ಶುಭಾಶಯಗಳು..
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ