
ಇಂದಿನ ಡಿಜಿಟಲ್ ಯುಗದಲ್ಲಿ, ಮಕ್ಕಳನ್ನು ಮೊಬೈಲ್ ಫೋನ್ಗಳಿಂದ (Mobile phone) ದೂರವಿಡುವುದು ಪೋಷಕರಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ರಜಾ ದಿನಗಳಲ್ಲಿ ಮಕ್ಕಳು ಬರೀ ಮೊಬೈಲ್ ನೋಡ್ತಾ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಹೌದು ಹಿಂದೆಲ್ಲಾ ಮಕ್ಕಳು ರಜೆಯಲ್ಲಿ ಗೆಳೆಯರ ಜೊತೆಗೆ ಹೊರಗೆ ಆಟವಾಡುತ್ತಾ ಸಖತ್ ಮೋಜು ಮಾಡ್ತಿದ್ರು, ರಜೆಯನ್ನು ಸಖತ್ ಎಂಜಾಯ್ ಮಾಡ್ತಿದ್ರು. ಆದರೆ ಇಂದಿನ ದಿನಗಳಲ್ಲಿ ಬಹುತೇಕ ಹೆಚ್ಚಿನ ಮಕ್ಕಳು ಹೊರಗೆಲ್ಲೂ ಆಟವಾಡಲು ಹೋಗದೆ ಮೊಬೈಲ್ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಈ ಮೊಬೈಲ್ ಚಟ ಮಕ್ಕಳನ್ನು ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿತಗೊಳಿಸುತ್ತದೆ ಅಷ್ಟೇ ಅಲ್ಲದೆ ಇದು ಅವರ ಅಧ್ಯಯನ ಮತ್ತು ದೃಷ್ಟಿಯ ಮೇಲೆ ಮಾತ್ರವಲ್ಲದೆ ಅವರ ಸಾಮಾಜಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಅದ್ದರಿಂದ ಮಕ್ಕಳನ್ನು ಮೊಬೈಲ್ನಿಂದ ದೂರವಿಡುವುದು ತುಂಬಾನೇ ಮುಖ್ಯ. ಅದಕ್ಕಾಗಿ ಈ ಕೆಲವೊಂದು ಸಲಹೆಗಳನ್ನು ಅನುಸರಿಸಬಹುದು.
ಮಕ್ಕಳನ್ನು ಮನೆಯಲ್ಲಿಯೇ ಕೂರಲು ಬಿಡುವ ಬದಲು, ಹೊರಗೆ ಕಳಿಸಿ ಫುಟ್ಬಾಲ್, ಕ್ರಿಕೆಟ್, ಬ್ಯಾಡ್ಮಿಂಟನ್ ಅಥವಾ ಸೈಕ್ಲಿಂಗ್ನಂತಹ ಹೊರಾಂಗಣ ಆಟಗಳನ್ನು ಆಡಲು ಪ್ರೋತ್ಸಾಹಿಸಿ. ಇದು ಮಕ್ಕಳಿಗೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ, ಅವರನ್ನು ಆಕ್ಟೀವ್ ಆಗಿರಿಸುತ್ತದೆ ಮತ್ತು ಮುಖ್ಯವಾಗಿ ಇದರಿಂದ ಮಕ್ಕಳು ಮೊಬೈಲ್ನಲ್ಲಿ ಹೆಚ್ಚು ಸಮಯವನ್ನು ಕಳೆಯುವುದನ್ನು ತಪ್ಪಿಸಬಹುದು.
ಚಿತ್ರಕಲೆ, ಡ್ಯಾನ್ಸ್, ಸಂಗೀತ, ಕಥೆ ಬರೆಯುವುದು-ಓದುವುದು, ಹೊರಾಂಗಣ ಆಟಗಳು ಮತ್ತು DIY ಸೇರಿದಂತೆ ಇತ್ಯಾದಿ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗುವಂತೆ ಮಾಡಿ. ಈ ರೀತಿಯ ಆಕರ್ಷಕ ಚಟುವಟಿಕೆಗಳು ಮಕ್ಕಳ ಮೊಬೈಲ್ ಫೋನ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅವರ ಪ್ರತಿಭೆಯೂ ಬೆಳೆಯುತ್ತದೆ.
ಇದನ್ನೂ ಓದಿ: ಈ ಎಂಟು ಬಗೆಯ ಹಣ್ಣುಗಳನ್ನು ಫ್ರಿಡ್ಜ್ನಲ್ಲಿ ಇಡಬಾರದು; ಯಾಕೆ ಗೊತ್ತೇ?
ಮುಖ್ಯವಾಗಿ ಪೋಷಕರು ಮಕ್ಕಳ ಮುಂದೆ ಹೆಚ್ಚು ಮೊಬೈಲ್ ನೋಡುವುದನ್ನು ತಪ್ಪಿಸಬೇಕು. ಜೊತೆಗೆ ಮಕ್ಕಳೊಂದಿಗೆ ಆಟವಾಡಿ, ಅವರೊಂದಿಗೆ ಮಾತನಾಡಿ ಉತ್ತಮ ಸಮಯವನ್ನು ಕಳೆಯಬೇಕು. ಸಾಮಾನ್ಯವಾಗಿ ಮಕ್ಕಳು ಬೇಸರಗೊಂಡಾಗ ಅಥವಾ ಒಂಟಿತನ ಅನುಭವಿಸಿದಾಗ ಹೆಚ್ಚಾಗಿ ಮೊಬೈಲ್ ಫೋನ್ಗಳನ್ನು ಬಳಸುತ್ತಾರೆ, ಇದು ವ್ಯಸನವಾಗಿ ಪರಿಣಮಿಸಬಹುದು. ಹಾಗಾಗಿ ಮನೆಯವರು ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯುವ ಮೂಲಕ ಅವರನ್ನು ಮೊಬೈಲ್ನಿಂದ ದೂರವಿರುವಂತೆ ಮಾಡಬಹುದು.
ಮಕ್ಕಳು ಮನರಂಜನೆಗಾಗಿ ಅಥವಾ ರಜೆಯಲ್ಲಿ ಸಮಯ ಕಳೆಯಲು ಹೆಚ್ಚಾಗಿ ಮೊಬೈಲ್ ಫೋನ್ಗಳನ್ನು ಬಳಸುತ್ತಾರೆ. ಅವರಿಗೆ ಮೊಬೈಲ್ ನೀಡುವ ಬದಲು ಒಗಟುಗಳು, ಚೆಸ್, ಬೋರ್ಡ್ ಆಟಗಳಂತಹ ಆಟಗಳನ್ನು ಆಡಿಸಿ. ಇದು ಮಕ್ಕಳ ಕುತೂಹಲವನ್ನು ಹೆಚ್ಚಿಸುತ್ತದೆ ಮತ್ತು ಮೊಬೈಲ್ ವ್ಯಸನವನ್ನು ಕಡಿಮೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ