Kitchen Cleaning Tips: ಅಡುಗೆ ಮನೆಯಲ್ಲಿನ ಎಣ್ಣೆ ಜಿಡ್ಡು ತೆಗೆದು ಹಾಕಲು ಸಿಂಪಲ್ ಟಿಪ್ಸ್ ಇಲ್ಲಿದೆ

| Updated By: ಅಕ್ಷತಾ ವರ್ಕಾಡಿ

Updated on: Dec 11, 2022 | 6:03 PM

ಆದರೆ ಇನ್ನು ಮುಂದೆ ನಿಮ್ಮ ಅಡುಗೆ ಕೋಣೆಯನ್ನು ಶುಚಿಯಾಗಿರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್. ಇದರಿಂದ ನೀವೂ ಸುಲಭವಾಗಿ ಅಡುಗೆ ಕೋಣೆಯಲ್ಲಿನ ಎಣ್ಣೆ ಜಿಡ್ಡನ್ನು ಸುಲಭವಾಗಿ ತೊಡೆದುಹಾಕಬಹುದು.

Kitchen Cleaning Tips: ಅಡುಗೆ ಮನೆಯಲ್ಲಿನ ಎಣ್ಣೆ ಜಿಡ್ಡು ತೆಗೆದು ಹಾಕಲು ಸಿಂಪಲ್ ಟಿಪ್ಸ್ ಇಲ್ಲಿದೆ
ಸಾಂದರ್ಭಿಕ ಚಿತ್ರ
Image Credit source: Dan Dan The Carpet Man
Follow us on

ಪ್ರತಿಯೊಂದು ಗೃಹಿಣಿಯರಿಗೂ ಅಡುಗೆ ಮಾಡುವುದಕ್ಕಿಂತ ಅಡುಗೆ ಮನೆ(Kitchen) ಯನ್ನು ಶುಚಿಗೊಳಿಸುವುದೇ ಒಂದು ದೊಡ್ಡ ಕೆಲಸ. ಯಾಕೆಂದರೆ ಆಹಾರ ಪದಾರ್ಥಗಳಲ್ಲಿ ಬಳಸಿದ ಎಣ್ಣೆಯ ಜಿಡ್ಡು ಸಂಪೂರ್ಣವಾಗಿ ಶುಚಿಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಜೊತೆಗೆ ಸಾಂಬಾರು ಹಾಗೂ ಕೆಲವೊಂದು ಮಸಾಲೆ ಪದಾರ್ಥಗಳ ಕಲೆ ಅಡುಗೆ ಕೋಣೆಯಲ್ಲಿ ಹಾಗೆಯೇ ಉಳಿದು ಬಿಡುತ್ತದೆ ಇದರಿಂದ ಮನೆಗೆ ನೆಂಟರು ಬಂದಂತಹ ಸಂದರ್ಭದಲ್ಲಿ ಮುಜುಗರಕ್ಕೀಡು ಮಾಡುತ್ತದೆ.  ಆದರೆ ಇನ್ನು ಮುಂದೆ ನಿಮ್ಮ ಅಡುಗೆ ಕೋಣೆಯನ್ನು ಶುಚಿಯಾಗಿರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್. ಇದರಿಂದ ನೀವೂ ಸುಲಭವಾಗಿ ಅಡುಗೆ ಕೋಣೆಯಲ್ಲಿನ ಎಣ್ಣೆ ಜಿಡ್ಡನ್ನು ಸುಲಭವಾಗಿ ತೊಡೆದುಹಾಕಬಹುದು.

ನಿಮ್ಮ ಮನೆಯಲ್ಲಿ ಪ್ರತಿ ದಿನ ಬಳಸುವ ಪದಾರ್ಥಗಳನ್ನು ಬಳಸಿ ಸುಲಭವಾಗಿ ಅಡುಗೆ ಕೋಣೆಯನ್ನು ಕಲೆ ರಹಿತ ಕೋಣೆಯನ್ನಾಗಿ ಮಾಡಬಹುದು. ನೀರು, ಅಡುಗೆ ಸೋಡಾ, ವಿನೇಗರ್ ಅಥವಾ ನಿಂಬೆ ರಸ, ಸೋಪಿನ ಪೌಡರ್ ಅಥವಾ ಡಿಶ್ ವಾಶ್ ಜೆಲ್ ಜೊತೆಗೆ ಸ್ಕ್ರಬ್ಬರ್ ಬಳಸಿ . ಕೇವಲ ಇಷ್ಟು ಪದಾರ್ಥಗಳನ್ನು ನಿಮ್ಮ ಅಡುಗೆ ಕೋಣೆಯನ್ನು ಶುಚಿಗೊಳಿಸಿ.

ಇದನ್ನೂ ಓದಿ: ನೀವು ಮಲಗುವ ಭಂಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು

ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ಮೊದಲಿಗೆ ಒಂದು ಚಿಕ್ಕ ಪಾತ್ರೆ ಅಥವಾ ಬೌಲ್ ಗೆ 3 ಚಮಚ ನೀರು ಹಾಕಿ, 1/2 ಚಮಚ ಅಡುಗೆ ಸೋಡಾ, 1/2 ಚಮಚ ವಿನೇಗರ್. ನೀವು ವಿನೇಗರ್ ಇಲ್ಲದ್ದಿದ್ದರೆ ನಿಂಬೆ ರಸವನ್ನು ಕೂಡ ಬಳಸಬಹುದು. ಇದರ ಜೊತೆಗೆ ಅರ್ಧ ಚಮಚ ಸೋಪಿನ ಪೌಡರ್ ಅಥವಾ ಡಿಶ್ ವಾಶ್ ಜೆಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ಸ್ಕ್ರಬ್ಬರ್ ತೆಗೆದು ಕೊಂಡು ಈಗಾಗಲೇ ಮಾಡಿಟ್ಟ ಮಿಶ್ರಣದಲ್ಲಿ ಅದ್ದಿ ತೆಗೆಯಿರಿ. ಈಗ ಎಣ್ಣೆಯ ಜಿಡ್ಡು ಅಥವಾ ಕಲೆ ಇರುವ ಜಾಗದಲ್ಲಿ ತಿಕ್ಕಿ. ಉತ್ತಮ ಫಲಿತಾಂಶವನ್ನು ನೀವು ಕಂಡುಕೊಳ್ಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 6:00 pm, Sun, 11 December 22