AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಮನೆಯನ್ನು ನೀಟ್​ಆಗಿ ಇರಿಸಿಕೊಳ್ಳಲು ಹೀಗೆ ಮಾಡಿ

ಅಡುಗೆ ಮಾಡುವಾಗ ಬೇಕಾದ ವಸ್ತುಗಳು ತಕ್ಷಣ ಕಣ್ಣಿಗೆ ಕಂಡರೆ ಸಮಸ್ಯೆ ಇರುವುದಿಲ್ಲ. ಇಲ್ಲವಾದರೆ ಮತ್ತೆ ಗೊಂದಲಗಳು ಉಂಟಾಗುತ್ತದೆ. ಹೀಗಾಗಿ ನಿಮ್ಮ ಅಡುಗೆ ಮನೆಯ ವಸ್ತುಗಳನ್ನು ಸರಿಯಾಗಿ ಜೋಡಿಸಿಟ್ಟುಕೊಳ್ಳಿ.

ಅಡುಗೆ ಮನೆಯನ್ನು ನೀಟ್​ಆಗಿ ಇರಿಸಿಕೊಳ್ಳಲು ಹೀಗೆ ಮಾಡಿ
ಸಾಂಕೇತಿಕ ಚಿತ್ರ
TV9 Web
| Updated By: Pavitra Bhat Jigalemane|

Updated on: Feb 17, 2022 | 12:18 PM

Share

ಸಾಮಾನ್ಯವಾಗಿ ಹೆಂಗಳೆಯರ ನೆಚ್ಚಿನ ತಾಣ ಅಡುಗೆ ಮನೆ (Kitchen). ಅಡುಗೆ ಮನೆಯಲ್ಲಿ ರುಚಿರುಚಿಯಾದ ಅಡುಗೆ ತಯಾರಿಸಿ ಪ್ರೀತಿ ಪಾತ್ರರಿಗೆ ಬಡಿಸುವುದು ಎಲ್ಲರಿಗೂ ಇಷ್ಟ ಆದರೆ ಅದೇ ರೀತಿ ಅಡುಗೆ ಮನೆಯನ್ನು ನೀಟ್​ (Neat) ಆಗಿ ಇಟ್ಟುಕೊಳ್ಳುವುದು ಕೂಡ ಅಷ್ಟೇ ಸವಾಲಿನ ಕೆಲಸವಾಗಿರುತ್ತದೆ. ಚಿಕ್ಕ ಅಡುಗೆಮನೆಯಾಗಿದ್ದರೂ ಎಲ್ಲ ವಸ್ತುಗಳನ್ನು ಒಪ್ಪವಾಗಿ ಇಟ್ಟುಕೊಳ್ಳುವುದೂ ಒಂದು ಕಲೆ. ಅಡುಗೆ ಮಾಡುವಾಗ ಬೇಕಾದ ವಸ್ತುಗಳು ತಕ್ಷಣ ಕಣ್ಣಿಗೆ ಕಂಡರೆ ಸಮಸ್ಯೆ ಇರುವುದಿಲ್ಲ. ಇಲ್ಲವಾದರೆ ಮತ್ತೆ ಗೊಂದಲಗಳು ಉಂಟಾಗುತ್ತದೆ. ಹೀಗಾಗಿ ನಿಮ್ಮ ಅಡುಗೆ ಮನೆಯ ವಸ್ತುಗಳನ್ನು ಸರಿಯಾಗಿ ಜೋಡಿಸಿಟ್ಟುಕೊಳ್ಳಿ. ಅದಕ್ಕಾಗಿ ನಿಮಗೆ ಇಲ್ಲಿದೆ ಸಿಂಪಲ್​ ಟಿಪ್ಸ್​(Simple Tips).

ವಸ್ತುಗಳನ್ನು ತೂಗುಹಾಕಿ: ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಜಾಗ ಚಿಕ್ಕದಾಗಿರುತ್ತದೆ. ಹೀಗಿದ್ದಾಗ ಇದ್ದ ಜಾಗದಲ್ಲಿಯೇ ಎಲ್ಲಾ ವಸ್ತುಗಳನ್ನು  ಸರಿಯಾಗಿ ಜೋಡಿಸಿಟ್ಟುಕೊಳ್ಳುವುದು ಮುಖ್ಯ. ಆದ್ದರಿಂದ ಸೌಟು ಹಾಗೂ ಇನ್ನಿತರ ವಸ್ತುಗಳನ್ನು ಗೋಡೆಗೆ ತೂಗುಹಾಕಿ ಇದರಿಂದ ನಿಮಗೆ ಹೆಚ್ಚು ಜಾಗ ಸಿಗುತ್ತದೆ.

ಹಣ್ಣುಗಳನ್ನು ಸರಿಯಾಗಿ ಜೋಡಿಸಿ: ಮಾರುಕಟ್ಟೆಯಿಂದ ತಂದ ಹಣ್ಣುಗಳನ್ನು ಮೊದಲು ಸ್ವಚ್ಛವಾಗಿ ತೊಳೆದು, ಪ್ರಿಡ್ಜ್​ನಲ್ಲಿ ಜೋಡಿಸಿಕೊಳ್ಳಿ, ಬಾಳೆಹಣ್ಣಿನಂತಹವುಗಳು ಹೆಚ್ಚು ದಿನ ಉಳಿಯುವುದಿಲ್ಲ. ಹೀಗಾಗಿ ಅದನ್ನು ನೀಟಾಗಿ ಜೋಡಿಸಿಡಿ. ಹಾಳಾಗುವ ಮೊದಲು ಸೇವಿಸಿ. ಬಾಳೆಹಣ್ಣು ಬೇಗನೆ ಹಣ್ಣಾಗಲು ಪೇಪರ್​ ಬ್ಯಾಗ್​ನಲ್ಲಿ ಕಟ್ಟಿಡಿ.

ಮೊಟ್ಟೆಯ ಚಿಪ್ಪುಗಳ ನಿರ್ವಹಣೆ: ನಿಮ್ಮ ಕಯಗಳು ಒದ್ದೆಯಾಗಿದ್ದೆ ಮೊಟ್ಎಯ ಚಿಪ್ಪುಗಳು ಕೈಗೆ ಅಂಟಿಕೊಳ್ಳುತ್ತವೆ. ಹೀಗಾಘಿ ಅದನ್ನು ತಡೆಯಲು, ಕಯಗಳನ್ನು ಒಣಗಿಸಿ ಮೊಟ್ಟೆಯನ್ನು ಬಳಸಿ. ಕೇಕ್​ ಹಾಗೂ ಇನ್ನಿತರ ಮೊಟ್ಟೆಯ ಆಹಾರಗಳನ್ನು ತಯಾರಿಸುವಾಗ ಅಡುಗೆಮನೆಯಲ್ಲಿ ಬೀಳದಂತೆ ಎಚ್ಚರವಹಿಸಿ

ತಾಜಾ ಚಟ್ನಿಗಳನ್ನು ತಯಾರಿಸಿಕೊಳ್ಳಿ: ಭಾರತದಲ್ಲಿ ಸಾಮಾನ್ಯವಾಗಿ ಹಸಿರು ಚಟ್ಇನಗಳ ಬಳಕೆ ಹೆಚ್ಚು. ಅದಷ್ಟು ಅದನ್ನು ತಾಜಾವಾಗಿ ತಯಾರಿಸಿಕೊಳ್ಳಿ. ಉದಾಹರಣೆಗೆ ಕೊತ್ತಂಬರಿ ಸೊಪ್ಪಿನ ಚಟ್ನಿ, ಶುಂಠಿ, ಬೆಳ್ಳಿ ಪೇಸ್ಟ್​ ಸೇರಿದಂತೆ ಇನ್ನಿತರ  ಪೇಸ್ಟ್​ಗಳನ್ನು ತಾಜಾವಾಗಿ ತಯಾರಿಸಿಕೊಳ್ಳಿ ಇದರಿಂದ ಹಾಳಾದ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬಹುದು.

ಚೀಸ್​ ಬಳಕೆಯ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳಿ: ನೀವು ಚೀಸ್​ ಪ್ರಿಯರಾಗಿದ್ದರೆ ಅದನ್ನು ತುರಿಯುವಾಗ  ತುರಿಯುವ ಮಣೆಗೆ ಸಿಲುಕಿಕೊಳ್ಳಬಹುದು. ಹೀಗಾಗಿ ಅದನ್ನು ಸ್ವಚ್ಛವಾಗಿರಿಸಿಕೊಳ್ಳಿ. ಅದಕ್ಕೆ ಚೀಸ್​ ಅನ್ನು ತುರಿಯುವ ಮೊದಲು ಸ್ವಲ್ಪ ಎಣ್ಣೆ ಸವರಿಕೊಳ್ಳಿ. ಚೀಸ್​ನಅ್ನು ತುರಿಯುವ ಬದಲು ಸಣ್ಣದಾಗಿ ಕತ್ತರಿಸಿಕೊಳ್ಳಿ. ಇದರಿಂದ ಪಾತ್ರೆಗಳು ಕೊಳೆಯಾಗುವುದನ್ನು ತಪ್ಪಿಸಬಹುದು.

ಇದನ್ನೂ ಓದಿ:

Stomach Bloating: ಹೊಟ್ಟೆ ಉಬ್ಬುವ ಸಮಸ್ಯೆಗೆ ಕಾರಣ ಏನು? ಈ ಸಮಸ್ಯೆಗೆ ಮನೆಮದ್ದಿನಲ್ಲಿಯೇ ಇದೆ ಪರಿಹಾರ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್