Updated on: Dec 15, 2022 | 7:05 PM
ಇರುಳ್ಳಿಯು ಕೂದಲಿಗೆ ಬೇರಿನಿಂದಲೇ ಪೋಷಣೆಯನ್ನು ನೀಡಿ. ನಿಮ್ಮ ಕೂದಲು ಸದೃಡವಾಗಿ ಬೆಳೆಯುವಂತೆ ಮಾಡುತ್ತದೆ.
ಇರುಳ್ಳಿಯ ಹೇರ್ ಪ್ಯಾಕ್: ಒಂದು ಹಸಿ ಇರುಳ್ಳಿಯನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ಹಾಕಿ ನೀರು ಹಾಕದೇ ಚೆನ್ನಾಗಿ ರುಬ್ಬಿಕೊಳ್ಳಿ. ಈ ಪೇಸ್ಟನ್ನು ತೆಲೆಗೆ ಹಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ.
ಇರುಳ್ಳಿ ರಸ: ಇರುಳ್ಳಿಯನ್ನು ಚೆನ್ನಾಗಿ ರುಬ್ಬಿ ಅದರ ರಸವನ್ನು ಒಂದು ಲೋಟದಲ್ಲಿ ತೆಗೆದಿಡಿ. ನಂತರ ಹತ್ತಿ ಉಂಡೆ ತೆಗೆದುಕೊಂಡು ಇರುಳ್ಳಿಯ ರಸದಲ್ಲಿ ಅದ್ದಿ ನೆತ್ತಿಗೆ ಹಚ್ಚಿ. ಕೂದಲಿಗೆ ಬುಡಕ್ಕೆ ಹಚ್ಚಿ 30 ನಿಮಿಷಗಳ ಕಾಲ ಮಸಾಜ್ ಮಾಡಿ.
ಇರುಳ್ಳಿಯ ಎಣ್ಣೆ: ಒಂದು ಇರುಳ್ಳಿಯನ್ನು ತೆಗೆದುಕೊಂಡು ಚೆನ್ನಾಗಿ ಕತ್ತರಿಸಿ ಬೇಯಿಸಿ ಎಣ್ಣೆಯಲ್ಲಿ ತಯಾರಿಸಿ ಕೂಡ ತಲೆಗೆ ಹಚ್ಚಬಹುದು.
ಇರುಳ್ಳಿ ಎಣ್ಣೆ ತಯಾರಿಸುವ ವಿಧಾನ ಇಲ್ಲಿದೆ. ಒಂದು ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಕೊಚ್ಚಿ ಇಟ್ಟ ಇರುಳ್ಳಿ ಹಾಕಿ ನಂತರ ಅದಕ್ಕೆ ಮೆಂತ್ಯ ಎಣ್ಣೆ ಹಾಗೂ ಆಲಿವ್ ಎಣ್ಣೆ ಹಾಕಿ ಎಲ್ಲವನ್ನು ಚೆನ್ನಾಗಿ ಬೇಯಿಸಿ. ಎಣ್ಣೆ ತಯಾರಿಸಿ.
ಇದನ್ನು ನಿಮ್ಮ ಕೂದಲಿನ ಬುಡಕ್ಕೆ ಹಂಚುವುದರಿಂದ ತಲೆಯ ಹೊಟ್ಟು, ಕೂದಲು ಉದುರುವಿಕೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.