Happy Makara Sankranti 2026: ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿ
ನಾಡಿನೆಲ್ಲೆಡೆ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯ ಸಂಭ್ರಮ. ಈ ದಿನ ಎಳ್ಳು ಬೆಲ್ಲ ಹಂಚುವ ಮೂಲಕ ಪ್ರೀತಿಯನ್ನು ಹಂಚಲಾಗುತ್ತದೆ. ಎಳ್ಳು ಬೆಲ್ಲದ ಜೊತೆಗೆ ಅರ್ಥಪೂರ್ಣವಾದ ಶುಭಾಶಯಗಳನ್ನು ತಿಳಿಸುವ ಮೂಲಕ ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿ. ನಿಮ್ಮ ಆಪ್ತರಿಗೆ ವರ್ಷದ ಮೊದಲ ಹಬ್ಬದ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಮುತ್ತಿನಂತಹ ಸಂದೇಶಗಳು.

ಮಕರ ಸಂಕ್ರಾಂತಿ 2026Image Credit source: Freepik
ನಾಡಿನೆಲ್ಲೆಡೆಲೆ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿಯ (Makara Sankranti) ಸಂಭ್ರಮ. ಈ ಹಬ್ಬದಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು, ತಟ್ಟೆಯಲ್ಲಿ ಎಳ್ಳು ಬೆಲ್ಲ, ಕಬ್ಬು ಅರಶಿನ ಕುಂಕುಮ ಇಟ್ಟುಕೊಂಡು ಪ್ರೀತಿ ಪಾತ್ರರಿಗೆ ಎಳ್ಳು ಬೆಲ್ಲವನ್ನು ಜೊತೆಗೆ ಪ್ರೀತಿಯನ್ನು ಹಂಚಲಾಗುತ್ತದೆ. ಎಳ್ಳು ಬೆಲ್ಲವನ್ನು ಹಂಚುವ ಜೊತೆಗೆ ನೀವು ನಿಮ್ಮ ಪ್ರೀತಿಪಾತ್ರರಿಗೆ, ನಿಮ್ಮ ಸ್ನೇಹಿತರಿಗೆ ಹಬ್ಬದ ಶುಭಾಶಯಗಳನ್ನು ಹೇಳಲು ಬಯಸಿದರೆ, ನಿಮಗಾಗಿ ಇಲ್ಲಿದೆ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯ ಅರ್ಥಪೂರ್ಣ ಶುಭಾಶಯಗಳು.
ಮಕರ ಸಂಕ್ರಾಂತಿಯ ಅರ್ಥಪೂರ್ಣ ಶುಭಾಶಯಗಳು:
- ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ, ಎಲ್ಲಾ ಕಹಿ ಮರೆತು ಒಳ್ಳೆಯ ಬಾಂಧವ್ಯ ಹೊಂದೋಣ ಮಕರ ಸಂಕ್ರಾಂತಿಯ ಶುಭಾಶಯಗಳು.
- ಜೀವನವು ನೋವು ನಲಿವುಗಳ ಸರಿಸಮ ಸಂಗಮವಾಗಿದೆ. ನೋವೆಂಬ ಎಳ್ಳು ಕಡಿಮೆಯಾಗಿ, ನಲಿವೆಂಬ ಬೆಲ್ಲ ಹೆಚ್ಚಾಗಲಿ, ದುಃಖವೆಲ್ಲಾ ಮಾಯವಾಗಿ ಸಿಹಿ ಬೆಲ್ಲದಂತಹ ಸಂತೋಷದ ಜೀವನ ನಿಮ್ಮದಾಗಲಿ. ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಕಡಲೆಕಾಯಿಯ ಸಾರದಂಥ ಜೀವನ ನಿಮ್ಮದಾಗಲಿ, ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್ಧವಾಗಿ ಬೆಳಗಲಿ. ಸುಗ್ಗಿ ಹಬ್ಬದ ಶುಭಾಶಯಗಳು.
- ಮಕರ ಸಂಕ್ರಾಂತಿಯ ಸೂರ್ಯನ ಬೆಂಕಿಯಲ್ಲಿ ನಿಮ್ಮ ಕಷ್ಟಗಳೆಲ್ಲಾ ಸುಟ್ಟು ಭಸ್ಮವಾಗಲಿ. ಸುಖ, ಸಂಪತ್ತು, ಸಂತೋಷದ ಬೆಳಕು ನಿಮ್ಮ ಮನೆಮನಗಳಲ್ಲಿ ಬೆಳಗಲಿ. ಸುಗ್ಗಿ ಹಬ್ಬದ ಶುಭಾಶಯಗಳು.
- ಈ ಸಂಕ್ರಾಂತಿ ನಿಮ್ಮ ಮನದಲ್ಲಿ ಹೊಸ ಭರವಸೆಗಳನ್ನು ಮೂಡಿಸಲಿ, ನಿಮ್ಮ ಮನೆಯನ್ನು ಸುಗ್ಗಿಯ ಸಂಪತ್ತಿನಿಂದ ತುಂಬಿಸಲಿ, ನೀವು ಕಂಡ ಕನಸುಗಳೆಲ್ಲಾ ಬೇಗನೆ ನನಸಾಗಲಿ. ಹ್ಯಾಪಿ ಸಂಕ್ರಾಂತಿ.
- ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ, ಉದಯ ರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿಯಾಗಲಿ. ಸಂಕ್ರಾಂತಿಯ ಶುಭಾಶಯಗಳು.
- ಸೂರ್ಯನು ಈ ದಿನ ತನ್ನ ಪಥ ಬದಲಿಸುವಂತೆ ಎಲ್ಲರ ಬಾಳಿನ ಪಥ ಬದಲಾಗಲಿ. ಸುಖ, ಸಂತೋಷ, ಸಮೃದ್ಧಿ, ಸಂಭ್ರಮ ಪಸರಿಸಲಿ.
- ನಿಮ್ಮ ಮನೆಯಲ್ಲಿ ಸುಖ, ಸಿರಿ ಸಂಪತ್ತು ಉಕ್ಕಿ ಹರಿಯಲಿ ಎಂದು ಆಶಿಸುತ್ತಾ ನಿಮಗೂ ನಿಮ್ಮ ಕುಟುಂಬ ಸದಸ್ಯರಿಗೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
- ಮಕರ ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ಸೂರ್ಯ ದೇವನು ಪ್ರತಿಯೊಬ್ಬರಿಗೂ ಸುಖ, ಶಾಂತಿ, ಸಮೃದ್ಧಿಯನ್ನು ನೀಡಲಿ ಎಂದು ಆಶಿಸುತ್ತೇನೆ.
- ನಿಮ್ಮ ಜೀವನವು ಯಾವಾಗಲೂ ಸಂತೋಷ, ಸಮೃದ್ಧಿ, ಪ್ರೀತಿಯಿಂದ ತುಂಬಿರಲಿ. ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
- ಹೊಸ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತಸ ಸಮೃದ್ಧಿ ಮತ್ತು ಸುಖ ಶಾಂತಿಯನ್ನು ದಯ ಪಾಲಿಸಲಿ ವರ್ಷದ ಮೊದಲ ಹಬ್ಬದ ಶುಭಾಶಯಗಳು.
- ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರ ಬಾಳಲ್ಲೂ ಹೊಸ ಉತ್ಸಾಹ, ನವ ಚೈತನ್ಯ, ನೆಮ್ಮದಿಯನ್ನು ಕರುಣಿಸಲಿ.
- ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ನೀವು ಕಂಡ ಕನಸು ನನಸಾಗಲಿ, ನೆಮ್ಮದಿಯ ಬಾಳು ನಿಮ್ಮದಾಗಲಿ. ಮಕರ ಸಂಕ್ರಾಂತಿಯ ಶುಭಾಶಯಗಳು.
- ನಿಮ್ಮ ಜೀವನವು ಸಂತೋಷ, ಪ್ರೀತಿ, ಸಮೃದ್ಧಿಯಿಂದ ತುಂಬಿರಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಶುಭಾಶಯಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




