AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ರುಚಿ ಹೆಚ್ಚಿಸುವ ಉಪ್ಪು ಅಸಲಿಯೇ ನಕಲಿಯೇ ಎಂದು ಕಂಡು ಹಿಡಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಯಾವುದೇ ಅಡುಗೆಯೇ ಇರಲಿ ಉಪ್ಪಿಯಿಲ್ಲದೇ ರುಚಿಸುವುದೇ ಇಲ್ಲ. ಉಪ್ಪು ಇಲ್ಲದೆ ಆಹಾರ ತಿನ್ನುವುದಕ್ಕೂ ತುಂಬಾನೇ ಕಷ್ಟ. ಆದರೆ ಅಡುಗೆ ರುಚಿ ಹೆಚ್ಚಿಸಲು ಕೊಂಡುಕೊಳ್ಳುವ ಉಪ್ಪಿಗೂ ಕಲಬೆರಕೆ ಮಾಡಲಾಗುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವ ಉಪ್ಪು ನಿಜವಾಗಿಯೂ ಅಸಲಿಯೇ? ಇದನ್ನು ತಿಳಿದುಕೊಳ್ಳೋದು ಹೇಗೆ? ಎನ್ನುವ ಪ್ರಶ್ನೆಯೊಂದು ಮೂಡಬಹುದು. ಈ ಕೆಲವು ವಿಧಾನಗಳ ಮೂಲಕ ನಕಲಿ ಉಪ್ಪನ್ನು ಪತ್ತೆ ಹಚ್ಚಬಹುದು.

ಅಡುಗೆ ರುಚಿ ಹೆಚ್ಚಿಸುವ ಉಪ್ಪು ಅಸಲಿಯೇ ನಕಲಿಯೇ ಎಂದು ಕಂಡು ಹಿಡಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Dec 03, 2024 | 5:25 PM

Share

ಇತ್ತೀಚೆಗಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳಲ್ಲಿ ಕಲಬೆರಕೆಯನ್ನು ಕಾಣಬಹುದಾಗಿದೆ. ಮಾರುಕಟ್ಟೆಯಲ್ಲಿ ನಕಲಿ ಉಪ್ಪನ್ನು ಕೂಡ ಮಾರಾಟ ಮಾಡಲಾಗುತ್ತಿದೆ. ನಿಮಗೆ ಗೊತ್ತಿಲ್ಲದೇನೇ ಸೇವಿಸುವ ಈ ನಕಲಿ ಉಪ್ಪು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನೀವು ಅಡುಗೆಗೆ ಬಳಸುವ ಈ ಉಪ್ಪು ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂದು ಮನೆಯಲ್ಲೇ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು. ಉಪ್ಪಿನ ಶುದ್ಧತೆಯನ್ನು ಕಂಡು ಹಿಡಿಯಲು ಈ ಕೆಲವು ವಿಧಾನಗಳನ್ನು ಅನುಸರಿಸಿ.

  • ಮೊದಲಿಗೆ ಆಲೂಗಡ್ಡೆಯನ್ನು ಎರಡು ಭಾಗಗಳನ್ನಾಗಿ ಮಾಡಿಕೊಳ್ಳಿ. ಆಲೂಗಡ್ಡೆಯ ಒಂದು ಬದಿಯಲ್ಲಿ ಉಪ್ಪನ್ನು ಹಚ್ಚಿ ಕನಿಷ್ಠ 3 ರಿಂದ 4 ನಿಮಿಷಗಳ ಕಾಲ ಬಿಡಿ. ಆ ಬಳಿಕ ಇದಕ್ಕೆ ಎರಡು ಹನಿ ನಿಂಬೆ ರಸವನ್ನು ಸೇರಿಸಿ, ಕೆಲವು ನಿಮಿಷಗಳ ನಂತರ ಉಪ್ಪಿನ ಬಣ್ಣವು ನೀಲಿ ಬಣ್ಣಕ್ಕೆ ತಿರುಗಿದರೆ, ಉಪ್ಪು ಕಲಬೆರಕೆಯಾಗಿದೆ ಎನ್ನುವುದು ಖಚಿತವಾಗುತ್ತದೆ.
  • ಒಂದು ಲೋಟ ನೀರಿಗೆ ಒಂದು ಚಮಚ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಶುದ್ಧ ಉಪ್ಪಾಗಿದ್ದರೆ ಸಂಪೂರ್ಣವಾಗಿ ಕರಗುತ್ತದೆ. ಉಪ್ಪು ಕರಗದೆ ಉಳಿದಿದ್ದರೆ, ಅದು ನಕಲಿ ಎಂದರ್ಥ.
  • ಒಂದು ಬಟ್ಟಲಿಗೆ ಸ್ವಲ್ಪ ಉಪ್ಪು ಹಾಕಿ ಒಲೆಯ ಮೇಲೆ ಇರಿಸಿ. ಈ ವೇಳೆಯಲ್ಲಿ ಶುದ್ಧ ಉಪ್ಪು ಕರಗಿ ಬಿಳಿ ಹೊಗೆಯನ್ನು ಬಿಡುಗಡೆ ಮಾಡುತ್ತದೆ. ಉಪ್ಪನ್ನು ಕಲಬೆರಕೆಯುಕ್ತವಾಗಿದ್ದರೆ ಕಪ್ಪು ಹೊಗೆಯೊಂದಿಗೆ ಕೆಟ್ಟ ವಾಸನೆಯೂ ಬರುತ್ತದೆ.
  • ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅದಕ್ಕೆ 1-2 ಚಮಚ ಉಪ್ಪನ್ನು ಸೇರಿಸಿ. ಆ ಬಳಿಕ ಹತ್ತಿ ಉಂಡೆಯನ್ನು ತೆಗೆದುಕೊಂಡು ಅದನ್ನು ಉಪ್ಪುನೀರಿನ ಮಿಶ್ರಣದಲ್ಲಿ ಅದ್ದಿಕೊಳ್ಳಿ. ಈ ಹತ್ತಿಯನ್ನು 5 ನಿಮಿಷಗಳ ಕಾಲ ನೀರಿನಲ್ಲಿ ಇರಿಸಿ. ಉಪ್ಪು ಕಲಬೆರಕೆಯಾಗಿದ್ದರೆ ಹತ್ತಿ ಉಂಡೆಯ ಬಣ್ಣವೇ ಬದಲಾಗುತ್ತದೆ. ಈ ವಿಧಾನದಿಂದ ಸುಲಭವಾಗಿ ನಕಲಿ ಉಪ್ಪನ್ನು ಪತ್ತೆಹಚ್ಚಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ