health tips: ಪ್ಲಮ್ ಹಣ್ಣಿನಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ ! ಅದು ಹೇಗೆ ?

health tips: ಪ್ಲಮ್ ಹಣ್ಣುಗಳು ನೋಡಲು ಸುಂದರವಾಗಿದೆ ಮತ್ತು ಇದರ ರುಚಿಯು ತುಂಬಾ ಅದ್ಭುತವಾಗಿದೆ. ಇದರ ಜೊತೆಗೆ ಈ ಹಣ್ಣು ಆರೋಗ್ಯಕ್ಕೂ ವಿವಿಧ ರೀತಿಯಲ್ಲಿ ಪ್ರಭಾವವನ್ನು ಉಂಟು ಮಾಡುತ್ತದೆ. ಪ್ಲಮ್ ನ್ನು ಪ್ರತಿದಿನ ತಿನ್ನುವುದರಿಂದ ನಿಮ್ಮ ಆರೋಗ್ಯವನ್ನು ಹೇಗೆ ವೃದ್ಧಿಸುತ್ತದೆ.

health tips: ಪ್ಲಮ್ ಹಣ್ಣಿನಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ ! ಅದು ಹೇಗೆ ?
Plum fruit
Edited By:

Updated on: Jun 28, 2022 | 4:00 PM

ಪ್ಲಮ್ ಹಣ್ಣು ನಿಮ್ಮ ದೇಹದ ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಪ್ಲಮ್ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಹಣ್ಣು ಚೀನಾದಿಂದ ಹುಟ್ಟಿಕೊಂಡಿರುವ ಹಣ್ಣು. ಇದು 20 ಪ್ರಭೇದಗಳನ್ನು ಹೊಂದಿದ್ದು , ಇದು ರಸಭರಿತವಾದ ಹಣ್ಣುಗಳಲ್ಲಿ ಒಂದಾಗಿದೆ. ಇದರ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡುವ ಹಣ್ಣು ಕೂಡ ಹೌದು, ಆರೋಗ್ಯಕ್ಕೆ ಬೇಕಾದ ಎಲ್ಲ ಶಕ್ತಿಯನ್ನು ಈ ಹಣ್ಣು ನೀಡುತ್ತದೆ. ಈ ಮಾಸದಲ್ಲಿ ಬೇರೆ ಬೇರೆ ಪ್ರಭೇದಗಳ ಹಣ್ಣುಗಳನ್ನು ನಾವು ಇಲ್ಲಿ ಕಾಣಬಹುದು. ಪ್ರೂನ್ ಪ್ಲಮ್, ವಿಕ್ಟೋರಿಯಾ ಪ್ಲಮ್, ಯೂರೋಪಿಯನ್ ಪ್ಲಮ್ ಗಳನ್ನು ನಾವು ಇಲ್ಲಿ ಕಾಣಬಹುದು. ಈ ಹಣ್ಣುಗಳು ನೋಡಲು ಸುಂದರವಾಗಿದೆ ಮತ್ತು ಇದರ ರುಚಿಯು ತುಂಬಾ ಅದ್ಭುತವಾಗಿದೆ. ಇದರ ಜೊತೆಗೆ ಈ ಹಣ್ಣು ಆರೋಗ್ಯಕ್ಕೂ ವಿವಿಧ ರೀತಿಯಲ್ಲಿ ಪ್ರಭಾವವನ್ನು ಉಂಟು ಮಾಡುತ್ತದೆ. ಪ್ಲಮ್ ನ್ನು ಪ್ರತಿದಿನ ತಿನ್ನುವುದರಿಂದ ನಿಮ್ಮ ಆರೋಗ್ಯವನ್ನು ಹೇಗೆ ವೃದ್ಧಿಸುವ ಬಗ್ಗೆ ಇಲ್ಲಿದೆ ಮಾಹಿತಿ:

ಪೋಷಕಾಂಶವನ್ನು ಹೆಚ್ಚು ಮಾಡುತ್ತದೆ 

ಪ್ಲಮ್ ಗಳು ಪೋಷಕಾಂಶಗಳ  ಸಮೃದ್ಧ ಮೂಲವಾಗಿದೆ. ಈ ಹಣ್ಣು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಹೆಚ್ಚಿನ ವಿಟಮಿನ್ ಗಳನ್ನು  ಹೊಂದಿದೆ. ವಿಟಮಿನ್ ಎ, ಸಿ ಅಥವಾ ಕೆ, ಈ ಹಣ್ಣಿನಲ್ಲಿದೆ. ನಿಮ್ಮ ದೇಹವು ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಾಕಷ್ಟು ಶಕ್ತಿಯನ್ನು ನೀಡುತ್ತದೆ.

ಇದನ್ನೂ ಓದಿ
ಬೆಂಗಳೂರು ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ! ಟೆಂಪೋ, ಬಿಎಂಟಿಸಿ ಬಸ್ ನಡುವೆ ಸಿಲುಕಿ ಆಟೋ ಜಖಂ
36 ವರ್ಷದ ಬಳಿಕ ಮರುಕಳಿಸಿತು ಇತಿಹಾಸ; ಕಮಲ್​ ಹಾಸನ್​-ಚಿರಂಜೀವಿ ಸ್ನೇಹದ ರೆಟ್ರೋ ಫೋಟೋ ವೈರಲ್
ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ಚುನಾವಣೆ: ಇಂದು ಮೂರು ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Chicago Shootings: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು, ಚಿಕಾಗೊದಲ್ಲಿ ಐವರು ಸಾವು, 16 ಮಂದಿಗೆ ಗಾಯ

ಹೃದಯ ಕಾಯಿಲೆಗೆ ಉತ್ತಮ 

ಪ್ಲಮ್ ಅನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಮತ್ತು ಗಂಭೀರ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಹೆಚ್ಚಿನ ಫೈಬರ್ ಮತ್ತು ಆಂಟಿಆಕ್ಸಿಡೆಂಟ್ ಅಂಶದಿಂದಾಗಿ, ಪ್ಲಮ್ ಎಲ್ಲಾ ರೀತಿಯ ಹೃದಯ ಕಾಯಿಲೆಗಳಿಂದ ಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ.  ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ ದೇಹದಲ್ಲಿನ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಇದನ್ನು ಸೇರಿಸುವುದರಿಂದ ಹೃದಯವನ್ನು  ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ: ಅಜೀರ್ಣಕ್ಕೆ ಅಜವಾನ್! ಔಷಧಿ ಅಂಗಡಿಗೆ ಹೋಗುವ ಮೊದಲು ಅಡುಗೆಮನೆಗೆ ಹೋಗಿ

ನಾರಿನ ಹಣ್ಣುಗಳು 

ಪ್ಲಮ್ಸ್ ಫೈಬರ್ ಗಳಿಂದ ತುಂಬಿರುತ್ತದೆ ಮತ್ತು ಇದು ಜೀರ್ಣಾಂಗ ವ್ಯವಸ್ಥೆಗೆ ಉತ್ತಮವಾಗಿರುತ್ತದೆ. ಇದರಲ್ಲಿ ನಾರಿನ ಅಂಶವಿದ್ದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಅದು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.  ಮಲಬದ್ಧತೆ ಮತ್ತು ಅಜೀರ್ಣದಿಂದ ಪರಿಹಾರವನ್ನು ನೀಡುತ್ತದೆ.

ಮೂಳೆಯ ಬಲವನ್ನು ಸುಧಾರಿಸುತ್ತದೆ

ಪ್ಲಮ್‌ಗಳು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಇದು ನಿಮ್ಮ ಮೂಳೆಯ ಬಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಆಸ್ಟಿಯೊಪೊರೋಸಿಸ್, ಸಂಧಿವಾತ ಮತ್ತು ಆಸ್ಟಿಯೋಪೆನಿಯಾದಂತಹ ಕಾಯಿಲೆಗಳಿಗೆ ಬಲಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ರಂಜಕ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅಂಶವು ಮೂಳೆಗಳ ರಚನೆಗೆ ಸಹಾಯ ಮಾಡುತ್ತದೆ.

ಮುಖದ ನೈಸರ್ಗಿಕ ಹೊಳಪನ್ನು ಹೆಚ್ಚು ಮಾಡುತ್ತದೆ

ಪ್ಲಮ್ ನಿಮ್ಮ ಮುಖದ ನೈಸರ್ಗಿಕ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ಲಮ್‌ನಲ್ಲಿರುವ ಉತ್ಕರ್ಷಣ ನಿರೋಧಕ ಅಂಶವು ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಚರ್ಮಕ್ಕೆ ಹಾನಿಯಾಗುವುದನ್ನು ತಡೆಯುತ್ತದೆ. ಹಣ್ಣಿನಲ್ಲಿರುವ ವಿಟಮಿನ್ ಎ ಅಂಶವು ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಮೊಡವೆ ಕಲೆಗಳನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಮುಖದ ಕಪ್ಪು ಕಲೆಗಳನ್ನು ತೆಗೆದುಹಾಕುವುದರ ಜೊತೆಗೆ ಚರ್ಮದ ಬಣ್ಣವನ್ನು ಸುಧಾರಿಸುತ್ತದೆ.

Published On - 3:59 pm, Tue, 28 June 22