Pregnancy Tips: ಮೂವತ್ತರ ನಂತರ ಗರ್ಭಧಾರಣೆಯ ಅಪಾಯ ಹಾಗೂ ಪ್ರಯೋಜನಗಳ ಕುರಿತು ತಿಳಿಯಿರಿ

| Updated By: ಅಕ್ಷತಾ ವರ್ಕಾಡಿ

Updated on: Dec 16, 2022 | 11:49 AM

ಮೂವತ್ತರ ನಂತರ ಗರ್ಭಧರಿಸುವುದು ಎಷ್ಟು ಸೂಕ್ತ? ಇದರಿಂದಾಗುವ ಅಪಾಯಗಳೇನು? ಮತ್ತು ಎಷ್ಟು ಪ್ರಯೋಜನಗಳಿವೆ? ಈ ಪ್ರಶ್ನೆಗಳಿಗೆ ಆರೋಗ್ಯ ತಜ್ಞರು ನೀಡಿರುವ ಸೂಕ್ತ ಉತ್ತರಗಳು ಇಲ್ಲಿವೆ.

Pregnancy Tips: ಮೂವತ್ತರ ನಂತರ ಗರ್ಭಧಾರಣೆಯ ಅಪಾಯ ಹಾಗೂ ಪ್ರಯೋಜನಗಳ ಕುರಿತು ತಿಳಿಯಿರಿ
ಸಾಂದರ್ಭಿಕ ಚಿತ್ರ
Image Credit source: Shutterstock
Follow us on

ಇಂದಿನ ಬದಲಾದ ಜೀವನಶೈಲಿ(Lifestyle)ಯಿಂದಾಗಿ ಮಹಿಳೆಯರು ಮೂರು ಗೋಡೆಯೊಳಗೆ ಜೀವನ ನಡೆಸುವುದನ್ನು ಬಿಟ್ಟು ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದಾರೆ. ಅವರ ಗುರಿ, ವೃತ್ತಿಜೀವನ, ಸಂಬಂಧಗಳ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಗರ್ಭಧಾರಣೆ ವಿಷಯಕ್ಕೆ ಬಂದಾಗ ಮೂವತ್ತರ ನಂತರ ಗರ್ಭಧರಿಸುವುದು ಎಷ್ಟು ಸೂಕ್ತ? ಇದರಿಂದಾಗುವ ಅಪಾಯಗಳೇನು? ಮತ್ತು ಎಷ್ಟು ಪ್ರಯೋಜನಗಳಿವೆ? ಈ ಪ್ರಶ್ನೆಗಳಿಗೆ ಆರೋಗ್ಯ ತಜ್ಞರು ನೀಡಿರುವ ಸೂಕ್ತ ಉತ್ತರಗಳು ಇಲ್ಲಿವೆ.

ನೀವು ಈಗ  30ರ ಹರೆಯದಲ್ಲಿದ್ದು ಗರ್ಭಧರಿಸಲು ಪ್ರಯತ್ನಿಸುತ್ತಿದ್ದೀರಾ? 30 ರ ನಂತರ ಗರ್ಭಿಣಿಯಾಗುವುದರ ಪ್ರಯೋಜನಗಳು, ಅಪಾಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಯಶಸ್ವಿ ಗರ್ಭಧಾರಣೆಯ ಸಾಧ್ಯತೆಗಳು ಕುರಿತು ಸಲಹೆ ಇಲ್ಲಿದೆ.

ಮೂವತ್ತರ ನಂತರ ಗರ್ಭಧಾರಣೆಯ ಅಪಾಯಗಳು:
ಆರೋಗ್ಯ ತಜ್ಞರ ಪ್ರಕಾರ ಸಂತಾನೋತ್ಪತ್ತಿಗೆ ಸರಿಯಾದ ಪ್ರಾರಂಭದ ಸಮಯ 25. ಈ ವಯಸ್ಸಿನಲ್ಲಿ ಹೆಣ್ಣು ಸಂತಾನೋತ್ಪತ್ತಿಯ ಬಗ್ಗೆ ತಿಳುವಳಿಕೆಯನ್ನು ಹೊಂದಿರುತ್ತಾಳೆ. 30 ರಿಂದ 35 ವರೆಗೆಯೂ ಮಹಿಳೆ ಗರ್ಭಧರಿಸುವುದು ಕೂಡ ಸೂಕ್ತವಾಗಿದೆ. ಆದರೆ ಮಹಿಳೆಯು 35 ವರ್ಷಕ್ಕೆ ತಿರುಗಿದರೆ, ಗರ್ಭಿಣಿಯಾಗುವುದು ಹೆಚ್ಚು ಕಷ್ಟಕರವಾಗುತ್ತದೆ. ಆದರೂ ಅನೇಕ ಮಹಿಳೆಯರು ತಮ್ಮ 40 ರ ನಂತರವೂ ಕೂಡ ಗರ್ಭಿಣಿಯಾಗುತ್ತಾರೆ. ಅಮೇರಿಕನ್ ಕಾಲೇಜ್ ನ ಸ್ತ್ರೀರೋಗ ಶಾಸ್ತ್ರದ ಪ್ರಕಾರ, 10 ದಂಪತಿಗಳಲ್ಲಿ 1 ದಂಪತಿಗಳು ಮಾತ್ರ 40 ವರ್ಷ ವಯಸ್ಸಿನೊಳಗೆ ಗರ್ಭಧರಿಸುತ್ತಾರೆ ಎಂದು ತಿಳಿದುಬಂದಿದೆ.

ಅಮೆರಿಕನ್ ಸೊಸೈಟಿ ರಿಪ್ರೊಡಕ್ಟಿವ್ ಮೆಡಿಸಿನ್ ಸಂಸ್ಥೆ ಹೇಳುವ ಪ್ರಕಾರ, ಅಂಡಾಶಯದ ಆರೋಗ್ಯ ಹಾಗೂ ಮೊಟ್ಟೆಗಳ ಗುಣಮಟ್ಟವು ಕಾಲಾಂತರದಲ್ಲಿ ಕಡಿಮೆಯಾಗುತ್ತಾ ಬರುತ್ತದೆ. ಅದು ಗರ್ಭಪಾತ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಇನ್ನಿತರ ದೀರ್ಘ ಸಮಯದ ಆರೋಗ್ಯ ಸಮಸ್ಯೆಯು ಗರ್ಭಾವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಹಾಗಾಗಿ ಆದಷ್ಟು 22 ವರ್ಷದಿಂದ 30 ವರ್ಷದ ಒಳಗಿನ ಅವಧಿಯಲ್ಲಿ ಗರ್ಭಾವಸ್ಥೆ ಹೊಂದಲು ಉತ್ತಮ ಸಮಯ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಪ್ರಯಾಣ ಸುರಕ್ಷಿತವೇ ತಜ್ಞರ ಸಲಹೆ ಇಲ್ಲಿದೆ

30ರ ನಂತರದ ಗರ್ಭಧಾರಣೆಯ ಪ್ರಯೋಜನಗಳು:

ದೈಹಿಕ ಸ್ಥಿತಿ:

30 ರ ಹರೆಯದ ಅನೇಕ ಮಹಿಳೆಯರು ತಮ್ಮ 20ರ ವಯಸ್ಸಿಗೆ ಹೋಲಿಸಿದರೆ ಸಾಕಷ್ಟು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ತಿಳುವಳಿಕೆಯನ್ನು ಹೊಂದಿರುತ್ತಾರೆ. ಜೊತೆಗೆ ವೃತಿ ಜೀವನದಲ್ಲಿಯೂ 20ನೆಯ ವಯಸ್ಸಿಗೆ ಹೋಲಿಸಿದರೆ ಸಾಕಷ್ಟು ಹೊಂದಿಕೊಂಡಿರುತ್ತಾರೆ. ಆದ್ದರಿಂದ ಯಾವುದೇ ರೀತಿಯಲ್ಲಿ, ಆರೋಗ್ಯಕರ ಗರ್ಭಧಾರಣೆಯನ್ನು ಹೊಂದಲು ದೈಹಿಕ ಸಾಮರ್ಥ್ಯವು ಒಂದು ಪ್ರಮುಖ ಅಂಶವಾಗಿದೆ.

ಆರೋಗ್ಯಕರ ಜೀವನಶೈಲಿ:

30 ರ ಹೊತ್ತಿಗೆ, ಹೆಚ್ಚಿನ ಮಹಿಳೆಯರು ಹೆಚ್ಚು ಸ್ಥಿರವಾದ ದಿನಚರಿಯೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಸಹ ನಡೆಸುತ್ತಾರೆ. ಸಾಮಾನ್ಯವಾಗಿ 20ರ ಹರೆಯದಲ್ಲಿ ಕಾಫಿ ಮತ್ತು ನೂಡಲ್ಸ್‌ನ ಆಹಾರಕ್ರಮವನ್ನು ಅನುಸರಿಸುತ್ತಿದ್ದರೂ, ಅನೇಕ ಮಹಿಳೆಯರು ತಮ್ಮ 30 ರ ಹರೆಯದಲ್ಲಿದ್ದಾಗ ಆರೋಗ್ಯಕರ ಅಡುಗೆ ಮತ್ತು ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ಉತ್ತಮ ಗುಣಮಟ್ಟದ ದಿನಸಿ ವಸ್ತುಗಳನ್ನು ಖರೀದಿಸಲು ಶಕ್ತರಾಗಿರುತ್ತಾರೆ. ಆರೋಗ್ಯಕರ ಜೀವನಶೈಲಿಯು ಆರೋಗ್ಯಕರ ಗರ್ಭಧಾರಣೆಗೆ ಸಹಾಯಕವಾಗಿದೆ.

ಇದನ್ನೂ ಓದಿ: ಸಂಜೆಯ ಚಹಾದೊಂದಿಗೆ ರಸ್ಕ್ ಸೇವಿಸುವ ಅಭ್ಯಾಸವಿದ್ದರೆ ಈ ಸ್ಟೋರಿ ನೀವು ಓದಲೇಬೇಕು

ಆರ್ಥಿಕ ಸ್ಥಿರತೆ:

20 ರ ಹರೆಯದ ಅನೇಕ ಮಹಿಳೆಯರು ತಮ್ಮ ಜೀವನದಲ್ಲಿ ಏನು ಮಾಡಬೇಕೆಂದು ಸಹ ತಿಳಿದಿರುವುದಿಲ್ಲ. ನಿಮ್ಮ 20 ರ ಹರೆಯದಲ್ಲಿ ಶಿಕ್ಷಣ, ವೃತ್ತಿಜೀವನ ಸ್ಥಿರವಾದ ಸಂಬಳ, ಹಣವನ್ನು ಉಳಿಸುವುದರ ಕಡೆ ಹೆಚ್ಚಿನ ಗಮನಹರಿಸಬೇಕಿದೆ. 30 ರ ಸಮಯದಲ್ಲಿ ನೀವು ಆರ್ಥಿಕವಾಗಿ ಸ್ವಾವಲಂಬಿಯಾಗಿರುವುದರಿಂದ ನಿಮ್ಮ ಮಗುವಿನ ಆರೋಗ್ಯ ಹಾಗೂ ಆರೈಕೆಗೆ ಬೇಕಾಗುವಷ್ಟು ಆರ್ಥಿಕ ಸ್ಥಿರತೆಯನ್ನು ಹೊಂದಿರುತ್ತೀರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: