ಮೆಲೋಡಿ ಚಾಕೊಲೇಟ್ ರೆಸಿಪಿ
Image Credit source: Social Media
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ರಾಜಧಾನಿ ರೋಮ್‌ಗೆ ಅಧಿಕೃತ ಭೇಟಿ ನೀಡಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿ ಮೆಲೋನಿಗೆ ಅವರಿಗೆ ಪಾರ್ಲೆ ಪ್ರಾಡಕ್ಟ್ಸ್ ಸಂಸ್ಥೆಯ ಮೆಲೋಡಿ (melody) ಚಾಕೊಲೇಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ವಿಡಿಯೋವಂತೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ಬಳಿಕ ಮೆಲೋಡಿ ಚಾಕೊಲೇಟ್ ಖರೀದಿಯು ಸಹ ಹೆಚ್ಚಾಗಿತ್ತು. ಈ ಟಾಫಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಿದ್ದರೆ, ಅದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಮೆಲೋಡಿ ಚಾಕೊಲೇಟ್ ರೆಸಿಪಿಯ ಪೂರ್ಣ ಮಾಹಿತಿ ಇಲ್ಲಿದೆ.
ಮೆಲೋಡಿ ಚಾಕೊಲೇಟ್ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:
2 ರಿಂದ 3 ಟೇಬಲ್ ಸ್ಪೂನ್ ಕೋಕೋ ಪೌಡರ್, 1/2 ಕಪ್ ಕಂಡೆನ್ಸ್ಡ್ ಮಿಲ್ಕ್, 2 ಟೇಬಲ್ ಸ್ಪೂನ್ ಬೆಣ್ಣೆ, 1/4 ಕಪ್ ಹಾಲಿನ ಪುಡಿ, ರಿಂದ 3 ಟೇಬಲ್ ಸ್ಪೂನ್ ಸಕ್ಕರೆ, ಸ್ಪಲ್ಪ ಕ್ರೀಮ್, ಸ್ವಲ್ಪ ವೆನಿಲ್ಲಾ ಎಸೆನ್ಸ್
ಇದನ್ನೂ ಓದಿ: ಹಾವು ಕಚ್ಚಿದರೆ ಜೀವ ಉಳಿಸಲು ಮೊದಲು ಏನು ಮಾಡಬೇಕು? ಏನು ಮಾಡಬಾರದು?
ಮೆಲೋಡಿ ಚಾಕೊಲೇಟ್ ತಯಾರಿಸುವ ಸುಲಭ ವಿಧಾನ:
- ಮೊದಲು, ಸಕ್ಕರೆಯನ್ನು ನಾನ್-ಸ್ಟಿಕ್ ಪ್ಯಾನ್‌ಗೆ ಹಾಕಿ ಕಡಿಮೆ ಉರಿಯಲ್ಲಿ ಕರಗಲು (ಕ್ಯಾರಮೆಲೈಸ್ ಆಗಲು) ಬಿಡಿ. ಸಕ್ಕರೆ ಕರಗಿ ತಿಳಿ ಚಿನ್ನದ ಬಣ್ಣಕ್ಕೆ ತಿರುಗಿದಾಗ, ಬೆಣ್ಣೆ ಮತ್ತು ಹಾಲು ಸೇರಿಸಿ. ಈ ಮಿಶ್ರಣವನ್ನು ಉಂಡೆಗಳು ರೂಪುಗೊಳ್ಳದಂತೆ ನಿರಂತರವಾಗಿ ಬೆರೆಸಿ.
- ಇದೀಗ ಈ ಮಿಶ್ರಣಕ್ಕೆ ಕೋಕೋ ಪೌಡರ್ ಮತ್ತು ಹಾಲಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ದಪ್ಪವಾಗಲು ಪ್ರಾರಂಭಿಸಿದಾಗ, ಕ್ರೀಮ್, ಕಂಡೆನ್ಸ್ಡ್ ಮಿಲ್ಕ್ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ. ಮಿಶ್ರಣವು ತುಂಬಾ ದಪ್ಪವಾಗುವವರೆಗೆ ಮತ್ತು ಚಾಕೊಲೇಟ್ ಹದಕ್ಕೆ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
- ನಂತರ ಒಂದು ಬಟ್ಟಲಿಗೆ ತುಪ್ಪವನ್ನು ಹರಡಿ, ಮೊದಲೇ ತಯಾರಿಸಿಟ್ಟ ಚಾಕೊಲೇಟ್ ಮಿಶ್ರಣವನ್ನು ಇದಕ್ಕೆ ಹಾಕಿ ತಣ್ಣಗಾಗಲು ಬಿಡಿ.
- ನಂತರ ಅದನ್ನು ಒಂದು ಚಾಕುವಿನ ಸಹಾಯದಿಂದ ಸಣ್ಣ ಚೌಕ ಅಥವಾ ಆಯತಾಕಾರದ ಚಾಕೊಲೇಟ್ ಆಕಾರದಲ್ಲಿ ಕತ್ತರಿಸಿ. ನೀವು ಬಯಸಿದರೆ, ಚಾಕೊಲೇಟ್ ಮಧ್ಯದಲ್ಲಿ ಸ್ವಲ್ಪ ಚಾಕೊಲೇಟ್ ಸಿರಪ್ ಅನ್ನು ಸಹ ತುಂಬಿಸಬಹುದು.
- ತಯಾರಾದ ಚಾಕೊಲೇಟ್ ಅನ್ನು ಬೆಣ್ಣೆ ಕಾಗದದ ಮೇಲೆ ಇರಿಸಿ ಮತ್ತು ರೆಫ್ರಿಜರೇಟರ್‌ನಲ್ಲಿ 1 ರಿಂದ 2 ಗಂಟೆಗಳ ಕಾಲ ಸೆಟ್ ಆಗಲು ಬಿಡಿ. ಅದು ಸಂಪೂರ್ಣವಾಗಿ ಗಟ್ಟಿಯಾದ ನಂತರ, ನೀವು ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ