Turmeric Powder: ಸರಿಯಾದ ಅರಿಶಿನ ಪುಡಿಯನ್ನು ಆಯ್ಕೆ ಮಾಡುವುದು ಹೇಗೆ? ಖಾಲಿ ಹೊಟ್ಟೆಯಲ್ಲಿ ಸೇವಿಸುವ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 19, 2023 | 10:19 AM

ಆಹಾರದ ಜೊತೆ ಬಳಸುವುದರಿಂದ ಹಿಡಿದು ಔಷಧೀಯ ಸಿದ್ಧತೆಗಳವರೆಗೆ, ಅರಿಶಿನವನ್ನು ಆಯುರ್ವೇದವು ಒಟ್ಟಾರೆ ಯೋಗಕ್ಷೇಮಕ್ಕಾಗಿ ಶಿಫಾರಸು ಮಾಡಲಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Turmeric Powder: ಸರಿಯಾದ ಅರಿಶಿನ ಪುಡಿಯನ್ನು ಆಯ್ಕೆ ಮಾಡುವುದು ಹೇಗೆ? ಖಾಲಿ ಹೊಟ್ಟೆಯಲ್ಲಿ ಸೇವಿಸುವ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಅರಿಶಿನ (Turmeric) ಅನಾದಿ ಕಾಲದಿಂದಲೂ ಭಾರತೀಯ ಆಹಾರದ ಒಂದು ಭಾಗವಾಗಿದೆ. ನಾವು ದಿನನಿತ್ಯ ಆಹಾರದಲ್ಲಿ ಬಳಸುವುದರಿಂದ ಹಿಡಿದು ಔಷಧೀಯ ಸಿದ್ಧತೆಗಳವರೆಗೆ, ಉರಿಯೂತವನ್ನು ದೂರವಿಡಲು ಮತ್ತು ದೇಹಕ್ಕೆ ಅಗತ್ಯವಾದ ಉತ್ಕರ್ಷಣ ನಿರೋಧಕಗಳನ್ನು ಪೂರೈಸಲು ಅರಿಶಿನವನ್ನು ಆಯುರ್ವೇದವು ಶಿಫಾರಸು ಮಾಡುತ್ತದೆ. ಅರಿಶಿನವು ಕರ್ಕ್ಯುಮಿನ್ ಎಂಬ ಸಕ್ರಿಯ ಘಟಕಾಂಶವನ್ನು ಹೊಂದಿದ್ದು ಇದರಲ್ಲಿ ಶಕ್ತಿಯುತ ಗುಣಲಕ್ಷಣಗಳನ್ನು ನೀಡುತ್ತದೆ. ಅರಿಶಿನ ನಮ್ಮಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ವೇಗವಾಗಿ ಜನಪ್ರಿಯವಾಗುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅರಿಶಿನವು ಸಂಧಿವಾತ, ಆತಂಕ, ವ್ಯಾಯಾಮದ ನಂತರ ಸ್ನಾಯು ನೋವು ಮತ್ತು ಮೂತ್ರಪಿಂಡದ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.

ಸರಿಯಾದ ಅರಿಶಿನ ಪುಡಿಯನ್ನು ಆಯ್ಕೆ ಮಾಡುವುದು ಹೇಗೆ?

ಅರಿಶಿನದ ಪುಡಿಯನ್ನು ಪಲ್ಯಗಳು, ತರಕಾರಿಗಳು ಬೇಯಿಸಲು, ಪೋಹಾ, ಸೂಪ್ ಇತ್ಯಾದಿಗಳಲ್ಲಿ ಬಳಸುವ ಮೂಲಕ ನಮ್ಮ ದೈನಂದಿನ ಆಹಾರದಲ್ಲಿ ಸುಲಭವಾಗಿ ಸೇರಿಸಿಕೊಂಡಿರುತ್ತೇವೆ. ಉರಿಯೂತವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವ ಮತ್ತು ಕರ್ಕ್ಯುಮಿನ್​​​ನ ಇತರ ಪ್ರಯೋಜನಗಳನ್ನು ಒದಗಿಸುವ ಸರಿಯಾದ ಅರಿಶಿನ ಪುಡಿಯನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. ಏಕೆಂದರೆ ಮಾರುಕಟ್ಟೆಯಲ್ಲಿ ನಮಗೆ ವಿಧ ವಿಧವಾದ ಅರಿಶಿನ ಪುಡಿ ಸಿಗುವುದರಿಂದ ಯಾವುದು ಒಳ್ಳೆಯದು ಅಥವಾ ಯಾವುದರಲ್ಲಿ ಬೇರೆ ಅಂಶ ಮಿಶ್ರಣವಾಗಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ಈ ಬಗ್ಗೆ ಪೌಷ್ಟಿಕ ತಜ್ಞೆ ಅವಂತಿ ದೇಶಪಾಂಡೆ ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹೆಚ್ಚಿನ ಕರ್ಕ್ಯುಮಿನ್ ಪಡೆಯಲು ಅತೀ ಹೆಚ್ಚು ಹಳದಿ ಬಣ್ಣವನ್ನು ಹೊಂದಿರುವ ಅರಿಶಿನವನ್ನು ಸೇವಿಸಬೇಕು ಎಂದು ಹಂಚಿಕೊಂಡಿದ್ದಾರೆ. ಅಂತಹ ಅರಿಶಿನವು 3% ಬದಲಿಗೆ 7% ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ, ಇದು ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದಾರೆ.

ಅರಿಶಿನದ ಪ್ರಯೋಜನಗಳು:

-ಉರಿಯೂತ ಶಮನಕಾರಿ: ಅರಿಶಿನದಲ್ಲಿನ ಸಕ್ರಿಯ ಅಂಶವಾದ ಕರ್ಕ್ಯುಮಿನ್ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

-ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಕರ್ಕ್ಯುಮಿನ್ ಆರೋಗ್ಯಕರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ದೇಹ ಯಾವುದೇ ರೋಗದಿಂದ ಭಾದಿಸದಿರುವಂತೆ ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ.

-ಅರಿವಿನ ಸ್ವಾಸ್ಥ್ಯ: ಅರಿಶಿನವು ಸುಧಾರಿತ ಜ್ಞಾಪಕ ಶಕ್ತಿ ಮತ್ತು ಮೆದುಳಿನ ಕಾರ್ಯ ಸೇರಿದಂತೆ ಸಂಭಾವ್ಯ ಅರಿವಿನ ಪ್ರಯೋಜನಗಳನ್ನು ಸಹ ಒದಗಿಸುತ್ತದೆ.

-ಹೃದಯದ ಆರೋಗ್ಯಕ್ಕೆ ಬೆಂಬಲ ನೀಡುತ್ತದೆ: ಹೃದಯ ರಕ್ತನಾಳದ ಯೋಗಕ್ಷೇಮವನ್ನು ಉತ್ತೇಜಿಸುವ ಮೂಲಕ ಕರ್ಕ್ಯುಮಿನ್ ಆರೋಗ್ಯಕರ ಹೃದಯಕ್ಕೆ ಕೊಡುಗೆ ನೀಡಬಹುದು.

-ಕೀಲು ನೋವು ನಿವಾರಕ: ಕರ್ಕ್ಯುಮಿನ್ ಕೀಲು ನೋವನ್ನು ನಿವಾರಿಸುತ್ತದೆ ಮತ್ತು ಒಟ್ಟಾರೆ ಕೀಲಿನ ಆರೋಗ್ಯವನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತದೆ.

-ಉತ್ಕರ್ಷಣ ನಿರೋಧಕದ ಶಕ್ತಿ ಕೇಂದ್ರ: ಕರ್ಕ್ಯುಮಿನ್ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

-ಜೀರ್ಣಾಂಗ ಸಾಮರಸ್ಯ: ಕರ್ಕ್ಯುಮಿನ್ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಬೆಂಬಲಿಸಲು ಮತ್ತು ಜೀರ್ಣಕಾರಿ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

-ಒಟ್ಟಾರೆ ಯೋಗಕ್ಷೇಮಕ್ಕೆ ಸಹಕಾರಿ: ಕರ್ಕ್ಯುಮಿನ್ ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಚೈತನ್ಯಕ್ಕೆ ಕೊಡುಗೆ ನೀಡುವ ಸಮಗ್ರ ಪ್ರಯೋಜನಗಳನ್ನು ಒದಗಿಸುತ್ತದೆ.

ಇದನ್ನೂ ಓದಿ: White Turmeric: ಬಿಳಿ ಅರಿಶಿನದ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ

ಆಹಾರದಲ್ಲಿ ಅರಿಶಿನ ಪುಡಿಯನ್ನು ಸೇರಿಸುವ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ:

-1/2 ಟೀ ಸ್ಪೂನ್ ಅರಿಶಿನ ಪುಡಿಯನ್ನು ನೀರಿಗೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

-ಬಾದಾಮಿ ಅಥವಾ ಹಸುವಿನ ಹಾಲಿಗೆ 1/2 ಟೀ ಸ್ಪೂನ್ ಅರಿಶಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಒಳ್ಳೆಯದು.

-ಶುದ್ಧ ತೆಂಗಿನ ಎಣ್ಣೆ / ತುಪ್ಪಕ್ಕೆ 1/2 ಟೀ ಸ್ಪೂನ್ ಅರಿಶಿನ ಪುಡಿಯನ್ನು ಸೇರಿಸಿ. ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ದೇಹಕ್ಕೆ ತುಂಬಾ ಒಳ್ಳೆಯದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: