ಅಕ್ಕಿ ಹಿಟ್ಟಿನೊಂದಿಗೆ ನೀವು ಮಾಡಬಹುದಾದ 5 ರುಚಿಕರವಾದ ತಿಂಡಿಗಳು ಇಲ್ಲಿವೆ, ಪ್ರಯತ್ನಿಸಿ

|

Updated on: Apr 14, 2023 | 6:15 AM

ನಿಮ್ಮ ಅಡುಗೆ ಮನೆಯಲ್ಲಿ ಹೆಚ್ಚುವರಿ ಅಕ್ಕಿ ಹಿಟ್ಟನ್ನು ಏನು ಮಾಡಬೇಕೆಂದು ನಿಮಗೆ ತಿಳಿದಿಲ್ಲದಿದ್ದರೆ, ಈ 5 ರುಚಿಕರವಾದ ತಿಂಡಿಗಳನ್ನ ನೀವು ಮಾಡಿಕೊಳ್ಳಬಹುದು.

ಅಕ್ಕಿ ಹಿಟ್ಟಿನೊಂದಿಗೆ ನೀವು ಮಾಡಬಹುದಾದ 5 ರುಚಿಕರವಾದ ತಿಂಡಿಗಳು ಇಲ್ಲಿವೆ, ಪ್ರಯತ್ನಿಸಿ
ಸಾಂದರ್ಭಿಕ ಚಿತ್ರ
Follow us on

ಅಕ್ಕಿ ಹಿಟ್ಟನ್ನು ಅನೇಕ ಅಡುಗೆಗಳಲ್ಲಿ ಬಳಸಲಾಗುತ್ತದೆ. ಅನೇಕ ರುಚಿಕರವಾದ ತಿಂಡಿಗಳು, ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ ಮತ್ತು ಸಿಹಿತಿಂಡಿಗಳನ್ನು ತಯಾರಿಸಲು ಬಳಸಲಾಗುವ ಒಂದು ರೀತಿಯ ಪ್ರಧಾನ ಪದಾರ್ಥವಾಗಿದೆ. ಮತ್ತು ಅಕ್ಕಿ ಹಿಟ್ಟನ್ನು ಬಿಳಿ ಅಕ್ಕಿ ಅಥವಾ ಕಂದು ಅಕ್ಕಿಯಿಂದ ತಯಾರಿಸಬಹುದು. ನೀವು ಅದನ್ನು ಯಾವುದೇ ಸ್ಥಳೀಯ ಅಂಗಡಿ ಅಥವಾ ಸೂಪರ್​ ರ್ಮಾರ್ಕೆಟ್ನಲ್ಲಿ ಸಿಗುತ್ತದೆ. ಅಥವಾ ನೀವು ಇದನ್ನ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು.

ಅಕ್ಕಿ ಹಿಟ್ಟಿನಿಂದ ನೀವು ಮಾಡಬಹುದಾದ 5 ಟೇಸ್ಟಿ ಭಕ್ಷ್ಯಗಳು ಇಲ್ಲಿವೆ ನೋಡಿ

1. ಅಕ್ಕಿ ಹಿಟ್ಟು ದೋಸೆ

ದೋಸೆಯು ಭಾರತದ ಅತ್ಯಂತ ಪ್ರಸಿದ್ದ ಅಕ್ಕಿ ಆಧಾರಿತ ಆಹಾರಗಳಲ್ಲಿ ಒಂದಾಗಿದೆ. ಇದು ದಕ್ಷಿಣ ಭಾರತದ ಜನಪ್ರಿಯ ಖಾದ್ಯವಾಗಿದ್ದು ಇದನ್ನು ಎಲ್ಲರೂ ಇಷ್ಟಪಡುತ್ತಾರೆ. ಇದನ್ನು ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲಾಗುತ್ತದೆ. ನೀವು ಹೊರಗಿನಿಂದ ಸುಲಭವಾಗಿ ದೋಸೆಯನ್ನು ಆರ್ಡ್​ರ್​ ಮಾಡಬಹುದಾದರೂ ಅದನ್ನು ಮನೆಯಲ್ಲಿ ಮಾಡಿಕೊಳ್ಳುವುದು ಹೆಚ್ಚು ಖುಷಿಯನ್ನ ಕೊಡುತ್ತದೆ. ನೀವು ಅಕ್ಕಿ ಹಿಟ್ಟಿನೊಂದಿಗೆ ಗರಿಗರಿಯಾದ ದೋಸಾವನ್ನು ಮಾಡಿ ಸವಿಯಿರಿ.

2. ಅಕ್ಕಿ ಹಿಟ್ಟಿನ ಮೋದಕ

ಮೋದಕ ಜನಪ್ರಿಯ ಮಹಾರಾಷ್ಟ್ರದ ಸಿಹಿಯಾಗಿದ್ದು, ಇದು ಡಂಪ್ಲಿಂಗ್ ಅನ್ನು ಹೋಲುತ್ತದೆ. ಈ ಟೇಸ್ಟಿ ಇಂಡಿಯನ್ ಸ್ವೀಟ್ ಅನ್ನು ಗಣೇಶ ಚತುರ್ಥಿಯ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ. ಮೋದಕವು ಮೃದುವಾದ ಹೊದಿಕೆಯನ್ನು ಹೊಂದಿದ್ದು ಅದನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಮೋದಕದ ಹೂರಣವು ತುರಿದ, ಹುರಿದ ತೆಂಗಿನಕಾಯಿ ಮತ್ತು ಬೆಲ್ಲವನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ:Food Made With Leaves: ಎಲೆಗಳನ್ನು ಬಳಸಿ ತಯಾರಿಸುವ ಸಾಂಪ್ರದಾಯಿಕ ತಿಂಡಿಗಳು ಇಲ್ಲಿವೆ

3. ಅಕ್ಕಿ ಹಿಟ್ಟು ಪಕೋಡ

ಹೌದು ಅಕ್ಕಿ ಹಿಟ್ಟಿನ ಪಕೋಡಗಳು ಹೊರಗಿನಿಂದ ಗರಿಗರಿಯಾಗಿರುತ್ತವೆ ಮತ್ತು ಒಳಗಿನಿಂದ ಮೃದುವಾಗಿರುತ್ತವೆ. ಈರುಳ್ಳಿ ಮತ್ತು ಆಲೂಗಡ್ಡೆಗಳಂತಹ ಹೋಳು ಮಾಡಿದ ತರಕಾರಿಗಳನ್ನು ಅಕ್ಕಿ ಮತ್ತು ನೀರಿನ ದಪ್ಪ ಹಿಟ್ಟಿಗೆ ಸೇರಿಸಿ, ಮೆಣಸಿನ ಪುಡಿ, ಧನಿಯಾ ಪುಡಿ, ಉಪ್ಪು ಇತ್ಯಾದಿ ಮಸಾಲೆಗಳೊಂದಿಗೆ ಇದನ್ನು ತಯಾರಿಸಲಾಗುತ್ತದೆ. ಇವುಗಳನ್ನು ನಂತರ ಕಾದ ಎಣ್ಣೆಯಲ್ಲಿ ಹುರಿಯಲಾಗುತ್ತದೆ ಮತ್ತು ಕಂದು ಬಣ್ಣಕ್ಕೆ ತಿರುಗಿದಾಗ, ಅವು ಬಿಸಿ ಬಿಸಿಯಾದ ಚಾಯ್ ಜೊತೆಗೆ ಟೀ-ಟೈಮ್ ಸ್ನ್ಯಾಕ್ ಆಗಿ ಬಿಸಿಯಾಗಿ ಸವಿಯಬಹುದು.

4. ಅಕ್ಕಿ ಹಿಟ್ಟಿನ ಪ್ಯಾನ್​ಕೇಕ್​ ರೇಸಿಪಿಗಳು

ನಾವೆಲ್ಲರೂ ಸಂಸ್ಕರಿಸಿದ ಹಿಟ್ಟಿನಿಂದ ಮಾಡಿದ ವಿಶಿಷ್ಟವಾದ ಪ್ಯಾನ್‌ಕೇಕ್‌ಗಳನ್ನು ರುಚಿ ನೋಡಿರಬೇಕು. ಆದರೆ ಅಕ್ಕಿ ಹಿಟ್ಟಿನೊಂದಿಗೆ ಈ ರುಚಿಕರವಾದ ಪಾಕವಿಧಾನವನ್ನು ತಯಾರಿಸಲು ನೀವು ಯೋಚಿಸಿದ್ದೀರಾ? ಹೌದು ಇದಕ್ಕೆ ಅಕ್ಕಿ ಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್, ಹಾಲು ಮತ್ತು ಮೊಟ್ಟೆಗಳು ಬೇಕಾಗುತ್ತವೆ. ಎಲ್ಲವನ್ನೂ ಮಿಶ್ರಣ ಮಾಡಿ ಮತ್ತು ಸ್ವಲ್ಪ ಹಿಟ್ಟನ್ನು ಬಿಸಿ ಪ್ಯಾನ್ ಮೇಲೆ ಸುರಿಯಿರಿ. ಈ ಸಿಹಿ ಮತ್ತು ರುಚಿಕರವಾದ ಖಾದ್ಯವನ್ನು ತಯಾರಿಸಲು ಕೇವಲ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

5. ಅಕ್ಕಿ ಹಿಟ್ಟು ರೋಟಿ(ರೊಟ್ಟಿ)

ರೋಟಿ ಭಾರತದಲ್ಲಿ ಇದನ್ನು ತಯಾರಿಸಲು ಬಳಸುವ ಸಾಂಪ್ರದಾಯಿಕ ಪದಾರ್ಥವೆಂದರೆ ಗೋಧಿ ಹಿಟ್ಟು, ಮೈದಾ ಇತ್ಯಾದಿ. ಅಕ್ಕಿ ಹಿಟ್ಟನ್ನು ಮೃದುವಾದ ರೊಟ್ಟಿಗಳನ್ನು ತಯಾರಿಸಲು ಸಹ ಬಳಸಬಹುದು. ಈ ಅಕ್ಕಿ ಹಿಟ್ಟಿನ ರೊಟ್ಟಿಯೊಂದಿಗೆ ಸಾಂಬಾರ್​, ಬಾಜಿಗಳೊಂದಿಗೆ ಸವಿಯಬಹುದು.