Friendship Day Wishes: ಸ್ನೇಹ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಸ್ನೇಹಿತರ ದಿನದ ಶುಭಾಶಯಗಳು

| Updated By: shruti hegde

Updated on: Aug 01, 2021 | 9:54 AM

ಫ್ರೆಂಡ್​ಶಿಪ್​ ಡೇ: ಈ ಬಾರಿ ಆಗಸ್ಟ್ ತಿಂಗಳ 1ನೇ ತಾರೀಕಿನಂದು ಮೊದಲ ಭಾನುವಾರ ಬಂದಿರುವುದರಿಂದ ಇಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತಿದೆ. ಸ್ನೇಹ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಈ ದಿನದಂದು ಸ್ನೇಹಿತರಿಗೆ ನಿಮ್ಮ ಸಂದೇಶ ವಿಶೇಷವಾಗಿರಲಿ.

Friendship Day Wishes: ಸ್ನೇಹ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಸ್ನೇಹಿತರ ದಿನದ ಶುಭಾಶಯಗಳು
ಸಾಂದರ್ಭಿಕ ಚಿತ್ರ
Follow us on

ಪ್ರತಿ ಹೆಜ್ಜೆಯಲ್ಲಿ ಕೈ ಹಿಡಿದು ಮುನ್ನುಗ್ಗುತ್ತ ಸಾಧನೆ ದಾರಿ ಹಿಡಿಯಲು ಪ್ರತಿ ಹಂತದಲ್ಲಿಯೂ ಸಹಾಯ ಮಾಡಿದ ಸ್ನೇಹಿತರ ದಿನವಿಂದು. ಪ್ರತೀ ವರ್ಷ ಆಗಸ್ಟ್ ತಿಂಗಳ ಮೊದಲನೇ ಭಾನುವಾರ ಸ್ನೇಹಿತರ ದಿನವನ್ನು(Friendship Day) ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ ತಿಂಗಳ 1ನೇ ತಾರೀಕಿನಂದು ಮೊದಲ ಭಾನುವಾರ ಬಂದಿರುವುದರಿಂದ ಇಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತಿದೆ. ಸ್ನೇಹ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಈ ದಿನದಂದು ಸ್ನೇಹಿತರಿಗೆ ನಿಮ್ಮ ಸಂದೇಶ ವಿಶೇಷವಾಗಿರಲಿ.

ಪ್ರೀತಿ, ವಿಶ್ವಾಸದ ಬಾಳ್ವೆ ಸ್ನೇಹ. ಸ್ನೇಹವೆಂಬ ಸುಂದರ ಬಾಂಧವ್ಯಕ್ಕೆ ಎಂದೂ ಬೆಲೆ ಕಟ್ಟಲಾಗದು. ಚಿಕ್ಕ ವಯಸ್ಸಿನಿಂದಲೂ ಜೊತೆಗಿದ್ದ ನಮ್ಮೆಲ್ಲಾ ನೋವು, ಸಂತೋಷವನ್ನು ಹಂಚಿಕೊಂಡು ಸಂತೈಸುವ ಸ್ನೇಹಿತರಿಗೆ ಇಂದು ಒಳ್ಳೆಯ ಸಂದೇಶ ಕಳುಹಿಸುವ ಮೂಲಕ ಶುಭಾಶಯ ತಿಳಿಸಿ. ಇಂದು ತಿಳಿಸುವ ಶುಭಾಶಯ ಎಂದಿಗೂ ಸ್ನೇಹಿತರಿಗೆ ನೆನಪಿರುವಂತಿರಬೇಕು. ಇಂದು ನೀವು ಕೊಡುವ ಉಡುಗೊರೆಯು ವಿಶೇಷವಾಗಿರಲಿ. ಇಲ್ಲಿ ಕೆಲವು ವಿಶೇಷ ಸಂದೇಶಗಳಿವೆ. ನಿಮಗಿಷ್ಟವಾದಲ್ಲಿ ಈ ಸಂದೇಶಗಳನ್ನು ಕಳುಹಿಸುವ ಮೂಲಕ ಸ್ನೇಹಿತರ ದಿನದ ಶುಭಾಶಯ ನಿಮ್ಮದಾಗಿರಲಿ.

*ನಿಮ್ಮೊಡನೆ ಕಳೆದ ಕಾಲೇಜು ದಿನಗಳನ್ನು ಮರೆಯಲೇ ಸಾಧ್ಯವಿಲ್ಲ. ನನ್ನ ಜತೆಗೆ ಅಷ್ಟು ವರ್ಷಗಳ ಕಾಲವಿದ್ದ ನಿಮಗೆ ಧನ್ಯವಾದಗಳು. ಎಂದಿಗೂ ನನ್ನ ಜತೆಗಿರಿ. ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.

*ನಿಮ್ಮನ್ನು ಸ್ನೇಹಿತರಾಗಿ ಪಡೆದ ನಾನು ನಿಜವಾಗಿಯೂ ಅದೃಷ್ಟವಂತ. ನಿಮ್ಮನ್ನು ಭೇಟಿಯಾದ ಮೊದಲ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಷ್ಟದ ಸಮಯದಲ್ಲಿ ನನ್ನ ಜೊತೆಗಿದ್ದ ನಿಮಗೆ ಸ್ನೇಹಿತರ ದಿನದ ಶುಭಾಶಯಗಳು.

*ಬಾಲ್ಯದಿಂದಲೂ ನನ್ನ ಜೊತೆಗೆದ್ದೀರಾ. ಅದೆಷ್ಟೋ ದಿನ ಸಂತೋಷದಿಂದ ಹೊಟ್ಟೆಹುಣ್ಣಾಗುವಷ್ಟು ನಕ್ಕಿದ್ದೇವೆ. ಹತ್ತಿರದ ಪ್ರವಾಸ ತಾಣಗಳಿಗೆ ಹೋಗಿ ದಿನ ಕಳೆದಿದ್ದೇವೆ. ನನ್ನ ಆ ಖುಷಿಗೆ ಕಾರಣರಾದ ನಿಮಗೆ ಸ್ನೇಹಿತರ ದಿನದ ಶುಭಾಶಯಗಳು. ನಮ್ಮ ಈ ಸ್ನೇಹ ಎಂದಿಗೂ ಶಾಶ್ವತವಾಗಿರಲಿ. ನಿಮಗೆಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.

ಈ ದಿನದಂದು ನಿಮ್ಮೆಲ್ಲಾ ಸ್ನೇಹಿತರಿಗೆ ಶುಭಾಶಯ ತಿಳಿಸಿ. ಒಂದೊಳ್ಳೆಯ ಉಡುಗೊರೆಯನ್ನು ಕೊಟ್ಟು ಖುಷಿಯಿಂದ ಶುಭಾಶಯ ತಿಳಿಸಿ. ನಿಮ್ಮ ಆಪ್ತ ಸ್ನೇಹಿತರಿಗೆ ಸಿಹಿ ತಿನ್ನಿಸುವ ಮೂಲಕ ಈ ದಿನವನ್ನು ವಿಶೇಷವಾಗಿ ಸಂಭ್ರಮಿಸಿ. ಕಷ್ಟ ಕಾಲದಲ್ಲಿ ಕೈ ಹಿಡಿದು, ಮೆಟ್ಟಿಲೇರುವಾಗ ಹುರಿದುಂಬಿಸಿ, ಯಾವಾಗಲೂ ಸಂತೋಷವನ್ನೇ ಬಯಸುವ ಸ್ನೇಹಿತರಿಗೆ ಸ್ನೇಹಿತರ ದಿನದ ಶುಭಾಶಯಗಳು..

ಇದನ್ನೂ ಓದಿ:

International Friendship Day 2021: ಭಾರತದಲ್ಲಿ ಸ್ನೇಹಿತರ ದಿನದ ಆಚರಣೆ ಯಾವಾಗ ಮತ್ತು ಈ ದಿನದ ಮಹತ್ವ ತಿಳಿಯಿರಿ