Hiccups : ಏನೇ ಮಾಡಿದ್ರೂ ಬಿಕ್ಕಳಿಕೆ ನಿಲ್ತಾ ಇಲ್ವಾ? ತಕ್ಷಣವೇ ಹೀಗೆ ಮಾಡಿ
ಹೆಚ್ಚಿನವರಿಗೆ ಊಟ ಮಾಡುವಾಗ ಬಿಕ್ಕಳಿಕೆಯಂತಹ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಎಷ್ಟು ನೀರು ಕುಡಿದರೂ ಕೂಡ ಬಿಕ್ಕಳಿಕೆ ಮಾತ್ರ ನಿಲ್ಲುವುದೇ ಇಲ್ಲ. ಈ ವೇಳೆಯಲ್ಲಿ ಊಟ ಮಾಡುವುದಕ್ಕಾಗಲಿ, ಮಾತನಾಡುವುದಕ್ಕಾಗಲಿ ಆಗುವುದೇ ಇಲ್ಲ. ಒಂದು ವೇಳೆ ನಿಮಗೆ ಈ ರೀತಿ ಪದೇ ಪದೇ ಬಿಕ್ಕಳಿಕೆ ಬರುತ್ತಿದ್ದರೆ ಆ ಕೂಡಲೇ ಹೀಗೆ ಮಾಡಿ, ಬಿಕ್ಕಳಿಕೆಯೂ ತಕ್ಷಣ ನಿಲ್ಲುತ್ತೆ.
ಸಾಂದರ್ಭಿಕ ಚಿತ್ರ
Follow us on
ಬಿಕ್ಕಳಿಕೆ ಯಾವಾಗ ಬರುತ್ತದೆ ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರಿಗೆ ತಕ್ಷಣ ನಿಲ್ಲುತ್ತದೆ, ಆದರೆ ಇನ್ನೂ ಕೆಲವರಿಗೆ ಎಷ್ಟೇ ನೀರು ಕುಡಿದ್ರೂ ಬಿಕ್ಕಳಿಕೆ ನಿಲ್ಲುವುದೇ ಇಲ್ಲ. ಈ ವೇಳೆಯಲ್ಲಿ ಯಾರಾದರೂ ನಿನ್ನನ್ನು ನೆನಪಿಸಿಕೊಳ್ಳುತ್ತಿರಬಹುದು ಎಂದು ಹೇಳುವುದನ್ನು ಕೇಳಿರಬಹುದು. ಆದರೆ, ಹೆಚ್ಚು ಮಸಾಲೆಯುಕ್ತ ಆಹಾರದ ಸೇವನೆ, ಆಲ್ಕೋಹಾಲ್, ಸೋಡಾದಂತಹ ಕಾರ್ಬೊನೇಟೆಡ್ ಪಾನೀಯಗಳ ಸೇವನೆ, ತುಂಬಾ ಬಿಸಿಯಾದ ಅಥವಾ ತುಂಬಾ ತಣ್ಣನೆಯ ಆಹಾರ ಪದಾರ್ಥಗಳು ತಿನ್ನುವುದು ಈ ಬಿಕ್ಕಳಿಕೆಯಂತಹ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಈ ಕೆಲವು ಮನೆಮದ್ದಿನ ಜೊತೆಗೆ ಈ ಟ್ರಿಕ್ಸ್ ಗಳನ್ನು ಪಾಲಿಸಿದರೆ ಬಿಕ್ಕಳಿಕೆಯನ್ನು ತಕ್ಷಣವೇ ನಿಲ್ಲಿಸಬಹುದು.
ಬಿಕ್ಕಳಿಕೆ ಬಂದ ಕೂಡಲೇ ತಣ್ಣೀರು ಅಥವಾ ಬಿಸಿ ನೀರು ಕುಡಿಯಿರಿ. ಇದು ತಕ್ಷಣವೇ ಬಿಕ್ಕಳಿಕೆಯಂತಹ ಸಮಸ್ಯೆಯೂ ದೂರವಾಗಿಸುತ್ತದೆ.
ಬಿಕ್ಕಳಿಕೆ ಬಂದ ತಕ್ಷಣವೇ ಹಿಂಬದಿಯಿಂದ ಕುತ್ತಿಗೆಯ ಪ್ರದೇಶವನ್ನು ನಿಧಾನವಾಗಿ ಮಸಾಜ್ ಮಾಡುವುದು ಪರಿಣಾಮಕಾರಿಯಾಗಿದೆ.
ಬಿಕ್ಕಳಿಕೆ ಬಂದಾಗ ಕೆಲವು ಕ್ಷಣ ಉಸಿರು ಬಿಗಿ ಹಿಡಿದುಕೊಳ್ಳಬೇಕು. ಈ ವಿಧಾನವೂ ಬಿಕ್ಕಳಿಕೆ ನಿಲ್ಲಲು ಸಹಾಯ ಮಾಡುತ್ತದೆ.
ವ್ಯಕ್ತಿಯ ಗಮನವನ್ನು ಬೇರೆಡೆ ಸೆಳೆಯುವುದರಿಂದ ಬಿಕ್ಕಳಿಕೆ ಸಮಸ್ಯೆಯೂ ಕ್ಷಣಾರ್ಧದಲ್ಲಿ ನಿಲ್ಲಿಸಬಹುದು.
ಕೈಗಳಿಂದ ನಿಮ್ಮ ಮೂಗನ್ನು ಮುಚ್ಚಿಕೊಳ್ಳಿ. ಹೀಗೆ ಮಾಡಿದ್ರೆ ಶ್ವಾಸಕೋಶದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಹೊರ ಹೋಗಿ, ಬಿಕ್ಕಳಿಕೆ ನಿಲ್ಲುತ್ತದೆ.
ಹೆಬ್ಬೆರಳಿನಿಂದ ಕೈಯ ಅಂಗೈಯನ್ನು ಮಸಾಜ್ ಮಾಡುವುದು ಕೂಡ ಬಿಕ್ಕಳಿಕೆ ನಿಲ್ಲಿಸಲು ಸಹಾಯ ಮಾಡುತ್ತದೆ.
ನೀರು ಕುಡಿದ ಬಳಿಕವೂ ಬಿಕ್ಕಳಿಕೆ ನಿಲ್ಲದಿದ್ದರೆ, ನಾಲಗೆಯನ್ನು ಹೊರ ಹಾಕಿ ಸ್ಪಲ್ಪ ಹೊತ್ತು ಹಾಗೆಯೇ ಇರಿ. ಇದು ಗಂಟಲಿನ ಸ್ನಾಯುಗಳಲ್ಲಿ ಒತ್ತಡ ಕಡಿಮೆ ಮಾಡುತ್ತದೆ. ಇದರಿಂದ ಬಿಕ್ಕಳಿಕೆ ನಿಲ್ಲುತ್ತದೆ.
ಒಂದು ಚಮಚ ಸಕ್ಕರೆ ತೆಗೆದುಕೊಂಡು ಅದನ್ನು ಚೆನ್ನಾಗಿ ಜಗಿದು ಅರ್ಧ ಲೋಟ ನೀರು ಕುಡಿಯಿರಿ. ಬಿಕ್ಕಳಿಕೆ ತಟ್ಟನೆ ನಿಂತುಹೋಗುತ್ತದೆ.
ಬಿಕ್ಕಳಿಕೆ ಬಂದಾಗ ದಿಢೀರನೆ ಎದ್ದು ಕುಳಿತು ಮೊಣಕಾಲುಗಳನ್ನು ಎದೆಯವರೆಗೆ ತನ್ನಿ. ಇದು ಶ್ವಾಸಕೋಶವನ್ನು ಕುಗ್ಗಿಸುವ ಮೂಲಕ ಸ್ನಾಯುವಿನ ಒತ್ತಡವನ್ನು ನಿವಾರಿಸುತ್ತದೆ, ಹೀಗಾಗಿ ಬಿಕ್ಕಳಿಕೆಯೂ ನಿಲ್ಲುತ್ತದೆ.
ಮನೆಯಲ್ಲಿ ಪೇಪರ್ ಬ್ಯಾಗ್ ಇದ್ದರೆ ಅದರಲ್ಲಿ ಹತ್ತು ಬಾರಿ ಉಸಿರು ಎಳೆದು ಬಿಟ್ಟರೂ ಬಿಕ್ಕಳಿಕೆಯೂ ನಿಲ್ಲುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ