Dark Neck: ಕುತ್ತಿಗೆ ಭಾಗ ಕಪ್ಪಾಗಿದ್ದರೆ,ಈ ಸಿಂಪಲ್​​ ಮನೆಮದ್ದು ಟ್ರೈ ಮಾಡಿ

ಇನ್ಸುಲಿನ್ ಪ್ರತಿರೋಧ ಮತ್ತು ಬೊಜ್ಜು ಕೂಡ ಕುತ್ತಿಗೆ ಭಾಗ ಕಪ್ಪಾಗಲು ಕಾರಣವಾಗಬಹುದು. ಆದ್ದರಿಂದ ಈ ಸಮಸ್ಯೆಯನ್ನು ತೊಡೆದುಹಾಕಲು ಈ ಕೆಲವು ಸಿಂಪಲ್​ ಮನೆಮದ್ದು ಟ್ರೈ ಮಾಡಿ.

Dark Neck: ಕುತ್ತಿಗೆ ಭಾಗ ಕಪ್ಪಾಗಿದ್ದರೆ,ಈ ಸಿಂಪಲ್​​ ಮನೆಮದ್ದು ಟ್ರೈ ಮಾಡಿ
Dark Neck

Updated on: Jan 16, 2024 | 7:12 PM

ಮಹಿಳೆಯರು ತಮ್ಮ ದೇಹದ ಪ್ರತಿಯೊಂದು ಭಾಗವನ್ನು ಸುಂದರವಾಗಿಡಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ನಿಮ್ಮ ಮುಖ ಕಾಂತಿಯುತವಾಗಿ ಸುಂದರವಾಗಿದ್ದರೆ, ಕತ್ತಿನ ಕೆಳಭಾಗ ಕಪ್ಪಾಗಿರುತ್ತದೆ. ಇದು ನಿಮ್ಮ ಸೌಂದರ್ಯವನ್ನು ಹಾಳು ಮಾಡಿಬಿಡುತ್ತದೆ. ಮಾಲಿನ್ಯ, ಬಿಸಿಲು, ಹಾರ್ಮೋನ್ ಬದಲಾವಣೆಯಿಂದ ಕುತ್ತಿಗೆ ಕಪ್ಪಾಗುತ್ತದೆ. ಇನ್ಸುಲಿನ್ ಪ್ರತಿರೋಧ ಮತ್ತು ಬೊಜ್ಜು ಕೂಡ ಕುತ್ತಿಗೆ ಭಾಗ ಕಪ್ಪಾಗಲು ಕಾರಣವಾಗಬಹುದು. ಆದ್ದರಿಂದ ಈ ಸಮಸ್ಯೆಯನ್ನು ತೊಡೆದುಹಾಕಲು ಈ ಕೆಲವು ಸಿಂಪಲ್​ ಮನೆಮದ್ದು ಟ್ರೈ ಮಾಡಿ.

ಕಿತ್ತಳೆ ಸಿಪ್ಪೆಯ ಪುಡಿ:

ಇನ್ನು ಮುಂದೆ ಕಿತ್ತಳೆ ಹಣ್ಣು ತಿಂದ ಬಳಿಕ ಅದರ ಸಿಪ್ಪೆಯನ್ನು ಬಿಸಾಡಬೇಡಿ. ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಬೇಕು. ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಗೆ ಕಿತ್ತಳೆ ರಸ ಅಥವಾ ಹಾಲು ಸೇರಿಸಿ ಪೇಸ್ಟ್ ಮಾಡಿ. ಇದನ್ನು ಕುತ್ತಿಗೆಗೆ ಹಚ್ಚಿ ಹತ್ತು ನಿಮಿಷ ಕಾಯಿರಿ ಮತ್ತು ತೊಳೆಯಿರಿ. ಹೀಗೆ ನಿರಂತರವಾಗಿ ಮಾಡಿದರೆ ತ್ವಚೆಯು ಸಾಮಾನ್ಯ ಬಣ್ಣಕ್ಕೆ ತಿರುಗುತ್ತದೆ. ವಾರದಲ್ಲಿ ಎರಡು ಬಾರಿ ಇದನ್ನು ಮಾಡಿ. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ಕುತ್ತಿಗೆ ಕಪ್ಪಾಗುವುದನ್ನು ತಡೆಯುತ್ತದೆ.

ಓಟ್ಸ್:

ಓಟ್ಸ್ ಚರ್ಮವನ್ನು ಶುದ್ಧೀಕರಿಸಲು ಮತ್ತು ಆರ್ಧ್ರಕಗೊಳಿಸಲು ಬಹಳ ಸಹಾಯಕವಾಗಿದೆ. ಕಪ್ಪು ಮೈಬಣ್ಣವು ಚರ್ಮವನ್ನು ಹಗುರಗೊಳಿಸಲು ಸಹ ಪರಿಣಾಮಕಾರಿಯಾಗಿದೆ. ಸ್ವಲ್ಪ ಓಟ್ಸ್ ಅನ್ನು ನುಣ್ಣಗೆ ಪುಡಿ ಮಾಡಿ. ಈ ಪುಡಿಯಲ್ಲಿ ಟೊಮೆಟೊ ಪೇಸ್ಟ್ ಬೆರೆಸಿ ಕುತ್ತಿಗೆ ಭಾಗಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ. ಹೀಗೆಯೇ ಮುಂದುವರಿದರೆ.. ಒಳ್ಳೆಯ ಫಲಿತಾಂಶ ಸಿಗುತ್ತದೆ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿ.

ಇದನ್ನೂ ಓದಿ: ಚುಮು ಚುಮು ಚಳಿಯಲ್ಲಿ ಮೃದು ಕೋಮಲ ತುಟಿಗಳಿಗೂ ಬೇಕು ಆರೈಕೆ, ಇಲ್ಲಿದೆ ಸಿಂಪಲ್ ಟಿಪ್ಸ್

ಕಾಫಿ ಪುಡಿ:

ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕಾಫಿ ಪೌಡರ್ ಕೂಡ ಚೆನ್ನಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಟೈರಸಿನ್ ಅನ್ನು ತಡೆಯುತ್ತದೆ ಮತ್ತು ಮೆಲನಿನ್ ಅನ್ನು ಉತ್ಪಾದಿಸುತ್ತದೆ. ಆದ್ದರಿಂದ ನೀವು ಕಪ್ಪು ಕುತ್ತಿಗೆಯನ್ನು ಸುಲಭವಾಗಿ ತೊಡೆದುಹಾಕಬಹುದು. ಕಾಫಿ ಪುಡಿಗೆ ರೋಸ್ ವಾಟರ್ ಸೇರಿಸಿ ಪೇಸ್ಟ್ ಮಾಡಿ. ಇದನ್ನು ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ. ಈ ರೀತಿ ಆಗಾಗ ಮಾಡುವುದರಿಂದ ಕತ್ತಿನ ಭಾಗ ಕಪ್ಪಾಗಿರುವುದು ಕಡಿಮೆಯಾಗುತ್ತದೆ. ವಾರಕ್ಕೊಮ್ಮೆ ಇದನ್ನು ಮಾಡಿ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ