AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mental Health: ನೀವು ಮಾನಸಿಕವಾಗಿ ಸದೃಢರಾಗಿರಲು ಈ ದಶ ಸೂತ್ರಗಳನ್ನು ಪಾಲಿಸಿ

ಜೀವನದಲ್ಲಿ ಯಶಸ್ಸು ಪಡೆಯಲು ನಿಮ್ಮ ಮನಸ್ಸು ಬಹಳ ಮುಖ್ಯ, ನಿಮ್ಮ ಮನಸ್ಸೊಂದು ನಿಮ್ಮ ಹಿಡಿತದಲ್ಲಿದ್ದರೆ ನೀವು ಏನು ಬೇಕಾದರೂ ಸಾಧಿಸಬಲ್ಲಿರಿ.

Mental Health: ನೀವು ಮಾನಸಿಕವಾಗಿ ಸದೃಢರಾಗಿರಲು ಈ ದಶ ಸೂತ್ರಗಳನ್ನು ಪಾಲಿಸಿ
Mental Health
TV9 Web
| Updated By: ನಯನಾ ರಾಜೀವ್|

Updated on: Sep 13, 2022 | 3:22 PM

Share

ಜೀವನದಲ್ಲಿ ಯಶಸ್ಸು ಪಡೆಯಲು ನಿಮ್ಮ ಮನಸ್ಸು ಬಹಳ ಮುಖ್ಯ, ನಿಮ್ಮ ಮನಸ್ಸೊಂದು ನಿಮ್ಮ ಹಿಡಿತದಲ್ಲಿದ್ದರೆ ನೀವು ಏನು ಬೇಕಾದರೂ ಸಾಧಿಸಬಲ್ಲಿರಿ. ನಿರಂತರವಾಗಿ ಒತ್ತಡದಲ್ಲಿ ಮುಳುಗಿರುವ ಜಗತ್ತಿನಲ್ಲಿ, ನಿಮ್ಮ ಮನಸ್ಸನ್ನು ಉತ್ತಮವಾಗಿರಿಸಿಕೊಳ್ಳುವುದು ಸವಾಲಿನ ಕೆಲಸ. ನಿಮಗಾಗಿ ನೀವು ಸಮಯವನ್ನು ಮೀಸಲಿರಿಸಲು ಸಾಧ್ಯವಾಗುವುದಿಲ್ಲ.

ಮತ್ತೊಬ್ಬನಿಗಿಂತ ನಾವು ಇನ್ನೂ ಎತ್ತರಕ್ಕೆ ಬೆಳೆಯಬೇಕು ಎನ್ನುವ ಹಂಬಲವು ನೀವು ಒತ್ತಡದಲ್ಲಿ ಕೆಲಸ ನಿರ್ವಹಿಸುವಂತೆ ಮಾಡುತ್ತದೆ. ನಿಮಗಿಂತ ಎತ್ತರಕ್ಕೆ ಬೆಳೆಯುತ್ತಿರುವವರು ಎಲ್ಲಿ ನಿಮ್ಮ ಶ್ರಮವನ್ನು ಹಾಳು ಮಾಡಿಬಿಡುತ್ತಾರೋ ಎನ್ನುವ ಭಯದಲ್ಲೇ ನೀವು ಜೀವನ ದೂಡಬೇಕಾಗುತ್ತದೆ.

ಆದರೆ ಕಷ್ಟ ಬಂದಾಗ ಎಂದೂ ಕುಸಿಯಬೇಡಿ, ಕಷ್ಟವ್ನನು ಮೆಟ್ಟಿ ನಿಲ್ಲಿ, ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವಂತಹ ಹಲವು ಮಾರ್ಗಗಳು ಇಲ್ಲಿವೆ ನೋಡಿ.

1. ನೀವೇ ಜವಾಬ್ದಾರರಾಗಿರಿ ನೀವು ಜೀವನದಲ್ಲಿ ಯಶಸ್ಸು ಕಾಣದೇ ಹೋದರೆ, ಯಶಸ್ಸಿಗಾಗಿ ಕಷ್ಟಪಡುವುದನ್ನು ನಿಲ್ಲಿಸಬೇಡಿ, ಜೀವನ ಇಲ್ಲಿಗೆ ಮುಗಿದುಹೋಯಿತು ಎಂದುಕೊಳ್ಳಬೇಡಿ, ಹಾಗೆಯೇ ನಿಮ್ಮ ಸೋಲಿಗೆ ಬೇರೆಯವರನ್ನು ದೂರುವ ಬದಲು ನಿಮ್ಮನ್ನೇ ಹೊಣೆಗಾರರನ್ನಾಗಿಸಿ.

2. ನಿಮ್ಮ ಕಂಫರ್ಟ್​ ಜೋನ್​ನಿಂದ ಹೊರಬನ್ನಿ ಎಲ್ಲೇ ಹೋದರೂ ಎಲ್ಲಾ ವಿಷಯಗಳು ನಿಮಗೆ ಅನುಕೂಲವಾಗುವಂತೆಯೇ ನಡೆಯಬೇಕು ಎನ್ನುವ ಮನಸ್ಥಿತಿಯಿಂದ ಹೊರಬನ್ನಿ. ನಿಮ್ಮ ಕಂಫರ್ಟ್​ ಜೋನ್​ನಿಂದ ಹೊರಗಡೆ ಬಂದು ಆಲೋಚಿಸಿ.

3. ನಿಮ್ಮ ತಪ್ಪುಗಳನ್ನು ವಿಶ್ಲೇಷಿಸಿ

ಪ್ರತಿ ಸಮಯದಲ್ಲೂ ಬೇರೆಯವರ ಮೇಲೆ ಬೊಟ್ಟು ಮಾಡಿ ತೋರಿಸುವುದಕ್ಕಿಂತ ಮೊದಲು ನಿಮ್ಮ ತಪ್ಪೇನಿದೆ ಅದರ ಬಗ್ಗೆ ವಿಶ್ಲೇಷಣೆ ಮಾಡುವುದು ಅತ್ಯಗತ್ಯ. ತಪ್ಪುಗಳನ್ನು ಮಾಡುವುದು ಸಾಮಾನ್ಉ ವಿಷಯೌಆಗಿದೆ ಆದರೆ ಅದರ ಬಗ್ಗೆ ಸಮಜಾಯಿಶಿ ನೀಡಬೇಡಿ, ಹಾಗೂ ತಪ್ಪುಗಳಿಂದ ನುಣುಚಿಕೊಳ್ಳಲು ಪ್ರಯತ್ನಿಸಬೇಡಿ. ಅದು ನಿಮ್ಮ ದೌರ್ಬಲ್ಯವನ್ನು ತೋರಿಸುತ್ತದೆ.

4. ಇಲ್ಲ ಎಂದು ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಿ ಕೆಲವೊಂದು ವಿಚಾರದಲ್ಲಿ ಇಲ್ಲ ಎಂದು ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಿ, ತುಂಬಾ ಸಲ ನೀವು ಒಲ್ಲದ ಮನಸ್ಸಿನಿಂದ ಕೆಲವು ವಿಚಾರವನ್ನು ಒಪ್ಪಿಕೊಳ್ಳುವುದು ನಿಮ್ಮ ಮನಸ್ಸಿನ ಮೇಲೆ ತುಂಬಾ ಕೆಟ್ಟ ಪರಿಣಾಮವನ್ನು ಬೀರುತ್ತದೆ.

5. ಒಳ್ಳೆಯರ ಸ್ನೇಹ ಮಾಡಿ ಒಳಗೊಂದು ಹೊರಗೊಂದು ಮಾಡುವವರನ್ನು ಎಂದಿಗೂ ನಂಬಬೇಡಿ, ಅಂತವರ ಸ್ನೇಹ ಮಾಡಿದ್ದರೆ ಆ ಸ್ನೇಹದಿಂದ ಹೊರಬನ್ನಿ. ಉತ್ತಮರ ಸ್ನೇಹವನ್ನು ಮಾಡಿ. ಏಕೆಂದರೆ ಎಲ್ಲಾ ಸಮಯದಲ್ಲೂ ನೀವು ಒಂದೇ ರೀತಿ ಇರುವುದಿಲ್ಲ, ನೀವು ದುರ್ಬಲರಾಗಿದ್ದೀರಿ ಎಂದು ತಿಳಿದಾಗ ಆ ಸಂದರ್ಭವನ್ನು ಬಳಸಿಕೊಳ್ಳುವ ಜನರಿರುತ್ತಾರೆ ಎಚ್ಚರವಿರಲಿ.

6.ನಿಮ್ಮ ದೌರ್ಬಲ್ಯಗಳನ್ನು ಒಪ್ಪಿಕೊಳ್ಳಿ ನಿಮ್ಮ ಸಾಮರ್ಥ್ಯಗಳನ್ನು ತಿಳಿದುಕೊಳ್ಳುವುದು, ನಿಮ್ಮ ತಪ್ಪನ್ನು ತಿದ್ದಿಕೊಳ್ಳಿವುದು ಕೂಡ ಒಂದು ಕಲೆ. ಎಲ್ಲರೂ ಒಂದೊಂದು ವಿಚಾರದಲ್ಲಿ ದುರ್ಬಲರಾಗಿರುತ್ತಾರೆ. ಆ ದುರ್ಬಲತೆಯನ್ನು ಒಪ್ಪಿಕೊಳ್ಳುವ ಭಾವನೆಯು ಕೂಡ ನಿಮ್ಮನ್ನು ಸದೃಢರನ್ನಾಗಿ ಮಾಡುತ್ತದೆ.

7. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಲು ಕಲಿಯಿರಿ ಸಹಜವಾಗಿ, ಭಾವೋದ್ವೇಗಕ್ಕೆ ಒಳಗಾಗುವುದು ಸಾಮಾನ್ಯ ವಿಷಯವಾಗಿದೆ, ಆದರೆ ಹಲವು ಸಮಯದಲ್ಲಿ ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿಟ್ಟರೆ ನಿಮ್ಮ ಸಂಬಂಧ ಉತ್ತಮವಾಗಿರಲು ಸಾಧ್ಯವಾಗುತ್ತದೆ.

8. ಸವಾಲುಗಳನ್ನು ಭಾಗಗಳಾಗಿ ವಿಭಜಿಸಿ ನಿಮಗಿರುವ ಪ್ರಮುಖ ಸವಾಲುಗಳ ಪಟ್ಟಿ ಮಾಡಿ ಅವುಗಳನ್ನು ವಿಭಜಿಸಿ, ಒಂದು ಕಡೆಯಿಂದ ಅವೆಲ್ಲಾ ಸವಾಲುಗಳನ್ನು ಸಾಲ್ವ್​ ಮಾಡುತ್ತಾ ಬನ್ನಿ.

9. ಹೊಸ ಗುರಿಗಳನ್ನು ಹಾಕಿಕೊಳ್ಳಿ ಜೀವನದಲ್ಲಿ ಗುರು ಇದ್ದರೆ ಗುರಿಯನ್ನು ಸುಲಭವಾಗಿಸ ಆಧಿಸಲು ಸಾಧ್ಯ ಹಾಗಾಗಿ ನಿಮ್ಮ ಗುರಿ ಏನೆಂಬುದನ್ನು ಮೊದಲು ಗೊತ್ತು ಮಾಡಿಕೊಳ್ಳಿ. ಆ ಗುರಿಯನ್ನು ಸಾಧಿಸಲು ಏನು ಮಾಡಬೇಕು ಅವುಗಳ ಕಡೆಗೆ ಗಮನಕೊಡಿ.

10. ಭಯವನ್ನು ಹೋಗಲಾಡಿಸಲು ಒಳ್ಳೆಯ ಉಪಾಯ ಮಾಡಿ ನಿಮಗೆ ಯಾವ ಯಾವ ವಿಚಾರಗಳ ಕುರಿತು ಹೆಚ್ಚು ಭಯವಿದೆ, ನಿಮ್ಮ ಶಿಕ್ಷಣದ ಬಗ್ಗೆಯಾ ಅಥವಾ ನಿಮ್ಮ ಕೆರಿಯರ್ ಅಥವಾ ನೀವು ನಡೆಯುತ್ತಿರುವ ಹಾದಿಯ ಬಗ್ಗೆಯೋ ಎಂಬುದನ್ನು ಮೊದಲು ತಿಳಿದುಕೊಂಡು ಆ ಭಯವನ್ನು ಹೋಗಲಾಡಿಸುವ ಕೆಲಸ ಮಾಡಿ. ಎಲ್ಲಿ ಭಯ ಇರುವುದಿಲ್ಲವೋ ಅಲ್ಲೇ ವಿಜಯ ಇರುವುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ