AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣಿನ ಕೆಳಭಾಗದ ಕಪ್ಪು ವರ್ತುಲಗಳಿಗೆ ಕಾರಣವೇನು? ಅವುಗಳನ್ನು ಹೇಗೆ ಸರಿಪಡಿಸಬಹುದು?

ಕಣ್ಣಿನ ಕೆಳಭಾಗದಲ್ಲಿರುವ ಡಾರ್ಕ್ ಸರ್ಕಲ್‌ಗಳಿಗೆ ಹಲವು ಕಾರಣಗಳಿವೆ ಹಾಗೂ ಸಮಸ್ಯೆಯ ಮೂಲವನ್ನು ಗುರುತಿಸುವ ಮೂಲಕ ಅವುಗಳನ್ನು ತೊಡೆದುಹಾಕಲು ಮತ್ತು ನಿಮ್ಮ ಉತ್ತಮ ನೋಟವನ್ನು ಮರಳಿ ಪಡೆಯಲು ನೀವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಕಣ್ಣಿನ ಕೆಳಭಾಗದ ಕಪ್ಪು ವರ್ತುಲಗಳಿಗೆ ಕಾರಣವೇನು? ಅವುಗಳನ್ನು ಹೇಗೆ ಸರಿಪಡಿಸಬಹುದು?
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Mar 23, 2023 | 3:40 PM

Share

ಅನೇಕ ಜನರಿಗೆ ಕಣ್ಣುಗಳ ಕೆಳಗಿರುವ ಕಪ್ಪು ವಲಯಗಳು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿವೆ. ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳಿಂದ ನೀವು ದಣಿದಿರುವಂತರ, ವಯಸ್ಸಾದವರಂತೆ ಮತ್ತು ಅನಾರೋಗ್ಯದಿಂದ ಕೂಡಿರುವಂತೆ ಮಾಡಬಹುದು. ಡಾರ್ಕ್ ಸರ್ಕಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ಸೌಂದರ್ಯವರ್ಧಕ ಚಿಕಿತ್ಸೆಗಳು ಲಭ್ಯವಿದ್ದರೂ, ಮೊದಲು ಅವುಗಳಿಗೆ ಕಾರಣ ಏನು ಎಂಬುವುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಜೀವನಶೈಲಿ, ಆರೋಗ್ಯದ ಪರಿಸ್ಥಿತಿಗಳು ಮುಂತಾದ ಕಾರಣಗಳಿಂದ ಡಾರ್ಕ್ ಸರ್ಕಲ್‌ಗಳು ಉಂಟಾಗಬಹುದು. ಈ ಕಣ್ಣಿನ ಕೆಳಭಾಗದ ಕಪ್ಪು ವರ್ತುಲಗಳು ಸಾಮಾನ್ಯವಾಗಿ ಗಂಭೀರವಾದ ವೈದ್ಯಕೀಯ ಸಮಸ್ಯೆಯಲ್ಲದಿದ್ದರೂ, ಅದು ನಮ್ಮ ನೋಟವನ್ನು ಕುಗ್ಗಿಸುವಂತೆ ಮಾಡುತ್ತದೆ. ಈ ಡಾರ್ಕ್ ಸರ್ಕಲ್‌ಗಳಿಗೆ ಕಾರಣಗಳು ಏನೆಂಬುವುದನ್ನು ತಿಳಿದುಕೊಳ್ಳುವ ಮೂಲಕ ಅವುಗಳಿಗೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದರಿಂದ ನಿಮ್ಮ ಚರ್ಮ ಹಾಗೂ ಸೌಂದರ್ಯ ಸುಧಾರಿಸುವುದರ ಜೊತೆಗೆ ಆತ್ಮವಿಶ್ವಾಸದಿಂದ ನೀವು ಮುನ್ನಡೆಯಬಹುದು.

ಸೌಂದರ್ಯಶಾಸ್ತ್ರಜ್ಞೆ ಹಾಗೂ ಕಾಮೆಟಾಲಜಿಸ್ಟ್ ಮೇಧಾ ಸಿಂಗ್ ಹೇಳುತ್ತಾರೆ, ನಿಮಗೆ ವಯಸ್ಸಾದಂತೆ ಕಣ್ಣುಗಳ ಕೆಳಗಿನ ಚರ್ಮವು ಕೊಬ್ಬು ಮತ್ತು ಕಾಲಜನ್‌ನನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ನೀಲಿ ರಕ್ತನಾಳಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ಡಾರ್ಕ್ ಸರ್ಕಲ್‌ಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಹೆಚ್ಚು ಮೊಬೈಲ್, ಟಿವಿಗಳನ್ನು ನೋಡುವ ಮೂಲಕ, ಸರಿಯಾಗಿ ನಿದ್ರೆ ಮಾಡದಿದ್ದರೆ, ಮಾನಸಿಕ ಒತ್ತಡ ಹಾಗೂ ಕಣ್ಣುಗಳನ್ನು ಸರಿಯಾಗಿ ತೊಳೆಯದಿದ್ದರೂ ಈ ಡಾರ್ಕ್ ಸರ್ಕಲ್‌ಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಪ್ರತಿದಿನ ರಾತ್ರಿ ಕಣ್ಣುಗಳಿಗೆ ಆರ್ಗನ್ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದು, ವಾರಕ್ಕೆ ಒಂದು ಬಾರಿ ಫೇಸ್ ಮಾಸ್ಕ್ ಹಾಕುವುದು, ಪ್ರತಿನಿತ್ಯ ಒಳ್ಳೆಯ ನಿದ್ರೆಯನ್ನು ಮಾಡುವ ಮೂಲಕ ಡಾರ್ಕ್ ಸರ್ಕಲ್‌ಗಳನ್ನು ಕಡಿಮೆ ಮಾಡಬಹುದು.”

ಇದನ್ನೂ ಓದಿ;Loneliness Health Issues: ಒಂಟಿತನದಿಂದ ಈ 5 ಗಂಭೀರ ಕಾಯಿಲೆ ಬರಬಹುದು

ಕೇವಲ ಕಣ್ಣಿನ ಡಾರ್ಕ್ ಸರ್ಕಲ್‌ಗಳನ್ನು ತಡೆಯುವುದು ಮಾತ್ರವಲ್ಲ. ಆ ಸ್ನಾಯುಗಳು ಮುಖದ ಎಲ್ಲಾ ಭಾಗಗಳಲ್ಲಿ ಸಂಪರ್ಕ ಹೊಂದಿರುವುದರಿಂದ ಇಡಿ ಮುಖ ಮತ್ತು ಕತ್ತಿನ ಕಾಳಜಿಯನ್ನು ವಹಿಸುವುದು ಕೂಡಾ ಮುಖ್ಯವಾಗಿರುತ್ತದೆ. ದೇಹದ ಒಂದು ಪ್ರದೇಶದ ರಕ್ತದ ಹರಿವು ಮುಖದ ವಿವಿಧ ಭಾಗಗಳಿಗೆ ಹರಿದು ಹೋಗುತ್ತದೆ. ನಾವು ಸೇವಿಸುವ ಆಹಾರವು ನಮ್ಮ ಬಾಹ್ಯ ನೋಟದ ಮೇಲೆ ತಕ್ಷಣದ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಶಗಳೊಂದಿಗೆ ಸಮತೋಲಿತ ಆಹಾರಗಳನ್ನು ಸೇವನೆ ಮಾಡಬೇಕು. ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಉತ್ತಮವಾದ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸುಲಭವಾದ ಕ್ರಮಗಳನ್ನು ಅನುಸರಿಸಬೇಕು. ಅಲೋವೆರಾ ಪ್ಯಾಕ್‌ಗಳನ್ನು ಪ್ರತಿದಿನ ಹದಿನೈದು ನಿಮಿಷಗಳ ಕಾಲ ಕಣ್ಣುಗಳ ಕೆಳಭಾಗ ಮತ್ತು ಕಣ್ಣಿನ ಮೇಲೆ ಹಚ್ಚಬೇಕು. ನಂತರ ಸೀರಮ್‌ನ್ನು ಹಾಗೂ ಮಾಯಿಶ್ಚರೈಸರ್‌ಗಳನ್ನು ಹಚ್ಚಬೇಕು. ಈ ಕಟ್ಟುಪಾಡುಗಳನ್ನು ಅನುಸರಿಸುವ ಮೂಲಕ ಮುಖದ ಡಾರ್ಕ್ ಸರ್ಕಲ್‌ಗಳನ್ನು ಗುಣಪಡಿಸಬಹುದು. ಹಾಗೂ ಭವಿಷ್ಯದಲ್ಲಿ ಡಾರ್ಕ್ ಸರ್ಕಲ್‌ಗಳ ಬೆಳವಣಿಗೆಯನ್ನು ತಪ್ಪಿಸಬಹುದು ಎಂದು ಮೇಧಾ ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:40 pm, Thu, 23 March 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ