
ಹೆಂಗಳೆಯರಿಗೆ ಬಳೆಗಳೇ (bangles) ಭೂಷಣ. ಅದರಲ್ಲೂ ನಮ್ಮ ಸಂಪ್ರದಾಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಬಳೆಗಳನ್ನು ಧರಿಸಲೇಬೇಕು ಎನ್ನಲಾಗುತ್ತದೆ. ವಿವಾಹಿತ ಮಹಿಳೆಯರು ಕೈಗಳಿಗೆ ಬಳೆಹಳನ್ನು ಧರಿಸುವುದು ಅವರ ವೈವಾಹಿಕತೆಯ ಸಂಕೇತವಾಗಿದೆ ಹೌದು ಸಿಂಧೂರ ಮತ್ತು ಮಂಗಳಸೂತ್ರದಂತೆಯೇ ವಿವಾಹಿತ ಮಹಿಳೆಯರಿಗೆ ಗಾಜಿನ ಬಳೆಗಳು ವೈವಾಹಿಕ ಆನಂದದ ಸಂಕೇತವಾಗುದೆ. ಮತ್ತು ಇದು ಸೌಭಾಗ್ಯದ ಸಂಕೇತ. ಬಳೆಗಳನ್ನು ಧರಿಸುವುದರಿಂದ ಪತಿಯ ಆಯಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಬಳೆಗಳ ಶಬ್ದವು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ. ಇದು ಮಾತ್ರವಲ್ಲದೆ ಗಾಜಿನ ಬಳೆಗಳನ್ನು ಧರಿಸುವುದರಿಂದ ಮಹಿಳೆಯ ಆರೋಗ್ಯವೂ ವೃದ್ಧಿಸುತ್ತದಂತೆ. ಹಾಗಿದ್ದರೆ ಗಾಜಿನ ಬಳೆಗಳನ್ನು ಧರಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಅನ್ನೋದನ್ನು ನೋಡೋಣ ಬನ್ನಿ.
ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ: ಬಳೆಗಳನ್ನು ಧರಿಸುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಹೌದು ಬಳೆಗಳು ಮಣಿಕಟ್ಟಿನ ಚರ್ಮಕ್ಕೆ ಉಜ್ಜುವ ಮೂಲಕ ಕೈಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ.
ಶಕ್ತಿಯನ್ನು ಹೆಚ್ಚಿಸುತ್ತದೆ: ಚಿನ್ನ, ಬೆಳ್ಳಿ ಮತ್ತು ಗಾಜಿನಂತಹ ಲೋಹಗಳಿಂದ ಮಾಡಿದ ಬಳೆಗಳನ್ನು ಧರಿಸುವುದರಿಂದ ಸಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ಗಾಜಿನ ಬಳೆಗಳ ಶಬ್ದವು ಮನೆ ಮತ್ತು ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಬಳೆಗಳು ಮನಸ್ಸು ಮತ್ತು ಮೆದುಳಿಗೆ ಸಕಾರಾತ್ಮಕ ಕಂಪನಗಳನ್ನು ಒದಗಿಸುತ್ತವೆ.
ಮಾನಸಿಕ ಸಮತೋಲನ: ವೈಜ್ಞಾನಿಕ ಪುರಾವೆಗಳ ಪ್ರಕಾರ, ಬಳೆಗಳನ್ನು ಧರಿಸುವುದರಿಂದ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳುಲು ಸಹಾಯ ಮಾಡುತ್ತದೆ. ಇದಲ್ಲದೆ, ಬಳೆಗಳು ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತವೆ.
ಹಾರ್ಮೋನು ಸಮತೋಲನ: ಮಹಿಳೆಯರ ದೇಹವು ಪುರುಷರಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ ಮತ್ತು ಅವರ ಹಾರ್ಮೋನುಗಳ ಮಟ್ಟವು ಹೆಚ್ಚು ವೇಗವಾಗಿ ಏರಿಳಿತಗೊಳ್ಳುತ್ತದೆ. ಬಳೆಗಳನ್ನು ಧರಿಸುವುದರಿಂದ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ಇದನ್ನೂ ಓದಿ: ಗಿಡಮೂಲಿಕೆಗಳ ರಾಣಿ ತುಳಸಿಯನ್ನು ಮನೆಯಲ್ಲಿ ನೆಡುವುದು ಏಕೆ ಮುಖ್ಯ ನೋಡಿ
ಭಾವನಾತ್ಮಕ ಸಮತೋಲನ:ಬಳೆಗಳ ಝಣಝಣ ಶಬ್ದವು ಮಹಿಳೆಯರಿಗೆ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಳೆಗಳನ್ನು ಧರಿಸುವುದರಿಂದ ಮಹಿಳೆಯರು ಭಾವನಾತ್ಮಕವಾಗಿ ಸಮತೋಲನದಲ್ಲಿರುತ್ತಾರೆ. ಬಳೆಗಳನ್ನು ಧರಿಸುವ ಮಹಿಳೆಯರು ಇತರ ಮಹಿಳೆಯರಿಗಿಂತ ತಮ್ಮ ಭಾವನೆಗಳನ್ನು ನಿಯಂತ್ರಿಸುವಲ್ಲಿ ಉತ್ತಮರು ಎಂದು ಸಂಶೋಧನೆ ತೋರಿಸಿದೆ.
ಆಯಾಸವನ್ನು ನಿವಾರಿಸುತ್ತದೆ: ಬಳೆಗಳಿಂದ ಉಂಟಾಗುವ ಘರ್ಷಣೆಯು ದೇಹದಲ್ಲಿ ಶಕ್ತಿಯನ್ನು ಉತ್ಪಾದಿಸುತ್ತದೆ, ಇದು ಮಹಿಳೆಯರಿಗೆ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮಾನಸಿಕ ಸಮತೋಲನ: ಬಳೆಗಳನ್ನು ಧರಿಸುವುದರಿಂದ ಮಹಿಳೆಯರಲ್ಲಿ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ವೈಜ್ಞಾನಿಕವಾಗಿ, ಗಾಜಿನ ಬಳೆಗಳ ಶಬ್ದವು ಪರಿಸರದಲ್ಲಿ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ ಮತ್ತು ಅದರ ಸುತ್ತಲೂ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ