AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Herpes : ಸರ್ಪಸುತ್ತು ಬಗ್ಗೆ ಆತಂಕ ಬೇಡ, ಇಲ್ಲಿದೆ ಸರಳ ಮನೆ ಮದ್ದುಗಳು

ಬೇಸಿಗೆಯ ಕಾಲದಲ್ಲಿ ಅನೇಕ ಚರ್ಮರೋಗಗಳು ಕಾಣಿಸಿಕೊಳ್ಳುತ್ತವೆ. ಉಷ್ಣಕಾಲದಲ್ಲಿ ವೈರಸ್‌ಗಳಿಂದ ಬಾಧಿಸುವ ಸಮಸ್ಯೆಗಳಲ್ಲಿ ಸರ್ಪ ಸುತ್ತು ಕೂಡ ಒಂದು. ಸಣ್ಣಸಣ್ಣ ಗುಳ್ಳೆಗಳು ಹಾವಿನ ಆಕಾರದಂತೆ ಮತ್ತು ಹಾವಿನ ಚಲನೆ ಮಾದರಿಯಲ್ಲೇ ಇರುವುದರಿಂದ ಇದನ್ನು ಸರ್ಪಸುತ್ತು ಎಂದು ಕರೆಯುತ್ತಾರೆ. ಸರ್ಪ ಸುತ್ತಿನ ನೋವು ತೀವ್ರತರಹದ್ದಾಗಿರುತ್ತದೆ. ಕುಳಿತುಕೊಳ್ಳುವುದಕ್ಕೂ ಸಾಧ್ಯವಾಗದೇ ಎಲ್ಲಿ ನೋವಾಗುತ್ತಿದೆ ಎಂದು ಹೇಳುವುದೇ ಕಷ್ಟ. ಈ ಸರ್ಪಸುತ್ತು ಕಡಿಮೆಯಾಗಬೇಕಾದರೆ ಆಹಾರ ಪಥ್ಯದೊಂದಿಗೆ ಮನೆ ಔಷಧಿಗಳು ಇರಲೇಬೇಕು. ಈ ಸರ್ಪಸುತ್ತಿಗೆ ಮನೆಯಲ್ಲೇ ಮನೆ ಮದ್ದು ಮಾಡಿ ಹಚ್ಚುವುದರಿಂದ ಈ ಸಮಸ್ಯೆಯಿಂದ ಗುಣ ಮುಖರಾಗಬಹುದು.

Herpes : ಸರ್ಪಸುತ್ತು ಬಗ್ಗೆ ಆತಂಕ ಬೇಡ, ಇಲ್ಲಿದೆ ಸರಳ ಮನೆ ಮದ್ದುಗಳು
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Mar 25, 2024 | 4:47 PM

Share

ಬೇಸಿಗೆಯಲ್ಲಿ ಹೆಚ್ಚಿನವರಲ್ಲಿ ಕಾಡುವ ಈ ಸರ್ಪ ಸುತ್ತು ಕಾಯಿಲೆಯು ವೈರಸ್ ನಿಂದ ಉಂಟಾಗುವ ಸೋಂಕಾಗಿದೆ. ದೇಹದ ರೋಗನಿರೋಧಕ ಶಕ್ತಿ ಕಡಿಮೆ ಇರುವಾಗ, ಈ ರೋಗದ ವೈರಾಣು ದೇಹ ಪ್ರವೇಶಿಸಿ ಈ ಕಾಯಿಲೆಗೆ ಕಾರಣವಾಗುತ್ತದೆ. ತ್ವಚೆ ಮೇಲೆ ಕೆಂಪಾಗಿರುವ ಚಿಕ್ಕಚಿಕ್ಕ ನೀರು ಗುಳ್ಳೆಗಳು ಪಟ್ಟೆಯಾಕಾರದಲ್ಲಿ ದೇಹದ ಒಂದು ಪಾರ್ಶ್ವದಲ್ಲಿ ಕಂಡುಬರುತ್ತವೆ. ಈ ಗುಳ್ಳೆಗಳು ನರತಂತುಗಳನ್ನು ಬಾಧಿಸುವುದರಿಂದ ಉರಿ ಹಾಗೂ ತುರಿಕೆಯು ವಿಪರೀತವಾಗಿರುತ್ತದೆ. ಹಳ್ಳಿ ಮದ್ದಿನಿಂದ ಈ ಕಾಯಿಲೆಯನ್ನು ಗುಣ ಪಡಿಸಿಕೊಳ್ಳಬಹುದು.

  • ಹಳೆ ಅಕ್ಕಿ ಗಂಜಿ, ಬೇಯಿಸಿದ ಹೆಸರು ನೀರು, ಕೊತ್ತಂಬರಿಯ ನೀರು, ಎಳನೀರು ಸೇವಿಸುವುದು ದೇಹವನ್ನು ತಂಪಾಗಿಸುತ್ತದೆ.
  • ಗರಿಕೆ ಹುಲ್ಲನ್ನು ಬೇರು ಸಮೇತ ಕಿತ್ತು ಚೆನ್ನಾಗಿ ನೀರಿನಲ್ಲಿ ತೊಳೆದು ಪೇಸ್ಟ್ ಮಾಡಿ ಸರ್ಪ ಸುತ್ತು ಆದ ಜಾಗಕ್ಕೆಲ್ಲಾ ಹಚ್ಚುವುದರಿಂದ ಗಾಯವು ಒಣಗುತ್ತವೆ.
  • ಗೋಟು ಅಡಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ದಿನಕ್ಕೆ ನಾಲ್ಕು ಬಾರಿ ಗುಳ್ಳೆಗಳಿಗೆ ಲೇಪಿಸುವುದರಿಂದ ಗುಣಮುಖ ಕಾಣುತ್ತದೆ.
  • ಬೇವಿನ ಎಲೆಯ ರಸವನ್ನು ಮೈಗೆಲ್ಲಾ ಹಚ್ಚುವುದರಿಂದ ಉರಿ ಹಾಗೂ ನವೆಯು ಕಡಿಮೆಯಾಗುತ್ತದೆ.
  • ಕೆಂಪು ಅಥವಾ ಬಿಳಿ ಅಗಸೆ ಸೊಪ್ಪನ್ನು ತಣ್ಣೀರಿನಲ್ಲಿ ನುಣ್ಣಗೆ ಅರೆದು ಹಚ್ಚುವುದು ಪರಿಣಾಮಕಾರಿಯಾಗಿದೆ.
  • ನೆಲ್ಲಿ ಪುಡಿ, ಲಾವಂಚ, ಸೊಗದೆ ಬೇರು ಈ ಮೂರನ್ನು ಹತ್ತರಿಂದ ಹದಿನೈದು ಗ್ರಾಂನಷ್ಟು ತೆಗೆದುಕೊಂಡು ಬೇರೆ ಬೇರೆಯಾಗಿ ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ನೀರು ಬೇರೆಸಿ ಕುದಿಸಿ ದಿನಕ್ಕೆ ಎರಡು ಬಾರಿ ಎರಡು ಚಮಚದಷ್ಟು ಸೇವಿಸುವುದರಿಂದ ಬೇಗನೇ ಸರ್ಪಸುತ್ತು ನಿವಾರಣೆಯಾಗುತ್ತದೆ.
  • ಅಗಸೆ ಸೊಪ್ಪನ್ನು ಅರೆದು ಲೇಪಿಸುವುದರಿಂದ ಮೈ ಮೇಲಿರುವ ಗಾಯವು ಮಾಗುತ್ತದೆ.
  • ಶ್ರೀಗಂಧವನ್ನು ಅರೆದು ಸರ್ಪಸುತ್ತು ಇರುವಲ್ಲಿ ಹಚ್ಚುತ್ತಿದ್ದರೆ ಬೇಗನೇ ಗುಣ ಮುಖವಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ