ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ

ಗ್ಯಾಸ್‌ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್‌ ಖಾಲಿಯಾಗುತ್ತಾ ಬಂತು ಎಂಬುದುನ್ನು ತಿಳಿವುದು ತುಂಬಾನೇ ಕಷ್ಟ. ಹೀಗಿರುವಾಗ ಈ ಒಂದು ಸರಳ ಟ್ರಿಕ್ಸ್‌ ಪಾಲಿಸುವ ಮೂಲಕ ಎರಡೇ ಎರಡು ನಿಮಿಷಗಳಲ್ಲಿ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್‌ ಖಾಲಿಯಾಗಿದೆ ಎಂಬುದನ್ನು ಕಂಡುಹಿಡಿಯಬಹುದು. ಈ ಮೂಲಕ ಮುಂಚಿತವಾಗಿಯೇ ಗ್ಯಾಸ್‌ ಬುಕ್‌ ಮಾಡಬಹುದು.

ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ
ಎಲ್.ಪಿ.ಜಿ ಸಿಲಿಂಡರ್ ಚೆಕ್
Image Credit source: Social Media

Updated on: Mar 02, 2026 | 6:35 PM

ಈಗಂತೂ ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್‌ (gas) ಒಲೆಯಲ್ಲಿಯೇ ಅಡುಗೆ ಮಾಡೋದು. ಈ ಗ್ಯಾಸ್‌ ಒಲೆ ಮತ್ತು ಗ್ಯಾಸ್ ಸಿಲಿಂಡರ್‌ ಅಡುಗೆ ಮನೆಯ ಅತ್ಯಗತ್ಯ ವಸ್ತು ಅಂತಾನೇ ಹೇಳಬಹುದು. ಈ ಸಿಲಿಂಡರ್‌ಗಳಲ್ಲಿ ಗ್ಯಾಸ್‌ ಎಷ್ಟು ಮುಗಿಯುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯವಾಗದ ಕಾರಣ ಗ್ಯಾಸ್‌ ಯಾವಾಗ ಖಾಲಿಯಾಗುತ್ತೆ ಅನ್ನೋದನ್ನು ಅಂದಾಜಿಸುವುದೇ ಹಲವರಿಗೆ ಕಷ್ಟದ ಕೆಲಸ. ಗ್ಯಾಸ್‌ ತನ್ನಿಂದ ತಾನಾಗಿ ಆಫ್‌ ಆದಾಗಲೇ ಗ್ಯಾಸ್‌ ಮುಗಿದಿದೆ ಎನ್ನುವುದು ತಿಳಿಯುವುದು. ಹೀಗೆ ಅರ್ಜೆಂಟ್‌ ಅಡುಗೆ ಮಾಡುವ ಸಂದರ್ಭದಲ್ಲಿ ಅರ್ಧದಲ್ಲಿಯೇ ಎಲ್.ಪಿ.ಜಿ ಗ್ಯಾಸ್‌ ಸಿಲಿಂಡಿರ್‌ ಖಾಲಿಯಾಗಿ ಹಲವರು ಫಜೀತಿಗೆ ಸಿಲುಕುತ್ತಿರುತ್ತಾರೆ. ಹೀಗಿರುವಾಗ ಈ ಸಿಂಪಲ್‌ ಟ್ರಿಕ್ಸ್‌ ಪಾಲಿಸುವ ಮೂಲಕ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್‌ ಖಾಲಿಯಾಗಿದೆ ಎಂಬುದನ್ನು ನಿಮಿಷಗಳಲ್ಲಿ ಕಂಡುಹಿಡಿಯಬಹುದು.

ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂದು ಕಂಡುಹಿಡಿಯುವುದು ಹೇಗೆ?

ನಿಮ್ಮ ಗ್ಯಾಸ್ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನು ನಿರ್ಧರಿಸಲು ನೀವು  ಸರಳ ತಂತ್ರವನ್ನು ಬಳಸಬಹುದು. ಈ ತಂತ್ರವನ್ನು salve_6717 ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ಮೊದಲು, ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಹಿಂಡಿ ತೆಗೆಯಿರಿ. ಒದ್ದೆಯಾದ ಬಟ್ಟೆಯಿಂದ ಸಿಲಿಂಡರ್ ಅನ್ನು ಚೆನ್ನಾಗಿ ಒದ್ದೆ ಮಾಡಿ, ಎರಡು ನಿಮಿಷ ಕಾಯಿರಿ. ಸಿಲಿಂಡರ್‌ನಲ್ಲಿ ಎಷ್ಟು ಭಾಗ ಒಣಗಿರುತ್ತದೆಯೋ ಅಷ್ಟು ಗ್ಯಾಸ್‌ ಖಾಲಿಯಾಗಿದೆ ಎಂದರ್ಥ. ಸಿಲಿಂಡರ್‌ನಿಂದ ನೀರು ಒಣಗಿದ್ದರೆ, ಯಾವುದೇ ಗ್ಯಾಸ್ ಉಳಿದಿಲ್ಲ ಎಂದರ್ಥ. ಗ್ಯಾಸ್ ತಂಪಾಗಿರುವುದರಿಂದ, ಸಿಲಿಂಡರ್‌ನಲ್ಲಿ ಗ್ಯಾಸ್‌ ಇರುವಷ್ಟು ಭಾಗ  ಒದ್ದೆಯಾಗಿ ಕಾಣುತ್ತದೆ, ಖಾಲಿ ಜಾಗ ಬೇಗನೆ ಒಣಗುತ್ತದೆ.

ವಿಡಿಯೋ ಇಲ್ಲಿದೆ ನೋಡಿ:‌

ಇದನ್ನೂ ಓದಿ: ನಿಮ್ಮ ಮನೆಯಂಗಳಕ್ಕೆ ಹಾವುಗಳು ಬರಬಾರದೆಂದರೆ, ಗಿಡವನ್ನು ನೆಡಿ

ಸಿಲಿಂಡರ್‌ನಲ್ಲಿ ಎಷ್ಟು ಅನಿಲ ಉಳಿದಿದೆ ಎಂದು ತಿಳಿಯಲಿರುವ ಬೇರೆ ಮಾರ್ಗಗಳು:

  • ಸಿಲಿಂಡರ್‌ನಲ್ಲಿ ಗ್ಯಾಸ್ ಮಟ್ಟವನ್ನು ಪರಿಶೀಲಿಸಲು ಸುಲಭ ಮತ್ತು ಜನಪ್ರಿಯ ಮಾರ್ಗವೆಂದರೆ ನೀರು. ಒಂದು ಗ್ಲಾಸ್ ಅಥವಾ ಮಗ್‌ನಲ್ಲಿ ನೀರಿನಿಂದ ತುಂಬಿಸಿ. ಈ ನೀರನ್ನು ಸಿಲಿಂಡರ್‌ನ ಮೇಲಿನಿಂದ ಕೆಳಕ್ಕೆ ನಿಧಾನವಾಗಿ ಸುರಿಯಿರಿ. ನಂತರ, ನಿಮ್ಮ ಕೈಯಿಂದ ಸಿಲಿಂಡರ್ ಅನ್ನು ಮೇಲಿನಿಂದ ಕೆಳಕ್ಕೆ ಸ್ಪರ್ಶಿಸಿ. ಸಿಲಿಂಡರ್ ತಂಪಾಗಿರುವ ಜಾಗದಷ್ಟು ಗ್ಯಾಸ್‌ ಇದೆ ಎಂದರ್ಥ.
  • ಸಿಲಿಂಡರ್ ಅನ್ನು ತೂಕ ಮಾಡುವ ಮೂಲಕ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನು ನೀವು ಪರೀಕ್ಷಿಸಬಹುದು. ಸಿಲಿಂಡರ್‌ನ ಒಟ್ಟು ತೂಕ ಮತ್ತು ಖಾಲಿ ತೂಕವನ್ನು ಸಿಲಿಂಡರ್‌ನಲ್ಲಿ ಮುದ್ರಿಸಲಾಗುತ್ತದೆ. ಎಷ್ಟು ಅನಿಲ ಉಳಿದಿದೆ ಎಂಬುದನ್ನು ನಿರ್ಧರಿಸಲು, ಒಟ್ಟು ತೂಕದಿಂದ ಖಾಲಿ ತೂಕವನ್ನು ಕಳೆಯಿರಿ. ಉದಾಹರಣೆಗೆ, ಒಟ್ಟು ತೂಕ5 ಕೆಜಿ ಮತ್ತು ಖಾಲಿ ತೂಕ 15.5 ಕೆಜಿ ಆಗಿದ್ದರೆ, ನಿಮ್ಮ ಸಿಲಿಂಡರ್‌ನಲ್ಲಿ ಸರಿಸುಮಾರು 13 ಕೆಜಿ ಅನಿಲ ಉಳಿದಿದೆ ಎಂದರ್ಥ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us