AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivah Panchami 2024: ವಿವಾಹದಲ್ಲಿ ಅಡೆತಡೆ ಅಥವಾ ವಿಳಂಬವಾಗುತ್ತಿದೆಯೇ? ಇಲ್ಲಿದೆ ಪರಿಹಾರ

ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಪಂಚಮಿಯನ್ನು ವಿವಾಹ ಪಂಚಮಿ ಎಂದು ಆಚರಿಸಲಾಗುತ್ತದೆ. ಈ ದಿನ ಶ್ರೀರಾಮ ಮತ್ತು ಸೀತಾಮಾತೆಯ ವಿವಾಹವಾಯಿತು ಎಂದು ನಂಬಲಾಗಿದೆ. 2024ರ ವಿವಾಹ ಪಂಚಮಿ ಡಿಸೆಂಬರ್ 6 ರಂದು ಬಂದಿದೆ. ಈ ದಿನ ಸರ್ವಾರ್ಥ ಸಿದ್ಧಿ ಮತ್ತು ರವಿ ಯೋಗಗಳಿವೆ. ವಿವಾಹದಲ್ಲಿ ಅಡೆತಡೆಗಳಿರುವವರು ಈ ದಿನ ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Vivah Panchami 2024: ವಿವಾಹದಲ್ಲಿ ಅಡೆತಡೆ ಅಥವಾ ವಿಳಂಬವಾಗುತ್ತಿದೆಯೇ? ಇಲ್ಲಿದೆ ಪರಿಹಾರ
Vivaha Panchami 2024
ಅಕ್ಷತಾ ವರ್ಕಾಡಿ
|

Updated on: Dec 03, 2024 | 5:55 PM

Share

ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಪಂಚಮಿಯನ್ನು ವಿವಾಹ ಪಂಚಮಿ ಎಂದು ಆಚರಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಈ ದಿನಕ್ಕೆ ವಿಶೇಷ ಮಹತ್ವವಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಸೀತಾ ಸ್ವಯಂವರ ಮತ್ತು ಶ್ರೀರಾಮನ ವಿವಾಹವು ಈ ದಿನ ನಡೆಯಿತು. ಪ್ರತಿ ವರ್ಷ ಈ ದಿನವನ್ನು ಭಗವಾನ್ ರಾಮ ಮತ್ತು ತಾಯಿ ಸೀತೆಯ ವಿವಾಹ ವಾರ್ಷಿಕೋತ್ಸವವಾಗಿ ಆಚರಿಸಲಾಗುತ್ತದೆ. ವಿವಾಹ ಪಂಚಮಿಯನ್ನು ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ವಿವಾಹ ಪಂಚಮಿ ಹಬ್ಬವನ್ನು ಡಿಸೆಂಬರ್ 6 ರಂದು ಆಚರಿಸಲಾಗುತ್ತದೆ.

2024ರ ವಿವಾಹ ಪಂಚಮಿ ದಿನಾಂಕ:

ಡಿಸೆಂಬರ್ 05 ಮಧ್ಯಾಹ್ನ 12:49 ಪ್ರಾರಂಭವಾಗಿ ಡಿಸೆಂಬರ್ 06 ಮಧ್ಯಾಹ್ನ 12:07 ಗಂಟೆಗೆ ಮುಕ್ತಾಯಗೊಳ್ಳುತ್ತದೆ.

ವಿವಾಹ ಪಂಚಮಿಯಂದು 2 ಶುಭ ಯೋಗಗಳು:

ಈ ಬಾರಿ ವಿವಾಹ ಪಂಚಮಿಯ ದಿನದಂದು ಎರಡು ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಮೊದಲನೆಯದು ಸರ್ವಾರ್ಥ ಸಿದ್ಧಿ ಯೋಗ ಮತ್ತು ಎರಡನೆಯದು ರವಿಯೋಗ. ಅಂದು ಬೆಳಗ್ಗೆ 07:00 ರಿಂದ ಸಂಜೆ 5:18 ರವರೆಗೆ ಸರ್ವಾರ್ಥ ಸಿದ್ಧಿ ಯೋಗ. ಪಂಚಮಿಯಂದು ಸಂಜೆ 5:18 ರಿಂದ ಮರುದಿನ ಡಿಸೆಂಬರ್ 7 ರಂದು ಬೆಳಿಗ್ಗೆ 7:01 ರವರೆಗೆ ರವಿ ಯೋಗ ಕೂಡ ರೂಪುಗೊಳ್ಳುತ್ತದೆ. ಇವುಗಳಲ್ಲದೆ ಧ್ರುವಯೋಗವು ಮುಂಜಾನೆಯಿಂದ 10:43 ರವರೆಗೆ ಇರುತ್ತದೆ ನಂತರ ವ್ಯಾಘಾತ ಯೋಗವು ರೂಪುಗೊಳ್ಳುತ್ತದೆ.

ಮದುವೆ ಯೋಗ:

ವಿವಾಹದಲ್ಲಿ ಅಡೆತಡೆಗಳು ಅಥವಾ ವಿಳಂಬವನ್ನು ಎದುರಿಸುತ್ತಿರುವವರು ವಿವಾಹ ಪಂಚಮಿಯ ದಿನದಂದು ಉಪವಾಸವನ್ನು ಆಚರಿಸಬೇಕು ಮತ್ತು ಭಗವಾನ್ ರಾಮ ಮತ್ತು ಸೀತೆಯನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಬೇಕು. ಇದರೊಂದಿಗೆ ಭಗವಾನ್ ಶ್ರೀರಾಮ ಮತ್ತು ಸೀತಾಮಾತೆಯ ವಿವಾಹವನ್ನು ಅದ್ಧೂರಿಯಾಗಿ ನಡೆಸಬೇಕು. ಪೂಜೆಯ ಸಮಯದಲ್ಲಿ ಮನದಲ್ಲಿ ಇಚ್ಛೆಯನ್ನು ವ್ಯಕ್ತಪಡಿಸಬೇಕು. ಈ ರೀತಿ ಮಾಡುವುದರಿಂದ ವಿವಾಹದಲ್ಲಿ ಅಡೆತಡೆಗಳು ಮಗಿದು ಮದುವೆ ಸುಸೂತ್ರವಾಗಿ ನಡೆಯುತ್ತದೆ ಎಂಬ ನಂಬಿಕೆಯಿದೆ.

ವಿವಾಹ ವಿಳಂಬವಾಗುತ್ತಿರುವವರು ಅಥವಾ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ವಿವಾಹ ಪಂಚಮಿಯ ದಿನದಂದು ರಾಮಚರಿತಮಾನಸದಲ್ಲಿ ನೀಡಲಾದ ರಾಮ-ಸೀತಾ ಘಟನೆಯನ್ನು ಪಠಿಸಬೇಕು. ಇದನ್ನು ಪೂರ್ಣ ಭಕ್ತಿಯಿಂದ ಪಠಿಸುವುದರಿಂದ ದಾಂಪತ್ಯ ಜೀವನ ಸುಖಮಯವಾಗುವುದಲ್ಲದೆ ದಾಂಪತ್ಯದಲ್ಲಿನ ಅಡೆತಡೆಗಳೂ ದೂರವಾಗುತ್ತವೆ ಎಂದು ನಂಬಲಾಗಿದೆ.

ವಿವಾಹ ಪಂಚಮಿಯ ಮಹತ್ವ:

ದಾಂಪತ್ಯದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸುತ್ತಿರುವ ಜನರಿಗೆ ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಿವಾಹ ಪಂಚಮಿಯ ದಿನದಂದು ವಿಧಿವಿಧಾನಗಳ ಪ್ರಕಾರ ಭಗವಾನ್ ಶ್ರೀರಾಮ ಮತ್ತು ಸೀತಾಮಾತೆಯನ್ನು ಪೂಜಿಸುವುದರಿಂದ ದಾಂಪತ್ಯದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ. ಜೊತೆಗೆ ಉತ್ತಮ ಜೀವನ ಸಂಗಾತಿಯೂ ಸಿಗುತ್ತಾರೆ. ಅಷ್ಟೇ ಅಲ್ಲ ವಿವಾಹಿತರು ಈ ವ್ರತವನ್ನು ಆಚರಿಸಿದರೆ ದಾಂಪತ್ಯದಲ್ಲಿ ಉಂಟಾಗುವ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ವಿವಾಹ ಪಂಚಮಿಯ ದಿನದಂದು ಮನೆಯಲ್ಲಿ ರಾಮಚರಿತಮಾನಗಳನ್ನು ಪಠಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಇದನ್ನೂ ಓದಿ: ದಾಂಪತ್ಯದಲ್ಲಿ ಸದಾಕಾಲ ಸಂತೋಷ ನೆಲೆಸಲು ವರ್ಷದ ಕೊನೆಯಲ್ಲಿ ಈ ರೀತಿ ಮಾಡಿ

ವಿವಾಹ ಪಂಚಮಿ ಪೂಜಾ ವಿಧಾನ:

  • ಈ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ ಪೂಜೆ ಮಾಡಬೇಕು.
  • ಶ್ರೀ ರಾಮ ಮತ್ತು ತಾಯಿ ಸೀತೆಯ ವಿಗ್ರಹವನ್ನು ಸ್ಥಾಪಿಸಿ.
  • ಶ್ರೀರಾಮನಿಗೆ ಹಳದಿ ಬಟ್ಟೆ ಮತ್ತು ತಾಯಿ ಸೀತೆಗೆ ಕೆಂಪು ಬಟ್ಟೆಗಳನ್ನು ಅರ್ಪಿಸಿ.
  • ನಂತರ ವಿಧಿವಿಧಾನದಂತೆ ತಿಲಕ, ಧೂಪವನ್ನು ಹಚ್ಚಿ ಪೂಜೆಯನ್ನು ಆರಂಭಿಸಬೇಕು.
  • ಹಾಗೆಯೇ ಮಣ್ಣಿನ ದೀಪಗಳನ್ನು ಬೆಳಗಿಸಿ ಮತ್ತು ಅವುಗಳಿಂದ ನಿಮ್ಮ ಮನೆಯನ್ನು ಅಲಂಕರಿಸಿ.

ವಿವಾಹ ಪಂಚಮಿಯಂದು ಏನು ಮಾಡಬೇಕು?

ವಿವಾಹ ಪಂಚಮಿಯಂದು ಉಪವಾಸವನ್ನು ಆಚರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಸಾಧ್ಯವಾದಷ್ಟು ಧಾರ್ಮಿಕ ಕಾರ್ಯಗಳನ್ನು ಮಾಡಬೇಕು. ಈ ದಿನ ಬ್ರಹ್ಮಚರ್ಯವನ್ನು ಅನುಸರಿಸಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಬೇಕು. ಈ ಶುಭ ದಿನಾಂಕದಂದು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಈ ದಿನ ರಾಮಸೀತೆಯ ದೇವಾಲಯಗಳಿಗೆ ಭೇಟಿ ನೀಡಬೇಕು.

ವಿವಾಹ ಪಂಚಮಿಯಂದು ಏನು ಮಾಡಬಾರದು?

  • ಈ ಶುಭ ದಿನದಂದು ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಾಂಸ ಇತ್ಯಾದಿ ಆಹಾರವನ್ನು ಸೇವಿಸಬೇಡಿ.
  • ಆಲ್ಕೊಹಾಲ್ ತಪ್ಪಿಸಬೇಕು.
  • ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು.
  • ನಿಮ್ಮ ಸಂಗಾತಿ ಜೊತೆಗೆ ಜಗಳ ಆಡಬೇಡಿ
  • ಜೂಜಾಡಬಾರದು
  • ಹಿರಿಯರನ್ನು ಅವಮಾನಿಸಬೇಡಿ

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ