World Refugee Day 2023: ವಿಶ್ವ ನಿರಾಶ್ರಿತರ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
ಪ್ರಪಂಚದಾದ್ಯಂತ ನಿರಾಶ್ರಿತರು ಎದುರಿಸುತ್ತಿರುವ ಹೋರಾಟಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಪ್ರತಿವರ್ಷ ಜೂನ್ 20 ರಂದು ಆಚರಿಸಲಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ನಿಮಗೆ ತಿಳಿದಿರಬಹುದು, ಜಗತ್ತಿನಲ್ಲಿ ಅನೇಕ ಕಾರಣಗಳಿಂದ ಮೂಲ ಸೌಕರ್ಯಗಳಿಂದ ವಂಚಿತರಾಗಿ ನಿರಾಶ್ರಿತರಾದವರು ನಮ್ಮ ಸುತ್ತಲೂ ವಾಸಿಸುತ್ತಿದ್ದಾರೆ. ಇದಕ್ಕಾಗಿಯೇ ಪ್ರಪಂಚದಾದ್ಯಂತ ನಿರಾಶ್ರಿತರು ಎದುರಿಸುತ್ತಿರುವ ಹೋರಾಟಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಪ್ರತಿವರ್ಷ ಜೂನ್ 20 ರಂದು ಆಚರಿಸಲಾಗುತ್ತದೆ. ಯುನೈಟೆಡ್ ನೇಷನ್ಸ್ ವರ್ಲ್ಡ್ ಪ್ರತಿ ವರ್ಷ ಈ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ವಿಶ್ವಾದ್ಯಂತ ಇರುವ ನಿರಾಶ್ರಿತರ ಸ್ಥಿತಿಗತಿಗಳ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಜೊತೆಗೆ ಪ್ರಕೃತಿ ವಿಕೋಪಗಳಿಂದಾಗಿ ಜನರು ನೀರು ಪಾಲಾಗಿ ವಲಸೆಗೆ ಮುಖ ಮಾಡುವುದು ಒಂದೆಡೆಯಾದರೆ, ಯುದ್ಧ, ರಾಜಕೀಯ ಕ್ಷೋಭೆ, ಹಿಂಸಾಚಾರ ಇತ್ಯಾದಿ ಬೇರೆ ಬೇರೆ ಕಾರಣಗಳಿಂದ ದಮನ ಕ್ಕೊಳಪಟ್ಟು ತಮ್ಮ ದೇಶಗಳನ್ನು ತೊರೆದು ಬೇರೆ ಪ್ರದೇಶಗಳಿಗೆ ಆಶ್ರಯಕ್ಕೆ ಬಂದಿರುವ ಲಕ್ಷಾಂತರ ಮಂದಿ ಇದ್ದಾರೆ. ಇವರ ಸ್ಥಿತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಆಶಯವಾಗಿದೆ.
ಜನರು ನಿರಾಶ್ರಿತರಾಗಲು ಯುದ್ಧ, ಬಿಕ್ಕಟ್ಟು, ಹಿಂಸಾಚಾರ ಇತ್ಯಾದಿ ಹಲವು ಕಾರಣಗಳಿವೆ. ಈ ರೀತಿಯಾಗಿ ಈವರೆಗೂ ವಿಶ್ವಾದ್ಯಂತ 10 ಕೋಟಿಗೂ ಹೆಚ್ಚು ಮಂದಿ ತಮ್ಮ ಮನೆ ಜಾಗಗಳನ್ನು ತೊರೆದು ಹೋಗಿದ್ದಾರಂತೆ. ಅಂದರೆ ಇಡೀ ಮಾನವಕುಲದ ಶೇ. ಒಂದರಷ್ಟು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳುತ್ತದೆ.
ಅದಲ್ಲದೆ ಜಗತ್ತಿನಾದ್ಯಂತ ಅನೇಕ ಕಾರಣಗಳಿಂದ ಲಕ್ಷಾಂತರ ಅಮಾಯಕರು ಆಹಾರ, ಬಟ್ಟೆ, ವಸತಿ, ಕುಟುಂಬ, ಶಿಕ್ಷಣ, ಮತ್ತು ಬದುಕುವ ಹಕ್ಕನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂಥ ಪರಿಸ್ಥಿತಿಯನ್ನು ಕೂಡ ಲಾಭ ಪಡೆದುಕೊಳ್ಳುತ್ತಿದ್ದು, ಕಾನೂನು ಬಾಹಿರ ಚಟುವಟಿಕೆಯಲ್ಲಿ ಅವರನ್ನು ಬಳಸಿಕೊಳ್ಳುತ್ತ ಬಂದಿರುವ ಉದಾಹರಣೆಗಳು ನೂರಾರು ವರ್ಷಗಳಿಂದ ನಡೆಯುತ್ತಿದೆ ಎನ್ನುವುದು ವಿಷಾದ, ಹಾಗಾಗಿ ಇದೆಲ್ಲದಕ್ಕೂ ಮುಕ್ತಿ ನೀಡಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ಇದನ್ನೂ ಓದಿ: World Anti-Child Labor Day 2023: ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಇತಿಹಾಸ, ಮಹತ್ವ ಇಲ್ಲಿದೆ
ನಿರಾಶ್ರಿತರ ದಿನದ ಇತಿಹಾಸ:
ವಿಶ್ವ ಸಂಸ್ಥೆಯು 1951ರಲ್ಲಿ ನಿರಾಶ್ರಿತರ ಸ್ಥಿತಿಗತಿ ಸಂಬಂಧಿತ ಸಮಾವೇಶವನ್ನು ನಡೆಸಿತ್ತು. ಬಳಿಕ ಅದರ ವಜ್ರ ಮಹೋತ್ಸವ (50ನೇ ವಾರ್ಷಿಕೋತ್ಸವ) 2001 ಜೂನ್ 20ರಂದು ನಡೆಸಲಾಯಿತು. ನಂತರ ಆ ದಿನವನ್ನು ವಿಶ್ವ ನಿರಾಶ್ರಿತರ ದಿನವಾಗಿ ಘೋಷಣೆ ಮಾಡಲಾಯಿತು. ಆಗಿನಿಂದ ಪ್ರತೀ ವರ್ಷ ಜೂನ್ 20ರಂದು ನಿರಾಶ್ರಿತರ ದಿನವಾಗಿ ಆಚರಿಸಲಾಗುತ್ತಿದೆ.
ಆಚರಣೆ ಹೇಗೆ?
ನಿರಾಶ್ರಿತರಿಗೆ ಸಂಬಂಧಪಟ್ಟಂತೆ ಅನೇಕ ಚಟುವಟಿಕೆಗಳನ್ನು ನಡೆಸುವ ಮೂಲಕ ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಬಹುದು. ಜತೆಗೆ ನಿರಾಶ್ರಿತರು ಎದುರಿಸುತ್ತಿರುವ ಸಮಸ್ಯೆಗಳು, ಅವರ ಸ್ಥಿತಿಗತಿಗಳ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: