Saris In Winters: ಚಳಿಗಾಲದಲ್ಲಿ ಸೀರೆಯನ್ನು ಧರಿಸಿ ಸ್ಟೈಲಿಷ್​ ಆಗಿ ಕಾಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್​​

ಸೀರೆಯ ಮೇಲೆ ಫುಲ್​ ಸ್ಲೀವ್​ ಟೀ ಶರ್ಟ್​ ಧರಿಸುವುದರಿಂದ ನಿಮಗೆ ಕ್ಯಾಶುವಲ್​ ಲುಕ್​ ನೀಡುತ್ತದೆ. ಟೀ ಶರ್ಟ್​ ರೀತಿಯ ಬ್ಲೌಸ್​ಗಳು ನಿಮ್ಮ ಸೀರೆಗೂ ಹೊಸ ಲುಕ್​ ನೀಡುತ್ತದೆ.

Saris In Winters: ಚಳಿಗಾಲದಲ್ಲಿ ಸೀರೆಯನ್ನು ಧರಿಸಿ ಸ್ಟೈಲಿಷ್​ ಆಗಿ ಕಾಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್​​
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Jan 22, 2022 | 1:27 PM

ಭಾರತೀಯ ಸಂಸ್ಕ್ರತಿಯಲ್ಲಿ  ಸೀರೆಗೆ ಅತ್ಯುನ್ನತ ಸ್ಥಾನವಿದೆ. ಪುರಾತನ ಕಾಲದಿಂದಲೂ ಸೀರೆ ಹೆಂಗಳೆಯರ ನೆಚ್ಚಿನ ಉಡುಪು ಸೀರೆ (Sari). ಕಾಲ ಬದಲಾದಂತೆ ಸೀರೆಯ ಶೈಲಿಯಲ್ಲಿ ಬದಲಾವಣೆಯಾಗಿದೆ. ವಿವಿಧ ವಸ್ತ್ರ ವಿನ್ಯಾಸಕಾರರ ಕೈಚಳಕದಿಂದ ಸೀರೆಗೂ ಮಾಡರ್ನ್​ ಟಚ್​ (Modern Touch) ಸಿಕ್ಕಿದೆ. ಪ್ರತಿದಿನವೂ ಟ್ರೆಂಡ್ (Trend)​ ಬದಲಾಗುತ್ತಲೇ ಇರುತ್ತದೆ. ಅದೇ ರೀತಿ ಸೀರೆಯ ಟ್ರೆಂಡ್ ಕೂಡ ಬದಲಾಗುತ್ತದೆ. ಇತ್ತೀಚೆಗೆ ಮಾಡರ್ನ್​ ಡ್ರೆಸ್​ ಇಷ್ಟಪಡುವ ಕಾಲೇಜು ಹುಡುಗಿಯರಿಗೂ ಸೀರೆ ನೆಚ್ಚಿನ ಉಡುಗೆ. ವಿವಿಧ ರೀತಿಯ ಪ್ಯಾಷನ್ (Fashion)​, ಟ್ರೆಂಡ್​ಗಳಿಂದ ಅಂದಿಗೂ,ಇಂದಿಗೂ  ಸೀರೆ ಮಹಿಳೆಯರ ಫೇವರೆಟ್​ ಅಗಿದೆ. ಆದರೆ ಚಳಿಗಾಲದಲ್ಲಿ ಸೀರೆಯನ್ನು ಧರಿಸುವುದು ಕಷ್ಟವಾದ ವಿಷಯ, ಮೈಗೆ ಸೋಕುವ ಚಳಿಗಾಳಿ, ಒಡೆದ ಚರ್ಮವನ್ನು ಸೀರೆಯಿಂದ ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಪ್ಯಾಷನ್​ ಪ್ರಿಯರು ಸೀರೆಗೆ ಹೊಸ ಹೊಸ ಲುಕ್​ ನೀಡಿ ಚಳಿಗಾಲಕ್ಕೂ ಅನುಕೂಲವಾಗುವಂತಹ ಸೀರೆಗಳನ್ನು ವಿನ್ಯಾಸಗೊಳಿಸಿದ್ದಾರೆ. ಹಾಗಾದರೆ ಅಂತಹ ಸೀರೆಗಳು ಯಾವೆಲ್ಲ? ಚಳಿಗಾಲದಲ್ಲಿ ಎಂತಹ ಸೀರೆಗಳನ್ನು ಧರಿಸಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ,

ಲಾಂಗ್​ ಕೋಟ್​ ಧರಿಸುವುದು ಸೇರೆಯ ಮೇಲೆ ಉದ್ದವಾದ ಕೋಟ್​ ಧರಿಸಿ. ಇದು ನಿಮಗೆ ಟ್ರೆಂಡಿ ಲುಕ್​ ನೀಡುತ್ತದೆ. ಜತೆಗೆ ಚಳಿಯಿಂದಲೂ ರಕ್ಷಣೆ ನೀಡುತ್ತದೆ. ಕಪ್ಪು, ಗಾಢ ನೀಲಿ, ಬಿಳಿ ಬಣ್ಣದ ಕೋಟ್​ಗಳು ಸಾಮಾನ್ಯವಾಗಿ ಎಲ್ಲ ತರಹದ ಬಣ್ಣದ  ಸೀರೆಗೆ ಒಪ್ಪುತ್ತದೆ. ಹೀಗಾಗಿ ಸೀರೆಯ ಮೇಲೆ ಸ್ವಲ್ಪ ಎಥ್ನಿಕ್​ ಮತ್ತು ಟ್ರೆಡಿಷನಲ್​ ಲುಕ್​ ಇರುವ ಕೋಟ್​ ಧರಿಸಿ. ಕೋಟಿನ ಮೇಲೆ ಥ್ರೆಡ್​ ವರ್ಕ್ಸ್​ಗಳಿದ್ದರೆ ಇನ್ನಷ್ಟು ಲುಕ್​ ಅಗಿ ಕಾಣಿಸುತ್ತದೆ. ಈ ಉಡುಪು ಮದುವೆಗಳಿಗೆ ಮಾತ್ರವಲ್ಲದೆ ಕೆಲವು ಪಾರ್ಟಿಗಳಿಗೂ ಧರಿಸಬಹುದು. ರಾತ್ರಿ ಪಾರ್ಟಿಗಳಲ್ಲಿ ಚಳಿಗೆ ಮುದುಡಿಕೊಂಡು ಕೂರುವ ಅಗತ್ಯವೂ  ಇರುವುದಿಲ್ಲ.

ಟೀ ಶರ್ಟ್​ ಬ್ಲೌಸ್​ಗಳನ್ನು ಆಯ್ದುಕೊಳ್ಳಿ ಸೀರೆಗಳ ಮೇಲೆ ಫುಲ್​ ಸ್ಲೀವ್​ ಟೀ ಶರ್ಟ್​ ಧರಿಸುವುದರಿಂದ ನಿಮಗೆ ಕ್ಯಾಶುವಲ್​ ಲುಕ್​ ನೀಡುತ್ತದೆ. ಟೀ ಶರ್ಟ್​ ರೀತಿಯ ಬ್ಲೌಸ್​ಗಳು ನಿಮ್ಮ ಸೀರೆಗೂ ಹೊಸ ಲುಕ್​ ನೀಡುತ್ತದೆ. ಇಂತಹ ಬ್ಲೌಸ್​ಗಳನ್ನು ಧರಿಸಿದಾಗ ನೀವು ಸೆರಗನ್ನು ಇಳಿಬಿಟ್ಟರೆ ಸುಂದರವಾಗಿ ಕಾಣಿಸುತ್ತೀರಿ. ಬ್ಲೌಸ್​ನ ಕೈತೋಳಿನ ತುದಿಗೆ ಒಂದಷ್ಟು ಗ್ರ್ಯಾಂಡ್​ ಲುಕ್​ ಇರುವಂತೆ ನೋಡಿಕೊಳ್ಳಿ. ಇಂತಹ ಸೀರೆಗಳನ್ನು ಧರಿಸಿದಾಗ ಕೂದಲನ್ನು ತಲೆಯ ಮೇಲೆ  ತುರುಬಿನಂತೆ ಕಟ್ಟಿ ಹೂವು ಮುಡಿದುಕೊಳ್ಳಿ. ಇದು ನಿಮಗೆ ಸಾಂಪ್ರದಾಯಿಕ ಲುಕ್​ ನೀಡುತ್ತದೆ.

ಅನಾರ್ಕಲಿ ಕುರ್ತಾ ಸೀರೆಯ ಮೇಲೆ ಅನಾರ್ಕಲಿ ಕುರ್ತಾ ಧರಿಸಿ. ಸೀರೆಯನ್ನು ಉಟ್ಟ ನಂತರ ಅನಾರ್ಕಲಿ ಕುರ್ತಾ ಧರಿಸಿ ಸೆರಗನ್ನು ಕುತ್ತಿಗೆಯ ಬಳಿ ಇಳಿಬಿಡಿ. ಇದು ನಿಮಗೆ ಸ್ಟೈಲಿಷ್​ ಲುಕ್​ ನೀಡುತ್ತದೆ. ಕುರ್ತಾ ಧರಿಸಿದಾಗ ಆಕರ್ಷಕವಾದ ಆಭರಣಗಳನ್ನು ಧರಿಸಿ. ಕುತ್ತಿಗೆಯ ಸುತ್ತ ಸ್ಕಾರ್ಪ್​ಗಳನ್ನು ಧರಿಸಿದರೂ ಸಖತ್​ ಲುಕ್ ನೀಡುತ್ತದೆ, ಚಳಿಗಾಲದಲ್ಲಿ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಅನಾರ್ಕಲಿ ಕುರ್ತಾದೊಂದಿಗಿನ ಸೀರೆ ಡಿಫರೆಂಟ್​ ಲುಕ್​ ನೀಡುತ್ತದೆ.

ಲೆದರ್​ ಜಾಕೆಟ್​ ಲೆದರ್​ ಜಾಕೆಟ್​ಗಳು ನಿಮ್ಮ ದೇಹವನ್ನು ಚಳಿಯಿಂದ  ಬೆಚ್ಚಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ. ಕಪ್ಪು ಅಥವಾ ಸ್ಕಿನ್​ ಕಲರ್​ನ ಲೆದರ್​ ಜಾಕೆಟ್​ಗಳು ಕುತ್ತಿಗೆಯವರೆಗೆ ಹಾಗೂ ನಿಮ್ಮ ಕೈಗಳನ್ನು ಕವರ್​ ಮಾಡುತ್ತದೆ. ಇದು ನಿಮಗೆ ಸ್ಟೈಲಿಷ್​ ಲುಕ್​ ನೀಡುವುದರಲ್ಲಿ ಅನುಮಾನವಿಲ್ಲ. ಜಾಕೆಟ್​ ಧರಿಸಿದಾಗ ಒಂದಷ್ಟು ಆಭರಣಗಳನ್ನು ಧರಿಸಿ ಇದು ನಿಮ್ಮ ಡ್ರೆಸ್​ಅನ್ನು ಇನ್ನಷ್ಟು  ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಹೈನೆಕ್​ ಬ್ಲೌಸ್​ ಹೈನೆಕ್​ ಬ್ಲೌಸ್​​ಗಳು ಇತ್ತೀಚಿನ ದಿನಗಳಲ್ಲಿ  ಟ್ರೆಂಡ್​ ಆಗುತ್ತದೆ. ಜಾಕೆಟ್​ಗಳಂತೆ ಕಾಣುವ ಹೈನೆಕ್​ ಬ್ಲೌಸ್​ಗಳು ಚಳಿಯಿಂದ ರಕ್ಷಣೆ  ನೀಡುತ್ತವೆ. ಈ ರೀತಿಯ ಬ್ಲೌಸ್​ಗಳ ಮೇಲೆ ನೀವು ಆಕರ್ಷಕವಾದ ನೆಕ್ಲೆಸ್​ನಂತಹ ಆಭರಣಗಳನ್ನು  ಧರಿಸಬಹುದು. ಡಿನ್ನರ್​ಗಳಿಗೆ ಇಂತಹ ಉಡುಪು ನಿಮ್ಮನ್ನು ಆಕರ್ಷಿಸುವಂತೆ ಮಾಡುತ್ತದೆ. ಅಲ್ಲದೆ ಚಳಿಯಿಂದಲೂ ರಕ್ಷಣೆ ನೀಡುತ್ತದೆ.

ಇದನ್ನೂ ಓದಿ:

Handwriting; ಹ್ಯಾಂಡ್​ರೈಟಿಂಗ್​ ಕೂಡ ವ್ಯಕ್ತಿತ್ವವನ್ನು ಹೇಳುತ್ತದೆ, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

Published On - 1:26 pm, Sat, 22 January 22