Foot Care : ಪಾದಗಳು ಕೆಂಡದಂತೆ ಸುಡುತ್ತಿದೆಯೇ, ಈ ಮನೆ ಮದ್ದಿನಿಂದ ಉರಿಯೆಲ್ಲವೂ ಮಾಯಾ

ಬೇಸಿಗೆಯೆಂದರೆ ಬಹುತೇಕರಿಗೆ ಅಲರ್ಜಿ. ಯಾಕಾದ್ರೂ ಈ ಬೇಸಿಗೆ ಬರುತ್ತದೆ ಎಂದು ಗೊಣಗುತ್ತಲೇ ಮಳೆಗಾಲವನ್ನು ಎದುರು ನೋಡುತ್ತಿರುತ್ತಾರೆ. ಈ ಬೇಸಿಗೆಯ ಸಮಯದಲ್ಲಿ ಕಾಯಿಲೆಗಳು ಅಧಿಕ. ಚರ್ಮ ರೋಗ ಸೇರಿದಂತೆ ಇನ್ನಿತ್ತರ ಆರೋಗ್ಯ ಸಮಸ್ಯೆಗಳಿಂದ ಬಳಲುವವರೇ ಹೆಚ್ಚು. ಮೈ ಸುಡುವ ಬಿಸಿಲಿನ ನಡುವೆ ಕೆಲವರು ಪಾದದ ಉರಿಯನ್ನು ಅನುಭವಿಸುತ್ತಾರೆ. ನಡೆಯಲು ಸಾಧ್ಯವಾಗದೇ ಪಾದದ ಅಡಿಯಲ್ಲಿ ಸುಡುವ ಅನುಭವವು ಕಿರಿಕಿರಿಯನ್ನುಂಟು ಮಾಡುತ್ತದೆ. ನಿಮಗೂ ಈ ಸಮಸ್ಯೆಯಿದ್ದರೆ ಮನೆಯಲ್ಲೇ ಈ ಕೆಲವು ಮನೆ ಮದ್ದಿನಿಂದ ಪಾದಗಳ ಉರಿಯುವಿಕೆಯನ್ನು ಗುಣ ಪಡಿಸಿಕೊಳ್ಳಬಹುದು.

Foot Care : ಪಾದಗಳು ಕೆಂಡದಂತೆ ಸುಡುತ್ತಿದೆಯೇ, ಈ ಮನೆ ಮದ್ದಿನಿಂದ ಉರಿಯೆಲ್ಲವೂ ಮಾಯಾ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 02, 2024 | 12:59 PM

ಬೇಸಿಗೆಯಲ್ಲಿ ಪಾದಗಳ ಉರಿಯುವಿಕೆ ಸಮಸ್ಯೆಯು ಅನೇಕರಲ್ಲಿ ಕಾಡುತ್ತದೆ. ಆದರೆ ಕೆಲವರಿಗೆ ಈ ಸಮಸ್ಯೆಯು ವರ್ಷದ ಎಲ್ಲಾ ಋತುವಿನಲ್ಲಿ ಕಾಣಿಸಿಕೊಳ್ಳುತ್ತವೆ. ಹೆಚ್ಚಿನವರು ಈ ಪಾದಗಳ ಉರಿ ಸಮಸ್ಯೆಯಿಂದ ಈ ಸುಡುವಂತಹ ಅನುಭವವನ್ನು ಸಹಿಸಲಾರದೇ ನೀರಿನಲ್ಲಿ ಪಾದಗಳನ್ನು ಇಟ್ಟುಕೊಳ್ಳುವವರು ಇದ್ದಾರೆ. ಕಾಲಿನಲ್ಲಿ ರಕ್ತ ಸಂಚಾರ ಸರಿಯಿಲ್ಲದ್ದಿದ್ದಾಗ, ಮಧುಮೇಹ, ರಕ್ತದೊತ್ತಡ, ಮದ್ಯಪಾನ, ವಿಟಮಿನ್ ಸಿಯ ಕೊರತೆಯಿಂದಾಗಿ ಪಾದಗಳಲ್ಲಿ ಉರಿಯಂತಹ ಅನುಭವವಾಗುತ್ತದೆ.

ಪಾದಗಳಉರಿಗೆ ಸರಳ ಮನೆ ಮದ್ದುಗಳು

  1. ಪಾದಕ್ಕೆ ಕೊಬ್ಬರಿ ಎಣ್ಣೆಯಲ್ಲಿ ಮಸಾಜ್ ಮಾಡುವುದರಿಂದ ರಕ್ತ ಸಂಚಾರದ ಸಮಸ್ಯೆಯು ನಿವಾರಣೆಯಾಗಿ ಉರಿಯ ಅನುಭವವು ಕಡಿಮೆಯಾಗುತ್ತದೆ.
  2. ದೇಹಕ್ಕೆ ತಂಪಾಗಿರುವ ಈ ಮದರಂಗಿಯನ್ನು ಉಷ್ಣದಿಂದ ಪಾದದಲ್ಲಿ ಉರಿ ಉಂಟಾಗುತ್ತಿದ್ದರೆ, ಇದನ್ನು ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಪಾದವನ್ನು ತೊಳೆಯುವುದರಿಂದ ತಂಪಿನ ಅನುಭವವಾಗುತ್ತದೆ.
  3. ಒಂದು ಚಮಚ ಸೋಂಪು ಕಾಳು ಹಾಗೂ ಒಂದು ಚಮಚ ಸಕ್ಕರೆಯನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಂಡು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.
  4. ಅರಿಶಿನ ನೀರಿನಲ್ಲಿ ಪಾದವನ್ನು ಸ್ವಲ್ಪ ಹೊತ್ತು ಇಡುವುದರಿಂದ ಈ ಸಮಸ್ಯೆಯನ್ನು ದೂರವಾಗಿಸಿಕೊಳ್ಳಬಹುದು.
  5.  ಒಂದು ಗ್ಲಾಸ್ ನೀರಿಗೆ ವಿನೆಗರ್ ಒಂದು ಚಮಚ ಬೆರೆಸಿ ಕುಡಿಯುವುದರಿಂದ ಪಾದದ ಉರಿಯು ಕಡಿಮೆಯಾಗುತ್ತದೆ.
  6. ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಕಪ್ ಕಲ್ಲು ಉಪ್ಪನ್ನು ಬೆರೆಸಿ, ಹತ್ತು ಹದಿನೈದು ನಿಮಿಷಗಳ ಕಾಲ ಪಾದವನ್ನಿಟ್ಟರೆ ಉರಿ ಅನುಭವವು ಕಡಿಮೆಯಾಗುತ್ತದೆ.
  7. ಸಾಸಿವೆ ಎಣ್ಣೆಯಿಂದ ಪಾದವನ್ನು ಸಾಸಿವೆ ಎಣ್ಣೆಯನ್ನು ಹಚ್ಚಿಕೊಂಡು, ಸ್ವಲ್ಪ ಸಮಯದ ನಂತರದಲ್ಲಿ ಐಸ್ ತುಂಡುಗಳಿಂದ ಮಸಾಜ್ ಮಾಡುವುದರಿಂದ ಪರಿಣಾಮಕಾರಿಯಾಗಿದೆ.
  8. ಮುಲ್ತಾನಿ ಮಿಟ್ಟಿಯ ಮಿಶ್ರಣವನ್ನು ಪಾದಕ್ಕೆ ಹಚ್ಚುವುದರಿಂದಲೂ ಈ ಪಾದದ ಉರಿಯಿಂದ ಪರಿಹಾರ ಕಂಡುಕೊಳ್ಳಬಹುದು.
  9. ಸೋರೆ ಕಾಯಿಯ ತಿರುಳನ್ನು ಪಾದದ ಅಡಿಗೆ ಉಜ್ಜಿಕೊಳ್ಳುವುದರಿಂದಲೂ ಪಾದದ ಉರಿಯು ನಿವಾರಣೆಯಾಗುತ್ತದೆ.
  10. ಈ ಮನೆ ಮದ್ದನ್ನೊಮ್ಮೆ ತಯಾರಿಸುವ ಮುನ್ನ ತಜ್ಞರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು