Relationship Tips : ನಿಮ್ಮ ಸಂಗಾತಿಯಾಗೋಕೆ ಈ ವ್ಯಕ್ತಿ ಬೆಸ್ಟ್ ಎಂದು ಹೀಗೆ ತಿಳಿಯಿರಿ

ಪ್ರತಿಯೊಬ್ಬರು ತಾವು ಮದುವೆಯಾಗುವ ಹುಡುಗ ಅಥವಾ ಹುಡುಗಿಯ ಬಗ್ಗೆ ಒಂದಷ್ಟು ನಿರೀಕ್ಷೆ ಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ನಮ್ಮ ನಿರೀಕ್ಷೆಗಳಂತೆ ತಮ್ಮ ಸಂಗಾತಿಯೂ ಇಲ್ಲದೇ ಇರಬಹುದು. ಈ ವೇಳೆಯಲ್ಲಿ ಹೊಂದಿಕೊಂಡು ಹೋಗುವುದು ಅನಿವಾರ್ಯವಾಗುತ್ತದೆ. ಹೀಗಾಗಿ ಪರಿಚಿತ ವ್ಯಕ್ತಿಯನ್ನೇ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವಾಗ ಈ ಗುಣಗಳಿದೆಯೇ ಎಂದು ನೋಡುವುದು ಬಹಳ ಮುಖ್ಯ.

Relationship Tips : ನಿಮ್ಮ ಸಂಗಾತಿಯಾಗೋಕೆ ಈ ವ್ಯಕ್ತಿ ಬೆಸ್ಟ್ ಎಂದು ಹೀಗೆ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 03, 2024 | 2:21 PM

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ತಿರುವಿನ ಘಟ್ಟ. ಹೀಗಾಗಿ ಪ್ರತಿಯೊಬ್ಬರು ತಮ್ಮ ಜೀವನ ಸಂಗಾತಿ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ. ನಮ್ಮ ಸುಖ ಕಷ್ಟಗಳಲ್ಲಿ ಭಾಗಿಯಾಗಬೇಕು, ನಮ್ಮನ್ನು ಪ್ರೀತಿ ಕಾಳಜಿಯಿಂದ ನೋಡಿಕೊಳ್ಳಬೇಕು ಎನ್ನುವುದಿರುತ್ತದೆ. ಯೋಗ್ಯವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರೆ ಜೀವನವು ಸುಖಕರವಾಗಿ ಸಾಗಲು ಸಾಧ್ಯ. ಆಯ್ಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಜೀವನ ಪರ್ಯಂತ ಕೊರಗಬೇಕಾಗುತ್ತದೆ. ಗೊತ್ತಿರುವ ವ್ಯಕ್ತಿಯನ್ನೇ ಮದುವೆಯಾಗಲು ಮುಂದಾಗುವಿರಿಯಾದರೆ ಈ ಕೆಲವು ಪ್ರಮುಖ ಗುಣಗಳಿವೆಯೇ ಎಂದು ಒಮ್ಮೆ ನೋಡುವುದು ಸೂಕ್ತ.

  • ಖುಷಿಯಾಗಿ ನೋಡಿಕೊಳ್ಳಲು ಸಾಧ್ಯವೇ ಎಂದು ತಿಳಿದುಕೊಳ್ಳಿ : ಸ್ನೇಹಿತರಾಗಿ ಅಥವಾ ಪ್ರೇಮಿಗಳಾಗಿದ್ದಾಗಲೇ ಜೀವನ ಬೇರೆ ರೀತಿಯಿರುತ್ತದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಬದುಕುವ ರೀತಿ ಬೇರೆಯಾಗುತ್ತದೆ. ಮದುವೆಯಾದ ಬಳಿಕ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಇದೆಲ್ಲದರ ನಡುವೆ ನಿಮಗೆ ಪರಿಚಯ ವ್ಯಕ್ತಿಯನ್ನು ನೀವು ಮದುವೆಯಾದರೆ ಆತನು ನಿಮ್ಮನ್ನು ಖುಷಿಯಾಗಿ ನೋಡಿಕೊಳ್ಳುತ್ತಾನೆಯೇ, ನೀವೂ ಆ ವ್ಯಕ್ತಿಯೊಂದಿಗೆ ಖುಷಿಯಾಗಿರುತ್ತಿರೋ ಎಂದು ತಿಳಿದುಕೊಳ್ಳಿ. ಆ ಗುಣವಿದ್ದಲ್ಲಿ ಹಿಂದೇ ಮುಂದೆ ನೋಡದೆ ಆ ವ್ಯಕ್ತಿಯ ಜೊತೆಗೆ ಮದುವೆಯಾಗುವುದು ಉತ್ತಮ.
  • ನಂಬಿಕೆ ಅರ್ಹರೇ ಎಂದು ಪರೀಕ್ಷಿಸಿ : ದಾಂಪತ್ಯ ಜೀವನದಲ್ಲಿ ನಂಬಿಕೆ ಎನ್ನುವುದು ಬಹಳ ಮುಖ್ಯ. ಹೀಗಾಗಿ ನಿಮ್ಮ ಸಂಗಾತಿಯೂ ನಂಬಿಕೆಗೆ ಅರ್ಹರೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಪ್ರಾಮಾಣಿಕ ವ್ಯಕ್ತಿಯೇ ಎಂಬುದನ್ನು ತಿಳಿದುಕೊಳ್ಳಿ. ಒಂದು ವೇಳೆ ಆ ವ್ಯಕ್ತಿ ಪ್ರಾಮಾಣಿಕರಾಗಿದ್ದರೆ ಅವರಿಗಿಂತ ಉತ್ತಮ ಜೀವನ ಸಂಗಾತಿಯೂ ನಿಮಗೆ ಸಿಗಲು ಸಾಧ್ಯವಿಲ್ಲ ಎಂದು ಅರ್ಥ ಮಾಡಿಕೊಳ್ಳಿ.
  • ಬೆಂಬಲ ನೀಡುವ ಗುಣವಿದೆಯೇ ಎಂದು ನೋಡಿ : ಜೀವನದುದ್ದಕ್ಕೂ ಪ್ರತಿಯೊಬ್ಬ ವ್ಯಕ್ತಿಗೂ ಬೆಂಬಲ, ಸಹಕಾರದ ಅಗತ್ಯ ಇದ್ದೆ ಇರುತ್ತದೆ. ಜೀವನದ ಸುಖ ದುಃಖಗಳಲ್ಲಿ ಒಬ್ಬರಿಗೊಬ್ಬರು ಬೆಂಬಲ ನೀಡಬೇಕು, ನಿನ್ನ ಜೊತೆಗೆ ನಾನಿದ್ದೇನೆ ಎನ್ನುವ ಧೈರ್ಯದ ಮಾತುಗಳು ಅಗತ್ಯವಾಗಿ ಬೇಕು. ಮದುವೆಗೆ ಮುಂಚೆ ಆ ವ್ಯಕ್ತಿಯನ್ನು ಭೇಟಿ ನೀಡಿದ ವೇಳೆ ನಿಮಗೆ ಹೇಗೆ ಸಹಕಾರ ನೀಡುತ್ತಾರೆ ಎನ್ನುವುದು ಸೂಕ್ಷ್ಮವಾಗಿ ಗಮನಿಸಿ. ಸಣ್ಣ ಸಣ್ಣ ವಿಷಯಕ್ಕೂ ಬೆಂಬಲ ನೀಡುವ ಗುಣವಿದ್ದಲ್ಲಿ ನಿಮ್ಮ ಸಂಗಾತಿಯಾಗಲು ಯೋಗ್ಯ ವ್ಯಕ್ತಿ ಎಂದು ಅವರನ್ನೇ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
  • ಇಬ್ಬರ ಜೀವನ ಗುರಿಗಳು ಒಂದೇ ಆಗಿದೆಯೇ ಎಂದು ತಿಳಿಯಿರಿ: ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದಲ್ಲಿ ಒಂದಷ್ಟು ಗುರಿ ಹಾಗೂ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಇಬ್ಬರ ಗುರಿ ಹಾಗೂ ಯೋಜನೆಗಳು ಬೇರೆ ಬೇರೆ ಆಗಿದ್ದರೇ ಇದೇ ವಿಷಯಕ್ಕೆ ಸಣ್ಣ ಪುಟ್ಟ ವೈಮನಸ್ಸು ಮೂಡಬಹುದು. ಹೀಗಾಗಿ ನಿಮ್ಮದೇ ಇಚ್ಛೆ, ಆಕಾಂಕ್ಷೆಗಳನ್ನು ಸಂಗಾತಿಯೂ ಹೊಂದಿದ್ದಾರೆಯೇ ಎಂದು ಖಚಿತ ಪಡಿಸಿಕೊಳ್ಳಿ. ಸ್ವಂತ ಮನೆ, ಮುಂದಿನ ಭವಿಷ್ಯಕ್ಕಾಗಿ ಉಳಿತಾಯ ಹಾಗೂ ಹೂಡಿಕೆಯಂತಹ ಯೋಜನೆ ಹೀಗೆ ಇಬ್ಬರದ್ದು ಒಂದೇ ಗುರಿಯಾಗಿದ್ದರೆ ನಿಮಗೆ ಇವರೇ ಸರಿಯಾದ ಆಯ್ಕೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ