ಬೆಳಿಗ್ಗೆ ಬೇಗನೆ ಏಳುವುದು ಇವತ್ತಿನ ತಿಂಡಿ ಏನು ಮಾಡಬೇಕು ಎಂದು ಯೋಚಿಸುವುದು ದೊಡ್ಡ ಕೆಲಸವಾಗಿರುತ್ತದೆ. ಒಂದೇ ಬಗೆಯ ತಿಂಡಿಗಳನ್ನು ಮಾಡಿದರೆ ಮಕ್ಕಳಂತೂ ಮುಟ್ಟಿ ನೋಡುವುದೇ ಇಲ್ಲ. ಹೀಗಾಗಿ ಹೆಂಗಳೆಯರು ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಟ್ರೈ ಮಾಡುತ್ತಿರುತ್ತಾರೆ. ಆದರೆ ಬೆಳಗ್ಗಿನ ವೇಳೆ ಆರೋಗ್ಯಕರ ಮತ್ತು ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದರಿಂದ ದಿನವಿಡಿ ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ. ಹೀಗಾಗಿ ಮುಂಜಾನೆಯ ತಿಂಡಿಗೆ ಈ ಆರೋಗ್ಯಕರವಾದ ವಿವಿಧ ಬಗೆಯ ದೋಸೆಯನ್ನು ಮಾಡಿ ಮನೆ ಮಂದಿಗೆಲ್ಲಾ ನೀಡಬಹುದು.
* ಮುಕ್ಕಾಲು ಕಪ್ ರಾಗಿ ಹಿಟ್ಟು,
* ಅರ್ಧ ಕಪ್ ಅಕ್ಕಿ ಹಿಟ್ಟು,
* ಕಾಲು ಕಪ್ ರವೆ
* ಮೊಸರು
* ಒಂದು ಚಮಚ ಜೀರಿಗೆ ಪುಡಿ
* ಮೆಣಸಿನ ಪುಡಿ
* ಕರಿಬೇವಿನ ಎಲೆಗಳು
* ಎಣ್ಣೆ
* ಕ್ಯಾರೆಟ್ ತುರಿ
* ಕೊತ್ತಂಬರಿ ಸೊಪ್ಪು
* ಹಸಿಮೆಣಸಿನಕಾಯಿ
* ಉಪ್ಪು
* ಮೊದಲಿಗೆ ರಾಗಿ ಹಿಟ್ಟು, ಅಕ್ಕಿ ಹಿಟ್ಟು, ರವೆ, ಉಪ್ಪು, ಮೊಸರು ಮತ್ತು ಸಾಕಷ್ಟು ನೀರು ಬೆರೆಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
* ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಂಡು ಹದಿನೈದು ನಿಮಿಷಗಳ ಕಾಲ ಹಾಗೆ ಇಡಬೇಕು. ಆ ಬಳಿಕ ಅದಕ್ಕೆ ಜೀರಿಗೆ, ಮೆಣಸಿನ ಪುಡಿ, ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಬೇಕು.
* ಆ ಬಳಿಕ ಒಲೆಯ ಮೇಲೆ ಪ್ಯಾನ್ ಇಟ್ಟು, ಬಿಸಿಯಾದ ಬಳಿಕ ದೋಸೆ ಹಿಟ್ಟನ್ನು ಹೋಯ್ದು, ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಟ್ಟರೆ ರುಚಿಕರವಾದ ರಾಗಿ ದೋಸೆ ಸವಿಯಲು ಸಿದ್ಧ.
* ಮುಕ್ಕಾಲು ಕಪ್ ರೋಲ್ಲ್ಡ್ ಓಟ್ಸ್
* ಅರ್ಧ ಕಪ್ ಅಕ್ಕಿ ಹಿಟ್ಟು
* ಕಾಲು ಕಪ್ ರವೆ
* ಒಂದು ಚಮಚ ಜೀರಿಗೆ
* ಒಂದು ಚಮಚ ಮೆಣಸಿನ ಪುಡಿ
* ಶುಂಠಿ
* ಒಂದು ಮೆಣಸಿನಕಾಯಿ
* ಸ್ವಲ್ಪ ಕತ್ತರಿಸಿಟ್ಟ ಈರುಳ್ಳಿ
* ಎರಡು ಚಮಚ ಕೊತ್ತಂಬರಿ ಸೊಪ್ಪು
* ಕರಿಬೇವಿನ ಎಲೆಗಳು
* ಎಣ್ಣೆ
* ರುಚಿಗೆ ತಕ್ಕಷ್ಟು ಉಪ್ಪು
* ನೀರು
* ಒಂದು ಬಾಣಲೆಗೆ ಓಟ್ಸ್ ಅನ್ನು ಹಾಕಿ ಗರಿಗರಿಯಾಗುವವರೆಗೆ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ತಣ್ಣಗಾದ ಬಳಿಕ ಪುಡಿ ಮಾಡಿಕೊಳ್ಳಿ.
* ನಂತರದಲ್ಲಿ ಆ ಪಾತ್ರೆಗೆ ಅಕ್ಕಿ ಹಿಟ್ಟು, ರವಾ, ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಉಂಡೆಯಾಗದಂತೆ ಕಲಸಿಕೊಳ್ಳಿ.
* ಆ ಬಳಿಕ ಇದಕ್ಕೆ ಕತ್ತರಿಸಿಟ್ಟ ಹಸಿಮೆಣಸಿನ ಕಾಯಿ, ಶುಂಠಿ, ಮೆಣಸಿನ ಪುಡಿ, ಜೀರಿಗೆ, ಈರುಳ್ಳಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
* ಇಪ್ಪತ್ತು ನಿಮಿಷಗಳ ಕಾಲ ಹಿಟ್ಟನ್ನು ಹಾಗೆ ಮುಚ್ಚಿಟ್ಟು, ಆ ಬಳಿಕ ಕಾವಲಿಗೆ ಎಣ್ಣೆ ಹಾಕಿ ದೋಸೆ ಹೋಯ್ದರೆ ಗರಿಗರಿಯಾದ ಓಟ್ಸ್ ದೋಸೆ ಸವಿಯಲು ಸಿದ್ಧ.
* ಅರ್ಧ ಕಪ್ ತುರಿದಿಟ್ಟ ಬೀಟ್ರೂಟ್
* ಒಂದು ಕಪ್ ಅಕ್ಕಿ ಹಿಟ್ಟು
* ಕಾಲು ಕಪ್ ರವೆ
* ಒಂದು ಈರುಳ್ಳಿ
* ಎರಡು ಮೆಣಸಿನಕಾಯಿ
* ಕೊತ್ತಂಬರಿ ಸೊಪ್ಪು
* ಕರಿಬೇವಿನ ಎಲೆಗಳು
* ಸ್ವಲ್ಪ ಜೀರಿಗೆ
* ಎಣ್ಣೆ
* ನೀರು
* ರುಚಿಗೆ ತಕ್ಕಷ್ಟು ಉಪ್ಪು
ಇದನ್ನೂ ಓದಿ: ಈ ಐದು ಸಂದರ್ಭದಲ್ಲಿ ಅಪ್ಪಿತಪ್ಪಿಯೂ ತೂಕ ಚೆಕ್ ಮಾಡಿಕೊಳ್ಳಬೇಡಿ
* ಮೊದಲು ಮಿಕ್ಸಿ ಜಾರಿಗೆ ಬೀಟ್ರೂಟ್ ನೀರು ಬೆರೆಸಿ ಚೆನ್ನಾಗಿ ರುಬ್ಬಿಕೊಳ್ಳಿ.
* ಆ ಬಳಿಕ ಈ ಬೀಟ್ರೂಟ್ ಮಿಶ್ರಣವನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿಕೊಳ್ಳಿ. ಇದಕ್ಕೆ ಅಕ್ಕಿ ಹಿಟ್ಟು, ರವಾ, ಉಪ್ಪು ಹಾಗೂ ನೀರು ಸೇರಿಸಿ ಚೆನ್ನಾಗಿ ಚೆನ್ನಾಗಿ ಮಿಶ್ರಣ ಮಾಡಿ.
* ನಂತರದಲ್ಲಿ ಕತ್ತರಿಸಿಟ್ಟ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆಗಳು ಮತ್ತು ಜೀರಿಗೆ ಸೇರಿಸಿ ಹತ್ತು ನಿಮಿಷ ಹಾಗೆಯೇ ಬಿಡಿ.
* ತದನಂತರ ಸ್ಟವ್ ಮೇಲೆ ತವಾ ಇಟ್ಟು, ಬಿಸಿಯಾಗುತ್ತಿದ್ದಂತೆಯೇ ಅದರ ಮೇಲೆ ಹಿಟ್ಟನ್ನು ಹೋಯ್ದು ಎರಡು ಬದಿ ಕಾಯಲು ಬಿಟ್ಟರೆ ಗರಿ ಗರಿಯಾದ ದೋಸೆ ರೆಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ