AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jeera Rice Recipe : ಹತ್ತೇ ನಿಮಿಷದಲ್ಲಿ ಮನೆಯಲ್ಲಿ ಮಾಡಿ ರೆಸ್ಟೋರೆಂಟ್ ಸ್ಟೈಲ್ ಜೀರಾ ರೈಸ್, ರೆಸಿಪಿ ಇಲ್ಲಿದೆ

ಬೆಳ್ಳಗೆ ಎದ್ದ ಕೂಡಲೇ ಇವತ್ತು ಏನಪ್ಪಾ ತಿಂಡಿ ಮಾಡೋದು ಎನ್ನುವ ಪ್ರಶ್ನೆಯೊಂದು ಎಲ್ಲಾ ಮಹಿಳೆಯರ ತಲೆಯಲ್ಲಿ ಬರುತ್ತೆ. ದೋಸೆ, ಇಡ್ಲಿ, ಪಲಾವ್, ಚಿತ್ರಾನ್ನ, ಉಪ್ಪಿಟ್ಟು ತಿಂದು ಬೋರ್ ಆಗಿದ್ರೆ ಜೀರಾ ರೈಸ್ ರೆಸಿಪಿಯನ್ನು ಮನೆಯಲ್ಲೇ ಟ್ರೈ ಮಾಡಬಹುದು. ಚುಮುಚುಮು ಚಳಿಗೆ ಜೀರಾ ರೈಸ್ ಮಾಡಿ ಸವಿಯುವುದು ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಸಿಗುವಂತೆ ರುಚಿಕರವಾದ ಜೀರಾ ರೈಸ್ ಮಾಡೋದು ಹೇಗೆ? ಈ ರೆಸಿಪಿ ಕುರಿತಾದ ಮಾಹಿತಿ ಇಲ್ಲಿದೆ.

Jeera Rice Recipe : ಹತ್ತೇ ನಿಮಿಷದಲ್ಲಿ ಮನೆಯಲ್ಲಿ ಮಾಡಿ ರೆಸ್ಟೋರೆಂಟ್ ಸ್ಟೈಲ್ ಜೀರಾ ರೈಸ್, ರೆಸಿಪಿ ಇಲ್ಲಿದೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Dec 04, 2024 | 3:31 PM

Share

ದಿನಾಲೂ ಬೆಳಗ್ಗೆ ಒಂದೇ ಬಗೆಯ ತಿಂಡಿ ತಿಂದು ಬೋರ್ ಆಗಿರುತ್ತದೆ. ಕೆಲವರು ವಿಭಿನ್ನವಾಗಿ ಏನನ್ನಾದರೂ ಮಾಡಲು ಪ್ರಯತ್ನಿಸುತ್ತಾರೆ. ಪಲಾವ್, ಚಿತ್ರಾನ್ನದಂತಹ ರೈಸ್ ಐಟಂಗಳನ್ನು ಮನೆಯ ಸದಸ್ಯರು ಇಷ್ಟ ಪಡುತ್ತಿದ್ದರೆ ಸ್ಪೆಷಲ್ ಆಗಿ ಜೀರಾ ರೈಸ್ ಮಾಡಬಹುದು. ಉತ್ತರ ಭಾರತದ ಫೇಮಸ್ ಖಾದ್ಯವಾಗಿರುವ ಈ ಜೀರಾ ರೈಸ್ ರೆಸಿಪಿಯನ್ನು ಹೆಚ್ಚು ಖರ್ಚುಯಿಲ್ಲದೇ ಮಾಡಬಹುದಾಗಿದೆ. ಮನೆಯಲ್ಲಿರುವ ಈ ಕೆಲವು ಸಾಮಗ್ರಿಗಳಿಂದ ಆರೋಗ್ಯಕರ ಹಾಗೂ ರುಚಿಕರ ಜೀರಾ ರೈಸ್ ಮಾಡಿ ಮನೆ ಮಂದಿಯೆಲ್ಲಾ ಸವಿಯಬಹುದು.

ಜೀರಾ ರೈಸ್ ಮಾಡಲು ಬೇಕಾಗುವ ಸಾಮಗ್ರಿಗಳು

* ಅಕ್ಕಿ- 1ಕಪ್

* ತುಪ್ಪ- 1/2 ಕಪ್

* ಪಲಾವ್ ಎಲೆ

* ಚಕ್ಕೆ

* ಲವಂಗ

* ಜೀರಿಗೆ- 4 ಚಮಚ

* ಹಸಿಮೆಣಸಿನಕಾಯಿ- 2

* ಕೊತ್ತಂಬರಿ ಸೊಪ್ಪು

* ರುಚಿಗೆ ತಕ್ಕಷ್ಟು ಉಪ್ಪು

ಜೀರಾ ರೈಸ್ ಮಾಡುವ ವಿಧಾನ

* ಅಕ್ಕಿಯನ್ನು ಚೆನ್ನಾಗಿ ತೊಳೆದು ಇಪ್ಪತ್ತು ನಿಮಿಷಗಳ ಕಾಲ ನೆನೆಸಿಟ್ಟುಕೊಳ್ಳಿ.

* ಬಾಣಲೆಗೆ ತುಪ್ಪ ಹಾಕಿ ಬಿಸಿಯಾಗುತ್ತಿದ್ದಂತೆ ಪಲಾವ್ ಎಲೆ, ಚಕ್ಕೆ, ಲವಂಗ, ಜೀರಿಗೆ, ಕತ್ತರಿಸಿಟ್ಟ ಹಸಿಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

* ಆ ಬಳಿಕ ಈಗಾಗಲೇ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಸ್ವಲ್ಪ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.

* ಅಕ್ಕಿ ಬೇಯಲು ಬೇಕಾಗುವಷ್ಟು ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಒಮ್ಮೆ ಕೈಯಾಡಿಸಿ. ಆ ಬಳಿಕ ಕೊತ್ತಂಬರಿ ಸೇರಿಸಿ ಬೇಯಿಸಿಕೊಂಡರೆ ರುಚಿಯಾದ ಜೀರಾ ರೈಸ್ ಸವಿಯಲು ಸಿದ್ಧ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​