ಚೆಂದದ ಉಗುರಿಗೆ ಅಕ್ಕರೆಯ ಆರೈಕೆಯಲ್ಲಿ ಈ ಅಂಶಗಳನ್ನು ಅಳವಡಿಸಿಕೊಳ್ಳಿ

ವಿಟಮಿನ್​ ಸಿ ಅಂಶಗಳಿಂದ ಕೂಡಿರುವ ನಿಂಬು ಉಗುರಿನಲ್ಲಿ ಸಿಲುಕಿಕೊಂಡಿರುವ ಕೊಳೆಯನ್ನು ತೆಗೆದು ಸುಂದರ ಉಗುರನ್ನು ನೀಡುತ್ತದೆ. ಜತೆಗೆ ನಿಮ್ಮ ಉಗುರನ್ನು ಸದೃಢಗೊಳಿಸುತ್ತದೆ.

ಚೆಂದದ ಉಗುರಿಗೆ ಅಕ್ಕರೆಯ ಆರೈಕೆಯಲ್ಲಿ ಈ ಅಂಶಗಳನ್ನು ಅಳವಡಿಸಿಕೊಳ್ಳಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Feb 10, 2022 | 12:25 PM

ಅಂದದ ಕೈಗಳ ಸೌಂದರ್ಯ ಹೆಚ್ಚಿಸುವುದು ಉಗುರುಗಳು (Nail). ಉದ್ದದ ಉಗುರು ಬಿಟ್ಟು, ಅದನ್ನು ಸ್ವಚ್ಚವಾಗಿರಿಸಿಕೊಂಡು ಬಣ್ಣ ಬಣ್ಣದ  ನೇಲ್​ ಪಾಲಿಶ್ (Nail Polish)​ ಹಚ್ಚಿದರೆ ಅದರ ಲುಕ್​ ಬೇರೆಯೇ ಇರುತ್ತದೆ. ಹಲವರಿಗೆ ಉಗುರು ಬಿಡುವ ಕ್ರೇಜ್​ ಇರುತ್ತದೆ. ಅದಕ್ಕೊಂದು ಚೆಂದದ ಶೇಪ್​ ನೀಡಿ, ಉಗುರಿನ ಮೇಲೆ ವಿವಿಧ ವಿನ್ಯಾಸಗಳಲ್ಲಿ ನೇಲ್​ ಆರ್ಟ್ (Nail Art)​ ಮಾಡಿಕೊಳ್ಳುವವರು ಸಾಕಷ್ಟು ಜನರಿದ್ದಾರೆ. ಅದರೆ ಈ ಉಗುರುಗಳು ಆಗಾಗ ತುಂಡಾಗುತ್ತವೆ. ಇದಕ್ಕೆ ಹಲವು ಕಾರಣಗಳಿವೆ. ಕೆಲವರ ಉಗುರು ಮೃದುವಾಗಿರಬಹುದು, ಇನ್ನು ಕೆಲವರಲ್ಲಿ ಉಗುರು ಗಡುಸಾಗಿದ್ದು ಉಗುರು ಬಿಟ್ಟರೆ ಕಿರಿ ಕಿರಿ ಉಂಟಾಗಬಹುದು. ಹೀಗಾಗಿ ಉಗುರುಗಳನ್ನೂ ಕೂಡ ಸದೃಢವಾಗಿರಿಸಿಕೊಂಡರೆ ಅಕ್ಕರೆಯ ಉಗುರಿಗೆ ಚೆಂದದ ರೂಪ ನೀಡಬಹುದು. ಅದರ ಜೊತೆಗೆ ಉಗುರನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಬಗ್ಗೆಯೂ ಅಷ್ಟೇ ಗಮನ ನೀಡುವುದು ಒಳಿತು. ಅದಕ್ಕಾಗಿ ಇಲ್ಲಿದೆ  ಸುಲಭ ಉಪಾಯ

ನಿಂಬುರಸ: ವಿಟಮಿನ್​ ಸಿ ಅಂಶಗಳಿಂದ ಕೂಡಿರುವ ನಿಂಬು ಉಗುರಿನಲ್ಲಿ ಸಿಲುಕಿಕೊಂಡಿರುವ ಕೊಳೆಯನ್ನು ತೆಗೆದು ಸುಂದರ ಉಗುರನ್ನು ನೀಡುತ್ತದೆ. ಜತೆಗೆ ನಿಮ್ಮ ಉಗುರನ್ನು ಸದೃಢಗೊಳಿಸುತ್ತದೆ. ಪ್ರತಿದಿನ ಒಂದೆರಡು ನಿಮಿಷವಾದರೂ ನಿಂಬೆಹಣ್ಣಿನಿಂದ ಉಗುರುಗಳನ್ನು ಉಜ್ಜಿರಿ. ಇದರಿಂದ ಉಗುರು ಸ್ವಚ್ಛವಾಗಿ, ಬ್ಯಾಕ್ಟೀರಿಯಾಗಳೂ ಕೂಡ ನಾಶವಾಗುತ್ತದೆ.

ಕೊಬ್ಬರಿ ಎಣ್ಣೆ: ಉಗುರನ್ನು ಬಲಗೊಳಿಸಲು ಕೊಬ್ಬರಿ ಎಣ್ಣೆ ಉತ್ತಮ ಪದಾರ್ಥವಾಗಿದೆ.  ಕೊಬ್ಬರಿ ಎಣ್ಣೆಯನ್ನು ಹತ್ತಿಗೆ ಹಾಕಿಕೊಂಡು ಉಗುರಿನ ಮೇಲೆ ಮಸಾಜ್​ ಮಾಡಿ. ಇದರಿಂದ ಉಗುರಿಗೆ ಪೋಷಕಾಂಶಗಳೂ ದೊರುಕುತ್ತದೆ ಮತ್ತು  ಆರೋಗ್ಯಕರ ಉಗುರು ಕೂಡ ಬೆಳೆಯುತ್ತದೆ.

ಆಲಿವ್​ ಆಯಿಲ್​: ಉಗುರಿಗೆ ಹಾನಿಯುಂಟಾಗಿದ್ದರೆ ಅಥವಾ ಗಡುಸಾದ ಉಗುರನ್ನು ಹೊಂದಿದ್ದರೆ ಆಲಿವ್​ ಆಯಿಲ್​ನಿಂದ ಮಸಾಜ್​  ಮಾಡಿ. ಇದರಿಂದ ರಕ್ತ ಸಂಚಾರವೂ ಸುಲಲಿತವಾಗಿ ಆಗುತ್ತದೆ. ಆಲಿವ್​ ಆಯಿಲ್​ ಉಗುರನ್ನು ಮಾಯ್ಚರೈಸ್​ ಗೊಳಿಸಿ ಮೃದುವಾಗಿರುಸತ್ತದೆ.

ಹಸಿರು ತರಕಾರಿ ಸೇವಿಸಿ:  ಉಗುರನ್ನು ಆರೋಗ್ಯವಾಗಿಡಲು ನೀವು ಸೇವಿಸುವ ಆಹಾರವೂ ಅತೀ ಅಗತ್ಯವಾಗಿದೆ. ಸೊಪ್ಪುಗಳು ನಿಮ್ಮ ಆರೋಗ್ಯವನ್ನು ಮಾತ್ರವಲ್ಲದೆ ಉಗುರನ್ನು ಅಂದಗೊಳಿಸುತ್ತವೆ.  ದೇಹದಲ್ಲಿ ರೋಗ ನರೋಧಕ ಶಕ್ತಿ ಮತ್ತು ರಕ್ತದ ಉತ್ಪಾದನೆ ಮಾಡಿ ಚೆಂದದ ಉಗುರುಗಳು ಬೆಳೆಯುವಂತೆ ಮಾಡುತ್ತದೆ.

ಮೊಟ್ಟೆಯ ಚಿಪ್ಪುಗಳು: ಮೊಟ್ಟೆಯ ಚಿಪ್ಪುಗಳು ನಿಮ್ಮ ಉಗುರಿನ ಕಾಂತಿಯನ್ನು ಹೆಚ್ಚಿಸುತ್ತದೆ. ಚಿಪ್ಪನ್ನು ಸ್ವಚ್ಛಗೊಳಿಸಿ ಅದನ್ನು ಮಿಕ್ಸಿಮಾಡಿ, ಪೇಸ್ಟ್​ ತಯಾರಿಸಿಕೊಳ್ಳಿ. ನಂತರ ಅದನ್ನು ಉಗುರಿನ ಮೇಲೆ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಉಗುರು ಕಾಂತಿಯುವಾಗ ಹೊಳೆಯುವಂತೆ ಆಗುತ್ತದೆ. ಜತೆಗೆ ಉಗುರಿನ ಬೆಳವಣಿಗೆಗೂ ಸಹಾಯಕವಾಗಿದೆ.

ಜೇನುತುಪ್ಪ: ಜೇನುತುಪ್ಪದಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ ಅಂಶಗಳು  ನಿಮ್ಮ ಉಗುರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತವೆ. ಒಂದು ಚಮಚ ಜೇನುತುಪ್ಪಕೆ ಒಂದರಡು ಹನಿ ನಿಂಬುರಸವನ್ನು ಸೇರಿಸಿ ಉಗುರಿನ ಮೇಲೆ ಮಸಾಜ್​ ಮಾಡಿ. 10 ನಿಮಿಷಗಳ ಕಾಲ ಮಸಾಜ್​ ಮಾಡಿದರೆ ನಿಮ್ಮ ಉಗುರಿನ ಸೌಂದರ್ಯವೂ ಹೆಚ್ಚಾಗುತ್ತದೆ. ಉದ್ದದ ಉಗರು ಬೆಳೆಯಲೂ ಕೂಡ ನೆರವಾಗುತ್ತದೆ.

ಇದನ್ನೂ ಓದಿ:

ಮಹಿಳೆಯರು ತಮ್ಮ ಹಣೆಯ ಮೇಲೆ ಬಿಂದಿ ಇಡುವುದು ಏಕೆ ಗೊತ್ತಾ? ಈ ಸಂಪ್ರದಾಯದ ಹಿಂದಿದೆ ಗುಪ್ತ ವೈಜ್ಞಾನಿಕ ಕಾರಣ