AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NATIONAL READING DAY 2023: ಜೂನ್ 19ರಂದು ರಾಷ್ಟ್ರೀಯ ಓದುವ ದಿನವಾಗಿ ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ

ರಾಷ್ಟ್ರೀಯ ಓದುವ ದಿನವನ್ನು ಪಿ.ಎನ್.ಪಣಿಕ್ಕರ್ ಅವರ ಪುಣ್ಯತಿಥಿಯಂದು ಆಚರಿಸಲಾಗುತ್ತದೆ ಈ ದಿನದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

NATIONAL READING DAY 2023: ಜೂನ್ 19ರಂದು ರಾಷ್ಟ್ರೀಯ ಓದುವ ದಿನವಾಗಿ ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 19, 2023 | 2:21 PM

Share

ಓದುವಿಕೆಯು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುವುದಲ್ಲದೆ, ನಿಮ್ಮ ಸಂವಹನ ಕೌಶಲ್ಯಗಳನ್ನು ಹೆಚ್ಚಿಸಲು, ಒಂದು ವಿಷಯದ ಬಗ್ಗೆ ಕೇಂದ್ರೀಕರಿಸಲು ಮತ್ತು ನಿಮ್ಮ ಭಾಷಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಅತ್ಯಗತ್ಯ ಚಟುವಟಿಕೆಯಾಗಿದೆ. ಅಂತರ್ಜಾಲ ಬಳಸುವ ಮೊದಲು ಮತ್ತು ದೂರದರ್ಶನಕ್ಕೆ ಮುಂಚಿತವಾಗಿ, ಜನರು ಸಂವಹನ ಮಾಧ್ಯಮವಾಗಿ ಓದುವುದನ್ನು ಅವಲಂಬಿಸಿದ್ದರು. ಆದರೆ ದಿನಕಳೆದಂತೆ ಓದುವ ಹವ್ಯಾಸ ಕಡಿಮೆಯಾಗಿದೆ. ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪುಸ್ತಕಗಳ ಮೇಲಿರುವ ಪ್ರೀತಿ ಹೆಚ್ಚಿಸಲು ಈ ದಿನವನ್ನು ಭಾರತದ ಗ್ರಂಥಾಲಯ ಚಳುವಳಿಯ ಪಿತಾಮಹರಾದ ದಿವಂಗತ ಪಿ.ಎನ್.ಪಣಿಕ್ಕರ್ ರವರ ಪುಣ್ಯತಿಥಿಯಂದು ಅವರ ಸವಿನೆನಪಿಗಾಗಿ ರಾಷ್ಟ್ರೀಯ ಓದುವ ದಿನವನ್ನು ಆಚರಿಸಲಾಗುತ್ತದೆ. ಮತ್ತು ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಯ ಸಾಧನವಾಗಿ ಓದುವಿಕೆಯನ್ನು ಉತ್ತೇಜಿಸುವ ಅವರ ದೃಷ್ಟಿಕೋನ, ಉತ್ಸಾಹ ಮತ್ತು ಅಚಲ ಬದ್ಧತೆಗೆ ಗೌರವ ನೀಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಓದುವ ಆನಂದವನ್ನು ಹೆಚ್ಚಿಸಲು, ಪುಸ್ತಕಗಳಲ್ಲಿ ಲಭ್ಯವಿರುವ ಜ್ಞಾನದ ಸಂಪತ್ತನ್ನು ಅನ್ವೇಷಿಸಲು, ಓದುವ ಪರಿವರ್ತಕ ಶಕ್ತಿಯನ್ನು ಗುರುತಿಸಲು ಇದು ವ್ಯಕ್ತಿಗಳನ್ನು ಪ್ರೋತ್ಸಾಹಿಸುತ್ತದೆ.

ರಾಷ್ಟ್ರೀಯ ಓದುವ ದಿನ: ಇತಿಹಾಸ ಮತ್ತು ಮಹತ್ವ ಬಗ್ಗೆ ಇಲ್ಲಿದೆ ಮಾಹಿತಿ

ಭಾರತದಲ್ಲಿ ಸಾಕ್ಷರತಾ ಆಂದೋಲನಕ್ಕೆ ಪಿ.ಎನ್. ಪಣಿಕ್ಕರ್ ಅವರ ಕೊಡುಗೆಗಳ ಗೌರವಾರ್ಥವಾಗಿ ರಾಷ್ಟ್ರೀಯ ಓದುವ ದಿನವನ್ನು ಪ್ರಾರಂಭಿಸಲಾಯಿತು. ಅಂದಿನಿಂದ ಇದು ಓದುವ ಸಂತೋಷ ಮತ್ತು ಅದರ ಶೈಕ್ಷಣಿಕ ಪ್ರಯೋಜನಗಳ ವ್ಯಾಪಕ ಆಚರಣೆಯಾಗಿ ಮಾರ್ಪಟ್ಟಿದೆ. ಕೇರಳದ ಗ್ರಂಥಾಲಯ ಚಳವಳಿಯ ಪಿತಾಮಹ ಎಂದು ಕರೆಯಲ್ಪಡುವ ಪಿ.ಎನ್.ಪಣಿಕ್ಕರ್ ಅವರು ಜೂನ್ 19, 1995 ರಂದು ನಿಧನರಾದರು. ಅವರ ಪರಂಪರೆಯನ್ನು ಸ್ಮರಿಸುವ ಒಂದು ಮಾರ್ಗ ಇದಾಗಿದೆ. ಹಾಗಾಗಿ ಪಣಿಕ್ಕರ್ ಅವರ ಪುಣ್ಯತಿಥಿಯಂದು ರಾಷ್ಟ್ರೀಯ ಓದುವ ದಿನವನ್ನು ಆಚರಿಸಲಾಗುತ್ತದೆ. ಈ ಅಂಗವಾಗಿ ಕೇರಳದ ಶಿಕ್ಷಣ ಸಚಿವಾಲಯವು ಜೂನ್ 19 ರಿಂದ 25 ರವರೆಗೆ ವಯನಾ ವಾರಂ ಎಂದು ಕರೆಯಲ್ಪಡುವ ಓದುವ ವಾರ ಅಂದರೆ ಪುಸ್ತಕ ಮೇಳವನ್ನು ಆಯೋಜಿಸುತ್ತದೆ.

ರಾಷ್ಟ್ರೀಯ ಓದಿನ ದಿನವನ್ನು 1996 ರಲ್ಲಿ ಕೇರಳದಲ್ಲಿ, ಪಣಿಕ್ಕರ್ ರವರ ಸ್ಮರಣಾರ್ಥ ಆಚರಣೆ ಮಾಡಲಾಯಿತು. 2017 ರಲ್ಲಿ ಪಿಎಂ ನರೇಂದ್ರ ಮೋದಿರವರು 22ನೇ ನ್ಯಾಷನಲ್ ರೀಡಿಂಗ್ ಮಂಥ್ ಅನ್ನು ಉದ್ಘಾಟನೆ ಮಾಡಿದರು. ಕೇರಳ ರಾಜ್ಯದಿಂದ ರಾಷ್ಟ್ರೀಯ ಮಟ್ಟಕ್ಕೆ ‘Read and Grow’ ಎಂಬ ಕರೆಯನ್ನು ನೀಡಲಾಗಿದೆ.

ಇದನ್ನೂ ಓದಿ; National Watch Day 2023: ರಾಷ್ಟ್ರೀಯ ಗಡಿಯಾರ ದಿನದ ಇತಿಹಾಸ, ಮಹತ್ವ, ನೀವು ತಿಳಿದುಕೊಳ್ಳಬೇಕಾದ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ!

ರಾಷ್ಟ್ರೀಯ ಓದುವಿಕೆ ದಿನವನ್ನು ಹೇಗೆ ಆಚರಿಸುವುದು?

ಓದುವ ಬಗ್ಗೆ ಹಿಂದೆ ನಡೆದ ಘಟನೆಗಳು ಮತ್ತು ಸ್ಪರ್ಧೆಗಳನ್ನು ನಡೆಸುವ ಮೂಲಕ ದಿನವನ್ನು ಆಚರಿಸಲಾಗುತ್ತದೆ. ಓದುವಿಕೆಯನ್ನು ಅಭ್ಯಾಸವಾಗಿ ಬದಲಾಯಿಸಲು ವಿವಿಧ ಪುಸ್ತಕ ಮಳಿಗೆಗಳನ್ನು ವಿಶ್ವದ ವಿವಿಧ ಭಾಗಗಳಲ್ಲಿ ನಡೆಸಿ ಮಕ್ಕಳ ಜೊತೆಗೆ ಯುವಕರ ಗಮನ ಸೆಳೆಯುವುದು. ಈ ದಿನ, ನಿಮ್ಮ ಸ್ನೇಹಿತ ಅಥವಾ ಕುಟುಂಬದ ಸದಸ್ಯರಿಗೆ ನೀವು ಕೆಲವು ನಿಮಗಿಷ್ಟವಾದ ಪುಸ್ತಕಗಳನ್ನು ಸೂಚಿಸಬಹುದು ಮತ್ತು ಅವುಗಳನ್ನು ಓದಲು ಪ್ರೋತ್ಸಾಹಿಸಬಹುದು. ನಿಮ್ಮ ಶಬ್ದಕೋಶ, ಮೆಮೊರಿ ಶಕ್ತಿ, ಏಕಾಗ್ರತೆ, ಆಲಿಸುವ ಕೌಶಲ್ಯ ಮತ್ತು ಇನ್ನೂ ಅನೇಕ ವರ್ತನೆಗಳನ್ನು ಸುಧಾರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: